ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ – ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು…….
ಚಡಚಣ ಬ್ಯಾಂಕ್ ದರೋಡೆಯಾಗಿ 9 ತಿಂಗಳಾದರೂ ಸಿಗದ ಚಿನ್ನ: ಬ್ಯಾಂಕ್‌ಗೆ ಬೀಗ ಹಾಕಿ ರಾತ್ರಿಯಿಡೀ ಗ್ರಾಹಕರ ಪ್ರತಿಭಟನೆ
ವಿಜಯಪುರ ಜಿಲ್ಲೆಯ ಚಡಚಣ ಎಸ್‌ಬಿಐ ಬ್ಯಾಂಕ್‌ನಲ್ಲಿ 9 ತಿಂಗಳ ಹಿಂದೆ ನಡೆದಿದ್ದ 20 ಕೆಜಿ ಚಿನ್ನದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾತು ಕೊಟ್ಟರೂ ಪರಿಹಾರ ನೀಡದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಗ್ರಾಹಕರು ರಾತ್ರಿಯಿಡೀ ಬ್ಯಾಂಕ್‌ಗೆ ಬೀಗ ಹಾಕಿ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಸಂಧಾನ ನಡೆಸಿದ್ದಾರೆ.
- Ashok Yadalli
- Updated on: Jun 11, 2026
- 9:48 am
ವಿಜಯಪುರ: ಎಸ್ಪಿ ಲಕ್ಷ್ಮಣ ನಿಂಬರಗಿ ಹೆಸರಲ್ಲೇ ನಕಲಿ ಫೇಸ್‌ಬುಕ್ ಖಾತೆ! ಲಕ್ಷ ಲಕ್ಷ ಪೀಕಿದ್ದ ಕಿಲಾಡಿ ಅಂದರ್
ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಪಿಡಬ್ಲ್ಯೂಡಿ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ 5 ಲಕ್ಷ ರೂಪಾಯಿಗೂ ಹೆಚ್ಚು ವಂಚಿಸಿದ್ದ ಬೆಳಗಾವಿ ಮೂಲದ ವ್ಯಕ್ತಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗೋಗಾಕ ತಾಲೂಕಿನ ದುರದುಂಡಿ ಗ್ರಾಮದ ಹಣಮಂತ ಭಜಂತ್ರಿ ಎಂದು ಗುರುತಿಸಲಾಗಿದೆ.
- Ashok Yadalli
- Updated on: Jun 8, 2026
- 2:05 pm
ವಿಜಯೇಂದ್ರ ಮತ್ತು ಅಶೋಕ್ಗೆ ಹುಷಾರ್ ಆಗಿರಿ ಎಂದಿದ್ದೇಕೆ ಯತ್ನಾಳ್
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯರ ರಾಜಕೀಯ ಶೈಲಿಯನ್ನು ಪ್ರಶಂಸಿಸಿದ್ದು, ಅವರು ವೈಯಕ್ತಿಕ ದ್ವೇಷದ ರಾಜಕಾರಣ ಮಾಡಿಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ, ಭೀಮಾ ನದಿದಂಡೆಯಲ್ಲಿ ಹೆಚ್ಚುತ್ತಿರುವ ಅಪರಾಧ ಮತ್ತು ಕೊಲೆ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಅಪರಾಧಿಗಳಿಗೆ ಶಿಕ್ಷೆ ನೀಡುವಂತೆ ಎಸ್‌ಪಿ ಅವರಿಗೆ ಮನವಿ ಮಾಡಿದ್ದಾರೆ.
- Ashok Yadalli
- Updated on: May 31, 2026
- 3:51 pm
ಕರ್ನಾಟಕದ ಏಕೈಕ ಮಹಿಳಾ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: Phd, ಸಿಬ್ಬಂದಿ ನೇಮಕಾತಿಯಲ್ಲೂ ಭಾರಿ ಗೋಲ್ಮಾಲ್!
