Monkeypox: ಟ್ರಾವೆಲ್ ಹಿಸ್ಟರಿಯೇ ಇಲ್ಲದಿದ್ರೂ ಆಫ್ರಿಕಾದ ಹೊರಗೂ ಹಬ್ಬುತ್ತಿದೆ ಮಂಕಿಪಾಕ್ಸ್

| Updated By: ನಯನಾ ರಾಜೀವ್

Updated on: May 22, 2022 | 11:09 AM

Monkeypox:ಆಫ್ರಿಕಾಗೆ ಪ್ರಯಾಣಿಸದಿದ್ದರೂ ಆಫ್ರಿಕಾದ ಹೊರಗೂ ಕೂಡ ಮಂಕಿಪಾಕ್ಸ್( Monkeypox) ಅತಿವೇಗದಲ್ಲಿ ಹಬ್ಬುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

Monkeypox: ಟ್ರಾವೆಲ್ ಹಿಸ್ಟರಿಯೇ ಇಲ್ಲದಿದ್ರೂ ಆಫ್ರಿಕಾದ ಹೊರಗೂ ಹಬ್ಬುತ್ತಿದೆ ಮಂಕಿಪಾಕ್ಸ್
Monkeypox
Follow us on

ಆಫ್ರಿಕಾಗೆ ಪ್ರಯಾಣಿಸದಿದ್ದರೂ ದೇಶದ ಹೊರಗೂ ಕೂಡ ಮಂಕಿಪಾಕ್ಸ್( Monkeypox) ಅತಿವೇಗದಲ್ಲಿ ಹಬ್ಬುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಒಟ್ಟು 12 ದೇಶಗಳಲ್ಲಿ ಕಳೆದ 10 ದಿನದಲ್ಲಿ 90 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಮಂಕಿಪಾಕ್ಸ್ ಅಧ್ಯಯನದಲ್ಲಿ ತೊಡಗಿದ್ದು, ಆಫ್ರಿಕಾಗೆ ಹೋಗದ, ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದವರಿಗೂ ಸೋಂಕು ತಗುಲಿದೆ ಎಂದು ಹೇಳಲಾಗಿದೆ.

ಯುರೋಪ್​ನ ಪೋಲೆಂಡ್, ಬೆಲ್ಜಿಯಮ್, ಯುಕೆ, ಫ್ರಾನ್ಸ್, ಜರ್ಮನಿ, ನೆದರ್​ಲೆಂಡ್, ಸ್ಪೇನ್, ಸ್ವೀಡನ್ ಹಾಗೂ ಇಟಲಿಯಲ್ಲಿ ಸೋಂಕು ಹೆಚ್ಚಾಗಿದೆ. ಇನ್ನು ಬೆನಿನ್, ಕ್ಯಾಮರೂನ್, ಸೆಂಟ್ರಲ್ ಆಫ್ರಿಕಾ ರಿಪಬ್ಲಿಕ್, ಕಾಂಗೋ, ಘಾನಾ, ಲಿಬೆರಿಯಾ, ನೈಜೀರಿಯಾದಲ್ಲಿ ಪ್ರಾಣಿಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ.

ಬಹಳ ಅಪರೂಪದ ವೈರಾಣು ಸೋಂಕಾಗಿರುವ ಮಂಕಿ ಪಾಕ್ಸ್, ಸಾಮಾನ್ಯವಾಗಿ ಸೌಮ್ಯ ಸ್ವಭಾವದ್ದಾಗಿರುತ್ತದೆ. ಹೆಚ್ಚಿನ ಜನರು ಕೆಲವು ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎಂದು ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ ತಿಳಿಸಿದೆ. ಜನರ ನಡುವೆ ವೈರಸ್ ಅಷ್ಟು ಸುಲಭವಾಗಿ ಹರಡುವುದಿಲ್ಲ. ಹೀಗಾಗಿ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಹರಡುವ ಅಪಾಯ ಬಹಳ ಕಡಿಮೆ ಇದೆ.

ಮತ್ತಷ್ಟು ಓದಿ

ಮಂಕಿಪಾಕ್ಸ್ ವೈರಸ್‌ಗೆ ನಿರ್ದಿಷ್ಟ ಲಸಿಕೆ ಇಲ್ಲ. ಆದರೆ, ಸ್ಮಾಲ್‌ಪಾಕ್ಸ್‌ಗೆ ಬಳಸುವ ಲಸಿಕೆಯು ಶೇ 85ರಷ್ಟು ರಕ್ಷಣೆ ನೀಡುತ್ತದೆ. ಈ ಎರಡೂ ವೈರಸ್‌ಗಳ ಮಧ್ಯೆ ಬಹಳ ಸಾಮ್ಯತೆ ಇದೆ. ಯುರೋಪ್‌ನಲ್ಲಿ ಇದುವರೆಗೂ ಬ್ರಿಟನ್, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್‌ಲ್ಯಾಂಡ್ಸ, ಇಟಲಿ ಮತ್ತು ಸ್ವೀಡನ್‌ಗಳಲ್ಲಿ ವೈರಸ್ ಖಚಿತವಾಗಿದೆ.

