Viral News: ಈ ದೇಶದಲ್ಲಿ ಮೂರನೇ ಮಗು ಮಾಡಿಕೊಂಡವರಿಗೆ 11 ಲಕ್ಷ ರೂ. ಬಹುಮಾನ, 1 ವರ್ಷ ರಜೆ!

| Updated By: ಸುಷ್ಮಾ ಚಕ್ರೆ

Updated on: May 05, 2022 | 6:26 PM

ಈ ಕಂಪನಿಯ ಆಫರ್ ಪ್ರಕಾರ, 3ನೇ ಮಗುವನ್ನು ಹೆರುವ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಮತ್ತು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳ ರಜೆಯನ್ನು ನೀಡಲಾಗುವುದು.

Viral News: ಈ ದೇಶದಲ್ಲಿ ಮೂರನೇ ಮಗು ಮಾಡಿಕೊಂಡವರಿಗೆ 11 ಲಕ್ಷ ರೂ. ಬಹುಮಾನ, 1 ವರ್ಷ ರಜೆ!
ಸಾಂದರ್ಭಿಕ ಚಿತ್ರ
Follow us on

ಬೀಜಿಂಗ್: ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಚೀನಾದಲ್ಲಿ (China) 2016ರಲ್ಲಿ ಒಂದೇ ಮಗು ಎಂಬ ನೀತಿಯನ್ನು ಕೊನೆಗೊಳಿಸಲಾಗಿತ್ತು. ನಂತರ ಚೀನಾ ತನ್ನ ದೇಶದ ಪ್ರಜೆಗಳಿಗೆ ಒಂದಕ್ಕಿಂತ ಹೆಚ್ಚು ಮಗುವಿಗೆ ಜನ್ಮ ನೀಡಲು ಅವಕಾಶ ಮಾಡಿಕೊಟ್ಟಿತ್ತು. ಅದರ ನಂತರ, 2021ರ ಮೇ ತಿಂಗಳಲ್ಲಿ ಮತ್ತೊಂದು ನೀತಿಯನ್ನು ಪರಿಚಯಿಸಲಾಯಿತು. ಇದನ್ನು ‘ಮೂರು ಮಕ್ಕಳ ನೀತಿ’ ಎಂದು ಉಲ್ಲೇಖಿಸಲಾಗಿದೆ. 2ಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಲು ನಾಗರಿಕರನ್ನು ಉತ್ತೇಜಿಸಲು ಚೀನಾ ದೇಶದ ಪ್ರಯತ್ನ ಇದಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ಚೀನಾದ ಸಂಸ್ಥೆಯು ಮೂರನೇ ಮಗುವಿಗೆ ಜನ್ಮ ನೀಡುವ ಉದ್ಯೋಗಿಗಳಿಗೆ ಪ್ರೋತ್ಸಾಹವನ್ನು ನೀಡಲು ಪ್ರಾರಂಭಿಸಿದೆ. ಬೀಜಿಂಗ್ ಡೆಬಿನಾಂಗ್ ಟೆಕ್ನಾಲಜಿ ಗ್ರೂಪ್ ಹೆಸರಿನ ಸಂಸ್ಥೆಯು 3ನೇ ಮಗುವಿಗೆ ಜನ್ಮ ನೀಡುವ ತನ್ನ ಉದ್ಯೋಗಿಗೆ 90,000 ಯುವಾನ್ (ರೂ. 11.50 ಲಕ್ಷ) ಮೌಲ್ಯದ ನಗದು ಬೋನಸ್ ನೀಡುವುದಾಗಿ ಭರವಸೆ ನೀಡಿದೆ.