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಸಿಬ್ಬಂದಿ ನೇಮಕಾತಿ ಹಾಗೂ ಪಿಎಚ್‌ಡಿ ಪದವಿ ಪ್ರದಾನ ವಿಚಾರವಾಗಿ ಗಂಭೀರ ಭ್ರಷ್ಟಾಚಾರ ಮತ್ತು ನಿಯಮಬಾಹಿರ ಅಕ್ರಮಗಳು ನಡೆದಿವೆ ಎಂಬ ಆರೋಪಗಳು ಕೇಳಿಬಂದಿವೆ. ಸರ್ಕಾರದ ಅನುಮತಿ ಪಡೆಯದೆ ಸಿಬ್ಬಂದಿ ನೇಮಕ ಮತ್ತು ಪಿಎಚ್‌ಡಿ ಪ್ರವೇಶದಲ್ಲಿ ಅಕ್ರಮ ನಡೆದಿದೆ ಎನ್ನಲಾಗಿದೆ.
- Ashok Yadalli
- Updated on: May 29, 2026
- 6:35 pm
ಭೀಮಾತೀರದಲ್ಲಿ ಮತ್ತೆ ಮೊಳಗಿದ ಗುಂಡಿನ ಸದ್ದು: ಆಸ್ತಿ ವಿವಾದಕ್ಕೆ 6 ಮಂದಿಯ ಬರ್ಬರ ಕೊಲೆ
ವಿಜಯಪುರದ ಭೀಮಾತೀರದಲ್ಲಿ ಆಸ್ತಿ ವಿವಾದದ ಹಿನ್ನೆಲೆ ನ್ಯಾಯ ಪಂಚಾಯತಿಗೆಂದು ತೆರಳಿದ್ದವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. 6 ಜನರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಗುಂಡಿಟ್ಟು ಹತ್ಯೆ ಮಾಡಲಾಗಿದ್ದು, ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದಿದೆ. ಭೀಕರ ಕೊಲೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಅಮಾನುಷ ಕೃತ್ಯ ಭಾರಿ ಚರ್ಚೆಗೂ ಗ್ರಾಸವಾಗಿದೆ.
- Ashok Yadalli
- Updated on: May 29, 2026
- 7:49 pm
‘ಮಗ, ಸೊಸೆ-ಮೊಮ್ಮಕ್ಕಳು ಬೆಳಗಾಗೋದ್ರೊಳಗೆ ಸತ್ತೋದ್ರು’: ವಿಜಯಪುರ ದುರಂತ, ತಾಯಿಯ ಕಣ್ಣೀರ ಮಾತು
ವಿಜಯಪುರದ ಮೊರಟಗಿ ಗ್ರಾಮದಲ್ಲಿ ಮಳೆಗೆ ಮನೆ ಕುಸಿದು ನಾಲ್ವರು ಮೃತಪಟ್ಟ ಘಟನೆಗೆ ಸಚಿವ ಎಂ.ಬಿ. ಪಾಟೀಲ್ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಸರ್ಕಾರಿ ಪರಿಹಾರ ಹಾಗೂ ವೈಯಕ್ತಿಕ ನೆರವು ಘೋಷಿಸಿದ್ದಾರೆ. ಮತ್ತೊಂದೆಡೆ, ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
- Ashok Yadalli
- Updated on: May 15, 2026
- 1:55 pm
ಮಹಾ ಮಳೆಗೆ ವಿಜಯಪುರದಲ್ಲಿ ಭೀಕರ ದುರಂತ: ಮನೆ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಜೀವಂತ ಸಮಾಧಿ
ವಿಜಯಪುರದ ಮೊರಟಗಿ ಗ್ರಾಮದಲ್ಲಿ ಸುರಿದ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಸ್ವಂತ ಮನೆ ದುರಸ್ತಿ ಹಿನ್ನೆಲೆ ಬಾಡಿಗೆ ಮನೆಯಲ್ಲಿದ್ದ ದಂಪತಿ ಹಾಗೂ ಮಕ್ಕಳು ಮಳೆರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಸದ್ಯ ಕಟ್ಟಡಗಳ ಅವಶೇಷ ತೆರವು ನಡೆಯುತ್ತಿದ್ದು, ಕಾರ್ಯಾಚರಣೆಯ ವಿಡಿಯೋ ಇಲ್ಲಿದೆ.
