ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.
Birthday Celebrations: ಹಿಂದೂ ಸಂಪ್ರದಾಯದ ಪ್ರಕಾರ ಹುಟ್ಟು ಹಬ್ಬವನ್ನ ಹೇಗೆ ಆಚರಿಸಬೇಕು ಗೊತ್ತಾ?
ಹುಟ್ಟುಹಬ್ಬದ ಆಚರಣೆಯಲ್ಲಿ ಕೇಕ್ ಕತ್ತರಿಸುವುದು ಮತ್ತು ಮೇಣದಬತ್ತಿ ಆರಿಸುವುದು ಆಧುನಿಕ ಪದ್ಧತಿಗಳು. ಹಿಂದೂ ಸಂಪ್ರದಾಯದ ಪ್ರಕಾರ, ಜನ್ಮದಿನವು ಆತ್ಮಾವಲೋಕನ, ಹಿರಿಯರ ಆಶೀರ್ವಾದ, ದಾನ-ಧರ್ಮ ಮತ್ತು ದೇವರ ಸ್ಮರಣೆಗೆ ಮೀಸಲಾಗಿರಬೇಕು. ಅನ್ನದಾನ, ಪುಸ್ತಕ ದಾನ, ಅಶಕ್ತರಿಗೆ ಸಹಾಯ ಮಾಡುವ ಮೂಲಕ ಜನ್ಮದಿನವನ್ನು ಸಾರ್ಥಕಗೊಳಿಸಬಹುದು. ತಿಥಿಯ ಆಧಾರದ ಮೇಲೆ ಆಚರಣೆ ಹೆಚ್ಚು ಶುಭಕರ.
- Akshatha Vorkady
- Updated on: Jun 11, 2026
- 7:30 am
Jagannath Rath Yatra: ಪುರಿ ಜಗನ್ನಾಥ ರಥಯಾತ್ರೆಗೆ ಹೋಗುವ ಮುನ್ನ ತಿಳಿಯಲೇಬೇಕಾದ ನಿಯಮ ಮತ್ತು ರಹಸ್ಯ!
ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಇದು ಅತ್ಯಂತ ಶುಭ ಹಾಗೂ ಶಿಸ್ತಿನ ಹಬ್ಬವಾಗಿರುವುದರಿಂದ, ಇದರಲ್ಲಿ ಭಾಗವಹಿಸುವ ಭಕ್ತರಿಗೆ ಕೆಲವು ಕಠಿಣ ನಿಯಮಗಳು ಮತ್ತು ನಿಷೇಧಗಳಿವೆ. ನೀವು ಈ ಪವಿತ್ರ ಯಾತ್ರೆಯ ಭಾಗವಾಗಲು ಪುರಿಗೆ ಹೋಗುತ್ತಿದ್ದರೆ, ಈ ಕೆಳಗಿನ ವಿಷಯಗಳನ್ನು ತಪ್ಪದೇ ನೆನಪಿನಲ್ಲಿಡಿ.
- Akshatha Vorkady
- Updated on: Jun 10, 2026
- 3:46 pm
Video: ಕೇರಳದಲ್ಲಿ ಶಿಗೆಲ್ಲ ಮಾರಿಗೆ ಮಗು ಬಲಿ; ಏನಿದು ಶಿಗೆಲ್ಲ, ಇದು ಹರಡುವುದೇಗೆ?