ಈ ಕಂಪನಿಯ ಆಫರ್ ಪ್ರಕಾರ, 3ನೇ ಮಗುವನ್ನು ಹೆರುವ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಮತ್ತು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳ ರಜೆಯನ್ನು ನೀಡಲಾಗುವುದು. ಕುತೂಹಲಕಾರಿ ಸಂಗತಿಯೆಂದರೆ, ಮೊದಲ ಮಗುವಿನ ನಂತರ ಎರಡನೇ ಮಗುವಿಗೆ ಜನ್ಮ ನೀಡುವವರು 60,000 ಯುವಾನ್ (7 ಲಕ್ಷ ರೂ.) ಬೋನಸ್ ಪಡೆಯಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ
ಭಾರತದಲ್ಲಿ ಖಲಿಸ್ತಾನ್ ಚಳವಳಿಯನ್ನು ವಿಸ್ತರಿಸಲು ಬಯಸುತ್ತಿದೆ ಪಾಕ್ ಐಎಸ್ಐ: ಗುಪ್ತಚರ ಮಾಹಿತಿ
Video: ರಷ್ಯಾ ಸೈನಿಕರ ಆಕ್ರಮಣದಿಂದ ಕಾಲು-ಕೈಬೆರಳುಗಳನ್ನು ಕಳೆದುಕೊಂಡ ನರ್ಸ್​ ಮದುವೆ; ಮನಕಲಕುವ ಸನ್ನಿವೇಶಕ್ಕೆ ಸಾಕ್ಷಿಯಾದ ಆಸ್ಪತ್ರೆ ಸಿಬ್ಬಂದಿ
Modi’s Europe visit ಡೆನ್ಮಾರ್ಕ್ ಪ್ರವಾಸ ಮುಗಿಸಿ ಫ್ರಾನ್ಸ್​​ ತಲುಪಿದ ಪ್ರಧಾನಿ ನರೇಂದ್ರ ಮೋದಿ
Covid-19 Updates: ಕೊವಿಡ್​ ಹೆಚ್ಚಳದಿಂದ ಬೀಜಿಂಗ್​ನಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸ್ಥಗಿತ

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಒಂದು ಮಗುವಿನ ನೀತಿಯನ್ನು 2018ರಲ್ಲಿ ಪ್ರಾರಂಭಿಸಲಾಯಿತು. ವರದಿಗಳ ಪ್ರಕಾರ, ಈ ನೀತಿಯು ಲಿಂಗ ಅನುಪಾತದಲ್ಲಿ ಬದಲಾವಣೆಗೆ ಕಾರಣವಾಯಿತು. ಅದರ ನಂತರ, ಚೀನಾ ದೇಶವು ಜನಸಂಖ್ಯೆಯ ಅಸಮಾನತೆಯನ್ನು ಎದುರಿಸಲು ಪ್ರಾರಂಭಿಸಿತು. ಅಲ್ಲದೆ, ವಯಸ್ಸಾದ ಜನಸಂಖ್ಯೆಯ ಪ್ರಮಾಣವು ತೀವ್ರವಾಗಿ ಹೆಚ್ಚಾಗಲಾರಂಭಿಸಿತು. ಜನರು ಗಂಡುಮಕ್ಕಳಿಗೆ ಜನ್ಮ ನೀಡಲು ಆದ್ಯತೆ ನೀಡಿದ್ದರಿಂದ ಗರ್ಭಪಾತದ ಪ್ರಮಾಣವೂ ಹೆಚ್ಚಾಯಿತು. ಈ ಕಾರಣದಿಂದ ಚೀನಾದಲ್ಲಿ ಒಂದು ಮಗು ನೀತಿಯನ್ನು ಕೊನೆಗೊಳಿಸಲಾಯಿತು.

2020ರ ಜನಗಣತಿಯ ಪ್ರಕಾರ, ಚೀನಾ ದೇಶದಲ್ಲಿ 2019ರಲ್ಲಿ ಜನಿಸಿದ 14.65 ಮಿಲಿಯನ್ ಮಕ್ಕಳಿಗೆ ಹೋಲಿಸಿದರೆ 2020ರಲ್ಲಿ ಸುಮಾರು 12 ಮಿಲಿಯನ್ ಶಿಶುಗಳು ಜನಿಸಿವೆ.