Nagasaki Day 2021: ನಾಗಸಾಕಿ ಮೇಲಿನ ಪರಮಾಣು ಬಾಂಬ್ ದಾಳಿಗೆ 76 ವರ್ಷ; ಕಹಿ ನೆನಪು..
ಅಣುಬಾಂಬ್ ದಾಳಿಯಿಂದ ನಾಗಸಾಕಿ ಮತ್ತು ಹಿರೋಷಿಮಾದಲ್ಲಿ ಆ ಕ್ಷಣಕ್ಕೆ ಸತ್ತವರು ಲಕ್ಷಾಂತರ ಜನರಾದರೆ, ಬಳಿಕವೂ ಕೂಡ ಅಸಂಖ್ಯಾತ ಮಂದಿ ಕ್ಯಾನ್ಸರ್ ಸೇರಿ ಮತ್ತಿತರ ರೋಗಗಳಿಂದ ಮೃತಪಟ್ಟಿದ್ದಾರೆ.
ಜಪಾನ್ನ ನಾಗಸಾಕಿ (Nagasaki Day 2021) ನಗರದ ಮೇಲೆ ಪರಮಾಣು ಬಾಂಬ್ ದಾಳಿ (Atomic Bomb) ನಡೆದು ಇಂದಿಗೆ 76 ವರ್ಷ. 1945 ಆಗಸ್ಟ್ 9ರಂದು ಭೀಕರ ದುರ್ಘಟನೆ ನಡೆದಿತ್ತು. ಅದು ಎರಡನೇ ಜಾಗತಿಕ ಯುದ್ಧದ ಅಂತಿಮ ದಿನಗಳ ಸಂದರ್ಭ. 1945ರ ಆಗಸ್ಟ್ 6ರಂದು ಮೊದಲು ಯುನೈಟೆಡ್ ಸ್ಟೇಟಸ್ ಹಿರೋಶಿಮಾ ಮೇಲೆ ಅಣುಬಾಂಬ್ ದಾಳಿ ನಡೆಸಿತ್ತು. ಅದು ವಿಶ್ವದ ಮೊದಲ ಅಣುಬಾಂಬ್ ದಾಳಿ (Atomic bomb)ಯೆಂಬ ಕುಖ್ಯಾತಿ ಪಡೆದಿದೆ. ಅದಾದ ಮೂರೇ ದಿನಗಳಲ್ಲಿ ನಾಗಸಾಕಿ ಮೇಲೆ ಅಣುಬಾಂಬ್ ದಾಳಿ ಮಾಡಿತು. ಇವೆರಡೂ ಪರಮಾಣು ಬಾಂಬ್ ದಾಳಿಗೆ ಜಪಾನ್ ನಡುಗಿಹೋಗಿತ್ತು. ಹಿರೋಶಿಮಾ ದಾಳಿಯಲ್ಲಿ ಸುಮಾರು 140,000 ಮಂದಿ ಮೃತಪಟ್ಟಿದ್ದರೆ, ನಾಗಸಾಕಿ ದಾಳಿಯಲ್ಲಿ 70 ಸಾವಿರಕ್ಕೂ ಜನರು ಬಲಿಯಾಗಿದ್ದರು. ಈ ಎರಡೂ ಅಣುಬಾಂಬ್ ದಾಳಿಗಳು ನಡೆದ ಕೆಲವೇ ದಿನಗಳಲ್ಲಿ, ಅಂದರೆ ಆಗಸ್ಟ್ 15ರಂದು ಜಪಾನ್ ಶರಣಾಯಿತು. ಅಲ್ಲಿಗೆ ಎರಡನೇ ವಿಶ್ವಯುದ್ಧ ಮುಕ್ತಾಐವಾಯಿತು
ಅಣುಬಾಂಬ್ ದಾಳಿಯಿಂದ ನಾಗಸಾಕಿ ಮತ್ತು ಹಿರೋಷಿಮಾದಲ್ಲಿ ಆ ಕ್ಷಣಕ್ಕೆ ಸತ್ತವರು ಲಕ್ಷಾಂತರ ಜನರಾದರೆ, ಬಳಿಕವೂ ಕೂಡ ಅಸಂಖ್ಯಾತ ಮಂದಿ ಕ್ಯಾನ್ಸರ್ ಸೇರಿ ಮತ್ತಿತರ ರೋಗಗಳಿಂದ ಮೃತಪಟ್ಟಿದ್ದಾರೆ. ಅಣುಬಾಂಬ್ ಸ್ಫೋಟದಿಂದ ಹೊರಬಂದ ರೇಡಿಯೇಶನ್ ಆ ನಗರಗಳಲ್ಲಿ ತೀವ್ರ ಹಾನಿಯನ್ನುಂಟು ಮಾಡಿದೆ.