- Ashok Yadalli
- Updated on: May 15, 2026
- 8:58 am
ಸಂಭ್ರಮಾಚರಣೆ ವೇಳೆ ಹೃದಯಾಘಾತ: ಮೈದಾನದಲ್ಲೇ ಕುಸಿದು ಬಿದ್ದು ಪಟ್ಟಣ ಪಂಚಾಯತ್ ಸದಸ್ಯ ಸಾವು
ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದ ಸಂಭ್ರಮವು ಕ್ಷಣಾರ್ಧದಲ್ಲಿ ದುರಂತಕ್ಕೆ ತಿರುಗಿದೆ. ಕೊಲ್ಹಾರ ಪಟ್ಟಣ ಪಂಚಾಯತ್‌ನ 16ನೇ ವಾರ್ಡ್ ಸದಸ್ಯ ತೌಸೀಪ್ ಗಿರಗಾಂವಿ ಅವರು, ತಮ್ಮ ತಂಡದ ಗೆಲುವಿನ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ವೇಳೆ ಏಕಾಏಕಿ ಹೃದಯಾಘಾತದಿಂದ ಕುಸಿದುಬಿದ್ದು ನಿಧನರಾಗಿದ್ದಾರೆ. ಈ ಅನಿರೀಕ್ಷಿತ ಅಕಾಲಿಕ ನಿಧನವು ಕೊಲ್ಹಾರದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.
- Ashok Yadalli
- Updated on: May 13, 2026
- 5:10 pm
ಖಾಕಿ ಪಡೆಯ ಮಾನವೀಯತೆ: 73 ವೃದ್ಧರು ಹಾಗೂ ಒಂಟಿ ಮಹಿಳೆಯರ ಬಾಳಿಗೆ ಆಸರೆಯಾದ ವಿಜಯಪುರ ಪೊಲೀಸರು!
ವಿಜಯಪುರ ಜಿಲ್ಲಾ ಪೊಲೀಸರು 'ಆಸರೆ' ಕಾರ್ಯಕ್ರಮದ ಮೂಲಕ 73 ವೃದ್ಧರು ಮತ್ತು ಒಂಟಿ ಮಹಿಳೆಯರಿಗೆ ನೆರವಾಗಿದ್ದಾರೆ. ಕಾನೂನು ಸುವ್ಯವಸ್ಥೆ ಜೊತೆಗೆ ಸಮಾಜಮುಖಿ ಕಾರ್ಯ ಕೈಗೊಂಡ ಪೊಲೀಸರು, ವೃದ್ಧಾಪ್ಯ, ವಿಧವಾ ವೇತನ, ವಿಕಲಚೇತನ ಪಿಂಚಣಿ ಸೇರಿ ಹತ್ತಾರು ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಿದ್ದಾರೆ. ಇದರಿಂದ ಸಾರ್ವಜನಿಕರಲ್ಲಿ ಪೊಲೀಸರ ಬಗ್ಗೆ ವಿಶ್ವಾಸ ಮೂಡಿದೆ.
- Ashok Yadalli
- Updated on: May 13, 2026
- 4:17 pm
ವಿಜಯಪುರ: ಬೀದಿನಾಯಿಗಳ ಹಾವಳಿ ಬೆನ್ನಲ್ಲೇ ದುಷ್ಕರ್ಮಿಗಳಿಂದ ವಿಷಪ್ರಾಶನ; 6 ಶ್ವಾನಗಳು ಸಾವು
ವಿಜಯಪುರದಲ್ಲಿ ಬೀದಿನಾಯಿ ಹಾವಳಿ ಮಧ್ಯೆ ವಿಷಾಹಾರ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಶಾಂತಿ ನಗರದಲ್ಲಿ ವಿಷಾಹಾರ ಸೇವಿಸಿ 6 ನಾಯಿಗಳು ಸಾವನ್ನಪ್ಪಿದ್ದು, 2 ಗಂಭೀರವಾಗಿವೆ. ಸದ್ಯ ಈ ಕೃತ್ಯ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದ್ದು, ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಬೀದಿನಾಯಿಗಳಿಗೆ ವಿಷ ಹಾಕಿದವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗಿದೆ.
