300 ಮಿಲಿಯನ್ ಡಾಲರ್ ದೇಣಿಗೆ ನೀಡಿದ ಜುಕರ್ ಬರ್ಗ್ ದಂಪತಿ, ಉದ್ದೇಶವೇನು?
ಯು.ಎಸ್. ಚುನಾವಣಾ ಪ್ರಕ್ರಿಯೆ ವೇಳೆ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಸಹಾಯವಾಗುವಂತೆ, ಫೇಸ್‌ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ $ 300 ಮಿಲಿಯನ್ ಹಣವನ್ನು ದೇಣಿಗೆಯಾಗಿ ನೀಡಲಿದ್ದಾರೆ. ಮತದಾನದ ಕೆಲಸಗಾರರನ್ನು ನೇಮಕ ಮಾಡಲು, ಮತದಾನದ ಸ್ಥಳಗಳನ್ನು ಬಾಡಿಗೆಗೆ ನೀಡಲು ಮತ್ತು ಮತದಾನದ ಕೆಲಸಗಾರರಿಗೆ PPE ಕಿಟ್‌ಗಳನ್ನು ಖರೀದಿಸಲು ಈ ಮೊತ್ತವನ್ನು ಎರಡು ಪಕ್ಷೇತರ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಜುಕರ್ ಬರ್ಗ್ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. […]
ಯು.ಎಸ್. ಚುನಾವಣಾ ಪ್ರಕ್ರಿಯೆ ವೇಳೆ ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಸವಾಲುಗಳನ್ನು ಎದುರಿಸಲು ಸಹಾಯವಾಗುವಂತೆ, ಫೇಸ್‌ಬುಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ $ 300 ಮಿಲಿಯನ್ ಹಣವನ್ನು ದೇಣಿಗೆಯಾಗಿ ನೀಡಲಿದ್ದಾರೆ.
ಮತದಾನದ ಕೆಲಸಗಾರರನ್ನು ನೇಮಕ ಮಾಡಲು, ಮತದಾನದ ಸ್ಥಳಗಳನ್ನು ಬಾಡಿಗೆಗೆ ನೀಡಲು ಮತ್ತು ಮತದಾನದ ಕೆಲಸಗಾರರಿಗೆ PPE ಕಿಟ್‌ಗಳನ್ನು ಖರೀದಿಸಲು ಈ ಮೊತ್ತವನ್ನು ಎರಡು ಪಕ್ಷೇತರ ಸಂಸ್ಥೆಗಳಿಗೆ ನೀಡಲಾಗುವುದು ಎಂದು ಜುಕರ್ ಬರ್ಗ್ ಮಂಗಳವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಬಾರಿ ಅಮೇರಿಕಾದಲ್ಲಿ ಅಂಚೆ ಮೂಲಕವಾಗಿ ಐತಿಹಾಸಿಕ ಮಟ್ಟದ ಮತದಾನ ಇರುತ್ತದೆ. ಹಾಗಾಗಿ ಸಂಪರ್ಕ ರಹಿತ ಮತದಾನವನ್ನು ಬೆಂಬಲಿಸಲು ಮತದಾನದ ಕೆಲಸಗಾರರು ಮತ್ತು ಸಲಕರಣೆಗಳ ಅಗತ್ಯ ಹೆಚ್ಚಾಗಿರುತ್ತದೆ. ಆದರಿಂದ ಈ ದೇಣಿಗೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
https://www.facebook.com/zuck/posts/10112270823363411
Published On - 4:43 pm, Thu, 3 September 20