ಯುಎಸ್ ಅಣುಬಾಂಬ್ ದಾಳಿ ಮಾಡಲು ಕಾರಣವೇನು? ಎರಡನೇ ವಿಶ್ವಯುದ್ಧದಲ್ಲಿ ಒಮ್ಮೆ ಯುಎಸ್ ಜಪಾನ್ ಮೇಲೆ ಅಣುಬಾಂಬ್ ದಾಳಿ ನಡೆಸದೆ ಇದ್ದರೆ, ನಿಸ್ಸಂದೇಹವಾಗಿಯೂ ಜಪಾನ್ ಗೆಲ್ಲುತ್ತಿತ್ತು. ಜಪಾನ್ ಗೆಲ್ಲುವುದನ್ನು ತಪ್ಪಿಸಲೆಂದೇ ಯುಎಸ್ ಇಂಥ ಒಂದು ಘನಘೋರ ದಾಳಿ ಮಾಡಿತ್ತು. ಯುದ್ಧದ ಸಂದರ್ಭದಲ್ಲಿ ಯುಎಸ್ನ ಹೆಚ್ಚಿನ ಜನರು ಸಾಯುವುದನ್ನು ತಪ್ಪಿಸಲು, ಜಪಾನ್ ವಿರುದ್ಧ ಗೆಲ್ಲಲೇಬೇಕು ಎಂಬ ಹಠದಿಂದ ಮತ್ತು ಯುದ್ಧ ಬೇಗನೇ ಮುಗಿಯಲಿ ಎಂಬ ಕಾರಣಕ್ಕೆ, ಮ್ಯಾನ್ ಹಟ್ಟನ್ ಎಂಬ ಯೋಜನೆಯಡಿ ಅಣುಬಾಂಬ್ ಪ್ರಯೋಗ ಮಾಡುವಂತೆ ವಿಜ್ಞಾನಿಗಳಿಗೆ ಯುಎಸ್ನ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್ ಸೂಚನೆ ನೀಡಿದ್ದರು.
ಸಿದ್ಧತೆ ಹೇಗಿತ್ತು? ಜಪಾನ್ನ್ನು ವಿನಾಶಗೊಳಿಸುವ ಮ್ಯಾನ್ ಹಟ್ಟನ್ ಯೋಜನೆ 1939ರಲ್ಲಿಯೇ ಪ್ರಾರಂಭಗೊಂಡಿತ್ತು. ಇದು ಎರಡನೇ ವಿಶ್ವಯುದ್ಧ ಪ್ರಾರಂಭವಾದ ವರ್ಷ. ಜಪಾನ್ ವಿರುದ್ಧ ಗೆಲ್ಲಲು ಯುಎಸ್ ಹೆಣದಿದ್ದ ಈ ರಣತಂತ್ರ ಯೋಜನೆಯಲ್ಲಿ ತೊಡಗಿಕೊಂಡಿದ್ದ ಅಮೆರಿಕದ ವಿಜ್ಞಾನಿಗಳಲ್ಲಿ ಹಲವರು ಯುರೋಪ್ನ ಫ್ಯಾಸಿಸ್ಟ್ ಆಡಳಿತದಿಂದ ನಿರಾಶ್ರಿತಗೊಂಡವರೇ ಆಗಿದ್ದರು. ಭೌತವಿಜ್ಞಾನಿ ಜೆ ರಾಬರ್ಟ್ ಓಪನ್‌ಹೀಮರ್ ಅವರ ನಿರ್ದೇಶನದಲ್ಲಿಯೇ ಅಣುಬಾಂಬ್ಗಳು ತಯಾರಾಗಿದ್ದವು. 1940ರಲ್ಲಿ ಯುಎಸ್ ಸರ್ಕಾರ ತನ್ನ ಪರಮಾಣು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಧನಸಹಾಯ ನೀಡಲು ಪ್ರಾರಂಭಿಸಿತ್ತು.
