Sri Lanka Crisis ಪೆಟ್ರೋಲ್ ಖರೀದಿಸಲು ಹಣವಿಲ್ಲ, ಇಂಧನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಬೇಡಿ ಎಂದು ನಾಗರಿಕರಲ್ಲಿ ಮನವಿ ಮಾಡಿದ ಶ್ರೀಲಂಕಾ ಸರ್ಕಾರ
ಇದಕ್ಕಾಗಿಯೇ ನಾವು ಇಂಧನಕ್ಕಾಗಿ ಸರದಿಯಲ್ಲಿ ಕಾಯದಂತೆ ನಾವು ಜನರನ್ನು ವಿನಂತಿಸಿದ್ದೇವೆ. ಡೀಸೆಲ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ದಯವಿಟ್ಟು ಪೆಟ್ರೋಲ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಡಿ. ನಾವು ಪೆಟ್ರೋಲ್‌ನ ಸೀಮಿತ ದಾಸ್ತಾನುಗಳನ್ನು ಹೊಂದಿದ್ದೇವೆ
ಕೊಲಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ (Sri Lanka) ಸರ್ಕಾರ ತಮ್ಮ ಸಮುದ್ರದಲ್ಲಿ ಸುಮಾರು ಎರಡು ತಿಂಗಳ ಕಾಲ ಲಂಗರು ಹಾಕಲಾದ ಪೆಟ್ರೋಲ್ (Petrol) ಹಡಗಿಗೆ ಪಾವತಿಸಲು ವಿದೇಶಿ ವಿನಿಮಯ ಹೊಂದಿಲ್ಲ. ಹಾಗಾಗಿ ಇಂಧನಕ್ಕಾಗಿ “ಸರದಿಯಲ್ಲಿ ಕಾಯಬೇಡಿ” ಎಂದು ನಾಗರಿಕರಿಗೆ ಮನವಿ ಮಾಡಿದೆ. ಆದಾಗ್ಯೂ, ದೇಶವು ಸಾಕಷ್ಟು ಡೀಸೆಲ್ ದಾಸ್ತಾನುಗಳನ್ನು ಸ್ವೀಕರಿಸಿದೆ ಎಂದು ಸರ್ಕಾರ ಹೇಳಿದೆ. ಮಾರ್ಚ್ 28 ರಿಂದ ಪೆಟ್ರೋಲ್ ಹೊಂದಿರುವ ಹಡಗನ್ನು ಶ್ರೀಲಂಕಾದ ನೀರಿನಲ್ಲಿ ಲಂಗರು ಹಾಕಲಾಗಿದೆ ಎಂದು ವಿದ್ಯುತ್ ಮತ್ತು ಇಂಧನ ಸಚಿವ ಕಾಂಚನಾ ವಿಜೆಶೇಖರ (Kanchana Wijesekera) ಸಂಸತ್ತಿಗೆ ತಿಳಿಸಿದರು. ದೇಶವು ಪೆಟ್ರೋಲ್ ಲಭ್ಯತೆಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ದೃಢಪಡಿಸಿದ್ದಾರೆ ಎಂದು ಆನ್‌ಲೈನ್ ಪೋರ್ಟಲ್ ನ್ಯೂಸ್ ಫಸ್ಟ್ ಡಾಟ್ ಎಲ್ ಕೆ ವರದಿ ಮಾಡಿದೆ. “ಪೆಪೆಟ್ರೋಲ್ ಪಡೆಯುವುದಕ್ಕಾಗಿ ಹಡಗಿಗೆ ಪಾವತಿ ಮಾಡಲು ನಮ್ಮ ಬಳಿ ಅಮೆರಿಕನ್ ಡಾಲರ್‌ಗಳಿಲ್ಲ” ಎಂದು ಅವರು ಹೇಳಿದರು. ಜನವರಿ 2022 ರಲ್ಲಿ ಹಿಂದಿನ ಸಾಗಣೆಯಲ್ಲಿ ಅದೇ ಹಡಗಿಗೆ 53 ಮಿಲಿಯನ್ ಯುಎಸ್ ಡಿ ಬಾಕಿ ಇದೆ ಎಂದು ಅವರು ಹೇಳಿದ್ದಾರೆ. ಎರಡೂ ಪಾವತಿಗಳು ಇತ್ಯರ್ಥವಾಗುವವರೆಗೆ ಹಡಗನ್ನು ಅಲ್ಲಿಂದ ಹೋಗಲು ಸಂಬಂಧಿಸಿದ ಹಡಗು ಕಂಪನಿ ನಿರಾಕರಿಸಿತ್ತು. ಹಿಂದಿನ ಪಾವತಿಯನ್ನು ಮಾಡಲು ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್‌ನಿಂದ ಭರವಸೆ ನೀಡಿದ ನಂತರ, ಬಾಕಿ ಪಾವತಿ ಮಾಡಿದ ನಂತರ ಪ್ರಸ್ತುತ ಹಡಗನ್ನು ಬಿಡುಗಡೆ ಮಾಡಲು ಕಂಪನಿಯು ಒಪ್ಪಿಕೊಂಡಿದೆ ಎಂದು ವಿಜೆಶೇಖರ ಹೇಳಿದರು. ಆದಾಗ್ಯೂ, “ನಾವು ಈ ಉದ್ದೇಶಕ್ಕಾಗಿ ಇನ್ನೂ ನಿಧಿಯನ್ನು ಸಂಗ್ರಹಿಸಿಲ್ಲ” ಎಂದು ಅವರು ಹೇಳಿದರು. ಬುಧವಾರ ಅಥವಾ ಗುರುವಾರ ಹಡಗನ್ನು ಬಿಡುಗಡೆ ಮಾಡಲು ಸಚಿವಾಲಯವು ಕಾರ್ಯ ಪ್ರವೃತ್ತವಾಗಿದೆ ಎಂದು ಅವರು ಹೇಳಿದ್ದಾರೆ. “ಇದಕ್ಕಾಗಿಯೇ ನಾವು ಇಂಧನಕ್ಕಾಗಿ ಸರದಿಯಲ್ಲಿ ಕಾಯದಂತೆ ನಾವು ಜನರನ್ನು ವಿನಂತಿಸಿದ್ದೇವೆ. ಡೀಸೆಲ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ದಯವಿಟ್ಟು ಪೆಟ್ರೋಲ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಡಿ. ನಾವು ಪೆಟ್ರೋಲ್‌ನ ಸೀಮಿತ ದಾಸ್ತಾನುಗಳನ್ನು ಹೊಂದಿದ್ದೇವೆ ಮತ್ತು ಅಗತ್ಯ ಸೇವೆಗಳಿಗೆ, ವಿಶೇಷವಾಗಿ ಆಂಬ್ಯುಲೆನ್ಸ್‌ಗಳಿಗೆ ಅನುಗುಣವಾಗಿ ಅದನ್ನು ವಿತರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು.
“ಇದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಮೂರು-ಚಕ್ರ ವಾಹನಗಳು ದೈನಂದಿನ ಇಂಧನ ಖರೀದಿಯೊಂದಿಗೆ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂಬುದು ನಮಗರ್ಥವಾಗುತ್ತದೆ . ಬುಧವಾರ ಮತ್ತು ಗುರುವಾರ ಇಂಧನಕ್ಕಾಗಿ ಸರದಿಯಲ್ಲಿ ನಿಲ್ಲದಂತೆ ನಾವು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ ಎಂದು ಅವರು ಹೇಳಿದರು.
ಇದನ್ನೂ ಓದಿ: Delhi LG Anil Baijal ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ರಾಜೀನಾಮೆ
ಇನ್ನೆರಡು ದಿನ ಪೆಟ್ರೋಲ್ ತಲುಪಿಸಲು ಸಾಧ್ಯವಾಗದ ಕಾರಣ ಇಂಧನ ಸಂಗ್ರಹಣೆಯನ್ನು ನಿಲ್ಲಿಸುವಂತೆ ಸಚಿವರು ಜನರಲ್ಲಿ ಮನವಿ ಮಾಡಿದರು. ಶುಕ್ರವಾರದಿಂದ ಇನ್ನೂ ಮೂರು ದಿನಗಳು ಬೇಕು ಎಂದು ವಿಜೆಶೇಖರ ಹೇಳಿದ್ದಾರೆ.
