ನಿಮ್ಮ ಭಾಷಣ ಮುಗಿಯುವಷ್ಟರಲ್ಲಿ ಯುದ್ಧವೇ ಮುಗಿಯುತ್ತೆ ಬಿಡಿ, ಪಾಕ್​ ಮಂದಿ ಶೆಹಬಾಜ್ ವಿರುದ್ಧ ಗರಂ ಆಗಿದ್ದೇಕೆ?

‘ನಿಮ್ಮ ಭಾಷಣ ಮುಗಿಯುವಷ್ಟರಲ್ಲಿ ಯುದ್ಧವೇ ಮುಗಿದಿರುತ್ತೆ ಬಿಡಿ ಎಂದು ಪಾಕಿಸ್ತಾನಿಗಳೇ ಪ್ರಧಾನಿ ಶೆಹಬಾಜ್ ಷರೀಫ್(Shahbaz Sharif)​ ಅವರನ್ನು ಅಣಕಿಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳು ಪಿಒಕೆ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿ 9 ಕಡೆಗಳಲ್ಲಿ ದಾಳಿ ನಡೆಸಿತ್ತು. ನಂತರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.

ನಿಮ್ಮ ಭಾಷಣ ಮುಗಿಯುವಷ್ಟರಲ್ಲಿ ಯುದ್ಧವೇ ಮುಗಿಯುತ್ತೆ ಬಿಡಿ, ಪಾಕ್​ ಮಂದಿ ಶೆಹಬಾಜ್ ವಿರುದ್ಧ ಗರಂ ಆಗಿದ್ದೇಕೆ?
ಶೆಹಬಾಜ್ ಷರೀಫ್
Image Credit source: Moneycontrol

Updated on: May 09, 2025 | 11:08 AM

ಇಸ್ಲಾಮಾಬಾದ್, ಮೇ 09: ‘‘ನಿಮ್ಮ ಭಾಷಣ ಮುಗಿಯುವಷ್ಟರಲ್ಲಿ ಯುದ್ಧವೇ ಮುಗಿದಿರುತ್ತೆ ಬಿಡಿ’’ ಎಂದು ಪಾಕಿಸ್ತಾನಿಗಳೇ ಪ್ರಧಾನಿ ಶೆಹಬಾಜ್ ಷರೀಫ್(Shahbaz Sharif)​ ಅವರನ್ನು ಅಣಕಿಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳು ಪಿಒಕೆ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು ಗುರಿಯಾಗಿಸಿ 9 ಕಡೆಗಳಲ್ಲಿ ದಾಳಿ ನಡೆಸಿತ್ತು. ನಂತರ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.

ಅನೇಕ ಪಾಕಿಸ್ತಾನಿ ನಾಗರಿಕರು ತಮ್ಮ ಪ್ರಧಾನಿಯವರ ನಿಧಾನ ಭಾಷಣದಿಂದ ಸಿಟ್ಟಾದರು, ಅವರು ಪ್ರಧಾನಿಯನ್ನು ‘ದುರ್ಬಲ ಮತ್ತು ಆತ್ಮವಿಶ್ವಾಸದ ಕೊರತೆ’ ಎಂದು ಕರೆದರು. ನಿಮ್ಮ ಭಾಷಣ ಮುಗಿಯುವಷ್ಟರಲ್ಲಿ ಯುದ್ಧವೇ ಅಂತ್ಯಗೊಂಡಿರುತ್ತೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ
12 ಡ್ರೋನ್​ಗಳನ್ನು ಹೊಡೆದುರುಳಿಸಲಾಗಿದೆ ಎಂದ ಪಾಕ್: ಭಾರತ ಹೇಳಿದ್ದೇನು?
ಭಾರತ ಪಾಕ್​ ಮೇಲೆ ನಡೆಸಿದ ದಾಳಿಯಲ್ಲಿ 100 ಉಗ್ರರು ಹತರಾಗಿದ್ದಾರೆ
ಪಾಕಿಸ್ತಾನಕ್ಕೆ ಬಲೂಚಿ ಮತ್ತು ತಾಲಿಬಾನಿಗಳಿಂದಲೂ ಉಳಿಗಾಲವಿಲ್ಲ!
ಪಾಕಿಸ್ತಾನದ ಮೇಲೆ ಭಾರತದ ದಾಳಿಗೂ ಮುನ್ನ, ನಂತರದ ಸ್ಯಾಟಲೈಟ್​ ಚಿತ್ರಗಳು

