AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಸಾಮಾ ಬಿನ್ ಲಾಡೆನ್ ಪತ್ತೆಗೆ ಸಹಾಯ ಮಾಡಿದ್ದ ಡಾ. ಶಕೀಲ್ ಅಫ್ರಿದಿನ್ನು ಬಿಡುಗಡೆ ಮಾಡಲು ಪಾಕ್​​​ಗೆ ಅಮೆರಿಕ ಆದೇಶ

ಗುರುವಾರ ಪಾಕಿಸ್ತಾನಿ ನಿಯೋಗವು ಕಾಂಗ್ರೆಸ್ ಸದಸ್ಯ ಬ್ರಾಡ್ ಶೆರ್ಮನ್ ಅವರನ್ನು ಭೇಟಿ ಮಾಡಿತ್ತು. ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಭಾರತೀಯ ಸಂಸದರ ಬಹು-ಪಕ್ಷ ನಿಯೋಗವು ವಾಷಿಂಗ್ಟನ್, ಡಿಸಿಯಲ್ಲಿರುವ ಸಮಯದಲ್ಲಿ ಅವರು ಅಮೆರಿಕ ರಾಜಧಾನಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಪಾಕ್​​​​​ ಭಾರತದೊಂದಿಗಿನ ಸಂಘರ್ಷ ಮತ್ತು ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯೀಕರಿಸುವ ಬಗ್ಗೆ ಮಾತನಾಡಲು ಈ ನಿಯೋಗ ಬಂದಿತ್ತು, ಆದರೆ ಇದೀಗ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ.

ಒಸಾಮಾ ಬಿನ್ ಲಾಡೆನ್ ಪತ್ತೆಗೆ ಸಹಾಯ ಮಾಡಿದ್ದ ಡಾ. ಶಕೀಲ್ ಅಫ್ರಿದಿನ್ನು ಬಿಡುಗಡೆ ಮಾಡಲು ಪಾಕ್​​​ಗೆ ಅಮೆರಿಕ ಆದೇಶ
ಡಾ. ಶಕೀಲ್ ಅಫ್ರಿದಿ
ಅಕ್ಷಯ್​ ಪಲ್ಲಮಜಲು​​
|

Updated on: Jun 07, 2025 | 11:48 AM

Share

ಕಾಶ್ಮೀರದ ಪಹಲ್ಗಾಮ್​​​ನಲ್ಲಿ ನಡೆದ ಭಯೋತ್ಪಾದನೆ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನ ಭಯೋತ್ಪಾದಕರಿಗೆ ಆಪರೇಷನ್​​​ ಸಿಂದೂರದ ಮೂಲಕ ಪಾಕಿಸ್ತಾನದ (Dr Shakil Afridi) ಮೇಲೆ ದಾಳಿ ನಡೆಸಿ, ಭಯೋತ್ಪಾದನ ನೆಲೆಗಳ ಮೇಲೆ ದಾಳಿ ನಡಿಸಿದ್ದರು. ಈ ದಾಳಿಯ ನಂತರ ಭಾರತದ ವಿರೋಧ ಪಕ್ಷಗಳು ಸೇರಿದಂತೆ ಭಾರತದ ನಿಯೋಗಗಳು (Osama Bin Laden) ಜಗತ್ತಿನ ಬೇರೆ ಬೇರೆ ದೇಶಗಳು ಭೇಟಿ ನೀಡಿತ್ತು. ಅದರಲ್ಲಿ ಶಶಿ ತರೂರು ನೇತೃತ್ವದ ನಿಯೋಗ ಅಮೆರಿಕಕ್ಕೆ ಭೇಟಿ ನೀಡಿತ್ತು. ಈ ಸಮಯದಲ್ಲಿ ಪಾಕ್​ ನಿಯೋಗ ಕೂಡ ಅಮೆರಿಕದ ಶಾಸಕರನ್ನು ಭೇಟಿ ಮಾಡಿತ್ತು. ಈ ವೇಳೆ ಅಮೆರಿಕದ ಶಾಸಕರೊಬ್ಬರು ಪಾಕ್​​ ನಿಯೋಗದ ನೇತೃತ್ವದ ವಹಿಸಿದ ಬಿಲಾವಲ್ ಭುಟ್ಟೋ ಜರ್ದಾರಿ ಅವರಿಗೆ ಸರಿಯಾಗಿ ಮಂಗಳಾರತಿ ಮಾಡಿದ್ದಾರೆ. ನೀವು ಮೊದಲು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿ. ಈ ನೀಚ ಬುದ್ಧಿಯನ್ನು ಇಂದೇ ನಿಲ್ಲಿಸಿ ಎಂದು ಹೇಳಿದ್ದಾರೆ.

