ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.
ನಕಲಿ ಜಡ್ಜ್, ನಕಲಿ ಕೋರ್ಟ್ ಸೃಷ್ಟಿಸಿ ಬಾಗಲಕೋಟೆಯ ಸರ್ಕಾರಿ ನೌಕರನಿಗೆ 83 ಲಕ್ಷ ರೂ. ಟೋಪಿ ಹಾಕಿದ ಸೈಬರ್ ವಂಚಕರು
ಬಾಗಲಕೋಟೆಯಲ್ಲಿ ಆಘಾತಕಾರಿ ಡಿಜಿಟಲ್ ಅರೆಸ್ಟ್ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಹಿರಿಯ ಸರ್ಕಾರಿ ನೌಕರರೊಬ್ಬರು ನಕಲಿ ಪೊಲೀಸರು ಮತ್ತು ನ್ಯಾಯಾಲಯದ ನಾಟಕಕ್ಕೆ ಬಲಿಯಾಗಿ 83.22 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಆಧಾರ್ ಕಾರ್ಡ್ ದುರ್ಬಳಕೆ ಆರೋಪದ ಮೇಲೆ ಬೆದರಿಸಿ, ವರ್ಚುವಲ್ ವಿಚಾರಣೆ ನಡೆಸಿ ಹಣ ಸುಲಿಗೆ ಮಾಡಲಾಗಿದೆ. ಇಂತಹ ಸೈಬರ್ ಅಪರಾಧಗಳಿಂದ ಸಾರ್ವಜನಿಕರು ಎಚ್ಚರದಿಂದಿರುವಂತೆ ಪೊಲೀಸರು ಮನವಿ ಮಾಡಿದ್ದಾರೆ.
- Ravi H Mooki
- Updated on: Jun 9, 2026
- 4:59 pm
ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನ ಉಪ್ಪಿನಿಂದ ಬದುಕಿಸಬಹುದಾ? ಮೂಢನಂಬಿಕೆಯ ಸತ್ಯಾಸತ್ಯತೆ ಅನಾವರಣ
ಮೃತದೇಹವನ್ನು ಉಪ್ಪಿನಲ್ಲಿ ಮುಚ್ಚಿ ಬದುಕಿಸಲು ಪ್ರಯತ್ನಿಸಿದ ಘಟನೆಗ ವರದಿಯಾಗಿದೆ. ಹೌದು..ಬಾಗಲಕೋಟೆಯಲ್ಲಿ 18 ತಿಂಗಳ ಮಗುವೊಂದು ಸಂಪ್ಗೆ ಬಿದ್ದು ಸಾವನ್ನಪ್ಪಿದೆ. ಆದ್ರೆ, ಸಾವನ್ನಪ್ಪಿದ ನಂತರ ಮಗುವನ್ನು ಬದುಕಿಸಲು ಪೋಷಕರು ನಡೆಸಿದ ವಿಲಕ್ಷಣ ಪ್ರಯತ್ನ ಮತ್ತು ಮೂಢನಂಬಿಕೆಯ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸೋಷಿಯಲ್ ಮೀಡಿಯಾದ ವೈರಲ್ ಪೋಸ್ಟ್ ಗಳನ್ನ ನಂಬಿ ಈ ರೀತಿ ಮಾಡಿದ್ರೂ ಸಹ ಮಗು ಬದುಕುಳಿದಿಲ್ಲ. ಇದರೊಂದಿಗೆ ನೀರಿನಲ್ಲಿ ಮುಳುಗಿ ಮೃತಪಟ್ಟವರನ್ನು ಮತ್ತೆ ಬದುಕಿಸಬಹುದು ಎಂಬ ವೈರಲ್ ಮೆಸೇಜ್ನ ಸತ್ಯಾಸತ್ಯತೆ ಅನಾವಣವಾಗಿದೆ.
