ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ, ತಯಾರಿ ಹೇಗಿತ್ತು, ಝೆಲೆನ್ಸ್ಕಿ ಹೇಳಿದ್ದೇನು?
ಪದೇ ಪದೇ ಪೆಟ್ಟು ಕೊಡುತ್ತಿದ್ದ ರಷ್ಯಾಗೆ ಉಕ್ರೇನ್ ತಿರುಗೇಟು ನೀಡಿದೆ. ಸದ್ದಿಲ್ಲದಂತೆ ಮಿಲಿಟರಿ ವಿಮಾನಗಳನ್ನು ನಾಶಪಡಿಸಿದೆ. ಕಳೆದ ಒಂದೂವರೆ ವರ್ಷದಿಂದ ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು ಎಂದು ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಈ ಕಾರ್ಯಾಚರಣೆಯಲ್ಲಿ 117 ಡ್ರೋನ್‌ಗಳನ್ನು ಬಳಕೆ ಮಾಡಿದೆ. ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ರಷ್ಯಾದ 40 ಕ್ಕೂ ಹೆಚ್ಚು ಸೇನಾ ವಿಮಾನಗಳು ನಾಶಗೊಂಡಿವೆ. ಉಕ್ರೇನ್‌ನ ಭದ್ರತಾ ಸೇವೆ ಮತ್ತು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ ಮತ್ತು ಕಾರ್ಯಾಚರಣೆಯಲ್ಲಿ 117 ಡ್ರೋನ್‌ಗಳನ್ನು ಬಳಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೈವ್, ಜೂನ್ 02: ಉಕ್ರೇನ್(Ukraine) ರಷ್ಯಾ(Russia)ದ ಐದು ಸೇನಾ ವಾಯುನೆಲೆಗಳ ಮೇಲೆ ಭಾನುವಾರ ಡ್ರೋನ್ ದಾಳಿ ನಡೆಸಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇದನ್ನು ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ್ದಾರೆ. ‘ಉಕ್ರೇನ್ ಸ್ಪೈಡರ್ ವೆಬ್’ ಎಂದು ಈ ಕಾರ್ಯಾಚರಣೆಗೆ ನಾಮಕರಣ ಮಾಡಿದೆ.ಈ ಕಾರ್ಯಾಚರಣೆಯಲ್ಲಿ 117 ಡ್ರೋನ್‌ಗಳನ್ನು ಬಳಕೆ ಮಾಡಿದೆ. ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ರಷ್ಯಾದ 40 ಕ್ಕೂ ಹೆಚ್ಚು ಸೇನಾ ವಿಮಾನಗಳು ನಾಶಗೊಂಡಿವೆ. ಉಕ್ರೇನ್‌ನ ಭದ್ರತಾ ಸೇವೆ ಮತ್ತು ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಒಂದೂವರೆ ವರ್ಷದಿಂದ ಸಿದ್ಧತೆ
ಕಾರ್ಯಾಚರಣೆಯ ಸಿದ್ಧತೆ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ನಡೆಯಿತು ಮತ್ತು ಯೋಜನೆ, ಸಂಘಟನೆ ಮತ್ತು ಪ್ರತಿಯೊಂದು ವಿವರವನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಕೈವ್‌ಗೆ ದಾಳಿಯಲ್ಲಿ ಸಹಾಯ ಮಾಡಿದ ಜನರನ್ನು ಕಾರ್ಯಾಚರಣೆಯ ಮೊದಲು ರಷ್ಯಾದ ಪ್ರದೇಶದಿಂದ ಹಿಂತೆಗೆದುಕೊಳ್ಳಲಾಯಿತು ಮತ್ತು ಸುರಕ್ಷಿತ ವಲಯಕ್ಕೆ ಕರೆದೊಯ್ಯಲಾಯಿತು ಎಂದು ಝೆಲೆನ್ಸ್ಕಿ ಮಾಹಿತಿ ನೀಡಿದರು.