ಕೇರಳದಲ್ಲಿ ಶಿಗೆಲ್ಲ ಸೋಂಕು ಆರ್ಭಟಿಸಿದೆ, ನಾಲ್ಕು ವರ್ಷದ ಮಗುವೊಂದು ಬಲಿಯಾಗಿದೆ. ಕಲುಷಿತ ಆಹಾರ, ನೀರಿನಿಂದ ಹರಡುವ ಈ ಬ್ಯಾಕ್ಟೀರಿಯಾ ಕರುಳಿನ ಮೇಲೆ ಪರಿಣಾಮ ಬೀರಿ ಅತಿಸಾರ, ಜ್ವರಕ್ಕೆ ಕಾರಣವಾಗುತ್ತದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಇದು ಹೆಚ್ಚು ಅಪಾಯಕಾರಿ. ಕುದಿಸಿ ಆರಿಸಿದ ನೀರು ಕುಡಿಯುವುದು, ಕೈ ಸ್ವಚ್ಛತೆ, ಮತ್ತು ರಸ್ತೆಬದಿ ಆಹಾರ ಸೇವಿಸದಿರುವುದು ಮುನ್ನೆಚ್ಚರಿಕಾ ಕ್ರಮಗಳು.
- Akshatha Vorkady
- Updated on: Jun 10, 2026
- 2:41 pm
Flight Safety Secret: ವಿಮಾನಗಳಲ್ಲಿ ಧೂಮಪಾನ ನಿಷಿದ್ಧವಾಗಿದ್ದರೂ, ಟಾಯ್ಲೆಟ್‌ನಲ್ಲಿ ಆ್ಯಶ್ ಟ್ರೇ ಇಡುವುದೇಕೆ ಗೊತ್ತಾ?
ವಿಮಾನದಲ್ಲಿ ಧೂಮಪಾನ ನಿಷಿದ್ಧವಾಗಿದ್ದರೂ ಶೌಚಾಲಯಗಳಲ್ಲಿ ಸಿಗರೇಟ್ ಬೂದಿಯನ್ನು ಉದುರಿಸುವ ಸಣ್ಣ ತಟ್ಟೆ (Ashtray) ಇಟ್ಟಿರುವುದನ್ನು ನೋಡಿರುತ್ತೀರಿ. ಮೇಲ್ನೋಟಕ್ಕೆ ಇದು ವಿಮಾನಯಾನ ಸಂಸ್ಥೆಗಳ ಮೂರ್ಖತನದಂತೆ ಕಂಡರೂ, ಇದರ ಹಿಂದೆ ಪ್ರಯಾಣಿಕರ ಪ್ರಾಣ ಉಳಿಸುವ ಅತ್ಯಂತ ಗಂಭೀರವಾದ ಸುರಕ್ಷತಾ ಕಾರಣವಿದೆ. ಆ ಸತ್ಯ ಏನೆಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Jun 10, 2026
- 1:00 pm
Rudraksha: ಮಹಿಳೆಯರು ರುದ್ರಾಕ್ಷಿ ಧರಿಸಬಾರದೇ? ಶಾಸ್ತ್ರಗಳು ಹೇಳುವುದೇನು ಗೊತ್ತಾ?
ರುದ್ರಾಕ್ಷಿಯನ್ನು ಸಾಕ್ಷಾತ್ ಶಿವನ ಆಶೀರ್ವಾದ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂದಿಗೂ ಸಮಾಜದಲ್ಲಿ ಮಹಿಳೆಯರು ರುದ್ರಾಕ್ಷಿಯನ್ನು ಧರಿಸಬಹುದೇ? ಎಂಬ ಪ್ರಶ್ನೆ ಉಳಿದುಕೊಂಡಿದೆ. ಸಾಕಷ್ಟು ಮಹಿಳೆಯರು ಶಿವನ ಮೇಲೆ ಅಪಾರ ಭಕ್ತಿ ಇದ್ದರೂ ಕೂಡ ರುದ್ರಾಕ್ಷಿಯನ್ನು ಧರಿಸಲು ಇಂದಿಗೂ ಹೆದರುತ್ತಾರೆ. ಆದರೆ ಈ ಬಗ್ಗೆ ನಮ್ಮ ಪ್ರಾಚೀನ ಮತ್ತು ಪ್ರಮುಖ ಗ್ರಂಥಗಳಾದ ಶಿವಪುರಾಣ ಹಾಗೂ ಪದ್ಮಪುರಾಣಗಳಲ್ಲಿ ಏನು ಹೇಳಲಾಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Jun 10, 2026
- 12:09 pm
Ganesha Shlokas for Kids: ಮಕ್ಕಳ ಏಕಾಗ್ರತೆ ಮತ್ತು ಜ್ಞಾಪಕಶಕ್ತಿ ಹೆಚ್ಚಿಸುವ 4 ಸರಳ ಗಣೇಶ ಶ್ಲೋಕಗಳು!
