US Presidential Election 2024: ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ, ಫಲಿತಾಂಶ ಯಾವಾಗ? ಇಲ್ಲಿದೆ ಮಾಹಿತಿ

ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್ 5, 2024 ರಂದು ನಡೆಯಲಿದೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖ್ಯ ಸ್ಪರ್ಧಿಗಳು. "ವಿನ್ನರ್ ಟೇಕ್ಸ್ ಆಲ್" ವ್ಯವಸ್ಥೆಯಿಂದ, ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಗೆ ಆ ರಾಜ್ಯದ ಎಲ್ಲಾ ಚುನಾವಣಾ ಮತಗಳು ಲಭಿಸುತ್ತವೆ. ಮತ ಎಣಿಕೆ ಜನವರಿ 6 ರಂದು ನಡೆಯಲಿದೆ. ಚುನಾವಣೆಯ ಫಲಿತಾಂಶವು ಅಮೆರಿಕದ ಭವಿಷ್ಯವನ್ನು ನಿರ್ಧರಿಸುತ್ತದೆ.

US Presidential Election 2024: ಇಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ, ಫಲಿತಾಂಶ ಯಾವಾಗ? ಇಲ್ಲಿದೆ ಮಾಹಿತಿ
ಕಮಲಾ ಹ್ಯಾರಿಸ್-ಡೊನಾಲ್ಡ್​ ಟ್ರಂಪ್
Follow us
|

Updated on: Nov 05, 2024 | 8:06 AM

ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಅಮೆರಿಕದಲ್ಲಿ ರಾಷ್ಟ್ರೀಯ ಚುನಾವಣೆಗೆ ಸಿದ್ಧವಾಗಿದೆ. ಅಮೆರಿಕದ ಮತದಾರರು ತಮ್ಮ ನಾಲ್ಕು ವರ್ಷಗಳ ಭವಿಷ್ಯವನ್ನು ನವೆಂಬರ್ 5 ರಂದು ಆಯ್ಕೆ ಮಾಡುತ್ತಾರೆ. ಈ ಚುನಾವಣೆಯಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಪ್ರಮುಖ ಸ್ಪರ್ಧೆ ಏರ್ಪಟ್ಟಿದೆ. ಚುನಾವಣಾ ದಿನಕ್ಕೂ ಮುನ್ನವೇ ಕೋಟ್ಯಂತರ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಆರಂಭಿಕ ಮತದಾನದ ಅಂಕಿಅಂಶಗಳು ಬರಲಾರಂಭಿಸಿವೆ. ಅಧ್ಯಕ್ಷರ ಅಧಿಕಾರಾವಧಿಯು ಜನವರಿ 2025 ರಿಂದ ನಾಲ್ಕು ವರ್ಷಗಳವರೆಗೆ ಇರುತ್ತದೆ.

ಮಂಗಳವಾರ ಮಾತ್ರ ಮತದಾನ ಅಮೆರಿಕದಲ್ಲಿ ಪ್ರತಿ 4 ವರ್ಷಗಳಿಗೊಮ್ಮೆ ಎಲ್ಲಾ ರಾಜ್ಯಗಳಲ್ಲಿ ಒಂದೇ ದಿನದಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ನವೆಂಬರ್​ನ ಮೊದಲ ಮಂಗಳವಾರದ ದಿನದಂದೇ ನಡೆಯಲಿದೆ. ಈ ಕಾನೂನನ್ನು 1845ರಲ್ಲಿ ಜಾರಿಗೊಳಿಸಲಾಯಿತು. 180 ವರ್ಷಗಳ ಹಿಂದೆ ಅಮೆರಿಕ ಬಹುತೇಕ ಕೃಷಿ ಪ್ರಧಾನ ರಾಷ್ಟ್ರವಾಗಿತ್ತು. ನವೆಂಬರ್ ಆರಂಭದ ದಿನಗಳಲ್ಲಿ ರೈತರಿಗೆ ಕೃಷಿ ಕೆಲಸಗಳೇ ಹೆಚ್ಚಿರುತ್ತಿದ್ದವು. ಬಹುತೇಕ ಕ್ರಿಶ್ಚಿಯನ್ನರು ಭಾನುವಾರದಂದು ಚರ್ಚ್​ಗೆ ಹೋಗುತ್ತಿದ್ದರು. ಉಳಿದ ದಿನ ಮಾರಾಟ, ಖರೀದಿ ಸೇರಿದಂತೆ ಹಲವು ಕೆಲಸಗಳಿರುತ್ತಿದ್ದವು. ಆ ಕಾರಣದಿಂದ ಮಂಗಳವಾರವನ್ನು ನಿಗದಿಪಡಿಸಲಾಯಿತು.

