2022ರಲ್ಲಿ ಚೀನಾದಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕಲು ಅಮೆರಿಕ ಸಂಸತ್ ಪ್ರತಿನಿಧಿಗಳ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕರೆ..
ಅಮೆರಿಕದಲ್ಲಿ ಕೇವಲ ನ್ಯಾನ್ಸಿ ಪೆಲೋಸಿಯವರಷ್ಟೇ ಅಲ್ಲ, ಅಲ್ಲಿನ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಹಲವು ಪ್ರತಿನಿಧಿಗಳು ಈಗಾಗಲೇ ಒಲಿಂಪಿಕ್ ಬಹಿಷ್ಕರಿಸಬೇಕು ಎಂಬ ಧ್ವನಿ ಎತ್ತಿದ್ದಾರೆ.
ವಾಷಿಂಗ್ಟನ್: ಬೀಜಿಂಗ್ನಲ್ಲಿ 2022ರಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಗೆ ಯುಎಸ್ನಿಂದ ರಾಜತಾಂತ್ರಿಕ ಬಹಿಷ್ಕಾರ ಹಾಕಬೇಕು ಎಂದು ಅಮೆರಿಕ ಸಂಸತ್ ಪ್ರತಿನಿಧಿಗಳ ಸ್ಪೀಕರ್ ನ್ಯಾನ್ಸಿ ಪೆಲೋಸಿ ಕರೆ ನೀಡಿದ್ದಾರೆ. ಚೀನಾ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿರುವ ಅವರು, ಜಗತ್ತಿನ ಯಾವುದೇ ನಾಯಕ ಈ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡರೆ ಅವರು ತಮ್ಮ ಅಧಿಕಾರದ ನೈತಿಕತೆ ಕಳೆದುಕೊಂಡಂತೆ ಎಂದೂ ಹೇಳಿದ್ದಾರೆ.
ಡೆಮಾಕ್ರಟಿಕ್ ಪಕ್ಷದವರಾಗಿರುವ ಪೆಲೋಸಿ, ಫೆಬ್ರವರಿಯಲ್ಲಿ ನಿಗದಿಯಾಗಿರುವ ಈ ಒಲಿಂಪಿಕ್ಸ್ನಿಂದ ಇಡೀ ವಿಶ್ವವೇ ದೂರ ಇರಬೇಕು ಎಂದು ಯುಎಸ್ ಸಂಸತ್ತಿನ ಉಭಯ ಪಕ್ಷಗಳ ಸಂಸದರಿಗೆ ಮತ್ತು ಜಗತ್ತಿನ ಎಲ್ಲ ದೇಶಗಳಿಗೆ ಕರೆ ನೀಡಿದ್ದಾರೆ. ನ್ಯಾನ್ಸಿ ಪೆಲೋಸಿಯವರ ಈ ಹೇಳಿಕೆ ಹೊರಬೀಳುತ್ತಿದ್ದಂತೆ ಚೀನಾದಿಂದ ಕಟು ಪ್ರತಿಕ್ರಿಯೆ ಹೊರಬಿದ್ದಿದೆ. ಯುಎಸ್ ರಾಜಕಾರಣಿಗಳು ಒಲಿಂಪಿಕ್ ಹೆಸರಲ್ಲಿ ತುಚ್ಛ ರಾಜಕಾರಣದ ಆಟ ಆಡುವುದನ್ನು ಬಿಡಬೇಕು ಎಂದು ಚೀನಾ ಸರ್ಕಾರದ ವಕ್ತಾರ ತಿಳಿಸಿದ್ದಾರೆ.
ಇನ್ನು ಅಮೆರಿಕದಲ್ಲಿ ಕೇವಲ ನ್ಯಾನ್ಸಿ ಪೆಲೋಸಿಯವರಷ್ಟೇ ಅಲ್ಲ, ಅಲ್ಲಿನ ರಿಪಬ್ಲಿಕನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಹಲವು ಪ್ರತಿನಿಧಿಗಳು ಈಗಾಗಲೇ ಒಲಿಂಪಿಕ್ ಬಹಿಷ್ಕರಿಸಬೇಕು ಎಂಬ ಧ್ವನಿ ಎತ್ತಿದ್ದಾರೆ. 2022ರಲ್ಲಿ ಒಲಿಂಪಿಕ್ನ್ನು ಬೀಜಿಂಗ್ನಲ್ಲಿ ನಡೆಸಬಾರದು. ಬೇರೆ ಎಲ್ಲಾದರೂ ನಡೆಸಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಹಾಗೊಮ್ಮೆ ಬೀಜಿಂಗ್ನಲ್ಲಿ ನಡೆದರೆ ಅದನ್ನು ಬಹಿಷ್ಕರಿಸಬೇಕು ಎಂಬ ಆಗ್ತಹ ಹೆಚ್ಚಾಗುತ್ತಿದೆ. ಇನ್ನು 2022ರ ಬೀಜಿಂಗ್ ಒಲಿಂಪಿಕ್ಗೆ ರಾಜತಾಂತ್ರಿಕ ಬಹಿಷ್ಕಾರ ಹಾಕಿದರೆ, ವಿಶ್ವದ ಪ್ರಮುಖ ರಾಷ್ಟ್ರಗಳು ಸಹಜವಾಗಿಯೇ ಅದರಿಂದ ಹಿಂದೆ ಸರಿಯುತ್ತವೆ.. ಈ ಬಹಿಷ್ಕಾರಕ್ಕೆ ಕೈಜೋಡಿಸಲೇಬೇಕಾಗುತ್ತದೆ ಎಂದು ನ್ಯಾನ್ಸಿ ಪೆಲೋಸಿ ತಿಳಿಸಿದ್ದಾರೆ.
ಇದನ್ನೂ ಓದಿ: ಕಳೆದ 15 ದಿನಗಳ ಅಂತರದಲ್ಲಿ 20 ಜನ ಬಲಿ; ಸಾವಿಗೆ ಕಾರಣ ತಿಳಿಯದೆ ಬೀದರ್ ಜನ ಕಂಗಾಲು
Viral Video: ಕೊರೊನಾ ವಾರಿಯರ್ಸ್ಗೆ ಗೌರವ ಸೂಚಿಸಲು ಐಟಿಬಿಪಿ ಕಾನ್ಸ್ಟೇಬಲ್ ಭಾವ ಪೂರ್ಣರಾಗ
US House of Representatives speaker Nacn world leaders to boycott China 2022 Olympics
Published On - 3:11 pm, Wed, 19 May 21