ಸನಾತನ ಸಂಸ್ಕೃತಿಯಲ್ಲಿ ಮಕ್ಕಳು ಯಾವುದೇ ಹೊಸ ಕಾರ್ಯ ಅಥವಾ ಕಲಿಕೆಯನ್ನು ಆರಂಭಿಸುವ ಮುನ್ನ ವಿಘ್ನನಿವಾರಕ ಗಣೇಶನನ್ನು ಪ್ರಾರ್ಥಿಸುವುದು ಸಂಪ್ರದಾಯ. ಗಣೇಶ ಶ್ಲೋಕಗಳು ಮಕ್ಕಳ ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿ. ಇವು ಸ್ಮರಣಶಕ್ತಿ, ಏಕಾಗ್ರತೆಯನ್ನು ಹೆಚ್ಚಿಸಿ, ಆತ್ಮವಿಶ್ವಾಸ ಮೂಡಿಸಿ ಶೈಕ್ಷಣಿಕ ಯಶಸ್ಸಿಗೆ ದಾರಿಯಾಗುತ್ತವೆ. ಶುಕ್ಲಾಂಬರಧರಂ, ವಕ್ರತುಂಡ ಮಹಾಕಾಯ ಶ್ಲೋಕಗಳು ಪ್ರಮುಖವಾಗಿವೆ.
- Akshatha Vorkady
- Updated on: Jun 10, 2026
- 11:07 am
Vastu Tips: ಮುಂಜಾನೆ ಎದ್ದ ತಕ್ಷಣ ಈ ತಪ್ಪುಗಳನ್ನು ಮಾಡಬೇಡಿ; ವಾಸ್ತು ಸಲಹೆ ಇಲ್ಲಿದೆ
ನಮ್ಮ ದಿನದ ಯಶಸ್ಸು ಮತ್ತು ಶಾಂತಿಯು ಬೆಳಗಿನ ಆರಂಭವನ್ನು ಅವಲಂಬಿಸಿದೆ. ವಾಸ್ತು ಶಾಸ್ತ್ರದ ಪ್ರಕಾರ, ಮುಂಜಾನೆಯು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಅತ್ಯಂತ ಸೂಕ್ಷ್ಮ ಸಮಯ. ಬೆಳಿಗ್ಗೆ ಮಾಡುವ ಸಣ್ಣ ತಪ್ಪುಗಳು ದಿನವನ್ನು ಹಾಳುಮಾಡಿದರೆ, ಉತ್ತಮ ಅಭ್ಯಾಸಗಳು ಇಡೀ ದಿನವನ್ನು ಅದ್ಭುತವಾಗಿ ಪರಿವರ್ತಿಸುತ್ತವೆ. ಕನ್ನಡಿ ನೋಡುವುದು, ನಿಂತ ಗಡಿಯಾರ ಮತ್ತು ಕೊಳಕು ಪಾತ್ರೆಗಳನ್ನು ತಪ್ಪಿಸಿ; ಹಸ್ತ ದರ್ಶನ, ದೈವ ಸ್ಮರಣೆ ಹಾಗೂ ಭೂಮಿಗೆ ಕೃತಜ್ಞತೆ ಸಲ್ಲಿಸಿ ನಿಮ್ಮ ದಿನವನ್ನು ಪ್ರಾರಂಭಿಸಿ.
