ಮೋದಿ ಭೇಟಿಗೂ ಮುನ್ನ ಖಲಿಸ್ತಾನ್ ಪರ ಗುಂಪುಗಳೊಂದಿಗೆ ಅಮೆರಿಕ ಅಧಿಕಾರಿಗಳ ಮಾತುಕತೆ

ಇಂದು ಮೂರು ದಿನಗಳ ಅಮೆರಿಕ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ತೆರಳಿದ್ದಾರೆ. ಈ ನಡುವೆ ಇದಕ್ಕೂ ಮೊದಲು ಶ್ವೇತಭವನದ ಅಧಿಕಾರಿಗಳು ಖಲಿಸ್ತಾನ್ ಪರ ಗುಂಪುಗಳೊಂದಿಗೆ ಸಂವಹನ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಶ್ವೇತಭವನ ಈ ರೀತಿಯ ಮಾತುಕತೆ ನಡೆಸಿದೆ. ಇದಕ್ಕೆ ಕಾರಣವೇನು? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಮೋದಿ ಭೇಟಿಗೂ ಮುನ್ನ ಖಲಿಸ್ತಾನ್ ಪರ ಗುಂಪುಗಳೊಂದಿಗೆ ಅಮೆರಿಕ ಅಧಿಕಾರಿಗಳ ಮಾತುಕತೆ
ಜೋ ಬೈಡೆನ್
Follow us
|

Updated on:Sep 21, 2024 | 10:44 PM

ವಾಷಿಂಗ್ಟನ್: ಶ್ವೇತಭವನವು ಇದೇ ಮೊದಲ ಬಾರಿಗೆ, ಸ್ವತಂತ್ರ ಸಿಖ್ ರಾಜ್ಯಕ್ಕಾಗಿ ಪ್ರತಿಪಾದಿಸುವ ಪ್ರತ್ಯೇಕತಾವಾದಿ ಚಳವಳಿಯಾದ ಖಲಿಸ್ತಾನ್‌ಗೆ ಬೆಂಬಲ ವ್ಯಕ್ತಪಡಿಸಿದ ಅಮೆರಿಕನ್ ಸಿಖ್ ಕಾಕಸ್ ಸಮಿತಿ ಮತ್ತು ಇತರ ಸಿಖ್ ಸಂಘಟನೆಗಳ ಸದಸ್ಯರೊಂದಿಗೆ ಸಭೆ ನಡೆಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೂರು ದಿನಗಳ ಅಮೆರಿಕಾ ಪ್ರವಾಸವನ್ನು ಕೈಗೊಳ್ಳುವ ಕೆಲವು ದಿನಗಳ ಮೊದಲು ಶ್ವೇತಭವನದ ಅಧಿಕಾರಿಗಳು ಖಲಿಸ್ತಾನ್ ಪರ ಸಿಖ್ ಕಾರ್ಯಕರ್ತರ ಗುಂಪನ್ನು ಭೇಟಿ ಮಾಡಿದ್ದಾರೆ.

ವರದಿಗಳ ಪ್ರಕಾರ, ಗುರುವಾರ ಶ್ವೇತಭವನದಲ್ಲಿ ಈ ಸಭೆ ನಡೆಯಿತು. ಅಮೆರಿಕನ್ ಸಿಖ್ ಕಾಕಸ್ ಸಮಿತಿಯ ಪ್ರೀತ್ಪಾಲ್ ಸಿಂಗ್ ಮತ್ತು ಸಿಖ್ ಒಕ್ಕೂಟ ಮತ್ತು ಸಿಖ್ ಅಮೆರಿಕನ್ ಕಾನೂನು ರಕ್ಷಣಾ ಮತ್ತು ಶಿಕ್ಷಣ ನಿಧಿ (SALDEF) ಪ್ರತಿನಿಧಿಗಳು ಶ್ವೇತಭವನದ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: PM Modi US Visit: ಕ್ವಾಡ್ ಶೃಂಗಸಭೆಗಾಗಿ ಅಮೆರಿಕದ ಫಿಲಡೆಲ್ಫಿಯಾ ತಲುಪಿದ ಪ್ರಧಾನಿ ನರೇಂದ್ರ ಮೋದಿ

ಶ್ವೇತ ಭವನದ ಅಧಿಕಾರಿಗಳು ಸಿಖ್ ಕಾರ್ಯಕರ್ತರಿಗೆ ಅಮೆರಿಕ ನೆಲದಲ್ಲಿ ಯಾವುದೇ “ಅಂತಾರಾಷ್ಟ್ರೀಯ ಆಕ್ರಮಣ”ದಿಂದ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಕೆನಡಾ ಮತ್ತು ಯುಎಸ್ ಆಶ್ರಯ ನೀಡುತ್ತಿವೆ ಎಂಬ ಆತಂಕದ ನಡುವೆ ಈ ಬೆಳವಣಿಗೆ ನಡೆದಿದೆ. ಶ್ವೇತಭವನದಿಂದ ಸಭೆಯನ್ನು ನಡೆಸಿರುವುದು ಆಶ್ಚರ್ಯಕರ ಸಂಗತಿಯಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್‌ಗೆ ಬಂದಿಳಿಯುತ್ತಿದ್ದಂತೆಯೇ ಇಂದು ಜೋ ಬೈಡೆನ್ ಸರ್ಕಾರದ ಅಧಿಕಾರಿಗಳು ಸಿಖ್ ಪ್ರತ್ಯೇಕತಾವಾದಿಗಳ ಗುಂಪಿನೊಂದಿಗೆ ಅಧಿಕೃತ ಸಭೆ ನಡೆಸಿತು. ಅಂದಹಾಗೆ, ಡೆಲವೇರ್‌ನಲ್ಲಿ ನಡೆಯಲಿರುವ ಕ್ವಾಡ್ ಶೃಂಗಸಭೆ ಮತ್ತು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ವಲಸಿಗರಿಂದ ಪಿಎಂ ಮೋದಿಗೆ ಅದ್ದೂರಿ ಸ್ವಾಗತ

ಅಮೆರಿಕನ್ ಸಿಖ್ ಕಾಕಸ್ ಸಮಿತಿಯ ಸಂಸ್ಥಾಪಕ ಪ್ರೀತ್ಪಾಲ್ ಸಿಂಗ್, ಸಿಖ್ ಅಮೆರಿಕನ್ನರನ್ನು ರಕ್ಷಿಸಲು ಶ್ವೇತಭವನದ ಬದ್ಧತೆಯನ್ನು ಶ್ಲಾಘಿಸಿದರು. ಖಲಿಸ್ತಾನ್ ಆಂದೋಲನವು ಭಾರತದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದೆ. ಕೆನಡಾ ಮತ್ತು ಯುಎಸ್‌ನಂತಹ ದೇಶಗಳು ಈ ಚಟುವಟಿಕೆಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿವೆ ಎಂದು ಭಾರತ ಸರ್ಕಾರ ಟೀಕಿಸಿತ್ತು ಎಂಬುದು ಗಮನಾರ್ಹ ಸಂಗತಿ.

ಖಲಿಸ್ತಾನ್ ಪ್ರತ್ಯೇಕತಾವಾದಿ ಚಳವಳಿಗೆ ಸೇರಿರುವ ಗುಂಪುಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಈ ಸಂಘಟನೆಗಳು ಕಳೆದ ಕೆಲವು ದಶಕಗಳಲ್ಲಿ ಹಲವು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:43 pm, Sat, 21 September 24

ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