ಜಪಾನ್ನ ಪ್ರಮುಖ ಪಟ್ಟಣವಾಗಿದ್ದ ಹಿರೋಶಿಮಾ ಸೇನಾ ಕಾರ್ಯಚಟುವಟಿಕೆಗಳ ಪ್ರಮುಖ ಕೇಂದ್ರವೂ ಆಗಿತ್ತು. ಹಾಗಾಗಿ ಯುಎಸ್ ಮೊದಲು ಅದೇ ನಗರವನ್ನು ಗುರಿಯಾಗಿಸಿತು. ಮೂರು ದಿನಗಳ ನಂತರ ನಾಗಸಾಕಿ ಅಣುಬಾಂಬ್ ದಾಳಿಗೆ ತತ್ತರಿಸಿತು. ಯುಎಸ್ನ ಈ ಒಂದು ದಾಳಿ ಎರಡೂ ನಗರಗಳನ್ನು ಸಂಪೂರ್ಣ ನಾಶ ಮಾಡಿವೆ. ಎಲ್ಲೆಲ್ಲೂ ಆಕ್ರಂದನ, ಸುಟ್ಟ ನೋವುಗಳಿಂದ ಬಳಲುವವರ ಗೋಳಾಟಗಳು ಮುಗಿಲು ಮುಟ್ಟಿದ್ದವು. ಇನ್ನೂ ಒಂದೆಂದರೆ ಇದೆರಡೂ ದಾಳಿಗಳಿಂದ ಸೈನಿಕರು ಸತ್ತಿದ್ದಕ್ಕಿಂತ, ಬಲಿಯಾದ ನಾಗರಿಕರ ಸಂಖ್ಯೆಯೇ ಹೆಚ್ಚಾಗಿದೆ. ಇವತ್ತಿಗೂ ಆ ಎರಡೂ ನಗರಗಳಲ್ಲಿ ಮಕ್ಕಳಲ್ಲಿ ಊನ, ವಿವಿಧ ಆನುವಂಶಿಕ ಕಾಯಿಲೆಗಳು ಕಾಣಿಸಿಕೊಳ್ಳಲು ಅಂದು ನಡೆದ ಈ ಪರಮಾಣುಬಾಂಬ್ ದಾಳಿಗಳೇ ಕಾರಣವಾಗಿವೆ.
ಇದನ್ನೂ ಓದಿ: ಬೆಂಗಳೂರಿನಿಂದ ವಾರಾಂತ್ಯ ಪ್ರವಾಸಕ್ಕೆ ಬಂದಿದ್ದ 8 ಸ್ನೇಹಿತರು: ಗೋಕರ್ಣ ಕಡಲ ತೀರದಲ್ಲಿ ಯುವಕ ನೀರುಪಾಲು
ಮಾಣಿಕ್ ಷಾ ಪರೇಡ್ ಸ್ವಾತಂತ್ರ್ಯ ದಿನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲ್ಲ, ಸಾರ್ವಜನಿಕರು ಭಾಗವಹಿಸುವಂತಿಲ್ಲ
Published On - 10:06 am, Mon, 9 August 21