- Akshatha Vorkady
- Updated on: Jun 10, 2026
- 9:04 am
Daily Devotional: ನಿಮ್ಮ ಮೊಬೈಲ್ ನಂಬರ್ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು ಗೊತ್ತಾ?
ನಿಮ್ಮ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು ನಿಮ್ಮ ವ್ಯಕ್ತಿತ್ವ, ಅದೃಷ್ಟ ಮತ್ತು ಜೀವನದ ವಿವಿಧ ಕ್ಷೇತ್ರಗಳ ಮೇಲೆ ಗಣನೀಯ ಪ್ರಭಾವ ಬೀರುತ್ತವೆ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ಸಂಖ್ಯೆಗಳ ಸಂಯೋಜನೆಗಳು ಶುಭಕರವಾಗಿದ್ದು, ವ್ಯಾಪಾರಿಗಳು, ವಿದ್ಯಾರ್ಥಿಗಳು ಮತ್ತು ವಿವಿಧ ವೃತ್ತಿಪರರಿಗೆ ನಿರ್ದಿಷ್ಟ ಸಂಖ್ಯೆಗಳು ವಿಶೇಷವಾಗಿ ಪ್ರಯೋಜನಕಾರಿ. ಈ ಅಂಕೆಗಳು ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಾಯಕವಾಗಿವೆ.
- Akshatha Vorkady
- Updated on: Jun 10, 2026
- 8:25 am
Daily Devotional: ಅಧಿಕ ಮಾಸದಲ್ಲಿ ಮಕ್ಕಳು ಹುಟ್ಟಿದರೆ ಶುಭನಾ? ಶಾಸ್ತ್ರಗಳು ಹೇಳುವುದೇನು?
ಪ್ರಸ್ತುತ ಅಧಿಕ ಮಾಸ ನಡೆಯುತ್ತಿದೆ. ಅಧಿಕ ಮಾಸದಲ್ಲಿ ಮಕ್ಕಳು ಜನಿಸಬಾರದೇ ಎಂಬ ಪ್ರಶ್ನೆ ಸಾಕಷ್ಟು ಜನರಲ್ಲಿದೆ. ಈ ಗೊಂದಲಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭವಿಷ್ಯ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Jun 10, 2026
- 7:19 am
Palmistry: ಕೈಯಲ್ಲಿ ಆರು ಬೆರಳುಗಳಿದ್ದರೆ ಅದೃಷ್ಟವೇ? ಹಸ್ತಸಾಮುದ್ರಿಕ ಶಾಸ್ತ್ರ ಹೇಳುವುದೇನು?
ಕೈಯಲ್ಲಿ ಆರನೇ ಬೆರಳು ಇರುವುದು 'ಪಾಲಿಡಾಕ್ಟಿಲಿ' ಎಂದು ವೈದ್ಯಕೀಯವಾಗಿ ಗುರುತಿಸಲಾಗುತ್ತದೆ. ಆದರೆ ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಇದು ಅದೃಷ್ಟ, ವಿಶೇಷ ಪ್ರತಿಭೆ ಮತ್ತು ವಿಶಿಷ್ಟ ವ್ಯಕ್ತಿತ್ವದ ಸಂಕೇತವಾಗಿದೆ. ಬೆರಳಿನ ಸ್ಥಾನಕ್ಕೆ ಅನುಗುಣವಾಗಿ (ಕಿರುಬೆರಳು ಅಥವಾ ಹೆಬ್ಬೆರಳಿನ ಪಕ್ಕ) ವ್ಯಕ್ತಿಯ ಸ್ವಭಾವ ನಿರ್ಧಾರವಾಗುತ್ತದೆ. ವೈಜ್ಞಾನಿಕ ಆಧಾರವಿಲ್ಲದಿದ್ದರೂ, ಇದು ಆಸಕ್ತಿದಾಯಕ ಸಾಂಪ್ರದಾಯಿಕ ನಂಬಿಕೆಯಾಗಿದೆ.