ಕಾರ್ಯಾಚರಣೆ ನಡೆದಿದ್ಹೇಗೆ? ರಷ್ಯಾ ಅತ್ಯಂತ ಶಕ್ತಿಶಾಲಿ ವಾಯು ರಕ್ಷಣೆಯನ್ನು ಹೊಂದಿದೆ ಆದ್ದರಿಂದ ರಷ್ಯಾವನ್ನು ಹೊಡೆಯುವುದು ಅಸಾಧ್ಯವಾಗಿತ್ತು.ಹೀಗಾಗಿ ರಷ್ಯಾವನ್ನು ರಷ್ಯಾದೊಳಗಿಂದಲೇ ಹೊಡೆಯಲು ಯೋಜನೆಯನ್ನು ರೂಪಿಸಿತ್ತು. ಆ ಸಂದರ್ಭದಲ್ಲಿ ಅದು ರಷ್ಯಾದ ವಾಯು ರಕ್ಷಣೆಯನ್ನು ಬೈಪಾಸ್ ಮಾಡಿದೆ. ಉಕ್ರೇನ್ ರಷ್ಯಾದ ಹೆದ್ದಾರಿ ಮೂಲಕವೇ ಸಾಮಾನ್ಯ ಟ್ರಕ್ ಮೂಲಕ ರಷ್ಯಾಗೆ ಡ್ರೋನ್‌ಗಳನ್ನು ಕಣ್ಣಸಾಗಣೆ ಮಾಡಿತು.
ಮರದ ದಿಮ್ಮಿಗಳು, ನಿರ್ಮಾಣ ಸಾಮಗ್ರಿಗಳಂತೆ ಬಿಂಬಿಸುವ ಟ್ರಕ್ ಅದಾಗಿತ್ತು. ಸುಳ್ಳುಪರವಾನಗಿ ಕೂಡ ಬಳಕೆ ಮಾಡಲಾಗಿತ್ತು. ಆ ಮರದ ಕ್ಯಾಬಿನ್ ಒಳಗೆ ಡ್ರೋನ್‌ಗಳನ್ನು ಇರಿಸಲಾಗಿತ್ತು. ರಿಮೋಟ್ ಕಂಟ್ರೋಲ್ ಮೂಲಕ ಅದು ಕೆಲಸ ಮಾಡುತ್ತಿತ್ತು. ಜಿಪಿಎಸ್ ಸಿಸ್ಟಂ ಮೂಲಕ ಅದು ಕಾರ್ಯನಿರ್ವಹಿಸಿತ್ತು. ಒಂದು ಬಾರಿ ಟ್ರಕ್ನಿಂದ ಡ್ರೋನ್ ಹೊರಹೋದಾಕ್ಷಣ ಆ ಟ್ರಕ್ ತನ್ನಿಂತಾನೆ ಬೆಂಕಿ ಹೊತ್ತಿಕೊಳ್ಳುವಂತೆ ರೂಪಿಸಲಾಗಿತ್ತು.
ರಷ್ಯಾ ಕೂಡ ಮತ್ತೊಂದು ದಾಳಿಗೆ ಸಜ್ಜಾಗುತ್ತಿತ್ತು ದಾಳಿ ನಡೆಸುವ ಸ್ವಲ್ಪ ಸಮಯದ ಮೊದಲು, ರಷ್ಯಾ ಮತ್ತೊಂದು ದಾಳಿಗೆ ಸಿದ್ಧತೆ ನಡೆಸುತ್ತಿದೆ ಎಂದು ಸೂಚಿಸುವ ಗುಪ್ತಚರ ಮಾಹಿತಿ ಉಕ್ರೇನ್‌ಗೆ ಬಂದಿತ್ತು. ಈ ಯುದ್ಧವನ್ನು ನಾವು ಬಯಸಿರಲಿಲ್ಲ.ಇಡೀ ಜಗತ್ತು ಹತ್ಯೆಯನ್ನು ಕೊನೆಗೊಳಿಸಲು ಕರೆ ನೀಡುತ್ತಿರುವ ಸಂದರ್ಭದಲ್ಲೂ ಸಹ ಯುದ್ಧವನ್ನು ಮುಂದುವರಿಸಲು ಆಯ್ಕೆ ಮಾಡಿಕೊಂಡವರು ರಷ್ಯನ್ನರು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾದ ಮೇಲೆ ಒತ್ತಡ ಹೇರಬೇಕು
ನಿಜಕ್ಕೂ ಒತ್ತಡ ಅಗತ್ಯ, ರಷ್ಯಾದ ಮೇಲೆ ಒತ್ತಡ ಹೇರಿ ಅದನ್ನು ಮತ್ತೆ ವಾಸ್ತವಕ್ಕೆ ತರಬೇಕು. ನಿರ್ಬಂಧಗಳ ಮೂಲಕ ಒತ್ತಡ. ನಮ್ಮ ಪಡೆಗಳಿಂದ ಒತ್ತಡ. ರಾಜತಾಂತ್ರಿಕತೆಯ ಮೂಲಕ ಒತ್ತಡ ಹೀಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಝೆಲೆನ್ಸ್ಕಿ ಹೇಳಿದರು.
