AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿರಿಯಾದ ‘ಲಿಟ್ಲ್ ಅಮಲ್’ ಬಗ್ಗೆ ನಿಮಗೆ ಗೊತ್ತಾ? ತನ್ನ ದೇಶವಾಸಿಗಳ ದುಸ್ಥಿತಿ ವಿವರಿಸುತ್ತಾ ಅವಳು ನ್ಯೂ ಯಾರ್ಕ್ ತಲುಪಿದ್ದಾಳೆ!

12-ಅಡಿ ಎತ್ತರದ ಲಿಟ್ಲ್ ಅಮಲ್ 17-ದಿನಗಳ ಯುಎಸ್ ಪ್ರವಾಸಕ್ಕಾಗಿ ಆಗಮಿಸಿದ್ದಾಳೆ . ನ್ಯೂ ಯಾರ್ಕ್ ಟೈಮ್ಸ್ ವರದಿಯೊಂದರ ಪ್ರಕಾರ ಅಮಲ್ ತನ್ನ ಪ್ರವಾಸದ ಅವಧಿಯಲ್ಲಿ ಐದು ಜಿಲ್ಲಾ ಕೇಂದ್ರಗಳಿಗೆ ತೆರಳಿ, ಮಕ್ಕಳು, ರಾಜಕಾರಣಿಗಳು, ಸಮುದಾಯಗಳ ಮುಖಂಡರನ್ನು ಭೇಟಿಯಾಗಲಿದ್ದಾಳೆ.

ಸಿರಿಯಾದ ‘ಲಿಟ್ಲ್ ಅಮಲ್’ ಬಗ್ಗೆ ನಿಮಗೆ ಗೊತ್ತಾ? ತನ್ನ ದೇಶವಾಸಿಗಳ ದುಸ್ಥಿತಿ ವಿವರಿಸುತ್ತಾ ಅವಳು ನ್ಯೂ ಯಾರ್ಕ್ ತಲುಪಿದ್ದಾಳೆ!
ಯುರೋಪ್​​​​ನಲ್ಲಿ ‘ಲಿಟ್ಲ್​ ಅಮಲ್‘
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 18, 2022 | 7:55 AM

Share

ಸಿರಿಯಾ (Syria) ಮಕ್ಕಳ ದೈನೇಸಿ ಸ್ಥಿತಿಯ ಬಗ್ಗೆ ಜಾಗೃತಿ ಮೂಡಿಸಲು, ಜಗತ್ತಿಗೆ ಶಾಂತಿಯ ಸಂದೇಶ ರವಾನಿಸಲು ಮತ್ತು ಬೇರೆ ಬೇರೆ ಸ್ಥಳಗಳಲ್ಲಿ ಆಶ್ರಯಪಡೆದಿರುವ ಸಿರಿಯನ್ನರಿಗೆ ನೆರವಾಗಲು, ‘ಲಿಟ್ಲ್ ಅಮಲ್’ (Little Amal) ಹೆಸರಿನಿಂದ ಗುರುತಿಸಿಕೊಳ್ಳುತ್ತಿರುವ ಸಿರಿಯಾದ 10-ವರ್ಷ-ವಯಸ್ಸಿನ ನಿರಾಶ್ರಿತ ಕೈಗೊಂಬೆ (ಪಪ್ಪೆಟ್) ಯುರೋಪ್ ನಿಂದ (Europe) ಸಾವಿರಾರು ಮೈಲಿ ದೂರವಿರುವ ನ್ಯೂ ಯಾರ್ಕ್ ಪಟ್ಟಣಕ್ಕೆ ಆಗಮಿಸಿದ್ದಾಳೆ ಮಾರಾಯ್ರೇ!

12-ಅಡಿ ಎತ್ತರದ ಲಿಟ್ಲ್ ಅಮಲ್ 17-ದಿನಗಳ ಯುಎಸ್ ಪ್ರವಾಸಕ್ಕಾಗಿ ಆಗಮಿಸಿದ್ದಾಳೆ . ನ್ಯೂ ಯಾರ್ಕ್ ಟೈಮ್ಸ್ ವರದಿಯೊಂದರ ಪ್ರಕಾರ ಅಮಲ್ ತನ್ನ ಪ್ರವಾಸದ ಅವಧಿಯಲ್ಲಿ ಐದು ಜಿಲ್ಲಾ ಕೇಂದ್ರಗಳಿಗೆ ತೆರಳಿ, ಮಕ್ಕಳು, ರಾಜಕಾರಣಿಗಳು, ಸಮುದಾಯಗಳ ಮುಖಂಡರನ್ನು ಭೇಟಿಯಾಗಲಿದ್ದಾಳೆ. ಇದೇ ಸಂದರ್ಭದಲ್ಲಿ ಅವಳು ತನ್ನ ಅಂಕಲ್ ನ ಹುಡುಕಾಟ ನಡೆಸಲಿದ್ದಾಳೆ ಮತ್ತು ಅವಳ ಸೃಷ್ಟಿಕರ್ತರ ನಿರೀಕ್ಷೆಯಂತೆ ಸಿರಿಯನ್ ಮಕ್ಕಳು, ಸಿರಿಯನ್ ಜನರ ಸಂಕಷ್ಟ, ಕಷ್ಟಕಾರ್ಪಣ್ಯ ಮತ್ತು ಸ್ಥಳಾಂತರಗೊಂಡಿರುವ ಲಕ್ಷಾಂತರ ನಿರಾಶ್ರಿತರ ನರಕ ಸದೃಶ ಬದುಕಿನ ಬಗ್ಗೆ ಜಾಗೃತಿ ಅಭಿಯಾನ ನಡೆಸಲಿದ್ದಾಳೆ.

