ಶಿವಮೊಗ್ಗ-ತುಮಕೂರು ಹೆದ್ದಾರಿ ಕಾಮಗಾರಿಯಲ್ಲಿ ಮಹಾ ಯಡವಟ್ಟು: ಕಿರಿದಾದ ಮಣ್ಣಿನ ರಸ್ತೆಯಲ್ಲಿ ಲಾಕ್ ಆಯ್ತು ಗ್ಯಾಸ್ ಟ್ಯಾಂಕರ್
ಶಿವಮೊಗ್ಗ-ತುಮಕೂರು ರಾಷ್ಟ್ರೀಯ ಹೆದ್ದಾರಿ 206 ಕಾಮಗಾರಿಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಜನರಿಗೆ ತೀವ್ರ ತೊಂದರೆಯಾಗಿದೆ. ಕಿರಿದಾದ ತಾತ್ಕಾಲಿಕ ರಸ್ತೆಯಲ್ಲಿ ಅನಿಲ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ಪ್ರಪಾತಕ್ಕೆ ಬೀಳುವುದರಿಂದ ಕೂದಲೆಳೆ ಅಂತರದಲ್ಲಿ ಭೀಕರ ದುರಂತ ತಪ್ಪಿದೆ. ಐದು ವರ್ಷಗಳಿಂದ ಸರ್ವಿಸ್ ರಸ್ತೆ ಇಲ್ಲದೆ ಗ್ರಾಮಸ್ಥರು ಆತಂಕದಲ್ಲಿದ್ದು, ಜಿಲ್ಲಾಡಳಿತದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಘಟನೆ ರಸ್ತೆ ಸುರಕ್ಷತೆ ಮತ್ತು ಕಾಮಗಾರಿ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
- Basavaraj Yaraganavi
- Updated on: Jun 9, 2026
- 7:43 pm
ಶಿವಮೊಗ್ಗದಲ್ಲಿ ವಿಶಿಷ್ಟ ಮಾವಿನ ಖಾದ್ಯಗಳ ಸ್ಪರ್ಧೆ: ಕೈಚಳಕ ತೋರಿಸಿದ ಮಹಿಳೆಯರು; ಇಲ್ಲಿವೆ ಫೋಟೋಸ್
ಶಿವಮೊಗ್ಗದಲ್ಲಿ ನಡೆದ ಮಾವಿನಹಣ್ಣಿನ ಡೆಸರ್ಟ್ ಸ್ಪರ್ಧೆಯಲ್ಲಿ ಮಹಿಳೆಯರು ತಮ್ಮ ಅದ್ಭುತ ಕೈಚಳಕ ಪ್ರದರ್ಶಿಸಿದರು. ಮಾವಿನ ಲಡ್ಡು, ಮ್ಯಾಂಗೋ ಮೂಸ್, ಚೀಸ್ ಕೇಕ್ ಸೇರಿದಂತೆ ತರಹೇವಾರಿ ಖಾದ್ಯಗಳು ಎಲ್ಲರ ಕಣ್ಮನ ಸೆಳೆದವು. ಬಿವಿಐ ಮತ್ತು ಜೆಸಿಐ-ವಿವೇಕ್ ಸಂಸ್ಥೆಗಳು ಆಯೋಜಿಸಿದ್ದ ಈ ಸ್ಪರ್ಧೆ, ಆಹಾರ ಪ್ರಿಯರಿಗೆ ಹೊಸ ಅನುಭವ ನೀಡಿದೆ. ಫೋಟೋಸ್ ಇಲ್ಲಿವೆ ನೋಡಿ.
- Basavaraj Yaraganavi
- Updated on: Jun 4, 2026
- 5:26 pm
ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಅವಧಿ ಪೂರ್ವ ಚುನಾವಣೆ ಖಚಿತ ಎಂದ ವಿಜಯೇಂದ್ರ
ಸಿದ್ದರಾಮಯ್ಯ ರಾಜೀನಾಮೆ ನೀಡಿದರೂ ಹೊಸ ಮುಖ್ಯಮಂತ್ರಿ ತಾತ್ಕಾಲಿಕ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ. ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆಗೆ ಕಾರಣವಾಗಲಿದೆ. ಹೈಕಮಾಂಡ್ ನಿರ್ಧಾರದಿಂದ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದ್ದಾರೆ.