“ಇಂಧನ ಖರೀದಿಯ ಕುರಿತು ಸಚಿವಾಲಯಕ್ಕೆ ಮಾಡಿದ 67 ಪ್ರಸ್ತಾಪಗಳಲ್ಲಿ, 39 ಶ್ರೀಲಂಕಾದಲ್ಲಿ ಪ್ರಾಯೋಗಿಕವಾಗಿ ಅನ್ವಯಿಸುತ್ತದೆ ಎಂದು ಗುರುತಿಸಲಾಗಿದೆ” ಎಂದು ಅವರು ಹೇಳಿದರು. ಆದಾಗ್ಯೂ ಯಾವುದೇ ಪ್ರಸ್ತಾಪವನ್ನು ಮಾಡಿದರೂ ಲೆಟರ್ ಆಫ್ ಕ್ರೆಡಿಟ್ ತೆರೆಯದೆಯೇ ದೇಶವು ಪೆಟ್ರೋಲ್ ಅನ್ನು ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ.
ಲೆಟರ್ ಆಫ್ ಕ್ರೆಡಿಟ್, ಡಾಕ್ಯುಮೆಂಟರಿ ಕ್ರೆಡಿಟ್ ಅಥವಾ ಬ್ಯಾಂಕರ್ಸ್ ಕಮರ್ಷಿಯಲ್ ಕ್ರೆಡಿಟ್ ಅಥವಾ ಲೆಟರ್ ಆಫ್ ಅಂಡರ್‌ಟೇಕಿಂಗ್ ಎಂದೂ ಕರೆಯಲ್ಪಡುತ್ತದೆ. ಇದು ಸಾಲದ ಅರ್ಹ ಬ್ಯಾಂಕ್‌ನಿಂದ ಸರಕುಗಳ ರಫ್ತುದಾರರಿಗೆ ಆರ್ಥಿಕ ಖಾತರಿಯನ್ನು ಒದಗಿಸಲು ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಬಳಸುವ ಪಾವತಿ ಕಾರ್ಯವಿಧಾನವಾಗಿದೆ.
ಶ್ರೀಲಂಕಾವು ಸಾಕಷ್ಟು ಡೀಸೆಲ್ ದಾಸ್ತಾನುಗಳನ್ನು ಸ್ವೀಕರಿಸಿದೆ ಎಂದು ವಿಜೆಶೇಖರ ಹೇಳಿದರು. “ಮಂಗಳವಾರ, ನಾವು ದೇಶದ ಎಲ್ಲಾ ಫಿಲ್ಲಿಂಗ್ ಸ್ಟೇಷನ್‌ಗಳಿಗೆ ಸೂಪರ್ ಡೀಸೆಲ್ ಮತ್ತು ಆಟೋ ಡೀಸೆಲ್ ಅನ್ನು ವಿತರಿಸಿದ್ದೇವೆ. ಇಂದಿನಿಂದ (ಬುಧವಾರ) 1,300 ಫಿಲ್ಲಿಂಗ್ ಸ್ಟೇಷನ್‌ಗಳಿದ್ದರೂ, ದೇಶದ ಎಲ್ಲಾ 1,190 ಸಕ್ರಿಯ ಫಿಲ್ಲಿಂಗ್ ಸ್ಟೇಷನ್‌ಗಳಿಗೆ ನಿರಂತರ ಡೀಸೆಲ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಆಶಿಸುತ್ತೇವೆ ಎಂದು ಅವರು ಸದನದಲ್ಲಿ ತಿಳಿಸಿದರು.
ಜೂನ್ 2022 ಕ್ಕೆ ಇಂಧನ ಆಮದುಗಳಿಗಾಗಿ ಶ್ರೀಲಂಕಾಗೆ 530 ಮಿಲಿಯನ್ ಅಮೆರಿಕನ್ ಡಾಲರ್ ಅಗತ್ಯವಿದೆ ಎಂದು ಸಚಿವರು ಹೇಳಿದರು. ದೇಶವು ಭಾರತೀಯ ಕ್ರೆಡಿಟ್ ಲೈನ್‌ನ ಪ್ರಯೋಜನವನ್ನು ಪಡೆದರೂ ಸಹ ಎರಡು ವರ್ಷಗಳ ಹಿಂದೆ 150ಮಿಲಿಯನ್ ಅಮೆರಿಕನ್ ಡಾಲರ್ ಗೆ ಹೋಲಿಸಿದರೆ ತಿಂಗಳಿಗೆ ಇಂಧನ ಖರೀದಿಗೆ 500 ಮಿಲಿಯನ್ ಯುಎಸ್ ಡಿ ಹೆಚ್ಚು ಅಗತ್ಯವಿದೆ ಎಂದು ಹೇಳಿದರು.
ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 6:39 pm, Wed, 18 May 22