AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು ಕೇವಲ ಕರ್ನಾಟಕದ ಲೂಟಿ: ಕಾಂಗ್ರೆಸ್​ ವಾಗ್ದಾಳಿ

ಕಾಂಗ್ರೆಸ್ ಸರ್ಕಾರ ರಾಜ್ಯ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದೆ. ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣ, ಪಿಎಸ್ಐ ನೇಮಕಾತಿ ಅಕ್ರಮ, ಮತ್ತು ಇತರ ಹಲವು ಹಗರಣಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಅಕ್ರಮಗಳ ಪಟ್ಟಿ ದೊಡ್ಡ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು ಕೇವಲ ಕರ್ನಾಟಕದ ಲೂಟಿ: ಕಾಂಗ್ರೆಸ್​ ವಾಗ್ದಾಳಿ
ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು ಕೇವಲ ಕರ್ನಾಟಕದ ಲೂಟಿ: ಕಾಂಗ್ರೆಸ್​ ವಾಗ್ದಾಳಿ
TV9 Web
| Edited By: |

Updated on: Jan 05, 2025 | 7:05 PM

Share

ಬೆಂಗಳೂರು, ಜನವರಿ 05: ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪ್ರಕರಣ ರಾಜಕೀಯ ವಲಯದಲ್ಲಿ ಗದ್ದಲ ಎಬ್ಬಿಸಿದೆ. ಇನ್ನೊಂದೆಡೆ ಬಸ್ ಟಿಕೆಟ್ ದರ ಏರಿಕೆ ಕರ್ನಾಕದಾದ್ಯಂತ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೆಲ್ಲದರ ಮಧ್ಯೆ ಬಿಜೆಪಿ (bjp) ಮತ್ತು ಕಾಂಗ್ರೆಸ್​ ನಡುವೆ ಟ್ವೀಟ್ ವಾರ್​ ಶುರುವಾಗಿದೆ. ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು, ಕೇವಲ ರಾಜ್ಯದ ಲೂಟಿ. ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಉಲ್ಲೇಖಿಸಿ ಕಾಂಗ್ರೆಸ್​ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್​, ಅಧಿಕಾರದುದ್ದಕ್ಕೂ ಬಿಜೆಪಿ ಮಾಡಿದ್ದು ಕೇವಲ ರಾಜ್ಯದ ಲೂಟಿ, ಈಗ ಜನಪರ ಕಾಂಗ್ರೆಸ್ ಸರ್ಕಾರದ ಬಗ್ಗೆ ಟೀಕಿಸಲು ವಿಷಯಗಳೇ ಇಲ್ಲದೆ, ತಮ್ಮ ಅವಧಿಯ ಅಕ್ರಮ, ಅನಾಚಾರಗಳು ಬೆತ್ತಲಾಗುತ್ತವೆ ಎಂಬ ಆತಂಕದಲ್ಲಿ ವೈಯಕ್ತಿಕವಾಗಿ ಕಾಂಗ್ರೆಸ್ ನಾಯಕರ, ಸಚಿವರ ತೇಜೋವಧೆಗೆ ಇಳಿದು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ, ಗ್ಯಾರಂಟಿ ಯೋಜನೆಗಳ ವಿರುದ್ಧ ವಿಷ ಕಾರುತ್ತಿದೆ. ಭ್ರಷ್ಟಾಚಾರದ ಪಿತಾಮಹರಾದ ಬಿಜೆಪಿ ನಾಯಕರು ಅವರ ಘನ ಕಾರ್ಯಗಳ ಬಗ್ಗೆ ಕೇಳಿದರೆ ಮಾತ್ರ ಬೆನ್ನು ತಿರುಗಿಸಿ ಓಡುತ್ತಾರೆ ಎಂದು ವಾಗ್ದಾಳಿ ಮಾಡಲಾಗಿದೆ.

ಕಾಂಗ್ರೆಸ್​ ಟ್ವೀಟ್​

  • ಹೆಣದ ಮೇಲೆ ಹಣ ಲೂಟಿ ಮಾಡಿದ ಸಾವಿರಾರು ಕೋಟಿ ಕೋವಿಡ್ ಹಗರಣ
  • ನೂರಾರು ಕೋಟಿ ರೂ. ಕೊಳ್ಳೆ ಹೊಡೆದ ಪಿಎಸ್‌ಐ ನೇಮಕಾತಿ ಅಕ್ರಮ
  • ಬೋವಿ ನಿಗಮದಲ್ಲಿ 87 ಕೋಟಿ ರೂ ಹಗರಣ
  • ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ನಲ್ಲಿ 50 ಕೋಟಿಗೂ ಹೆಚ್ಚು ಅಕ್ರಮ
  • ಗಂಗಾ ಕಲ್ಯಾಣದಲ್ಲಿ ಯೋಜನೆಯಲ್ಲಿ 430 ಕೋಟಿಗೂ ಹೆಚ್ಚು ಅಕ್ರಮ
  • ಕಿಯೋನಿಕ್ಸ್ ನಲ್ಲಿ 400 ಕೋಟಿ ರೂ. ಹಗರಣ
  • ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಹಗರಣ
  • ಬಿಟ್‌ ಕಾಯಿನ್‌ ಹಗರಣ
  • ಮೊಟ್ಟೆ, ಚಿಕ್ಕಿ, ಸ್ವೆಟರ್ ಹಗರಣ
  • KSDL ಹಗರಣ. ಪಟ್ಟಿ ದೊಡ್ಡದಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಬಿಜೆಪಿ!

ಇನ್ನು ಪ್ರಧಾನಿ ಮೋದಿ ಸರ್ಕಾರದ ಆಡಳಿತದಲ್ಲಿ ದೇಶದ ಪ್ರಗತಿ ನಿಂತ ನೀರಾಗಿದೆ. ಪ್ರತಿಗಾಮಿ ನೀತಿಗಳು ದೇಶದ ಅರ್ಥ ವ್ಯವಸ್ಥೆ ತಲೆಕೆಳಗಾಗುವಂತೆ ಮಾಡುತ್ತಿದೆ. ಈ ಎಲ್ಲದರ ಪರಿಣಾಮ ಪ್ರವಾಸೋದ್ಯಮ ಕ್ಷೇತ್ರವನ್ನೂ ಕಾಡುತ್ತಿದೆ. ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಕುಸಿತ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ.

ಇದನ್ನೂ ಓದಿ: ಮಾನವಹಕ್ಕುಗಳ ಆಯೋಗಕ್ಕೆ ಸಿಟಿ ರವಿ ದೂರು: ಡಿಕೆಶಿ, ಬಾದರ್ಲಿ, ಹೆಬ್ಬಾಳ್ಕರ್​ ವಿರುದ್ಧ ಗಂಭೀರ ಆರೋಪ

ಇನ್ಕ್ರೆಡಿಬಲ್ ಇಂಡಿಯಾ ಘೋಷಣೆ ದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಹೊಸ ದಿಕ್ಕಿನೆಡೆಗೆ ಕೊಂಡೊಯ್ಯಬೇಕಿತ್ತು. ಆದರೆ ವಾಸ್ತವದಲ್ಲಿ ಅದು ಕೇವಲ ಪ್ರಚಾರದ ಸರಕಾಗಿಯಷ್ಟೇ ಬಳಕೆಯಾಗಿದೆ ಎಂದು ಹರಿಹಾಯ್ದಿದೆ.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.