ಅಮೆರಿಕದ F-35 ಯುದ್ಧ ವಿಮಾನ ನಾಪತ್ತೆ
ದಕ್ಷಿಣ ಕೆರೊಲಿನಾದಲ್ಲಿ ಅಮೆರಿಕದ ಯುದ್ಧ ವಿಮಾನ F-35 ನಾಪತ್ತೆಯಾಗಿದೆ. ಕಾಣೆಯಾದ ಬಹು ಮಿಲಿಯನ್ ಡಾಲರ್ ಬೆಲೆಯ ವಿಮಾನವನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಅಮೆರಿಕದ ಮಿಲಿಟರಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ದಕ್ಷಿಣ ಕೆರೊಲಿನಾದಲ್ಲಿ ಅಮೆರಿಕದ ಯುದ್ಧ ವಿಮಾನ F-35 ನಾಪತ್ತೆಯಾಗಿದೆ. ಕಾಣೆಯಾದ ಬಹು ಮಿಲಿಯನ್ ಡಾಲರ್ ಬೆಲೆಯ ವಿಮಾನವನ್ನು ಪತ್ತೆಹಚ್ಚಲು ಸಹಾಯ ಮಾಡುವಂತೆ ಅಮೆರಿಕದ ಮಿಲಿಟರಿ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೆಟ್ಟ ಹವಾಮಾನವಿದ್ದ ಕಾರಣ, ವಿಮಾನ ಅಪಘಾತಕ್ಕೀಡಾಗಿತ್ತು, ಪೈಲಟ್ ವಿಮಾನದಿಂದ ಹಾರುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚಾರ್ಲ್ಸ್ಟನ್ ನಗರದ ಉತ್ತರಕ್ಕೆ ಎರಡು ಸರೋವರಗಳ ಸುತ್ತಲೂ ಯುದ್ಧ ವಿಮಾನಕ್ಕೆ ಹುಡುಕಾಟ ನಡೆಸಲಾಗುತ್ತಿದೆ.
ಕೆಟ್ಟ ಹವಾಮಾನದಿಂದಾಗಿ ಎಫ್-35 ಯುದ್ಧ ವಿಮಾನದ ಹುಡುಕಾಟ ಕೊಂಚ ನಿಧಾನವಾಯಿತು, ಪೈಲಟ್ ಸುರಕ್ಷಿತವಾಗಿ ಜಾಯಿಂಟ್ ಬೇಸ್ಗೆ ಮರಳಿದ್ದಾರೆ ಆದರೆ ವಿಮಾನ ಎಲ್ಲಿದೆ ಎಂಬುದೇ ತಿಳಿಯದಂತಾಗಿದೆ ಎಂದು ಮೇಜರ್ ಸಲಿನಾಸ್ ಹೇಳಿದ್ದಾರೆ.
ಮತ್ತಷ್ಟು ಓದಿ: MiG 21: ರಷ್ಯಾ ನಿರ್ಮಿತ ಮಿಗ್-21 ಯುದ್ಧ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿದ ವಾಯುಪಡೆ
ಜನರಿಂದ ಭಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ನೀವು ಹೇಗೆ ಎಫ್-35 ಫೈಟರ್ ಜೆಟ್ ಅನ್ನು ಕಳೆದುಕೊಳ್ಳಲು ಸಾಧ್ಯ, ಅದರಲ್ಲಿ ಯಾವುದೇ ಟ್ರ್ಯಾಕಿಂಗ್ ಸಾಧನಗಳಿಲ್ಲವೇ, ಅದ್ಹೇಗೆ ಸಾರ್ವಜನಿಕರಲ್ಲಿ ಸಹಾಯ ಮಾಡುವಂತೆ ಕೇಳುತ್ತಿದ್ದೀರಿ ಎಂದು ನ್ಯಾನ್ಸಿ ಮೇಸ್ ಎಂಬುವವರು ಪ್ರಶ್ನೆ ಮಾಡಿದ್ದಾರೆ.
ಎಎಫ್ಪಿ ವರದಿಯ ಪ್ರಕಾರ, ಲಾಕ್ಹೀಡ್ ಮಾರ್ಟಿನ್ ತಯಾರಿಸಿದ ಪ್ರತಿ ವಿಮಾನಗಳಿಗೆ 80 ಮಿಲಿಯನ್ ಡಾಲರ್ ವೆಚ್ಚವಾಗುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