ಇಸ್ತಾನ್‌ಬುಲ್‌ನಲ್ಲಿ ಮಾಸ್ಕೋ ಮತ್ತು ಕೈವ್ ನಡುವೆ ನಡೆಯಲಿರುವ ಶಾಂತಿ ಮಾತುಕತೆಗೆ ಒಂದು ದಿನ ಮೊದಲು ಉಕ್ರೇನ್ ದಾಳಿ ನಡೆಸಿದೆ. ರಷ್ಯಾದ ಮುಂಭಾಗದಿಂದ ದೂರದಲ್ಲಿರುವ ಶತ್ರು ಬಾಂಬರ್‌ಗಳನ್ನು ನಾಶಮಾಡುವ ಗುರಿಯನ್ನು ಈ ದಾಳಿಗಳು ಹೊಂದಿದ್ದವು ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
ಪೂರ್ವ ಸೈಬೀರಿಯನ್ ನಗರವಾದ ಬೆಲಾಯಾ, ಫಿನ್‌ಲ್ಯಾಂಡ್ ಬಳಿಯ ಆರ್ಕ್ಟಿಕ್‌ನಲ್ಲಿರುವ ಒಲೆನ್ಯಾ ಮತ್ತು ಮಾಸ್ಕೋದ ಪೂರ್ವಕ್ಕೆ ಇವನೊವೊ ಮತ್ತು ಡಯಾಗಿಲೆವೊದಲ್ಲಿರುವ ರಷ್ಯಾದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ.
ಮತ್ತಷ್ಟು ಓದಿ:ರಷ್ಯಾಗೆ ನುಗ್ಗಿ 40ಕ್ಕೂ ಹೆಚ್ಚು ಸೇನಾ ವಿಮಾನಗಳನ್ನು ನಾಶಪಡಿಸಿದ ಉಕ್ರೇನ್, ವರ್ಷದಿಂದ ನಡೆದಿತ್ತು ಸಿದ್ಧತೆ
ಉಕ್ರೇನ್ ಗಡಿಯಲ್ಲಿರುವ ರಷ್ಯಾದ ಪ್ರದೇಶಗಳ ವಿವಿಧ ಭಾಗಗಳಲ್ಲಿ ಎರಡು ಸೇತುವೆಗಳು ಕುಸಿದು ಬಿದ್ದವು, ರೈಲುಗಳು ಹಳಿತಪ್ಪಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ. ಕುರ್ಸ್ಕ್ ಮತ್ತು ಬ್ರಿಯಾನ್ಸ್ಕ್ ಪ್ರದೇಶಗಳಲ್ಲಿ ಸೇತುವೆಗಳು ಕುಸಿದು ಬೀಳಲು ಸ್ಫೋಟಗಳು ಕಾರಣವೆಂದು ರಷ್ಯಾದ ತನಿಖಾಧಿಕಾರಿಗಳ ವಾದವಾಗಿದೆ.