- Basavaraj Yaraganavi
- Updated on: May 27, 2026
- 12:11 pm
ಕ್ರಿಕೆಟ್ ಆಡುತ್ತಿದ್ದಾಗಲೇ ಹೃದಯಾಘಾತ: ಶಿವಮೊಗ್ಗ KSCA ಮೈದಾನದಲ್ಲಿ ಅಕ್ಷಯ್ ಅಂತಿಮ ದರ್ಶನ
ಕರ್ನಾಟಕದ ಮಾಜಿ ವೇಗದ ಬೌಲರ್ ಎಸ್.ಎಲ್. ಅಕ್ಷಯ್ (39) ಭಾನುವಾರ ನಡೆದ ಕೆಎಸ್‌ಸಿಎ ಡಿವಿಷನ್ 3 ಕ್ರಿಕೆಟ್ ಪಂದ್ಯದಲ್ಲಿ ಬೌಲಿಂಗ್ ಮಾಡಿದ ಬಳಿಕ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗ ಮೂಲದ ಅಕ್ಷಯ್, ವಿನಯ್ ಕುಮಾರ್ ಅವರಂತಹ ದಿಗ್ಗಜರಿದ್ದ ಕಾಲದಲ್ಲೂ ಕರ್ನಾಟಕ ಪರ 6 ಪ್ರಥಮ ದರ್ಜೆ, 3 ಲಿಸ್ಟ್ 'ಎ' ಮತ್ತು 9 ಟಿ20 ಪಂದ್ಯಗಳನ್ನು ಆಡಿದ್ದರು. ನಿವೃತ್ತಿಯ ನಂತರ ರಾಜ್ಯ ಅಂಡರ್-19 ತಂಡದ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ಇಂದು (ಮೇ 25) ಅಕ್ಷಯ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸಿದ್ದು, ಶಿವಮೊಗ್ಗ KSCAಮೈದಾನದಲ್ಲಿ ಕ್ರಿಕೆಟ್ ಆಟಗಾರ ಅಕ್ಷಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
- Basavaraj Yaraganavi
- Updated on: May 25, 2026
- 6:24 pm
ಸರಗಳ್ಳತನ ಮಾಡಿ ಮದುವೆಯಾಗಿ ಹತ್ತೇ ದಿನಕ್ಕೆ ಜೈಲುಪಾಲಾದ ಶಿವಮೊಗ್ಗದ ನವ ವಿವಾಹಿತ!
ಶಿವಮೊಗ್ಗದ ಅಬ್ಬಲಗೇರಿಯಲ್ಲಿ ಕಾರಿನಲ್ಲಿ ಬಂದು ಪ್ರೇಮಿಗಳ ಸರ ಕದ್ದಿದ್ದ ಹೈಟೆಕ್ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿವಾಹವಾಗಿ ಹತ್ತೇ ದಿನಕ್ಕೆ ಈ ನವವಿವಾಹಿತ ಶೋಕಿಗಾಗಿ ಕಳ್ಳತನ ಮಾಡಿದ್ದ ಎಂಬ ವಿಚಾರ ಬೆಳಕಿಗೆ ಬಂದಿದ್ದು, ಕೃತ್ಯಕ್ಕೆ ಆರೋಪಿ ಬಳಸಿದ್ದ ಕಾರನ್ನೂ ಪತ್ತೆ ಮಾಡಲಾಗಿದೆ. ಮದುವೆಗೆ ಮಾಡಿದ್ದ ಅಲಂಕಾರ ಕಾರಿಗೆ ಇನ್ನೂ ಹಾಗೆಯೇ ಇರುವುದು ಕಂಡುಬಂದಿದೆ.