ನ್ಯೂ ಯಾರ್ಕ್ ನಲ್ಲಿ ನಡೆಯುವ ಲಿಟ್ಲ್ ಅಮಲ್ ಳ ನಡಿಗೆ ಕಾರ್ಯಕ್ರಮವು ಅವಳಿಗೆ ಸ್ವಾಗತ ಕೋರುವ 50 ಕಾರ್ಯಕ್ರಮಗಳನ್ನು ಒಳಗೊಂಡಿದೆ. ಕೈಗೊಂಬೆ ಅಮಲ್, ಕ್ವೀನ್ಸ್ ನಲ್ಲಿರುವ ಸಮುದಾಯ ಉದ್ಯಾನವನದಿಂದ ಹೂಗಳನ್ನು ಕೀಳಲಿದ್ದಾಳೆ, ಬ್ರಾಂಕ್ಸ್ ನಲ್ಲಿರುವ ಹೈ ಬ್ರಿಡ್ಜ್ ಮೇಲೆ ನಡೆದಾಡುತ್ತಾಳೆ, ಸ್ಟೇಟನ್ ದ್ವೀಪದಲ್ಲಿ ದೋಣಿವಿಹಾರ ಮಾಡಲಿದ್ದಾಳೆ, ವಾಷಿಂಗ್ಟನ್ ಬೀದಿಗಳಲ್ಲಿ ಡ್ಯಾನ್ಸ್ ಮಾಡಲಿದ್ದಾಳೆ ಮತ್ತು ಬೇ ರಿಜ್ ನಲ್ಲಿ ನಡೆಯಲಿರುವ ಸಿರಿಯನ್ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸಲಿದ್ದಾಳೆ.

ಅರೇಬಿಕ್ ಭಾಷೆಯಲ್ಲಿ ಅಮಲ್ ಎಂದರೆ ನಿರೀಕ್ಷೆ. ಸಿರಿಯಾ-ಟರ್ಕಿ ಗಡಿಪ್ರದೇಶದಿಂದ ಆರಂಭಿಸಿ ಇಂಗ್ಲೆಂಡಿನ ಆಗ್ನೇಯ ಭಾಗಕ್ಕಿರುವ ಮ್ಯಾಂಚೆಸ್ಟರ್ ವರೆಗೆ ಸುಮಾರು 5,000 ಮೈಲಿ ದೂರವನ್ನು ಅಮಲ್ ಕ್ರಮಿಸಿದ್ದಾಳೆ. ಆಕೆ ಇದುವರೆಗೆ 12 ದೇಶಗಳ ಪ್ರವಾಸ ಮಾಡಿದ್ದು ಉಕ್ರೇನ್ ನಿಂದ ವಲಸೆ ಹೋಗಿ ಪೋಲೆಂಡ್ ನ ರೈಲು ನಿಲ್ದಾಣಗಳಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರನ್ನು ಭೇಟಿಯಾಗಿದ್ದಾಳೆ, ಗ್ರೀಸ್ ದೇಶದಲ್ಲಿ ನಿರ್ಮಿಸಲಾಗಿರುವ ನಿರಾಶ್ರಿತರ ಶಿಬಿರಗಳಲ್ಲಿ ತಂಗಿದ್ದಾಳೆ ಮತ್ತು ಪೋಪ್ ಫ್ರಾನ್ಸಿಸ್ ಅವರನ್ನೂ ಭೇಟಿಯಾಗಿದ್ದಾಳೆ ಎಂದು ಎಬಿಸಿ ಪತ್ರಿಕೆ ಮಾಧ್ಯಮ ವರದಿ ಮಾಡಿದೆ.

ಲಿಟ್ಲ್ ಅಮಲ್​ಳ ಸೃಷ್ಟಿ

ಎ ಎಫ್ ಪಿ ವರದಿಯೊಂದರ ಪ್ರಕಾರ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿರುವ ಹ್ಯಾಂಡ್ ಸ್ಪ್ರಿಂಗ್ ಪಪ್ಪೆಟ್ ಕಂಪನಿಯು ಲಿಟ್ಲ್ ಅಮಲ್ ಳನ್ನು ಸೃಷ್ಟಿಸಿದೆ. ಬಿದಿರು ಮತ್ತು ಕಾರ್ಬನ್ ನಾರಿನಂಥ ಹಗುರವಾದ ವಸ್ತುಗಳಿಂದ ಇದನ್ನು ತಯಾರಿಸಲಾಗಿದ್ದು ಜನ ಆಪರೇಟ್ ಮಾಡಲು ಸುಲಭವಾಗಲು ಮತ್ತು ವಿಭಿನ್ನ ವಾತಾವರಣಗಳಲ್ಲಿ ಅದಕ್ಕೆ ಯಾವುದೇ ಹಾನಿ ತಗುಲದಂತಿರಲು ಹಗುರವಾದ ವಸ್ತುಗಳನ್ನು ತಯಾರಿಕೆಯಲ್ಲಿ ಉಪಯೋಗಿಸಲಾಗಿದೆ, ಎಂದು ಕಂಪನಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