ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಕಾರ್ಯಕ್ರಮವೊಂದರಲ್ಲಿ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಅವರನ್ನು “ಅಮೆರಿಕದ ಪ್ರಥಮ ಮಹಿಳೆ” ಎಂದು ತಪ್ಪಾಗಿ ಉಲ್ಲೇಖಿಸಿದ್ದಾರೆ. ಜೋ ಬೈಡೆನ್ (Joe Biden) ಅವರ ಮಾತು ಕೇಳಿ ಸಭೆಯಲ್ಲಿದ್ದ ಪ್ರೇಕ್ಷಕರು ನಗೆಗಡಲಲ್ಲಿ ತೇಲಿದ್ದಾರೆ. ಜೋ ಬೈಡೆನ್ ಶ್ವೇತಭವನದಲ್ಲಿ ಸಮಾನ ವೇತನ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕಾರ್ಯಕ್ರಮಕ್ಕೆ ಏಕೆ ಹಾಜರಾಗಲಿಲ್ಲ ಎಂಬುದನ್ನು ವಿವರಿಸುವಾಗ ಅವರನ್ನು ಪ್ರಥಮ ಮಹಿಳೆ ಎಂದು ಸಂಬೋಧಿಸಿದ್ದಾರೆ. ಇದಕ್ಕೆ ಸಭಾಂಗಣದಲ್ಲಿ ನೆರೆದಿದ್ದವರೆಲ್ಲ ಜೋರಾಗಿ ನಗಾಡಿದ್ದಾರೆ.
“ಪ್ರಥಮ ಮಹಿಳೆಯ ಪತಿ ಕೊವಿಡ್ ಸೋಂಕಿಗೆ ಒಳಗಾದ ಕಾರಣ ಈ ವೇದಿಕೆಯಲ್ಲಿ ಯಾರೆಲ್ಲ ಇದ್ದಾರೆ ಎಂಬುದರಲ್ಲಿ ಸ್ವಲ್ಪ ಬದಲಾವಣೆಯಾಗಿದೆ” ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಅಮೆರಿಕದ ಪ್ರಥಮ ಮಹಿಳೆಯ ಗಂಡನಿಗೆ ಕೊರೊನಾ ಬಂದಿದೆ ಎಂದರೆ ನಿಮಗೇ ಬಂದಿದೆ ಎಂದು ಅರ್ಥ ಬರುತ್ತದೆ ಎಂದು ವೇದಿಕೆಯಲ್ಲಿದ್ದ ಕೆಲವರು ಜೋ ಬೈಡೆನ್ಗೆ ಹೇಳಿದಾಗ ತಕ್ಷಣ ತಿದ್ದಿಕೊಂಡ ಅವರು ಪ್ರಥಮ ಮಹಿಳೆ ಆರೋಗ್ಯವಾಗಿದ್ದಾಳೆ ಎಂದು ನಗುತ್ತಾ ಮಾತು ಮುಂದುವರೆಸಿದ್ದಾರೆ.
BIDEN: “The First Lady’s husband has tested positive for COVID”
That would be him.
You can’t make this up.
— Benny (@bennyjohnson) March 15, 2022
ಟ್ವಿಟ್ಟರ್ನಲ್ಲಿ ಶೇರ್ ಮಾಡಲಾದ ಈ ವಿಡಿಯೋ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ. ಅಮೆರಿಕದ ಶ್ವೇತಭವನದಲ್ಲಿ ನಡೆದ ಸಮಾನ ವೇತನ ದಿನದ ಕಾರ್ಯಕ್ರಮದಲ್ಲಿ 79 ವರ್ಷ ವಯಸ್ಸಿನ ಜೋ ಬೈಡೆನ್ ಈ ರೀತಿಯ ಎಡವಟ್ಟು ಮಾಡಿದ್ದಾರೆ.
Earlier today, the @SecondGentleman tested positive for COVID-19. Doug is doing fine and we are grateful to be vaccinated and boosted. I have tested negative and will continue to test.
Please get vaccinated and boosted if you haven’t already.
— Vice President Kamala Harris (@VP) March 16, 2022
ಕಳೆದ ವರ್ಷ ಕೂಡ ಅಮೆರಿಕದ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ ಅವರನ್ನು “ಅಧ್ಯಕ್ಷ ಹ್ಯಾರಿಸ್” ಎಂದು ತಪ್ಪಾಗಿ ಕರೆಯುವ ಮೂಲಕ ಇದೇ ರೀತಿಯ ಎಡವಟ್ಟು ಮಾಡಿದ್ದರು.
ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಬೈಡೆನ್, ಕೆನಡಾ ಪ್ರಧಾನಿ ಟ್ರುಡೋ ವಿರುದ್ಧ ನಿರ್ಬಂಧ ಘೋಷಿಸಿದ ರಷ್ಯಾ
ಉಕ್ರೇನ್ ಮೇಲೆ ರಷ್ಯಾದ ದಾಳಿಯಲ್ಲಿ ನಮ್ಮ ಪಾತ್ರದ ಬಗ್ಗೆ ಅಮೆರಿಕ ಸುಳ್ಳು ಸುದ್ದಿ ಹರಡುತ್ತಿದೆ; ಚೀನಾ ಆರೋಪ
Published On - 3:51 pm, Sat, 19 March 22