US Mass Shooting: ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ, ಓರ್ವ ಸಾವು, 21 ಮಂದಿಗೆ ಗಂಭೀರ ಗಾಯ
ಅಮೆರಿಕದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಓರ್ವ ಸಾವನ್ನಪ್ಪಿದ್ದು, 21 ಮಂದಿಗೆ ಗಾಯಗಳಾಗಿವೆ. ಬುಧವಾರ ಕಾನ್ಸಾಸ್ ಸಿಟಿಯಲ್ಲಿ ನಡೆದ ಸೂಪರ್ ಬೌಲ್ ವಿಕ್ಟರಿ ರ್ಯಾಲಿ ಸಂದರ್ಭದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಡಿಜೆಯಾಗಿದ್ದ ಲಿಸಾನ ಲೋಪೆಜ್ ಗಾಲ್ವಾನ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಅಮೆರಿಕದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದ್ದು, ಒಬ್ಬರು ಮೃತಪಟ್ಟು 21 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಬುಧವಾರ ಕಾನ್ಸಾಸ್ ಸಿಟಿಯಲ್ಲಿ ನಡೆದ ಸೂಪರ್ ಬೌಲ್ ವಿಕ್ಟರಿ ರ್ಯಾಲಿ ಸಂದರ್ಭದಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಡಿಜೆಯಾಗಿದ್ದ ಲಿಸಾನ ಲೋಪೆಜ್ ಗಾಲ್ವಾನ್ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಮರ್ಸಿ ಆಸ್ಪತ್ರೆಯಲ್ಲಿ 12 ಮಕ್ಕಳಿಗೆ ಚಿಕಿತ್ಸೆ ನಿಡಲಾಗುತ್ತಿದೆ, 11 ಜನರಿಗೆ ಗುಂಡು ತಗುಲಿದೆ ಎನ್ನಲಾಗಿದೆ. ಘಟನೆಯ ನಂತರ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಆದರೆ ಗುಂಡಿನ ದಾಳಿಯ ಹಿಂದಿನ ಉದ್ದೇಶ ಸ್ಪಷ್ಟವಾಗಿಲ್ಲ ಇನ್ನೂ ತನಿಖೆಯಲ್ಲಿದೆ.
ಎಂಟು ಮಂದಿ ಮಾರಾಣಾಂತಿಕ ಗಾಯಗಳನ್ನು ಅನುಭವಿಸಿದರೆ 7 ಮಂದಿಗೆ ಗಂಭೀರ ಗಾಯಗಳಾಗಿವೆ. ಮತ್ತು ಉಳಿದ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದ್ದರು.
ಅಕ್ಟೋಬರ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದರು ಅಮೆರಿಕದ ಮೈನ್‌ನ ಲೆವಿಸ್ಟನ್ ನಗರದಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದರು. ಘಟನೆಯಲ್ಲಿ 50-60 ಜನರು ಗಾಯಗೊಂಡಿದ್ದರು ಎಂದು ಸಿಎನ್‌ಎನ್ ವರದಿ ಮಾಡಿತ್ತು.
ಮತ್ತಷ್ಟು ಓದಿ: ಅಮೆರಿಕದಲ್ಲಿ ಮನೆಯಲ್ಲಿ ಗುಂಡಿನ ದಾಳಿ; 6 ತಿಂಗಳ ಮಗು, ತಾಯಿ ಸೇರಿ 6 ಜನ ಸಾವು
40 ವರ್ಷದ ರಾಬರ್ಟ್ ಕಾರ್ಡ್ ಈ ಗುಂಡಿನ ದಾಳಿ ನಡೆಸಿರಬಹುದು ಎಂದು ಲೆವಿಸ್ಟನ್ ಪೊಲೀಸ್ ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ. ರಾಬರ್ಟ್ ಕಾರ್ಡ್ ಶಸ್ತ್ರಸಜ್ಜಿತನಾಗಿರಬಹುದು ಹಾಗೂ ಅಪಾಯಕಾರಿ ಎಂದು ಪರಿಗಣಿಸಬೇಕು ಎಂದು ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಎಬಿಸಿ ನ್ಯೂಸ್ ಪ್ರಕಾರ, ಸ್ಥಳೀಯ ಬಾರ್ ಮತ್ತು ವಾಲ್‌ಮಾರ್ಟ್ ವಿತರಣಾ ಕೇಂದ್ರವಾಗಿರುವ ಬೌಲಿಂಗ್ ಅಲ್ಲೆಯಲ್ಲಿ ಈ ಗುಂಡಿನ ದಾಳಿ ನಡೆದಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