AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿ ಜತೆ ಜಗಳವಾಡಿ, ಬೇಸರದಲ್ಲಿ ಮನುಷ್ಯರಂತೆ ಗಲ್ಲದ ಮೇಲೆ ಕೈ ಇಟ್ಟು ಗಾಢವಾಗಿ ಯೋಚಿಸುತ್ತಾ ಕುಳಿತ ಗೋರಿಲ್ಲಾ

ಜಪಾನ್‌ನ ಮೃಗಾಲಯದಲ್ಲಿ ಕಿಯೋಮಾಸ ಗೊರಿಲ್ಲಾ ತನ್ನ ಸಂಗಾತಿಯೊಂದಿಗೆ ಜಗಳವಾಡಿದ ನಂತರ ಮನುಷ್ಯರಂತೆ ತಲೆ ಮೇಲೆ ಕೈಯಿಟ್ಟು ಯೋಚಿಸುವ ವೈರಲ್ ವಿಡಿಯೋ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಪ್ರಾಣಿಗಳಲ್ಲಿನ ಭಾವನೆಗಳ ಆಳ ಮತ್ತು ಮಾನವರೊಂದಿಗಿನ ಡಿಎನ್‌ಎ ಸಾಮ್ಯತೆಯನ್ನು ಇದು ಮತ್ತೊಮ್ಮೆ ಸಾಬೀತುಪಡಿಸಿದೆ. ಕಿಯೋಮಾಸನ ಈ ವರ್ತನೆ ಪ್ರಾಣಿ ಪ್ರಿಯರನ್ನು ಮತ್ತು ವಿಜ್ಞಾನಿಗಳನ್ನು ಆಶ್ಚರ್ಯಗೊಳಿಸಿದೆ.

ಸಂಗಾತಿ ಜತೆ ಜಗಳವಾಡಿ, ಬೇಸರದಲ್ಲಿ ಮನುಷ್ಯರಂತೆ  ಗಲ್ಲದ ಮೇಲೆ ಕೈ ಇಟ್ಟು ಗಾಢವಾಗಿ ಯೋಚಿಸುತ್ತಾ ಕುಳಿತ ಗೋರಿಲ್ಲಾ
ಗೋರಿಲ್ಲಾImage Credit source: NDTV
ನಯನಾ ರಾಜೀವ್
|

Updated on:Jun 10, 2026 | 12:14 PM

Share

ಟೋಕಿಯೋ, ಜೂನ್ 10: ಇಂಟರ್ನೆಟ್ ಜಗತ್ತಿನಲ್ಲಿ ಪ್ರಾಣಿ(Animal)ಗಳ ತಮಾಷೆಯ ಹಾಗೂ ಆಸಕ್ತಿದಾಯಕ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ, ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸುತ್ತಿರುವ ಜಪಾನ್‌ನ ಮೃಗಾಲಯವೊಂದರ ಈ ಗೊರಿಲ್ಲಾ.

ಜಪಾನ್‌ನ ನಗೋಯಾದಲ್ಲಿರುವ ಪ್ರಸಿದ್ಧ ಹಿಗಾಶಿಯಾಮಾ ಮೃಗಾಲಯದಲ್ಲಿ ವಾಸಿಸುವ 13 ವರ್ಷದ ಕಿಯೋಮಾಸ (Kiyomasa) ಎಂಬ ಗಂಡು ಗೊರಿಲ್ಲಾದ 62 ಸೆಕೆಂಡುಗಳ ವಿಡಿಯೋ ಕ್ಲಿಪ್ ಈಗ ಭಾರಿ ವೈರಲ್ ಆಗುತ್ತಿದೆ.

ಏನಿದು ವಿಡಿಯೋದ ವೈಶಿಷ್ಟ್ಯವೇನು? ಮಾಧ್ಯಮಗಳ ವರದಿ ಪ್ರಕಾರ, ಕಿಯೋಮಾಸ ತನ್ನ ಸಂಗಾತಿಯೊಂದಿಗೆ ಜಗಳವಾಡಿದೆ. ಮೃಗಾಲಯದ ಅಧಿಕಾರಿಗಳ ಪ್ರಕಾರ ಇದು ಪ್ರಾಣಿಗಳಲ್ಲಿ ಸಹಜವಾಗಿ ನಡೆಯುವ ಸಣ್ಣ ಭಿನ್ನಾಭಿಪ್ರಾಯವೇ ಆಗಿದ್ದರೂ, ಕಿಯೋಮಾಸ ಮಾತ್ರ ಇದನ್ನು ತೀರಾ ಮನಸ್ಸಿಗೆ ಹಚ್ಚಿಕೊಂಡಿದೆ.

