Nepal Earthquake: ನೇಪಾಳದ ಪೂರ್ವ ಪೋಖರದಲ್ಲಿ ಭೂಕಂಪನ, 5.3ರಷ್ಟು ತೀವ್ರತೆ ದಾಖಲು
ಕಠ್ಮಂಡುವಿನ ವಾಯುವ್ಯಕ್ಕೆ 113 ಕಿ.ಮೀ ದೂರದಲ್ಲಿರುವ ನೇಪಾಳದಲ್ಲಿ ಬೆಳಿಗ್ಗೆ 5:30 ರ ಸುಮಾರಿಗೆ ಭೂಕಂಪ ಸಂಭವಿಸಿದೆ. 10 ನಿಮಿಷಗಳ ಹಿಂದೆ M5.3ರಷ್ಟು ತೀವ್ರತೆಯ ಭೂಕಂಪನ ಕಠ್ಮಂಡು (ನೇಪಾಳ) ವಿನ ವಾಯುವ್ಯಕ್ಕೆ 113 ಕಿ.ಮೀ ಅನ್ನು ಹೊಡೆದಿದೆ ಎಂದು ಇಎಂಎಸ್ಸಿ ತನ್ನ ಅಧಿಕೃತ ಟ್ವಿಟರ್ನಲ್ಲಿ ತಿಳಿಸಿದೆ. ಈವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
ಕಠ್ಮಂಡು: ನೇಪಾಳದ ಪೂರ್ವ ಪೋಖರದಲ್ಲಿ 35 ಕಿ.ಮೀ ದೂರದಲ್ಲಿ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್‌ಜಿಎಸ್ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. ಭೂಕಂಪವಾದ ಸಮೀಪದ ಪ್ರದೇಶಗಳಲ್ಲಿನ ಅನೇಕ ಜನರು ಭೂಕಂಪವನ್ನು ಅನುಭವಿಸಿದರು ಎಂದು ಹೇಳಲಾಗುತ್ತಿದೆ.
ಕಠ್ಮಂಡುವಿನ ವಾಯುವ್ಯಕ್ಕೆ 113 ಕಿ.ಮೀ ದೂರದಲ್ಲಿರುವ ನೇಪಾಳದಲ್ಲಿ ಬೆಳಿಗ್ಗೆ 5:30 ರ ಸುಮಾರಿಗೆ ಭೂಕಂಪ ಸಂಭವಿಸಿದೆ. 10 ನಿಮಿಷಗಳ ಹಿಂದೆ M5.3ರಷ್ಟು ತೀವ್ರತೆಯ ಭೂಕಂಪನ ಕಠ್ಮಂಡು (ನೇಪಾಳ) ವಿನ ವಾಯುವ್ಯಕ್ಕೆ 113 ಕಿ.ಮೀ ಅನ್ನು ಹೊಡೆದಿದೆ ಎಂದು ಇಎಂಎಸ್ಸಿ ತನ್ನ ಅಧಿಕೃತ ಟ್ವಿಟರ್ನಲ್ಲಿ ತಿಳಿಸಿದೆ. ಈವರೆಗೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ.
“ಭೂಕಂಪನದ ಕೇಂದ್ರಬಿಂದುವು ಲ್ಯಾಮ್‌ಜಂಗ್ ಜಿಲ್ಲೆಯ ಭುಲ್‌ಭೂಲೆಯಲ್ಲಿದೆ. ಅಲ್ಲಿ ಅದು ಸುಮಾರು 5:42 ಎನ್‌ಪಿಟಿ ಸಂಭವಿಸಿದೆ. ಇದನ್ನು 5.8 ಪ್ರಮಾಣದಲ್ಲಿ ದಾಖಲಿಸಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಭೂಕಂಪಶಾಸ್ತ್ರಜ್ಞ ಡಾ.ಲೋಕ್ ಬಿಜಯ್ ಅಧಿಕಾರಿ ತಿಳಿಸಿದ್ದಾರೆ.
Nepal | Epicenter of the earthquake lies at Bhulbhule of Lamjung District, where it occurred around 5:42 NPT. It has been recorded at 5.8 magnitude: Dr. Lok Bijay Adhikari, Chief Seismologist at National Earthquake Monitoring & Research Centre, told ANI pic.twitter.com/w2CIqAJyYJ
— ANI (@ANI) May 19, 2021
ಇದನ್ನೂ ಓದಿ: Corona Vaccine: ಎರಡನೇ ಡೋಸ್ ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಪಡೆಯುವವರಿಗೆ ಶುಭಸುದ್ದಿ
Published On - 8:14 am, Wed, 19 May 21