
ವಾಷಿಂಗ್ಟನ್, ಅಕ್ಟೋಬರ್ 16: ಇರಾನ್ ವಿರುದ್ಧದ ಸಂಘರ್ಷದ ನಡುವೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಮದರ್ ಆಫ್ ಆಲ್ ಬಾಂಬ್ಸ್’ (MOAB) ಎಂಬ ಬೃಹತ್ ಬಾಂಬ್ ಬಳಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇರಾನ್ನ ಪ್ರಮುಖ ಮಿಲಿಟರಿ ನೆಲೆಗಳು ಮತ್ತು ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸುವ ಸಾಧ್ಯತೆಯೂ ಚರ್ಚೆಯಲ್ಲಿದೆ. ಆದರೆ, ಈ ಬಾಂಬ್ ಬಳಕೆಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇರಾನ್ನ ನಟಾಂಜ್ ಅಣುಸೌಲಭ್ಯದ ಸಮೀಪದಲ್ಲಿರುವ ಪಿಕಾಕ್ಸ್ ಪರ್ವತದ ಕೆಳಗೆ ರಹಸ್ಯ ಭೂಗತ ಸುರಂಗಗಳು ಮತ್ತು ಅಣುಸಂಬಂಧಿತ ಸೌಲಭ್ಯಗಳಿವೆ ಎಂದು ವರದಿಗಳು ತಿಳಿಸಿವೆ. ಸುಮಾರು 9,800 ಕೆ.ಜಿ. ತೂಕದ MOAB, ಅಮೆರಿಕದ ಅತಿದೊಡ್ಡ ಪರಮಾಣು ರಹಿತ ಬಾಂಬ್ ಆಗಿದೆ. ಇದು ಆಕಾಶದಲ್ಲೇ ಸ್ಫೋಟಗೊಂಡು ಭಾರೀ ಆಘಾತ ತರಂಗವನ್ನು ಸೃಷ್ಟಿಸುತ್ತದೆ. 2017ರಲ್ಲಿ ಅಫ್ಘಾನಿಸ್ತಾನದಲ್ಲಿ ಐಸಿಸ್ ಉಗ್ರರ ಸುರಂಗ ಜಾಲದ ವಿರುದ್ಧ ಅಮೆರಿಕ ಈ ಬಾಂಬ್ ಬಳಸಿತ್ತು.
ಆದರೆ, MOAB ಭೂಮಿಯ ಆಳಕ್ಕೆ ನುಗ್ಗಿ ಬಂಕರ್ಗಳನ್ನು ನಾಶಪಡಿಸುವ ಬಾಂಬ್ ಅಲ್ಲ. ಹೀಗಾಗಿ ಪರ್ವತದ ಆಳದಲ್ಲಿರುವ ಇರಾನ್ನ ಭೂಗತ ಅಣುಸೌಲಭ್ಯಗಳನ್ನು ಇದು ಸಂಪೂರ್ಣವಾಗಿ ನಾಶಪಡಿಸಬಲ್ಲದೇ ಎಂಬ ಪ್ರಶ್ನೆ ಎದುರಾಗಿದೆ. ಭೂಗತ ಬಂಕರ್ಗಳನ್ನು ಗುರಿಯಾಗಿಸಲು ಅಮೆರಿಕದ ಬಳಿ GBU-57 MOP ಎಂಬ ಪ್ರತ್ಯೇಕ ಬಾಂಬ್ ಕೂಡ ಇದೆ. ಇರಾನ್ ವಿರುದ್ಧ ಅಮೆರಿಕ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.
ಮತ್ತಷ್ಟು ಓದಿ:
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ, ತೀವ್ರ ಪರಿಣಾಮದ ಎಚ್ಚರಿಕೆ
ಮಧ್ಯಂತರ ಚುನಾವಣೆಯ ಹೊಸ್ತಿಲಿನಲ್ಲಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ನಲ್ಲಿರುವ ನಿರ್ಣಾಯಕ ಮಿಲಿಟರಿ ಮತ್ತು ಇಂಧನ ನೆಲೆಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಪೆಂಟಗನ್ಗೆ ಸೂಚನೆ ನೀಡಿದ್ದಾರೆ. ಇರಾನ್ ಮೇಲೆ ತ್ವರಿತವಾಗಿ ನಿರ್ಣಾಯಕ ಹೊಡೆತ ನೀಡಿ, ಯುದ್ಧದಲ್ಲಿ ವಿಜಯ ಘೋಷಿಸಿ ಸೇನೆಯನ್ನು ಹಿಂತೆಗೆದುಕೊಳ್ಳುವುದು ವಾಂಷಿಂಗ್ಟನ್ನ ಲೆಕ್ಕಾಚಾರವಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ. ಟೆಹ್ರಾನ್ನಿಂದ ದಕ್ಷಿಣಕ್ಕೆ ಸುಮಾರು 225 ಕಿಲೋಮೀಟರ್ ದೂರದಲ್ಲಿರುವ ಪ್ರಸಿದ್ಧ ನಟಾಂಜ್ ಯುರೇನಿಯಂ ಪುಷ್ಟೀಕರಣ ಘಟಕದ ಪಕ್ಕದಲ್ಲೇ ಈ ಪಿಕಾಕ್ಸ್ ಪರ್ವತವಿದೆ .
ಟ್ರಂಪ್ ಮುನ್ನೆಚ್ಚರಿಕೆ: ಪಿಕಾಕ್ಸ್ನಲ್ಲಿ ನಡೆಯುವ ಪ್ರತಿಯೊಂದು ಚಲನವಲನದ ಬಗ್ಗೆಯೂ ನಮಗೆ ತಿಳಿದಿದೆ. ಅವರು ಮಿತಿ ಮೀರಿದರೆ ಅತ್ಯಂತ ಭೀಕರವಾಗಿ ಹೊಡೆಯುತ್ತೇವೆ ಎಂದು ಟ್ರಂಪ್ ಈ ಹಿಂದೆಯೇ ಎಚ್ಚರಿಸಿದ್ದರು. ಇರಾನ್ ತನ್ನ ಪರಮಾಣು ತಂತ್ರಜ್ಞಾನ ಮತ್ತು ಸೆಂಟ್ರಿಫ್ಯೂಜ್ಗಳನ್ನು ರಕ್ಷಿಸಲು ಈ ಪರ್ವತದ ಆಳದಲ್ಲಿ ಬೃಹತ್ ಭೂಗತ ಸುರಂಗ ಸಂಕೀರ್ಣಗಳನ್ನು ನಿರ್ಮಿಸಿದೆ. ಇದು ನೆಲಕ್ಕೆ ಅಪ್ಪಳಿಸುವ ಮೊದಲೇ ಆಕಾಶದಲ್ಲಿ ಸ್ಫೋಟಗೊಂಡು ವಾತಾವರಣದಲ್ಲಿ ಅಪಾರ ಪ್ರಮಾಣದ ಆಮ್ಲಜನಕವನ್ನು ಹೀರಿಕೊಂಡು ಬೃಹತ್ ಶಾಕ್ವೇವ್ ಮತ್ತು ಬೆಂಕಿಯ ಜ್ವಾಲೆಯನ್ನು ಸೃಷ್ಟಿಸುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