Viral Video: ಬಿಗಿ ಭದ್ರತೆಯನ್ನು ಭೇದಿಸಿ ರಾಣಿ ಎಲಿಜಬೆತ್ ಶವಪೆಟ್ಟಿಗೆಯ ಕಡೆ ಓಡಿದ ವ್ಯಕ್ತಿ; ವಿಡಿಯೋ ವೈರಲ್

ಆ ವ್ಯಕ್ತಿ ಬಾರ್ಡರ್​​ನಿಂದ ಹೊರಬಂದು, ಶವಪೆಟ್ಟಿಗೆಯನ್ನು ಮುಟ್ಟುವ ಮೊದಲು ಕ್ಯಾಟಫಾಲ್ಕ್‌ನ ಮೆಟ್ಟಿಲುಗಳ ಬಳಿ ಓಡಿಹೋದ. ಆಗ ಪೊಲೀಸರು ಆತನನ್ನು ಹಿಡಿದು ನೆಲಕ್ಕೆ ತಳ್ಳಿದ್ದಾರೆ. ನಂತರ ಆತನನ್ನು ಬಂಧಿಸಿದ್ದಾರೆ.

Viral Video: ಬಿಗಿ ಭದ್ರತೆಯನ್ನು ಭೇದಿಸಿ ರಾಣಿ ಎಲಿಜಬೆತ್ ಶವಪೆಟ್ಟಿಗೆಯ ಕಡೆ ಓಡಿದ ವ್ಯಕ್ತಿ; ವಿಡಿಯೋ ವೈರಲ್
ರಾಣಿ ಎಲಿಜಬೆತ್ ಶವಪೆಟ್ಟಿಗೆ
Updated By: ಸುಷ್ಮಾ ಚಕ್ರೆ

Updated on: Sep 17, 2022 | 12:38 PM

ಲಂಡನ್: ಬ್ರಿಟನ್ ರಾಣಿ ಎಲಿಜಬೆತ್ (Queen Elizabeth) ಮೃತಪಟ್ಟಿದ್ದಾರೆ. ಅವರ ಅಂತಿಮ ದರ್ಶನಕ್ಕೆ ಜಗತ್ತಿನ ಅನೇಕ ರಾಷ್ಟ್ರಗಳಿಂದ ಗಣ್ಯರು ಪಾಲ್ಗೊಂಡಿದ್ದರು. ವೆಸ್ಟ್‌ಮಿನ್‌ಸ್ಟರ್ ಹಾಲ್‌ನಲ್ಲಿ ರಾಣಿ ಎಲಿಜಬೆತ್ ಅವರ ಶವಪೆಟ್ಟಿಗೆಯ ಕಡೆಗೆ ನುಗ್ಗಲು ಯತ್ನಿಸಿದ ವ್ಯಕ್ತಿಯನ್ನು ಬಂಧಿಸಿರುವ ಆಘಾತಕಾರಿ ಘಟನೆಯ ಹೊಸ ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ.

ದಿ ಗಾರ್ಡಿಯನ್ ಪ್ರಕಾರ, ಆ ವ್ಯಕ್ತಿ ಬಾರ್ಡರ್​​ನಿಂದ ಹೊರಬಂದು, ಶವಪೆಟ್ಟಿಗೆಯನ್ನು ಮುಟ್ಟುವ ಮೊದಲು ಕ್ಯಾಟಫಾಲ್ಕ್‌ನ ಮೆಟ್ಟಿಲುಗಳ ಬಳಿ ಓಡಿಹೋದ. ಆಗ ಪೊಲೀಸರು ಆತನನ್ನು ಹಿಡಿದು ನೆಲಕ್ಕೆ ತಳ್ಳಿದ್ದಾರೆ. ನಂತರ ಆತನನ್ನು ಬಂಧಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಅಲ್ಲಿದ್ದ ಜನರು ಭಯಭೀತರಾಗಿ ನೋಡುತ್ತಿರುವುದನ್ನು ನೋಡಬಹುದು. ಆಗ ಪೊಲೀಸ್ ಅಧಿಕಾರಿಗಳು ಅವನನ್ನು ಹಾಲ್‌ನಿಂದ ಹೊರಹಾಕುವ ಮೊದಲು ಅವರನ್ನು ನೆಲಕ್ಕೆ ಹಾಕಿ ಹೊಡೆದಿದ್ದಾರೆ.

ಇದನ್ನೂ ಓದಿ: Queen Elizabeth II Funeral: ಬ್ರಿಟನ್ ರಾಣಿ ಎಲಿಜಬೆತ್ II ಅಂತ್ಯಕ್ರಿಯೆ: ಯಾರ್ಯಾರು ಭಾಗಿ?

ರಾಣಿ ಎಲಿಜಬೆತ್ ಶವ ಪೆಟ್ಟಿಗೆಯ ಬಳಿ ಈ ಘಟನೆ ನಡೆದಿದೆ. ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು ಸಂಸದೀಯ ಮತ್ತು ರಾಜತಾಂತ್ರಿಕ ಸಂರಕ್ಷಣಾ ಕಮಾಂಡ್ ಒಬ್ಬ ವ್ಯಕ್ತಿಯನ್ನು ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಆ ವ್ಯಕ್ತಿಯನ್ನು ಸಾರ್ವಜನಿಕ ಸುವ್ಯವಸ್ಥೆ ಕಾಯಿದೆಯಡಿಯಲ್ಲಿ ಬಂಧಿಸಲಾಗಿದೆ.

2022ರ ಸೆಪ್ಟೆಂಬರ್ 12ರಂದು ಸೋಮವಾರ ಮಧ್ಯಾಹ್ನ 2.50ರ ಸುಮಾರಿಗೆ ರಾಯಲ್ ಮೈಲ್‌ನಲ್ಲಿ ಶಾಂತಿ ಉಲ್ಲಂಘನೆಗೆ ಸಂಬಂಧಿಸಿದಂತೆ 22 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಶಾಂತಿಯ ಉಲ್ಲಂಘನೆಯು ಅವ್ಯವಸ್ಥೆಯ ನಡವಳಿಕೆಯಾಗಿದೆ. ಇದು ಸ್ಕಾಟ್ಲೆಂಡ್‌ನಲ್ಲಿ 12 ತಿಂಗಳ ಜೈಲು ಅಥವಾ 5,000 ಪೌಂಡ್‌ಗಳವರೆಗೆ ದಂಡವನ್ನು ವಿಧಿಸಬಹುದು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