
ಟೆಹ್ರಾನ್, ಸೆಪ್ಟೆಂಬರ್ 1: ಅಮೆರಿಕ ಸೇನೆಯು ಇರಾನ್(Iran) ವಿರುದ್ಧದ ಯುದ್ಧದಲ್ಲಿ ಮೊದಲ ಬಾರಿಗೆ ಪ್ರಯೋಗಿಸಿದ ಲಾಕ್‌ಹೀಡ್ ಮಾರ್ಟಿನ್ (Lockheed Martin) ನಿರ್ಮಿತ ಅತ್ಯಾಧುನಿಕ ಪ್ರೆಸಿಷನ್ ಸ್ಟ್ರೈಕ್ ಮಿಸೈಲ್ (PrSM) ನಿಂದಾಗಿ ಭಾರೀ ಪ್ರಮಾಣದ ನಾಗರಿಕ ಸಾವು-ನೋವುಗಳು ಸಂಭವಿಸಿರುವುದು ಬಯಲಾಗಿದೆ.
ಕ್ರೀಡಾ ಸಂಕೀರ್ಣ ಮತ್ತು ವಸತಿ ಪ್ರದೇಶದ ಮೇಲೆ ದಾಳಿ: ಲ್ಯಾಮರ್ಡ್‌ನ ಶಾಹಿದ್ ನೈಮಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಎರಡು ಜನನಿಬಿಡ ವಸತಿ ಬಡಾವಣೆಗಳ ಮೇಲೆ ಕ್ಷಿಪಣಿಗಳು ಅಪ್ಪಳಿಸಿವೆ. ತಾಲ್-ಎ ಖಾಂದಾಗ್ ಪ್ರದೇಶದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ 2 ವರ್ಷದ ಬಾಲಕಿ ಅವಿನಾ ಬರ್ಜೆಗರ್, ಸ್ಫೋಟದ ಕೇಂದ್ರದಿಂದ ಬರೋಬ್ಬರಿ 50 ಮೀಟರ್ ದೂರದಲ್ಲಿದ್ದರೂ ಕ್ಷಿಪಣಿಯಿಂದ ಸಿಡಿದ ಚೂರುಗಳು ತಲೆಗೆ ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಸ್ಫೋಟಗೊಂಡ ಸ್ಥಳದಿಂದ ಸುಮಾರು 170 ಮೀಟರ್ ದೂರದಲ್ಲಿದ್ದ ಶಾಲೆಯೊಂದರ ಗೋಡೆಗಳು ಮತ್ತು ಕಿಟಕಿಗಳು ಛಿದ್ರಗೊಂಡಿವೆ. ಉಪಗ್ರಹ ಚಿತ್ರಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳು ಕಟ್ಟಡಗಳು ಮತ್ತು ವಾಹನಗಳ ಮೇಲೆ ಕ್ಷಿಪಣಿಯ ಚೂರುಗಳು ರಂಧ್ರ ಕೊರೆದಿರುವುದನ್ನು ಖಚಿತಪಡಿಸಿವೆ.
ಯುದ್ಧ ಕಾನೂನುಗಳ ಕುರಿತು ಮಾಜಿ ಅಮೆರಿಕ ಸೇನಾ ಸಲಹೆಗಾರ ಮೈಕೆಲ್ ಮೀಯರ್ ಸೇರಿದಂತೆ ಆರು ಪ್ರಮುಖ ಶಸ್ತ್ರಾಸ್ತ್ರ ತಜ್ಞರು, “ಜನನಿಬಿಡ ನಾಗರಿಕ ಪ್ರದೇಶಗಳಲ್ಲಿ ಇಂತಹ ಭಾರೀ ವಿನಾಶಕಾರಿ ಮತ್ತು ವ್ಯಾಪಕವಾಗಿ ಇಂಥಾ ಕ್ಷಿಪಣಿಗಳನ್ನು ಬಳಸುವುದು ಯುದ್ಧ ನಿಯಮಾವಳಿಗಳಿಗೆ ವಿರುದ್ಧ” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಿ: ಮುಸ್ಲಿಂ ರಾಷ್ಟ್ರಗಳನ್ನು ಒಡೆಯಲು ಅಮೆರಿಕ-ಇಸ್ರೇಲ್ ಸಂಚು: ಇಸ್ಲಾಮಿಕ್ ಒಕ್ಕೂಟಕ್ಕೆ ಇರಾನ್‌ನಿಂದ ತುರ್ತು ಕರೆ
ಅಮೆರಿಕದ ಸೆಂಟ್ರಲ್ ಕಮಾಂಡ್ ಈ ದಾಳಿಯ ನೇರ ಹೊಣೆಯನ್ನು ನಿರಾಕರಿಸಿದರೂ, ಇರಾನ್ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಐತಿಹಾಸಿಕ ಕ್ಷಿಪಣಿ ಯಶಸ್ವಿಯಾಗಿ ಉಡಾಯಿಸಲಾಗಿದೆ ಎಂದು ಮಾರ್ಚ್ ಆರಂಭದಲ್ಲೇ ಪ್ರಕಟಿಸಿತ್ತು.
ಈ ಭೀಕರ ದಾಳಿಯ ಬೆನ್ನಲ್ಲೇ, ಪೆಂಟಗನ್ ಈ ಕ್ಷಿಪಣಿಯ ಉತ್ಪಾದನೆಯನ್ನು ನಾಲ್ಕು ಪಟ್ಟು ಹೆಚ್ಚಿಸಲು ಲಾಕ್‌ಹೀಡ್ ಮಾರ್ಟಿನ್ ಸಂಸ್ಥೆಯೊಂದಿಗೆ 4 ಬಿಲಿಯನ್ ಡಾಲರ್ಗಿಂತಲೂ ಹೆಚ್ಚು ಮೌಲ್ಯದ ಬೃಹತ್ ರಕ್ಷಣಾ ಒಪ್ಪಂದವನ್ನು ಮಾಡಿಕೊಂಡಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