ಬಿಗಿ ಉಡುಪು ಧರಿಸಿದ್ದಕ್ಕೆ ಯುವತಿಯ ಹತ್ಯೆ; ಕೊಲೆ ಮಾಡಿದ್ದು ನಾವಲ್ಲ ಎಂದ ತಾಲಿಬಾನ್ ಉಗ್ರರು
ಇತ್ತೀಚೆಗಂತೂ ತಾಲಿಬಾನ್ ಉಗ್ರರ ಹಾವಳಿ ಜಾಸ್ತಿಯಾಗಿದೆ. ಅಫ್ಘಾನಿಸ್ತಾನದ ಸರ್ಕಾರಕ್ಕೆ ಬೆಂಬಲ ಸೂಚಿಸುವ ಎಲ್ಲ ಗಣ್ಯವ್ಯಕ್ತಿಗಳನ್ನು ಹತ್ಯೆ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೆಚ್ಚೆಚ್ಚು ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ.
ಯುವತಿಯೊಬ್ಬಳು ಬಿಗಿ ಬಟ್ಟೆಯನ್ನು ಧರಿಸಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ ಘಟನೆ ಅಫ್ಘಾನಿಸ್ತಾನದ ಉತ್ತರ ಪ್ರಾಂತ್ಯ ಬಲ್ಕನ್ನಲ್ಲಿ ನಡೆದಿದೆ. ಸಮರ್ ಕ್ವಾಂಡ್ ಎಂಬ ಹಳ್ಳಿಯಲ್ಲಿ ಯುವತಿಯನ್ನು ಕೊಲೆ ಮಾಡಲಾಗಿದ್ದು, ಈ ಹಳ್ಳಿ ಸಂಪೂರ್ಣವಾಗಿ ತಾಲಿಬಾನ್ ಹೋರಾಟಗಾರರ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
ಯುವತಿಯ ಹೆಸರು ನಜಾನಿನ್. ಇನ್ನೂ 21 ವರ್ಷ. ಆಕೆ ಮಜೀರ್ ಇ ಶರೀಫ್ ಮಸೀದಿಗೆ ತೆರಳಲು ವಾಹನ ಹುಡುಕುತ್ತ ಬಂದಾಗ ದಾಳಿ ನಡೆದಿದೆ. ಬಿಗಿಯಾಗಿ ಉಡುಪು ಧರಿಸಿದ್ದಳು.. ಮತ್ತು ಆಕೆಯೊಂದಿಗೆ ಪುರುಷರು ಯಾರೂ ಇರಲಿಲ್ಲ ಎಂಬ ಕಾರಣಕ್ಕೆ ಕೊಲ್ಲಲಾಗಿದೆ ಎಂದು ವರದಿಯಾಗಿದೆ. ಆದರೆ ಈಕೆಯ ಮೇಲೆ ದಾಳಿಯಾಗುವಾಗ ಅವಳು ಮುಖ ಹಾಗೂ ಮೈಯಿಗೆ ಬುರ್ಖಾವನ್ನು ಹೊದ್ದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಳ್ಳಿ ತಾಲಿಬಾನ್ ಹೋರಾಟಗಾರರ ನಿಯಂತ್ರಣದಲ್ಲಿ ಇದ್ದರೂ, ಆಕೆಯನ್ನು ಹತ್ಯೆ ಮಾಡಿದ್ದು ತಾವಲ್ಲ ಎಂದು ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ.
ಇತ್ತೀಚೆಗಂತೂ ತಾಲಿಬಾನ್ ಉಗ್ರರ ಹಾವಳಿ ಜಾಸ್ತಿಯಾಗಿದೆ. ಅಫ್ಘಾನಿಸ್ತಾನದ ಸರ್ಕಾರಕ್ಕೆ ಬೆಂಬಲ ಸೂಚಿಸುವ ಎಲ್ಲ ಗಣ್ಯವ್ಯಕ್ತಿಗಳನ್ನು ಹತ್ಯೆ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಹೆಚ್ಚೆಚ್ಚು ಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅದೆಷ್ಟೋ ಜನರ ಪ್ರಾನ ತೆಗೆಯುತ್ತಿದ್ದಾರೆ.
ಇದನ್ನೂ ಓದಿ: ಸಚಿವ ಈಶ್ವರಪ್ಪ ಸಭೆಯಲ್ಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಅಯನೂರು ಮಂಜುನಾಥ ಕೆಂಡ ಕಾರಿದರು!
ತ್ರಿಪುರದಲ್ಲಿ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಹಿಂದೆ ಅಮಿತ್ ಶಾ ಕೈವಾಡ; ಸಿಎಂ ಮಮತಾ ಬ್ಯಾನರ್ಜಿ ಆರೋಪ
Published On - 6:47 pm, Mon, 9 August 21