- Akshatha Vorkady
- Updated on: Jun 9, 2026
- 4:31 pm
Vasthu Shastra: ಮನೆಯಲ್ಲಿ ಬೆಕ್ಕು ಸಾಕುವುದು ಅಶುಭವೇ? ವಾಸ್ತು ಮತ್ತು ಜ್ಯೋತಿಷ್ಯ ತಜ್ಞರು ಹೇಳುವುದೇನು?
ಇತ್ತೀಚಿನ ದಿನಗಳಲ್ಲಿ ಬೆಕ್ಕು ಸಾಕುವುದು ಅನೇಕರ ನೆಚ್ಚಿನ ಹವ್ಯಾಸವಾಗಿದೆ. ಬೆಕ್ಕುಗಳು ಅದೃಷ್ಟವೋ, ದುರದೃಷ್ಟವೋ ಎಂಬ ಗೊಂದಲಕ್ಕೆ ವಾಸ್ತು ಮತ್ತು ಜ್ಯೋತಿಷ್ಯ ತಜ್ಞರು ಉತ್ತರ ನೀಡಿದ್ದಾರೆ. ಬೆಕ್ಕುಗಳು ರಾಹು ಗ್ರಹಕ್ಕೆ ಸಂಬಂಧಿಸಿದ್ದರೂ, ಅವುಗಳಿಗೆ ಆಹಾರ ನೀಡುವುದರಿಂದ ರಾಹು ದೋಷ ನಿವಾರಣೆಯಾಗುತ್ತದೆ. ಅವು ನಕಾರಾತ್ಮಕ ಶಕ್ತಿಯನ್ನು ಹೀರಿಕೊಂಡು ಸಕಾರಾತ್ಮಕ ವಾತಾವರಣ ಸೃಷ್ಟಿಸುತ್ತವೆ. ಸರಿಯಾದ ವಾಸ್ತು ದಿಕ್ಕುಗಳನ್ನು ಅನುಸರಿಸುವುದರ ಜೊತೆಗೆ, ಪ್ರಾಣಿಗಳ ಮೇಲಿನ ಪ್ರೀತಿಯೇ ನಿಜವಾದ ಸಂತೋಷದ ಮೂಲ.
- Akshatha Vorkady
- Updated on: Jun 9, 2026
- 4:10 pm
Karnataka Teaching Jobs: ಅತಿಥಿ ಉಪನ್ಯಾಸಕ ಹುದ್ದೆಗಳ ಆಕಾಂಕ್ಷಿಗಳಿಗೆ ಸುವರ್ಣಾವಕಾಶ; ನೇಮಕಾತಿ ವೇಳಾಪಟ್ಟಿ ಪ್ರಕಟ!
ಕರ್ನಾಟಕ ಸರ್ಕಾರಿ ಕಾಲೇಜುಗಳಲ್ಲಿ 2026-27ನೇ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕಟವಾಗಿದೆ. ಜೂನ್ 21 ರಿಂದ 27 ರವರೆಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಜೂನ್ 28 ರಂದು ತಾತ್ಕಾಲಿಕ ಮೆರಿಟ್ ಪಟ್ಟಿ ಪ್ರಕಟವಾಗಲಿದ್ದು, ಜೂನ್ 29-30 ರಂದು ತಿದ್ದುಪಡಿಗೆ ಅವಕಾಶವಿದೆ. ಜುಲೈ 1 ರಂದು ಕಾರ್ಯಭಾರ, ಜುಲೈ 7 ರಿಂದ ಆನ್‌ಲೈನ್ ಕೌನ್ಸೆಲಿಂಗ್ ನಡೆಯಲಿದೆ. ಹೆಚ್ಚಿನ ಮಾಹಿತಿಗೆ dce.karnataka.gov.in ಭೇಟಿ ನೀಡಿ.
- Akshatha Vorkady
- Updated on: Jun 9, 2026
- 3:08 pm