ಜನವರಿಯಲ್ಲಿ ನಡೆಯಲಿದೆ ಮತ ಎಣಿಕೆ ಜನವರಿ 6 ರಂದು ಮತ ಎಣಿಕೆ ನಡೆಯಲಿದೆ, ಅಧ್ಯಕ್ಷರಾಗಿ ಆಯ್ಕೆಯಾದವರು ಜನವರಿ 20ರಂದು ಅಧಿಕಾರ ಗದ್ದುಗೆ ಏರುತ್ತಾರೆ. ನವೆಂಬರ್​ನಲ್ಲಿ ಆಯ್ಕೆಯಾದ ಎಲೆಕ್ಟ್ರರ್ಸ್​ ಡಿಸೆಂಬರ್​ನ ಮೊದಲ ಬುಧವಾರದ ನಂತರದ ಮಂಗಳವಾರದಂದು ತಮ್ಮ ರಾಜ್ಯಗಳಲ್ಲಿ ಭೇಟಿಯಾಗುತ್ತಾರೆ. ಆಗ ಇಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆರಿಸಲಾಗುತ್ತದೆ. ಮತ್ತು ಸಹಿ ಮಾಡಿದ ಪ್ರಮಾಣಪತ್ರಗಳನ್ನು ವಾಷಿಂಗ್ಟನ್​ ಡಿಸಿಗೆ ಕಳುಹಿಸಲಾಗುತ್ತದೆ.

ಚುನಾವಣೆಯಲ್ಲಿ ಟ್ರಂಪ್ ಗೆಲುವು ಸಾಧಿಸಿದಲ್ಲಿ ಹಲವು ಪ್ರಕರಣಗಳಲ್ಲಿ ದೋಷಾರೋಪ ಹೊತ್ತು ಅಧ್ಯಕ್ಷರಾದ ಮೊದಲಿಗ ಎನ್ನಿಸಿಕೊಳ್ಳಲಿದ್ದಾರೆ. ಈ ಮೂಲಕ ತನ್ನ ಮೇಲಿನ ಬಾಕಿ ಕೇಸ್​ಗಳನ್ನು ಕೊನೆಗೊಳಿಸುವ ಅಧಿಕಾರವನ್ನೂ ಪಡೆಯಲಿದ್ದಾರೆ. ಕಮಲಾ ಅವರು ಗೆಲುವು ಸಾಧಿಸಿದಲ್ಲಿ ಮೊದಲ ಕಪ್ಪು ಮಹಿಳೆ ಮತ್ತು ದಕ್ಷಿಣ ಏಷ್ಯಾ ಮೂಲದ ಮೊದಲ ವ್ಯಕ್ತಿಯಾಗಲಿದ್ದಾರೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆ ಇತರ ದೇಶಗಳಿಂದ ವಿಭಿನ್ನವಾಗಿದೆ.

ಇಲ್ಲಿ 50 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 538 ಎಲೆಕ್ಟರ್ಸ್‌ ಚುನಾಯಿತರಾಗುತ್ತಾರೆ. ಪ್ರತಿ ರಾಜ್ಯದಿಂದ ಆಯ್ಕೆಯಾದ ಎಲೆಕ್ಟರ್ಸ್‌ ಸಂಖ್ಯೆ ಭಿನ್ನವಾಗಿರುತ್ತದೆ. ಸಾಮಾನ್ಯವಾಗಿ, ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿಗಳಿಗೆ ಆಯಾ ರಾಜ್ಯದ ಅಧಿಕಾರ ಲಭಿಸುತ್ತದೆ. 54 ಸ್ಥಾನಗಳನ್ನು ಹೊಂದಿರುವ ಕ್ಯಾಲಿಫೋರ್ನಿಯಾ ಜನಸಂಖ್ಯಾ ದೃಷ್ಟಿಯಲ್ಲಿ ದೊಡ್ಡ ರಾಜ್ಯವಾಗಿದೆ. ಈ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದವರು ಸಂಪೂರ್ಣ 54 ಸ್ಥಾನಗಳಲ್ಲೂ ವಿಜಯಿಶಾಲಿಗಳಾಗಲಿದ್ದಾರೆ.