ಜಗಳ ಮುಗಿದ ನಂತರ, ಕಿಯೋಮಾಸ ಬೇಸರದಿಂದ ಕಾಂಕ್ರೀಟ್ ಮೆಟ್ಟಿಲುಗಳ ಬಳಿಗೆ ಹೋಗಿ ಯಾರೂ ಇಲ್ಲದೆ ಶಾಂತವಾಗಿ ಒಬ್ಬಂಟಿಯಾಗಿ ಕುಳಿತಿತ್ತು. ವಿಡಿಯೋದಲ್ಲಿ ಆತ ಕುಳಿತಿರುವ ಶೈಲಿ ಒಬ್ಬ ಮನುಷ್ಯ ತೀವ್ರ ಆಲೋಚನೆಯಲ್ಲಿ ಮುಳುಗಿರುವಂತೆ ಕಾಣಿಸುತ್ತದೆ. ಆತ ತನ್ನ ಗಲ್ಲವನ್ನು ಕೈಯಲ್ಲಿ ಹಿಡಿದುಕೊಂಡು, ಯಾವುದೋ ಜೀವನದ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುವ ತತ್ವಜ್ಞಾನಿಯಂತೆ (Philosopher) ಗಂಭೀರವಾಗಿ ಯೋಚಿಸುತ್ತಿದ್ದಾನೆ. ಅಷ್ಟೇ ಅಲ್ಲದೆ, ಮಧ್ಯೆ ಮಧ್ಯೆ ತಲೆ ಕೆರೆದುಕೊಳ್ಳುವುದನ್ನು ಕಾಣಬಹುದು.

ವಿಡಿಯೋ

ಮನುಷ್ಯರಿಗೆ ಎಷ್ಟು ಹತ್ತಿರದಲ್ಲಿವೆ ಗೊರಿಲ್ಲಾಗಳು? ಕಿಯೋಮಾಸನ ಈ ವಿಶಿಷ್ಟ ನಡವಳಿಕೆಯು ಪ್ರಾಣಿ ಪ್ರಿಯರನ್ನು ಮಾತ್ರವಲ್ಲದೆ ವಿಜ್ಞಾನಿಗಳನ್ನು ಮತ್ತು ಪ್ರಾಣಿ ತಜ್ಞರನ್ನು ಆಶ್ಚರ್ಯಗೊಳಿಸಿದೆ. ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಗೊರಿಲ್ಲಾಗಳು ಮಾನವರ ಸರಿಸುಮಾರು ಶೇಕಡಾ 98 ರಷ್ಟು ಡಿಎನ್‌ಎ (DNA) ಹಂಚಿಕೊಳ್ಳುತ್ತವೆ.

ಮತ್ತಷ್ಟು ಓದಿ:

ವೈದ್ಯನ ಮನೆಯಲ್ಲಿ ಅಪರೂಪದ ವಿದೇಶಿ ಪ್ರಾಣಿಗಳು ಪತ್ತೆ! 7 ಮಂದಿ ಅಂದರ್

ಅವು ಕೇವಲ ಕಾಡಿನಲ್ಲಿ ಬದುಕುವ ಜೀವಿಗಳಲ್ಲ, ಬದಲಿಗೆ ಅತ್ಯಂತ ಸಾಮಾಜಿಕ ಪ್ರಾಣಿಗಳಾಗಿದ್ದು, ಮನುಷ್ಯರಂತೆಯೇ ಕೋಪ, ದುಃಖ, ಅಸೂಯೆ, ಪ್ರೀತಿ ಮತ್ತು ವಿಷಾದದಂತಹ ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವ ಮತ್ತು ಅನುಭವಿಸುವ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಈ ವಿಡಿಯೋ ಮತ್ತೊಮ್ಮೆ ಸಾಬೀತುಪಡಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:14 pm, Wed, 10 June 26

Follow Us
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ
ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