ಕೋಸ್ಟಾ ರಿಕಾ ಏರ್ಪೋರ್ಟ್ನಲ್ಲಿ ತುರ್ತು ಲ್ಯಾಂಡಿಂಗ್ ವೇಳೆ ರನ್‌ವೇಯಿಂದ ಜಾರಿ ತುಂಡಾಗಿ ಬಿದ್ದ ವಿಮಾನ
ಬೋಯಿಂಗ್ 757 ರಾಜಧಾನಿಯ ಪಶ್ಚಿಮಕ್ಕೆ ಜುವಾನ್ ಸಾಂಟಾಮಾರಿಯಾ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದೆ. ಆಗ ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ವೈಫಲ್ಯವನ್ನು ಪತ್ತೆಹಚ್ಚಿದ ನಂತರ ಹಿಂತಿರುಗಲು ನಿರ್ಧರಿಸಿದೆ. ಈ ವೇಳೆ ರನ್ವೇಯಲ್ಲಿ ಸ್ಕಿಡ್ ಆಗಿ ತುಂಡಾಗಿ ಬಿದ್ದಿದೆ.
ನವದೆಹಲಿ: ಕೋಸ್ಟಾ ರಿಕಾದ ಸ್ಯಾನ್ ಜೋಸ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (International Airport in Costa Rica) ತುರ್ತು ಭೂಸ್ಪರ್ಶದ ವೇಳೆ ಕಾರ್ಗೋ ವಿಮಾನವೊಂದು (Cargo Flight) ರನ್‌ವೇಯಿಂದ ಜಾರಿ ಅರ್ಧ ತುಂಡಾಗಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಆ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶಿಸಿದ್ದಾರೆ. ಬೋಯಿಂಗ್ 757 ರಾಜಧಾನಿಯ ಪಶ್ಚಿಮಕ್ಕೆ ಜುವಾನ್ ಸಾಂಟಾಮಾರಿಯಾ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಆದರೆ, ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ವೈಫಲ್ಯವನ್ನು ಪತ್ತೆಹಚ್ಚಿದ ನಂತರ ಹಿಂತಿರುಗಲು ನಿರ್ಧರಿಸಿದೆ. ಈ ವೇಳೆ ರನ್ವೇಯಲ್ಲಿ ಸ್ಕಿಡ್ ಆಗಿ ತುಂಡಾಗಿ ಬಿದ್ದಿದೆ.
ಕೋಸ್ಟರಿಕಾ ಅಗ್ನಿಶಾಮಕ ವಿಭಾಗದ ನಿರ್ದೇಶಕ ಹೆಕ್ಟರ್ ಚೇವ್ಸ್ ವಿಮಾನವು ಲ್ಯಾಂಡ್ ಆಗುವಾಗ ಸ್ಕಿಡ್ ಆಗಿ, ತಿರುಗಿ ಮುರಿದು ಬಿದ್ದಿದೆ. ಪೈಲಟ್ ಮತ್ತು ಕೋ- ಪೈಲಟ್ ಅನ್ನು ತೆಗೆದುಹಾಕಲು ಘಟಕಗಳು ಸಜ್ಜುಗೊಂಡಿವೆ ಎಂದು ಚಾವ್ಸ್ ಹೇಳಿದ್ದಾರೆ. “ನಂತರ ವಿಮಾನದಿಂದ ಸೋರಿಕೆಯನ್ನು ತಡೆಗಟ್ಟಲು ಫೋಮ್ ಅನ್ನು ಹಾಕಿದರು. ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ. ಆದರೆ, ಮುನ್ನೆಚ್ಚರಿಕಾ ಕ್ರಮವಾಗಿ ಒಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಕಾರ್ಗೋ ಕ್ಯಾರಿಯರ್ ಡಿಎಚ್‌ಎಲ್ ವಕ್ತಾರರು ತಿಳಿಸಿದ್ದಾರೆ.
Video footage of the DHL Boeing 757 Freighter just as it skidded off the runway at SJO.
Read more at AviationSource!https://t.co/63ONa6oRCD
Source: Unknown#DHL #JuanSantamariaAirport #AvGeek #Crash #Accident pic.twitter.com/EI9ew6YVXN
— AviationSource (@AvSourceNews) April 7, 2022
DHL ವಕ್ತಾರ ಡೇನಿಯಲ್ ಮೆಕ್‌ಗ್ರಾತ್ ಕಂಪನಿಯು ವಿಮಾನವನ್ನು ಸ್ಥಳಾಂತರಿಸಲು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ. ಆದ್ದರಿಂದ ವಿಮಾನಗಳು ಪುನರಾರಂಭಗೊಳ್ಳಬಹುದು. ಘಟನೆಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು ಎಂದರು.
ವಿಮಾನ ನಿಲ್ದಾಣದ ಆಡಳಿತವು ವಿಮಾನ ನಿಲ್ದಾಣವನ್ನು ಒಳಬರುವ ಮತ್ತು ಹೊರಹೋಗುವ ವಿಮಾನಗಳಿಗೆ ಕನಿಷ್ಠ 6 ಗಂಟೆಯವರೆಗೆ ಮುಚ್ಚಿರುತ್ತದೆ ಎಂದು ಹೇಳಿದೆ. ಕೆಲವು ವಿಮಾನಗಳನ್ನು ಸ್ಯಾನ್ ಜೋಸ್‌ನ ವಾಯುವ್ಯಕ್ಕೆ 125 ಮೈಲುಗಳಷ್ಟು ದೂರದಲ್ಲಿರುವ ಲೈಬೀರಿಯಾದ ಡೇನಿಯಲ್ ಓಡುಬರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗುತ್ತದೆ.
ಇದನ್ನೂ ಓದಿ: Viral Video: ಸಾವಿರಾರು ಅಡಿ ಎತ್ತರದಲ್ಲಿ ಆಫ್ ಆದ ವಿಮಾನವನ್ನು ಸ್ಟಾರ್ಟ್ ಮಾಡಲು ಪೈಲಟ್ ಮಾಡಿದ್ದೇನು ಗೊತ್ತಾ..!
Indigo: ಟೇಕಾಫ್ ಆಗುವಾಗ ತಾಂತ್ರಿಕ ಸಮಸ್ಯೆ; ರಾಂಚಿಯಲ್ಲಿ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್