US Tariff: ಭಾರತದ ಮೇಲೆ ಶೇ.26ರಷ್ಟು ಪ್ರತಿ ಸುಂಕ ವಿಧಿಸಿದ ಡೊನಾಲ್ಡ್​ ಟ್ರಂಪ್

ಸರಕುಗಳ ಮೇಲೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸುಂಕ ವಿಧಿಸಲು ಮುಂದಾಗಿದೆ. ಭಾರತವು ಅಮೆರಿಕದ ಸರಕುಗಳ ಮೇಲೆ ಅಮೆರಿಕ ವಿಧಿಸುವುದಕ್ಕಿಂತ ಹೆಚ್ಚಿನ ಸುಂಕಗಳನ್ನು ವಿಧಿಸಿದ್ದು ಇದೀಗ ಅಮೆರಿಕ ಮುಯ್ಯಿಗೆ ಮುಯ್ಯಿ ನೀತಿಯನ್ನು ತರಲು ಮುಂದಾಗಿದೆ. ಭಾರತ ವಿಧಿಸುವ ಸುಂಕದಂತೆಯೇ ಅಮೆರಿಕ ಕೂಡಾ ಸುಂಕ ವಿಧಿಸಲು ಮುಂದಾಗಿದೆ. ಭಾರತ ಮಾತ್ರವಲ್ಲದೇ ಅಮೆರಿಕ ಇತರೆ ರಾಷ್ಟ್ರಗಳಿಗೂ ಸುಂಕ ವಿಧಿಸುವುದಾಗಿ ಘೋಷಿಸಿದೆ. ಇದಕ್ಕೆ ಪ್ರತಿಯಾಗಿ ಇತರ ರಾಷ್ಟ್ರಗಳು ಕೂಡಾ ಪ್ರತಿ ಸುಂಕ ವಿಧಿಸಲು ಮುಂದಾಗುತ್ತಿರುವುದು ಇದು ಜಾಗತಿಕ ವ್ಯಾಪಾರ ಯುದ್ಧವಾಗಿ ಉಲ್ಬಣಗೊಳ್ಳಬಹುದು ಎಂದು ಕೆಲವು ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ. ಇದೀಗ ಭಾರತ ತನ್ನ 5 ವಲಯಗಳಲ್ಲಿ ಕಟ್ಟೆಚ್ಚರ ವಹಿಸಿದೆ.

US Tariff: ಭಾರತದ ಮೇಲೆ ಶೇ.26ರಷ್ಟು ಪ್ರತಿ ಸುಂಕ ವಿಧಿಸಿದ ಡೊನಾಲ್ಡ್​ ಟ್ರಂಪ್
ಡೊನಾಲ್ಡ್​ ಟ್ರಂಪ್
Image Credit source: Business Standard

Updated on: Apr 03, 2025 | 9:05 AM

ವಾಷಿಂಗ್ಟನ್, ಏಪ್ರಿಲ್ 03: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಭಾರತ ಸೇರಿ ವಿವಿಧ ದೇಶಗಳ ಉತ್ಪನ್ನಗಳ ಮೇಲೆ ಸುಂಕ ವಿಧಿಸಿದ್ದಾರೆ. ಇದು ಭಾರತ ಸೇರಿದಂತೆ ವಿವಿಧ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದ ಮೇಲೆ ಅಮೆರಿಕವು ಶೇ.26ರಷ್ಟು ಪ್ರತಿ ಸುಂಕ ವಿಧಿಸಿದೆ. ಕಾಂಬೋಡಿಯಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.49 ರಷ್ಟು ಸುಂಕ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸಲಾಗುವುದು ಎಂದು ಘೋಷಿಸಲಾಗಿದೆ.

ನಮ್ಮ ದೇಶವನ್ನು ಇತರ ದೇಶಗಳು ಲೂಟಿ ಮಾಡಿವೆ ಎಂದು ಹೇಳಿದರು. ಅಮೆರಿಕದ ತೆರಿಗೆದಾರರು 50 ವರ್ಷಗಳಿಗೂ ಹೆಚ್ಚು ಕಾಲ ವಂಚನೆಗೊಳಗಾಗಿದ್ದಾರೆ. ಆದರೆ ಇದು ಇನ್ನು ಮುಂದೆ ಹಾಗಾಗುವುದಿಲ್ಲ ಎಂದರು.

ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ. 46 , ಸ್ವಿಟ್ಜರ್ಲೆಂಡ್ ಮೇಲೆ ಶೇ.31 , ತೈವಾನ್ ಮೇಲೆ ಶೇ. 32 , ಜಪಾನ್ ಮೇಲೆ ಶೇ. 24 , ಬ್ರಿಟನ್ ಮೇಲೆ 10 ಪ್ರತಿಶತ, ಬ್ರೆಜಿಲ್ ಮೇಲೆ ಶೇ. 10 , ಇಂಡೋನೇಷ್ಯಾ ಮೇಲೆ ಶೇ. 32 , ಸಿಂಗಾಪುರದ ಮೇಲೆ 10 ಪ್ರತಿಶತ, ದಕ್ಷಿಣ ಆಫ್ರಿಕಾದ ಮೇಲೆ ಶೇ.30 . ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಾಹನಗಳ ಮೇಲೆ ಅವರು ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದ್ದಾರೆ.

ಇದನ್ನೂ ಓದಿ
ಕೇರಳ ಶಾಸಕರ ಮೂಲ ವೇತನ 2,000 ರೂ ಮಾತ್ರ
ಆಸ್ತಿ ನೋಂದಣಿ ಸಂದರ್ಭದಲ್ಲಿ ಯಾರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು?
ಏ. 1ರಿಂದ ಭಾರತದಿಂದ ಗೂಗಲ್ ಟ್ಯಾಕ್ಸ್ ಹೇರಿಕೆ ಇಲ್ಲ
ವೆನುಜುವೇಲಾದಿಂದ ತೈಲ ಖರೀದಿಸಿದರೆ ಶೇ. 25 ಸುಂಕ: ಟ್ರಂಪ್ ಬೆದರಿಕೆ

ಜಗತ್ತಿನ ವಿವಿಧ ದೇಶಗಳ ಮೇಲೆ ಹೆಚ್ಚು ಸುಂಕ ವಿಧಿಸುವ ಕ್ರಮ ಅಮೆರಿಕದ ಒಳಿತಿಗಾಗಿ ಮಾಡಿದ ನಿರ್ಧಾರ. ಭಾರಿ ಸುಂಕ ವಿಧಿಸುವ ತನ್ನ ಯೋಜನೆ ಅಮೆರಿಕದ ಒಳಿತಿಗಾಗಿ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಅದೇ ಸುಂಕವನ್ನು ವಾಹನ ಬಿಡಿಭಾಗಗಳ ಮೇಲೂ ಘೋಷಿಸಿದ್ದಾರೆ. ಆಟೋಮೊಬೈಲ್‌ಗಳ ಮೇಲಿನ ಹೊಸ ಸುಂಕ ಏಪ್ರಿಲ್ 3 ರಿಂದ ಮತ್ತು ಆಟೋ ಬಿಡಿಭಾಗಗಳು ಮೇ 3 ರಿಂದ ಜಾರಿಗೆ ಬರಲಿವೆ.

ಮತ್ತಷ್ಟು ಓದಿ: ವಾಹನಗಳಿಗೆ ಟ್ರಂಪ್ ಶೇ. 25 ಆಮದುಸುಂಕ ಬರೆ; ಭಾರತೀಯ ಆಟೊ ಉದ್ಯಮದ ಮೇಲೇನು ಪರಿಣಾಮ?

ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳ ದಾಳಿಗೆ ಸಮಾನವಾದದ್ದನ್ನು ಉಡಾಯಿಸುವ ಮೂಲಕ, ಅಮೆರಿಕದ ಎಲ್ಲಾ ಆಮದುಗಳ ಮೇಲೆ ಸಾರ್ವತ್ರಿಕ ಸುಂಕದೊಂದಿಗೆ ವಿಧಿಸುವ ಸಾಧ್ಯತೆ ಇದೆ. ಶೇ. 20ರಷ್ಟು ಸಾರ್ವತ್ರಿಕ ಸುಂಕದ ಆಯ್ಕೆ ಕೆಲವು ಸಲಹೆಗಾರರು ಹೇಳಿಕೊಂಡಿರುವ ಟ್ರಿಲಿಯನ್ಗಟ್ಟಲೆ ಡಾಲರ್‌ಗಳ ಬೃಹತ್ ಆದಾಯ ಪಡೆಯುವ ಏಕೈಕ ಮಾರ್ಗವಾಗಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರನ್ನು ಉತ್ತಮ ಸ್ನೇಹಿತ ಎಂದು ಬಣ್ಣಿಸಿದ ಟ್ರಂಪ್, ಭಾರತವು ಅಮೆರಿಕದ ಮೇಲೆ ಶೇಕಡಾ 52 ರಷ್ಟು ಸುಂಕ ವಿಧಿಸುತ್ತದೆ ಆದರೆ ನಾವು ಅವರಿಂದ ಬಹುತೇಕ ಏನನ್ನೂ ವಿಧಿಸುವುದಿಲ್ಲ ಎಂದು ಹೇಳಿದರು.