ಶೆಹಬಾಜ್ ತಮ್ಮ ಭಾಷಣದಲ್ಲಿ ಭಾರತವು ದೊಡ್ಡ ತಪ್ಪು ಮಾಡಿದೆ, ಪಾಕಿಸ್ತಾನದಲ್ಲಿ ಮೃತಪಟ್ಟವರ ಹನಿ ರಕ್ತದ ಪ್ರತೀಕಾರವನ್ನು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಷರೀಫ್ ಅವರ ಮಾತುಗಳು ದೇಶಭಕ್ತಿಯನ್ನು ಹುಟ್ಟುಹಾಕುವ ಬದಲು, ಪ್ರಧಾನಿಯವರ ನಿಧಾನಗತಿಯ ಭಾಷಣವನ್ನು ಟೀಕಿಸಿದ ಪಾಕಿಸ್ತಾನಿ ನಾಗರಿಕರ ಕೋಪಕ್ಕೆ ಕಾರಣವಾಯಿತು.

ಪಾಕಿಸ್ತಾನಿ ಬಳಕೆದಾರರೊಬ್ಬರು, “ಶೆಹಬಾಜ್ ಅಂಕಲ್ ದಯವಿಟ್ಟು ಸ್ವಲ್ಪ ಫಾಸ್ಟ್​ ಆಗಿ ಮಾತನಾಡಿ, ನಮಗೆ ಪ್ರತಿಯೊಂದು ವಿಷಯದ ಬಗ್ಗೆ ಭಾಷಣ ಬೇಡ, ದಯವಿಟ್ಟು ವಿಷಯಕ್ಕೆ ಬನ್ನಿ” ಎಂದು ಹೇಳಿದ್ದಾರೆ.
ಮತ್ತೊಬ್ಬ ಕಮೆಂಟ್ ಮಾಡಿದ್ದು, ಶೆಹಬಾಜ್​ಗೆ ಆತ್ಮವಿಶ್ವಾಸದ ಕೊರತೆ ಇದೆ. ಶಹಬಾಜ್ ಷರೀಫ್ ಅವರ ಭಾಷಣದ ವೇಗವನ್ನು ನೋಡಿದರೆ, ಯುದ್ಧ ಕೊನೆಗೊಳ್ಳಬಹುದು ಆದರೆ ಅವರ ಭಾಷಣ ಮುಗಿಯುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು ಶೆಹಬಾಜ್​ ಷರೀಫ್​ನನ್ನು ಹೇಡಿ ಎಂದು ಕರೆದಿದ್ದಾರೆ.

“ಭಾಷಣ ಕೇಳಿದ ಮೇಲೆ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಳ್ಳಲು ಯೋಜಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಹೇಳಿದ್ದಾರೆ. ಏತನ್ಮಧ್ಯೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಪರೇಷನ್ ಸಿಂಧೂರ್ ನಿರಂತರ ಕಾರ್ಯಾಚರಣೆ ಎಂದು ಸ್ಪಷ್ಟಪಡಿಸಿದರು. ಭಾರತವು ಪರಿಸ್ಥಿತಿಯನ್ನು ಉಲ್ಬಣಗೊಳಿಸಲು ಬಯಸುವುದಿಲ್ಲ ಆದರೆ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಂಡರೆ ಪ್ರತಿದಾಳಿ ನಡೆಸುತ್ತದೆ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: Operation Sindoor: ಪಾಕ್ ಪ್ರಧಾನಿ ಶೆಹಬಾಜ್, ಸೇನಾ ಮುಖ್ಯಸ್ಥ ಮುನೀರ್ ಮನೆ ಬಳಿ ಸ್ಫೋಟ?

ಏಪ್ರಿಲ್ 22ರಂದು ಉಗ್ರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ಅಮಾಯಕರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆಗೈದಿದ್ದರು. ಇದಕ್ಕೆ ಪ್ರತಿಯಾಗಿ ಭಾರತ ಪಾಕಿಸ್ತಾನದ 9 ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿ 100 ಉಗ್ರರನ್ನು ಹತ್ಯೆ ಮಾಡಿತ್ತು. ಇದಾದ ಬಳಿಕ ಪಾಕಿಸ್ತಾನವು ಭಾರತದ ಮೇಲೆ ಪ್ರತಿ ದಾಳಿ ಶುರು ಮಾಡಿತ್ತು, ಗಡಿಗಳ ಉದ್ದಕ್ಕೂ ಗುಂಡಿನ ದಾಳಿ ನಡೆಸಿದ್ದು, ಅನೇಕ ನಾಗರಿಕರನ್ನು ಹತ್ಯೆ ಮಾಡಿತ್ತು, ಹೀಗಾಗಿ ಕೋಪಗೊಂಡ ಭಾರತ ಮತ್ತೆ ಪಾಕ್​ ವಿರುದ್ಧ ದಾಳಿಗೆ ನಿಂತಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