ಝೆಲೆನ್ಸ್ಕಿ ಪೋಸ್ಟ್
Head of the Security Service of Ukraine Vasyl Maliuk delivered a report regarding today’s operation. An absolutely brilliant result. A result achieved solely by Ukraine. One year, six months, and nine days from the start of planning to effective execution. Our most long-range… pic.twitter.com/oN41NFYyfw
— Volodymyr Zelenskyy / Володимир Зеленський (@ZelenskyyUa) June 1, 2025
ರಷ್ಯಾ-ಉಕ್ರೇನ್ ಯುದ್ಧ ಆರಂಭವಾಗಿದ್ಯಾವಾಗ?
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಫೆಬ್ರವರಿ 2022ರಲ್ಲಿ ಪ್ರಾರಂಭವಾಯಿತು, ಎರಡೂ ದೇಶಗಳು ನಿರಂತರ ಗಡಿಯಾಚೆಗಿನ ಶೆಲ್ ದಾಳಿ, ಡ್ರೋನ್ ದಾಳಿ ಮತ್ತು ರಹಸ್ಯ ದಾಳಿಗಳಲ್ಲಿ ತೊಡಗಿದ್ದವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುತ್ತಿದ್ದು, ಯುದ್ಧವನ್ನು ಕೊನೆಗೊಳಿಸಲು ಒಪ್ಪಂದವೊಂದರಲ್ಲಿ ಒಟ್ಟಾಗಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.
ರಷ್ಯಾದೊಂದಿಗಿನ ಉಕ್ರೇನ್‌ನ ಗಡಿಯಿಂದ ಸುಮಾರು 4,500 ಕಿಲೋಮೀಟರ್ ದೂರದಲ್ಲಿರುವ ಇರ್ಕುಟ್ಸ್ಕ್‌ನಲ್ಲಿರುವ ಬೆಲಾಯಾ ಮತ್ತು ಉಕ್ರೇನ್‌ನಿಂದ ಸುಮಾರು 520 ಕಿಲೋಮೀಟರ್ ದೂರದಲ್ಲಿರುವ ಪಶ್ಚಿಮ ರಷ್ಯಾದ ರಿಯಾಜಾನ್‌ನಲ್ಲಿರುವ ಡಯಾಗಿಲೆವೊ ನೆಲೆಯನ್ನು ಗುರಿಯಾಗಿಸಿಕೊಂಡ ವಾಯುನೆಲೆಗಳು ಸೇರಿವೆ. ಮೂಲದ ಪ್ರಕಾರ, ಆರ್ಕ್ಟಿಕ್ ವೃತ್ತದ ಮುರ್ಮನ್ಸ್ಕ್ ಬಳಿಯ ಒಲೆನ್ಯಾ ನೆಲೆಯ ಮೇಲೂ ದಾಳಿ ನಡೆಸಲಾಯಿತು ಮತ್ತು ಇವನೊವೊ ವಾಯುನೆಲೆಯ ಮೇಲೂ ದಾಳಿ ನಡೆಸಲಾಯಿತು ಎಂದು ಸಿಎನ್‌ಎನ್ ವರದಿ ಮಾಡಿದೆ.
ಈ ತಿಂಗಳ ಆರಂಭದಲ್ಲಿ, ಪುಟಿನ್ ಟರ್ಕಿಯಲ್ಲಿ ನೇರ ಮಾತುಕತೆ ನಡೆಸುವ ಪ್ರಸ್ತಾಪವನ್ನು ಮುಂದಿಟ್ಟರು, ಆದಾಗ್ಯೂ, ಝೆಲೆನ್ಸ್ಕಿ ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದರೂ ಅವರು ಬರಲಿಲ್ಲ. ನಂತರ, ಎರಡೂ ರಾಷ್ಟ್ರಗಳು ಮಾತುಕತೆ ನಡೆಸಲು ಕೆಳಮಟ್ಟದ ನಿಯೋಗಗಳನ್ನು ಕಳುಹಿಸಿದವು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:45 am, Mon, 2 June 25