ಮತ್ತಷ್ಟು ಓದಿ: ಅಮೆರಿಕದ ಹಿಂದೂಗಳ ರಕ್ಷಣೆಯ ಪ್ರತಿಜ್ಞೆ; ಭಾರತದೊಂದಿಗಿನ ಸಂಬಂಧ ಬಿಗಿಗೊಳಿಸುವುದಾಗಿ ಟ್ರಂಪ್ ಘೋಷಣೆ

ಇದನ್ನು ‘ವಿನ್ನರ್‌ಟೇಕ್ಸ್‌ ಆಲ್‌’ ನಿಯಮ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಕಮಲಾ ಹ್ಯಾರಿಸ್‌ 34 ಸ್ಥಾನ ಗೆದ್ದು ಡೊನಾಲ್ಡ್‌ ಟ್ರಂಪ್‌ 20 ಜಯಿಸಿದರೆ, ಎಲ್ಲ 54 ಸ್ಥಾನಗಳು ಕಮಲಾ ಹ್ಯಾರಿಸ್‌ ಪಾಲಾಗುತ್ತದೆ. ಈ ಕಾರಣದಿಂದ 2016ರ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್‌ಗಿಂತ 28.6 ಲಕ್ಷ ಕಡಿಮೆ ಮತಗಳನ್ನು ಪಡೆದರೂ ಡೊನಾಲ್ಡ್ ಟ್ರಂಪ್‌ ಅಧ್ಯಕ್ಷರಾಗಿದ್ದರು.

ಎರಡು ಬಾರಿ ಮಾತ್ರ ಅಧ್ಯಕ್ಷರಾಗಬಹುದು 1947ರಲ್ಲಿ ಜಾರಿಗೊಳಿಸಿದ 22ನೇ ಸಾಂವಿಧಾನಿಕ ತಿದ್ದುಪಡಿಯಂತೆ ಅಮೆರಿಕದಲ್ಲಿ ಒಬ್ಬ ವ್ಯಕ್ತಿಯು ಕೇವಲ 2 ಅವಧಿಗಷ್ಟೇ ಅಧ್ಯಕ್ಷರಾಗಬಹುದು. 1932ರಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಫ್ರಾಂಕ್ಲಿನ್ ಡಿ, ರೂಸ್ ವೆಲ್ಟ್​ 4 ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಮೆರಿಕದ ಅಧ್ಯಕ್ಷರಾಗಬೇಕಾದರೆ ಅಮೆರಿಕದಲ್ಲಿ ಜನಿಸಿರಬೇಕು. ಕನಿಷ್ಠ ವಯಸ್ಸು 32 ವರ್ಷಗಳಾಗಿರಬೇಕು ಹಾಗೂ ಕನಿಷ್ಠ 14 ವರ್ಷ ಅಮೆರಿಕ ನಿವಾಸಿಯಾಗಿರಬೇಕು. ಒಂದು ವೇಳೆ ಹಾಲಿ ಅಧ್ಯಕ್ಷರು ಅಧಿಕಾರದಲ್ಲಿದ್ದಾಗ ಮೃತಪಟ್ಟರೆ ನಿಯಮದಂತೆ ಉಪಾಧ್ಯಕ್ಷರು ಅಧ್ಯಕ್ಷರಾಗುತ್ತಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಗರ್ಭಪಾತ, ಗರ್ಭ ದೋಷಕ್ಕೆ ಪರಿಹಾರ ತಿಳಿಯಿರಿ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ ಇಂದು ಆರು ಗ್ರಹಗಳ ಶುಭ ಫಲವಿದೆ
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ಡ್ರಮ್​ನಲ್ಲಿ ರಾಕೆಟ್ ಇಟ್ಟು ಪಟಾಕಿ ಸಿಡಿಸಿದ ಐಐಟಿ ವಿದ್ಯಾರ್ಥಿಗಳು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಪಟಾಕಿ ಹೊಡೆಯುತ್ತಿದ್ದ ವ್ಯಕ್ತಿ ಸಾವು
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಚುನಾವಣೆಗೆ ಸಜ್ಜಾದ ಜಾರ್ಖಂಡ್​ನಲ್ಲಿ ಪ್ರಧಾನಿ ಮೋದಿ ಮೊದಲ ರ್ಯಾಲಿ
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಲೋಕಾಯುಕ್ತ ನೋಟೀಸ್​​ನಿಂದ ಸಿಎಂ ಸಿದ್ದರಾಮಯ್ಯ ವಿಚಲಿತರಾದಂತೆ ಕಾಣುತ್ತಿದೆ!
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಜನರ ಕಷ್ಟ ಗೊತ್ತಿರುವ ಯೋಗೇಶ್ವರ್ ಚನ್ನಪಟ್ಟಣಕ್ಕೆ ರೆಡಿಮೇಡ್ ಗಂಡು: ಡಿಕೆಶಿ
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು
ಆಗ್ರಾ ಬಳಿ ಮಿಗ್-29 ಫೈಟರ್ ಜೆಟ್ ಪತನ; ಪೈಲಟ್‌ಗಳು ಪಾರು