ಗುರುವಾರ ಪಾಕಿಸ್ತಾನಿ ನಿಯೋಗವು ಕಾಂಗ್ರೆಸ್ ಸದಸ್ಯ ಬ್ರಾಡ್ ಶೆರ್ಮನ್ ಅವರನ್ನು ಭೇಟಿ ಮಾಡಿತ್ತು. ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಭಾರತೀಯ ಸಂಸದರ ಬಹು-ಪಕ್ಷ ನಿಯೋಗವು ವಾಷಿಂಗ್ಟನ್, ಡಿಸಿಯಲ್ಲಿರುವ ಸಮಯದಲ್ಲಿ ಅವರು ಅಮೆರಿಕ ರಾಜಧಾನಿಗೆ ಭೇಟಿ ನೀಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಆಪರೇಷನ್ ಸಿಂಧೂರ್ ಮತ್ತು ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಹೋರಾಡುವ ಭಾರತ ಸಂಕಲ್ಪ ಮಾಡಿದೆ. ಅದಕ್ಕಾಗಿ ಸರ್ವಪಕ್ಷದ ಬಹು ನಿಯೋಗ ರಚನೆ ಮಾಡಿ ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿದೆ.

ಬ್ರಾಡ್ ಶೆರ್ಮನ್ ಭಯೋತ್ಪಾದನೆಯನ್ನು ಎದುರಿಸುವ ಮಹತ್ವದ ಬಗ್ಗೆ ಪಾಕಿಸ್ತಾನಕ್ಕೆ ಒತ್ತಿ ಹೇಳಿದರು. ಅದರಲ್ಲೂ ವಿಶೇಷವಾಗಿ 2002 ರಲ್ಲಿ ಕಾಂಗ್ರೆಸ್​​ ಸದಸ್ಯ ಡೇನಿಯಲ್ ಪರ್ಲ್ ಅವರನ್ನು ಹತ್ಯೆ ಮಾಡಿದ ಜೈಶ್-ಎ-ಮೊಹಮ್ಮದ್ ಗುಂಪು ವಿರುದ್ಧ ಹೋರಾಡುವ ಅಗತ್ಯ ಇದೆ ಎಂದು ಹೇಳಿದ್ದಾರೆ. 2002 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ವರದಿಗಾರ ಡೇನಿಯಲ್ ಪರ್ಲ್ ಅವರ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಭಯೋತ್ಪಾದಕ ಒಮರ್ ಸಯೀದ್ ಶೇಖ್ ದೋಷಿ ಎಂದು ಸಾಬೀತಾಗಿದೆ. ಈ ದುಷ್ಟ ಗುಂಪನ್ನು ತೊಡೆದುಹಾಕಲು ಮತ್ತು ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಎದುರಿಸಲು ಪಾಕಿಸ್ತಾನ ತನ್ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬೇಕು ಎಂದು ಹೇಳಿದರು.