ಬಾಂಗ್ಲಾದೇಶದ ಉಡುಪುಗಳು ಇನ್ನು ಮುಂದೆ ಅಮೆರಿಕದಲ್ಲಿ ಭಾರತೀಯ ಉಡುಪುಗಳಿಗಿಂತ ಹೆಚ್ಚು ದುಬಾರಿಯಾಗಲಿವೆ. ಚೀನಾ ಮತ್ತು ವಿಯೆಟ್ನಾಂ ಎಲೆಕ್ಟ್ರಾನಿಕ್ ಸರಕುಗಳ ದೊಡ್ಡ ಮಾರಾಟಗಾರರಾಗಿದ್ದು, ಈ ಎರಡೂ ದೇಶಗಳ ಸರಕುಗಳು ಈಗ ಭಾರತೀಯ ಸರಕುಗಳಿಗಿಂತ ಹೆಚ್ಚು ದುಬಾರಿಯಾಗಿರುತ್ತವೆ. ಆದಾಗ್ಯೂ, ಅಮೆರಿಕದ ಈ ಪರಸ್ಪರ ಸುಂಕವು ಭಾರತದ ರಫ್ತಿನ ಮೇಲೆ ತಕ್ಷಣದ ಪರಿಣಾಮ ಬೀರುವುದಿಲ್ಲ ಏಕೆಂದರೆ ಭಾರತದ ಪ್ರತಿಸ್ಪರ್ಧಿ ರಾಷ್ಟ್ರಗಳ ಮೇಲೆ ಭಾರತಕ್ಕಿಂತ ಹೆಚ್ಚಿನ ಸುಂಕವನ್ನು ವಿಧಿಸಲಾಗಿದೆ.

 

ಯಾವ ದೇಶಕ್ಕೆ ಎಷ್ಟು ಸುಂಕ? ಸಂಪೂರ್ಣ ಪಟ್ಟಿ ನೋಡಿ:

1. ಚೀನಾ: 34 ಪ್ರತಿಶತ

2. ಯುರೋಪಿಯನ್ ಒಕ್ಕೂಟ: 20 ಪ್ರತಿಶತ

3. ದಕ್ಷಿಣ ಕೊರಿಯಾ: 25 ಪ್ರತಿಶತ

4. ಭಾರತ: 26 ಪ್ರತಿಶತ

5. ವಿಯೆಟ್ನಾಂ: 46 ಪ್ರತಿಶತ

6. ತೈವಾನ್: 32 ಪ್ರತಿಶತ

7. ಜಪಾನ್: 24

ಪ್ರತಿಶತ 8. ಥೈಲ್ಯಾಂಡ್: 36 ಪ್ರತಿಶತ

9. ಸ್ವಿಟ್ಜರ್ಲೆಂಡ್: 31 ಪ್ರತಿಶತ

10. ಇಂಡೋನೇಷ್ಯಾ: 32 ಪ್ರತಿಶತ

11. ಮಲೇಷ್ಯಾ: 24 ಪ್ರತಿಶತ

12. ಕಾಂಬೋಡಿಯಾ: 49 ಪ್ರತಿಶತ

13. ಯುನೈಟೆಡ್ ಕಿಂಗ್‌ಡಮ್: 10 ಪ್ರತಿಶತ

14. ದಕ್ಷಿಣ ಆಫ್ರಿಕಾ: 30 ಪ್ರತಿಶತ

15. ಬ್ರೆಜಿಲ್: 10 ಪ್ರತಿಶತ

16. ಬಾಂಗ್ಲಾದೇಶ: 37 ಪ್ರತಿಶತ

17. ಸಿಂಗಾಪುರ: 10 ಪ್ರತಿಶತ

18. ಇಸ್ರೇಲ್: 17 ಪ್ರತಿಶತ

19. ಫಿಲಿಪೈನ್ಸ್:

17 ಪ್ರತಿಶತ 20. ಚಿಲಿ: 10 ಪ್ರತಿಶತ

21. ಆಸ್ಟ್ರೇಲಿಯಾ: 10 ಪ್ರತಿಶತ

22. ಪಾಕಿಸ್ತಾನ: 29 ಪ್ರತಿಶತ

23. ಟರ್ಕಿ: 10 ಪ್ರತಿಶತ

24. ಶ್ರೀಲಂಕಾ: 44 ಪ್ರತಿಶತ

25. ಕೊಲಂಬಿಯಾ: 10 ಪ್ರತಿಶತ

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