ಮಂಕಿಪಾಕ್ಸ್ ವೈರಸ್, ಕೊರೊನಾ ವೈರಸ್‌ನಂತೆ ಗಾಳಿ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆದರೆ ಲೈಂಗಿಕ ಸಂಪರ್ಕದಿಂದ ಹರಡಿದ ಕೆಲವು ಪ್ರಕರಣಗಳು ವರದಿಯಾಗಿವೆ. ವೈರಸ್ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಹೊಸ ರೂಪಾಂತರಿ ಸೃಷ್ಟಿಯಾಗಿರುವ ಬಗ್ಗೆ ಕೊಂಚ ಸುಳಿವು ದೊರಕಿದೆ. ಹಿಂದಿಗಿಂತಲೂ ಸುಲಭವಾಗಿ ಮಂಕಿಪಾಕ್ಸ್ ಹರಡಬಹುದು.
ಇದು ಬ್ರಿಟನ್‌ನಲ್ಲಿ ಲೈಂಗಿಕ ಸೇವೆಯ ಮೇಲೆ ಭಾರಿ ಅಡ್ಡ ಪರಿಣಾಮ ಉಂಟುಮಾಡುವ ಎಚ್ಚರಿಕೆ ನೀಡಲಾಗಿದೆ. ಬ್ರಿಟನ್‌ನಲ್ಲಿ 20 ಪ್ರಕರಣಗಳು ಖಚಿತವಾಗಿವೆ. ಸ್ಪೇನ್‌ನಲ್ಲಿ 31 ಪ್ರಕರಣಗಳು ಖಚಿತವಾಗಿದೆ. ಅವುಗಳಲ್ಲಿ 24 ಪ್ರಕರಣಗಳು ಶುಕ್ರವಾರ ಪತ್ತೆಯಾಗಿವೆ. ಪೋರ್ಚುಗಲ್‌ನಲ್ಲಿ 23 ಪ್ರಕರಣಗಳು ದೃಢಪಟ್ಟಿವೆ.

ಇನ್ನಷ್ಟು ಓದಿ

ಮಂಕಿಪಾಕ್ಸ್​ ಎಂದರೇನು? ಮಂಕಿಪಾಕ್ಸ್ ಎಂಬುದು ಬಹುಪಾಲು ಸಿಡುಬನ್ನು ಹೋಲುತ್ತದೆ. ಮೊದಲ ಬಾರಿಗೆ 1958ರಲ್ಲಿ ಪತ್ತೆಯಾದ ಈ ಸೋಂಕು, 1970ರಲ್ಲಿ ಮೊದಲ ಬಾರಿ ಮಾನವರಲ್ಲಿ ಕಾಣಿಸಿಕೊಂಡಿತ್ತು. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹಬ್ಬುತ್ತದೆ. ಸೋಂಕಿತ ಪ್ರಾಣಿಗಳು ಕಚ್ಚುವುದರಿಂದ ಅಥವಾ ಅವುಗಳ ರಕ್ತ, ವಿಸರ್ಜಿತ ವಸ್ತುಗಳ ಸಂಪರ್ಕದಿಂದ, ಸೋಂಕಿತ ಪ್ರಾಣಿಗಳ ಮಾಂಸ ತಿನ್ನುವುದರಿಂದ ಈ ವೈರಸ್‌ ಹಬ್ಬಬಹುದು. ಜ್ವರ, ಸ್ನಾಯುಸೆಳೆತ ಮತ್ತು ಚಳಿ ಈ ರೋಗದ ಲಕ್ಷಣಗಳಾಗಿವೆ.

ಲಕ್ಷಣಗಳೇನು?
ಮಂಕಿಪಾಕ್ಸ್ ಒಂದು ವೈರಸ್ ಆಗಿದ್ದು ಅದು ಜ್ವರ, ಶೀತ, ತಲೆನೋವು, ಸ್ನಾಯು ನೋವು, ಆಯಾಸ, ಊದಿಕೊಂಡ ದುಗ್ಧರಸ ಗ್ರಂಥಿಗಳಂತಹ ಫ್ಲೂ ತರಹದ ಲಕ್ಷಣಗಳನ್ನು ಒಳಗೊಂಡಿರುತ್ತದೆ.

ವಿದೇಶಗಳ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 11:08 am, Sun, 22 May 22