ಭುಟ್ಟೋ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರನ್ನು ತಮ್ಮ ನಿಯೋಗ ಹಾಗೂ ನ್ಯೂಯಾರ್ಕ್‌ನಲ್ಲಿ ಭದ್ರತಾ ಮಂಡಳಿಯ ರಾಯಭಾರಿಗಳೊಂದಿಗೆ ಭೇಟಿಯಾದರು, ನಂತರ ಭಾರತದೊಂದಿಗಿನ ಸಂಘರ್ಷ ಮತ್ತು ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯೀಕರಿಸುವ ಬಗ್ಗೆ ಮಾತನಾಡಲು ಈ ನಿಯೋಗ ಬಂದಿದೆ. ಆದರೆ ಈ ನಿಯೋಗಕ್ಕೆ ಭಾರೀ ಮುಖಭಂಗವಗಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ರಕ್ಷಣೆ ಒಂದು ಪ್ರಮುಖ ವಿಷಯವಾಗಿ ಉಳಿದಿದೆ ಅಲ್ಲವೇ ಎಂದು ಬ್ರಾಡ್ ಶೆರ್ಮನ್ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ವಾಸಿಸುವ ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಅಹ್ಮದೀಯ ಮುಸ್ಲಿಮರು ಹಿಂಸೆ, ಕಿರುಕುಳ, ತಾರತಮ್ಯ ಅಥವಾ ಅಸಮಾನ ನ್ಯಾಯ ವ್ಯವಸ್ಥೆಯ ಭಯವಿಲ್ಲದೆ ತಮ್ಮ ನಂಬಿಕೆಯನ್ನು ಆಚರಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನದ ಅಗತ್ಯವಿದೆ, ಅಂದು ನನ್ನನ್ನು ಸ್ವಲ್ಪ ಕೆಳಮಟ್ಟಕ್ಕೆ ಇಳಿಸಲಾಗಿತ್ತು: ಒಮರ್ ಅಬ್ದುಲ್ಲಾ

ಒಸಾಮಾ ಬಿನ್ ಲಾಡೆನ್ ನ್ನು ಕೊಲ್ಲಲು ಅಮೆರಿಕಕ್ಕೆ ಸಹಾಯ ಮಾಡಿದ್ದಕ್ಕಾಗಿ ಜೈಲಿನಲ್ಲಿ ಕೊಳೆಯುತ್ತಿರುವ ಡಾ. ಶಕೀಲ್ ಅಫ್ರಿದಿ ಅವರನ್ನು ಬಿಡುಗಡೆ ಮಾಡುವ ಅಗತ್ಯವನ್ನು ಪಾಕಿಸ್ತಾನಿ ನಿಯೋಗವು ತಮ್ಮ ಸರ್ಕಾರಕ್ಕೆ ತಿಳಿಸಬೇಕೆಂದು ಶೆರ್ಮನ್ ಒತ್ತಾಯಿಸಿದರು. ಅಫ್ರಿದಿ ಪಾಕಿಸ್ತಾನಿ ವೈದ್ಯರಾಗಿದ್ದು, ಬಿನ್ ಲಾಡೆನ್ ಕುಟುಂಬದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಲು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ನಡೆಸಲು ಸಿಐಎಗೆ ಸಹಾಯ ಮಾಡಿದರು. ಮೇ 2011 ರಲ್ಲಿ ಅಬೋಟಾಬಾದ್‌ನಲ್ಲಿರುವ ಬಿನ್ ಲಾಡೆನ್ ನಿವಾಸದ ಮೇಲೆ ಅಮೆರಿಕ ದಾಳಿ ನಡೆಸಿದ ಸ್ವಲ್ಪ ಸಮಯದ ನಂತರ ಪಾಕಿಸ್ತಾನಿ ಅಧಿಕಾರಿಗಳು ಆಫ್ರಿದಿಯನ್ನು ಬಂಧಿಸಿದರು. 2012 ರಲ್ಲಿ, ಪಾಕಿಸ್ತಾನಿ ನ್ಯಾಯಾಲಯವು ಆಫ್ರಿದಿಗೆ 33 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!