- Ravi H Mooki
- Updated on: Jun 8, 2026
- 8:53 pm
ಧಾರಾಕಾರ ಮಳೆಗೆ ಕುಸಿದ ಮನೆ ಮೇಲ್ಚಾವಣಿ: ತಂದೆ, ಮಗನ ಜೀವ ಉಳಿಸಿದ ಸಾಕು ಬೆಕ್ಕು
ಬಾಗಲಕೋಟೆಯಲ್ಲಿ ಧಾರಾಕಾರ ಮಳೆಗೆ ಹಣ್ಣಿನ ವ್ಯಾಪಾರಿಯ ಮನೆ ಮೇಲ್ಛಾವಣಿ ಕುಸಿದಿದೆ. ಆದರೆ ಅದೃಷ್ಟವಶಾತ್, ಸಾಕು ಬೆಕ್ಕಿನಿಂದಾಗಿ ತಂದೆ ಮತ್ತು ಮಗನ ಪ್ರಾಣ ಉಳಿದಿದೆ. ಬಾಗಲಕೋಟೆಯ ವಲ್ಲಭಬಾಯಿ ವೃತ್ತದ ಬಳಿ ಘಟನೆ ನಡೆದಿದೆ. ಲಕ್ಷಾಂತರ ರೂ ಮೌಲ್ಯದ ವಸ್ತುಗಳು ನಾಶವಾಗಿದ್ದು, ಸೂಕ್ತ ಪರಿಹಾರಕ್ಕೆ ಮನವಿ ಮಾಡಿದ್ದಾರೆ.
- Ravi H Mooki
- Updated on: Jun 7, 2026
- 12:25 pm
ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ್ದ ಸರ್ಕಾರಿ ಕಟ್ಟಡವೀಗ ಅನೈತಿಕ ಚಟುವಟಿಕೆಗಳ ತಾಣ: ಹೇಳೋರು ಇಲ್ಲ ಕೇಳೋರು ಇಲ್ಲ!
ಬಾಗಲಕೋಟೆಯ ನವನಗರದಲ್ಲಿ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಸರ್ಕಾರಿ ನರ್ಸರಿ ಶಾಲೆ ಕಟ್ಟಡ ಬಳಕೆಯಾಗದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವ ಬಗ್ಗೆ ಕಿಡಿ ಕಾರಿದ್ದಾರೆ. ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರೆ ಮೆಡಿಕಲ್ ಕಾಲೇಜಿಗೆ ಕಟ್ಟಡವನ್ನು ಇತ್ತೀಚೆಗೆ ಹಸ್ತಾಂತರ ಮಾಡಿದ್ದೇವೆ ಎನ್ನುವ ಮೂಲಕ ನುಣುಚಿಕೊಳ್ಳುತ್ತಿದ್ದಾರೆ.
- Ravi H Mooki
- Updated on: Jun 4, 2026
- 6:44 am
ಮಹಾಲಿಂಗಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 13.34 ಲಕ್ಷ ಮೌಲ್ಯದ ಚಿನ್ನಾಭರಣ, ಮೊಬೈಲ್ ವಶ!
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಠಾಣಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 13.34 ಲಕ್ಷ ರೂಪಾಯಿ ಮೌಲ್ಯದ ಕಳುವಾಗಿದ್ದ 62 ಗ್ರಾಂ ಚಿನ್ನ ಹಾಗೂ ಸಿಇಐಆರ್ ಪೋರ್ಟಲ್ ನೆರವಿನಿಂದ 30 ಮೊಬೈಲ್‌ಗಳನ್ನು ರಿಕವರಿ ಮಾಡಿದ್ದಾರೆ. ಪೊಲೀಸರ ಈ ಅದ್ಭುತ ಕಾರ್ಯಕ್ಷಮತೆಯನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಅವರು ಇಡೀ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.
- Ravi H Mooki
- Updated on: Jun 3, 2026
- 2:09 pm
ಬಕ್ರೀದ್ ಹಬ್ಬದ ವೇಳೆ ಗೋಹತ್ಯೆ ತಡೆಗೆ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ: ಕಸಾಯಿಖಾನೆಗಳ ಬಂದ್ಗೆ ಒತ್ತಾಯ
ಬಾಗಲಕೋಟೆಯಲ್ಲಿ ಬಕ್ರೀದ್ ಹಬ್ಬದ ವೇಳೆ ಗೋಹತ್ಯೆ ನಿಷೇಧಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಗ್ರಹಿಸಿವೆ. ಶ್ರೀರಾಮ ಸೇನೆ ಹಾಗೂ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಮಾಡಿ ಬಳಿಕ ಡಿಸಿಗೆ ಮನವಿ ