ಉಕ್ರೇನ್ ಮೇಲೆ ರಷ್ಯಾದ ದಾಳಿಯಲ್ಲಿ ನಮ್ಮ ಪಾತ್ರದ ಬಗ್ಗೆ ಅಮೆರಿಕ ಸುಳ್ಳು ಸುದ್ದಿ ಹರಡುತ್ತಿದೆ; ಚೀನಾ ಆರೋಪ
ಉಕ್ರೇನ್ ವಿಷಯದಲ್ಲಿ ಚೀನಾವನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಉದ್ದೇಶದಿಂದ ಅಮೆರಿಕ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಆರೋಪಿಸಿದ್ದಾರೆ.
ಉಕ್ರೇನ್ ಯುದ್ಧದಲ್ಲಿ (Ukraine War) ರಷ್ಯಾಗೆ ಚೀನಾ ಸಹಾಯ ಮಾಡುತ್ತಿದೆ ಎಂಬ ಬಗ್ಗೆ ಅಮೆರಿಕ (United States) ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಚೀನಾ (China) ಆರೋಪಿಸಿದೆ. ರೋಮ್‌ನಲ್ಲಿ ಉಭಯ ದೇಶಗಳ ರಾಯಭಾರಿಗಳ ನಡುವಿನ ಮಾತುಕತೆಗೂ ಮೊದಲು ಚೀನಾ ಈ ಬಗ್ಗೆ ಸ್ಪಷ್ಟಪಡಿಸಿದ್ದು, ರಷ್ಯಾ (Russia) ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಚೀನಾದ ಪಾತ್ರದ ಬಗ್ಗೆ ಅಮೆರಿಕ ವಿನಾಕಾರಣ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಟೀಕಿಸಿದೆ. ರಷ್ಯಾದ ಮನವಿಯಂತೆ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಚೀನಾ ಸೇನೆ ರಷ್ಯಾಗೆ ಸಹಕಾರ ನೀಡಿದರೆ ಚೀನಾದ ಮೇಲೂ ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸುವುದಾಗಿ ಅಮೆರಿಕ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಅಮೆರಿಕದ ಆರೋಪವನ್ನು ಚೀನಾ ತಳ್ಳಿ ಹಾಕಿದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ 10 ಇತ್ತೀಚಿನ ಬೆಳವಣಿಗೆಗಳು ಇಲ್ಲಿವೆ:
- ಉಕ್ರೇನ್ ವಿಷಯದಲ್ಲಿ ಚೀನಾವನ್ನು ಗುರಿಯಾಗಿಸಿಕೊಂಡು ದುರುದ್ದೇಶಪೂರಿತ ಉದ್ದೇಶದಿಂದ ಅಮೆರಿಕ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಆರೋಪಿಸಿದ್ದಾರೆ.
- ಬೀಜಿಂಗ್‌ನಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ಬ್ರೀಫಿಂಗ್‌ನಲ್ಲಿ ಈ ಹೇಳಿಕೆಗಳನ್ನು ನೀಡಲಾಯಿತು.
- ಇಂದು ಮುಂಜಾನೆ ಅಮೆರಿಕದ ಅಧಿಕಾರಿಗಳು ಮಾಧ್ಯಮಗಳಿಗೆ ಈ ಬಗ್ಗೆ ತಿಳಿಸಿದ್ದು, ಉಕ್ರೇನ್‌ನಲ್ಲಿ ನಡೆಸುತ್ತಿರುವ ಯುದ್ಧಕ್ಕಾಗಿ ರಷ್ಯಾ ಚೀನಾದ ಮಿಲಿಟರಿ ಮತ್ತು ಆರ್ಥಿಕ ನೆರವು ಕೇಳಿದೆ ಎಂದು ಆರೋಪಿಸಿತ್ತು.
- ರಷ್ಯಾದ ಪರವಾಗಿ ಚೀನಾ ಸುಳ್ಳು ಸುದ್ದಿಯನ್ನು ಹರಡುವ ಪ್ರಕ್ರಿಯೆಯಲ್ಲಿ ತೊಡಗಿದೆ ಎಂದು ಅಮೆರಿಕ ಆರೋಪ ಮಾಡಿದೆ. ಉಕ್ರೇನ್‌ನಲ್ಲಿ ರಷ್ಯಾ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳನ್ನು ಬಳಸಲು ಸಹಾಯವಾಗುವಂತೆ ಚೀನಾ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂದು ಆರೋಪಿಸಿತ್ತು.
- ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ಇನ್ನಷ್ಟು ಹೆಚ್ಚಿಸಲು ಚೀನಾದ ಮಿಲಿಟರಿ ಉಪಕರಣಗಳನ್ನು ರಷ್ಯಾ ಕೇಳಿದೆ ಎಂದು ಅಮೆರಿಕ ಆರೋಪ ಮಾಡಿತ್ತು. ಅಲ್ಲದೆ, ರಷ್ಯಾಗೆ ಸಹಾಯ ಮಾಡಿದರೆ ಚೀನಾದ ಮೇಲೂ ಜಾಗತಿಕ ನಿರ್ಬಂಧಗಳನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಿತ್ತು.
- ಉಕ್ರೇನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ಹೆಚ್ಚುತ್ತಿವೆ. ಉಕ್ರೇನಿಯನ್ ಮತ್ತು ರಷ್ಯಾದ ಸಮಾಲೋಚಕರು ವಾರಾಂತ್ಯದಲ್ಲಿ ಎರಡೂ ಕಡೆಯವರು ಪ್ರಗತಿಯನ್ನು ಉಲ್ಲೇಖಿಸಿದ ನಂತರ ಮತ್ತೊಮ್ಮೆ ಮಾತನಾಡಲು ಸಿದ್ಧರಾಗಿದ್ದಾರೆ.
- ಉಕ್ರೇನ್ ಪಶ್ಚಿಮದಲ್ಲಿರುವ ವಿಮಾನ ನಿಲ್ದಾಣದ ಮೇಲೆ ಮತ್ತೆ ವಾಯುದಾಳಿ ನಡೆದಿದೆ. ರಾಜಧಾನಿಯ ಈಶಾನ್ಯದಲ್ಲಿರುವ ಚೆರ್ನಿಹಿವ್‌ನಲ್ಲಿ ಭಾರೀ ಶೆಲ್ ದಾಳಿ ಮತ್ತು ದಕ್ಷಿಣದ ಪಟ್ಟಣವಾದ ಮೈಕೊಲೈವ್ ಮೇಲೆ ದಾಳಿಗಳು ನಡೆದಿವೆ.
- ಫೆಬ್ರವರಿ 24ರಂದು ರಷ್ಯಾದ ಉಕ್ರೇನ್ ಆಕ್ರಮಣದ ನಂತರ ಕಪ್ಪು ಸಮುದ್ರದ ಬಂದರು ನಗರವಾದ ಮರಿಪೋಲ್‌ನ 2,500ಕ್ಕೂ ಹೆಚ್ಚು ನಿವಾಸಿಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಅಧ್ಯಕ್ಷೀಯ ಸಲಹೆಗಾರ ಒಲೆಕ್ಸಿ ಅರೆಸ್ಟೋವಿಚ್ ಹೇಳಿದ್ದಾರೆ.
- ಶನಿವಾರದ ವೇಳೆಗೆ ಸುಮಾರು 2.7 ಮಿಲಿಯನ್ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಅವರಲ್ಲಿ ಸುಮಾರು 1.7 ಮಿಲಿಯನ್ ಜನರು ಪೋಲೆಂಡ್‌ಗೆ ಹೋಗುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆ UNHCR ವರದಿ ಮಾಡಿದೆ.
- ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸೋಮವಾರ ನ್ಯಾಟೋವನ್ನು ತನ್ನ ದೇಶದ ಮೇಲೆ ಹಾರಾಟ ನಿಷೇಧ ವಲಯವನ್ನು ಹೇರುವಂತೆ ಒತ್ತಾಯಿಸಿದ್ದಾರೆ. ಪೋಲಿಷ್ ಗಡಿಗೆ ಸಮೀಪವಿರುವ ಉಕ್ರೇನಿಯನ್ ಸೇನಾ ನೆಲೆಯ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರ ಅದರ ಸದಸ್ಯ ರಾಷ್ಟ್ರಗಳು ಶೀಘ್ರದಲ್ಲೇ ರಷ್ಯಾದ ಪಡೆಗಳಿಂದ ದಾಳಿ ಮಾಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: Russia-Ukraine War: ಚೀನಾದ ಸಹಾಯ ಕೋರಿದ ರಷ್ಯಾ; ಭಾರತದಲ್ಲಿ ಹೆಚ್ಚಿದ ಆತಂಕ
ರಷ್ಯಾ ದಾಳಿಕೋರರ ಪತ್ತೆಗೆ ಕೃತಕ ಬುದ್ಧಿಮತ್ತೆ ಬಳಸುತ್ತಿರುವ ಉಕ್ರೇನ್: ಅಮೆರಿಕ ಕಂಪನಿಗಳಿಂದ ನೆರವು