- Ashok Yadalli
- Updated on: May 12, 2026
- 3:12 pm
ದೇಶಕ್ಕೆ ಮೋದಿ ಕರ್ನಾಟಕಕ್ಕೆ ಜೆಸಿಬಿ: ಹೊಸ ಪಕ್ಷದ ಸುಳಿವು ಕೊಟ್ಟ ವಿಜಯಪುರ ಶಾಸಕ ಯತ್ನಾಳ್
ದೇಶಕ್ಕೆ ಮೋದಿ, ಕರ್ನಾಟಕಕ್ಕೆ ಜೆಸಿಬಿ ಎಂದು ಹೇಳುವ ಮೂಲಕ ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಘೋಷಣೆಯ ಸುಳಿವು ನೀಡಿದ್ದಾರೆ. ತಮಿಳುನಾಡಲ್ಲಿ ಅಧಿಕಾರದ ಗದ್ದುಗೆ ಏರಿರುವ ವಿಜಯ್ ನೇತೃತ್ವದ ನೂತನ ಪಕ್ಷ ಟಿವಿಕೆ ಉದಾಹರಣೆಯನ್ನು ನೀಡಿದ ಅವರು, ರಾಜ್ಯ ಪ್ರವಾಸ ಮಾಡೋದಾಗಿ ತಿಳಿಸಿದ್ದಾರೆ. ಜೊತೆಗೆ ನಿನ್ನೆ ನಡೆದಿದ್ದು ಬಿಎಸ್ವೈ ಅಭಿಮಾನೋತ್ಸವ ಅಲ್ಲ. ಬದಲಾಗಿ ಬೀಳ್ಕೊಡುಗೆ ಸಮಾರಂಭ ಎಂದು ಟೀಕಿಸಿದ್ದಾರೆ.
- Ashok Yadalli
- Updated on: May 10, 2026
- 10:10 pm
ವಿಜಯಪುರದಲ್ಲಿ 3 ವರ್ಷದ ಮಗುವಿನ ಮೇಲೆ ಬೀದಿನಾಯಿ ದಾಳಿ: ಕುಟುಂಬಸ್ಥರಿಗೆ ಆಘಾತ ತಂದ ಘಟನೆ
ವಿಜಯಪುರದ ರಾಜಕುಮಾರ ಲೇಔಟ್‌ನಲ್ಲಿ ಬೀದಿ ನಾಯಿಯೊಂದು ಮೂರು ವರ್ಷದ ವಿರಾಜ್ ಸಂತೋಷ್ ಬಿರಾದಾರ್‌ನನ್ನು ಕಚ್ಚಿ 100 ಅಡಿ ದೂರ ಎಳೆದೊಯ್ದಿದೆ. ಈ ಭಯಾನಕ ಘಟನೆಯಿಂದ ಬಾಲಕನಿಗೆ ಬೆನ್ನಿನ ಮೇಲೆ ಗಂಭೀರ ಗಾಯಗಳಾಗಿವೆ. ಕುಟುಂಬಸ್ಥರು ತೀವ್ರ ಆಘಾತಕ್ಕೊಳಗಾಗಿದ್ದು, ಬೀದಿ ನಾಯಿಗಳ ನಿಯಂತ್ರಣ ಮತ್ತು ಮಕ್ಕಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಪಾಲಿಕೆ ಕ್ರಮಕ್ಕೆ ಆಗ್ರಹಿಸಲಾಗಿದೆ.
- Ashok Yadalli
- Updated on: May 6, 2026
- 11:22 am