- Basavaraj Yaraganavi
- Updated on: May 25, 2026
- 6:48 am
ಕರ್ನಾಟಕ ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಆರೋಪ: ಕೇಸ್ ದಾಖಲಾಗ್ತಿದ್ದಂತೆ ಪರಾರಿ
ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಬಿಜೆಪಿ ಮುಖಂಡ ಮತ್ತು ವಕೀಲ ಭರತ್ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಪತಿಯ ಸ್ನೇಹಿತನೆಂದು ಪರಿಚಯಿಸಿಕೊಂಡು ಮಹಿಳೆ ಮೇಲೆ ದೌರ್ಜನ್ಯ ಎಸಗಲಾಗಿದೆ ಎನ್ನಲಾಗುತ್ತಿದೆ. ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭರತ್ ಪರಾರಿಯಾಗಿದ್ದಾನೆ. ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಘಟನೆ ಭದ್ರಾವತಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
- Basavaraj Yaraganavi
- Updated on: May 24, 2026
- 10:56 pm
ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ, ತಿಂಗಳಾದರೂ ಸಿಗದ ಸುಳಿವು
ತಾಯಿ ಬೈದಿದ್ದಕ್ಕೆ ಮನನೊಂದು ಅಪ್ರಾಪ್ತ ಸಹೋದರಿಯರು ಮನೆ ಬಿಟ್ಟು ನಾಪತ್ತೆಯಾಗಿದ್ದು, ಪೋಷಕರಲ್ಲಿ ಆತಂಕ ಮನೆ ಮಾಡಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಒಂದು ತಿಂಗಳಿಂದ ನಾಲ್ವರು ನಾಪತ್ತೆಯಾಗಿದ್ದು, ಇದುವರೆಗೂ ಸುಳಿವು ಇಲ್ಲ. ಇದರಿಂದ ಸಂಬಂಧಿಕರು ಆತಂಕಗೊಂಡಿದ್ದು, ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
- Basavaraj Yaraganavi
- Updated on: May 19, 2026
- 10:37 pm
ಶಾಪಿಂಗ್ ಮಾಲ್ನ ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ಹೇಗೆ ನೋಡಿ
ಶಾಪಿಂಗ್ ಮಾಡಲೇಂದು ತೆರಳಿದ್ದ 9 ಜನರು ಲಿಫ್ಟ್‌ನಲ್ಲಿ ಸಿಲುಕಿ ಪರದಾಡಿರುವ ಘಟನೆ ಶಿವಮೊಗ್ಗ ನಗರದ (Shivamogga) ಶಾಪಿಂಗ್ ಮಾಲ್ನಲ್ಲಿ ನಡೆದಿದೆ. ಶಿವಮೊಗ್ಗ ನಗರದ ಆಲ್ಕೋಳ ವೃತ್ತದ ಬಳಿ ಇರುವ ಶಾಪಿಂಗ್ ಮಾಲ್ ನ ಲಿಫ್ಟ್‌ನಲ್ಲಿ ಅರ್ಧ ಗಂಟೆ ಕಾಲ ಸಿಲುಕಿದ್ದು, ಕೊನೆಗೆ ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ.
- Basavaraj Yaraganavi
- Updated on: May 19, 2026
- 3:47 pm
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್ ಪಲ್ಟಿ: ಮೂವರು ಗಂಭೀರ, ಹಲವರಿಗೆ ಗಾಯ
ಸೊರಬ ತಾಲೂಕಿನ ಕೊರಕೋಡು ಕ್ರಾಸ್ ಬಳಿ ಕೆರೆ ಏರಿ ತಿರುವಿನಲ್ಲಿ ಮದುವೆ ದಿಬ್ಬಣದ ಬಸ್ ಪಲ್ಟಿಯಾಗಿ ಮೂವರು ಗಂಭೀರ ಗಾಯಗೊಂಡಿದ್ದಾರೆ. 50 ಪ್ರಯಾಣಿಕರಿದ್ದ ಬಸ್ ಮೋರಿಗೆ ಮಗುಚಿದರೂ ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ. ಸಿದ್ದಾಪುರದಿಂದ ಹಾನಗಲ್‌ನಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಆನವಟ್ಟಿ – ಸೊರಬ ಮಾರ್ಗವಾಗಿ ಸಂಚರಿಸುವ ವೇಳೆ ಅಪಘಾತಕ್ಕೀಡಾಗಿದೆ.
- Basavaraj Yaraganavi
- Updated on: May 9, 2026
- 1:52 pm
ಪುನರ್ವಸತಿ ಕೇಂದ್ರಕ್ಕೆ ದಾಖಲಾಗಿದ್ದ ಯುವತಿ ಅನುಮಾನಾಸ್ಪದ ಸಾವು: ಮಗಳು ಗುಣಮುಖಳಾಗ್ತಾಳೆಂಬ ಆಸೆಯಲ್ಲಿದ್ದ ಪೋಷಕರಿಗೆ ಆಘಾತ
ಶಿವಮೊಗ್ಗದ ಪುನರ್ವಸತಿ ಕೇಂದ್ರದಲ್ಲಿ ದಾಖಲಾಗಿದ್ದ 17 ವರ್ಷದ ಯುವತಿಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಮಾನಸಿಕ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ದಾಖಲಾಗಿದ್ದ ಮಗಳು ಗುಣಮುಖಳಾಗಿ ಮರಳುವ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಘಟನೆ ಆಘಾತ ತಂದಿದೆ. ಪುನರ್ವಸತಿ ಕೇಂದ್ರದ ನಿರ್ಲಕ್ಷ್ಯ, ಅನುಮಾನಾಸ್ಪದ ಸಾವಿನ ಕುರಿತು ಕುಟುಂಬಸ್ಥರು ಆರೋಪಿಸಿದ್ದು, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Basavaraj Yaraganavi
- Updated on: May 8, 2026
- 5:16 pm
ಮನೆ ಲಾಕ್ ಮಾಡಿಕೊಂಡು ಊರಿಗೆ ಹೋಗುತ್ತಿದ್ದೀರಾ? ಕಳ್ಳತನ ತಪ್ಪಿಸಲು ಈ ಕ್ರಮಗಳನ್ನು ಪಾಲಿಸಿ
ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಲಾಕ್ ಮಾಡಿದ ಮನೆಗಳನ್ನೇ ಟಾರ್ಗೆಟ್ ಮಾಡಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆ ಕಳ್ಳತನ ಪ್ರಕರಣಗಳನ್ನು ತಡೆಯಲು ಪೊಲೀಸರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಹಾಗಾದ್ರೆ, ಮನೆಗಳ್ಳತನವನ್ನು ತಡೆಯಲು ಶಿವಮೊಗ್ಗ ಪೊಲೀಸರು ಜಾರಿಗೆ ತಂದಿರುವ ಹೊಸ ಯೋಜನೆ ಯಾವುದು? ನೀವು ಏನು ಮಾಡಬೇಕು ಎನ್ನುವ ವಿವರ ಇಲ್ಲಿದೆ.
- Basavaraj Yaraganavi
- Updated on: May 1, 2026
- 6:31 pm
ಕುವೆಂಪು ವಿವಿಯಲ್ಲಿ ತಾರಕ್ಕೇರಿದ್ದ ವಿದ್ಯಾರ್ಥಿಗಳ ಪ್ರತಿಭಟನೆ: ಕುಲಪತಿ, ಕುಲಸಚಿವರನ್ನ ವಜಾಗೊಳಿಸುವಂತೆ ಪಟ್ಟು
ಕುವೆಂಪು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ವಿರೋಧಿ ನೀತಿ, ಶುಲ್ಕ ಹೆಚ್ಚಳ, ಮತ್ತು ಫಲಿತಾಂಶದ ಗೊಂದಲಗಳನ್ನು ಖಂಡಿಸಿ ಎನ್ಎಸ್ ಯುಐ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ವಿದ್ಯಾರ್ಥಿಗಳು ಕುಲಪತಿ, ಕುಲಸಚಿವ ಮತ್ತು ಮೌಲ್ಯಮಾಪನ ರಿಜಿಸ್ಟ್ರಾರ್ ರಾಜೀನಾಮೆಗೆ ಆಗ್ರಹಿಸಿ, ತಮ್ಮ ಬೇಡಿಕೆಗಳು ಈಡೇರದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು. ಹಲವು ವರ್ಷಗಳಿಂದಲೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸದ ವಿವಿ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
- Basavaraj Yaraganavi
- Updated on: Apr 29, 2026
- 4:21 pm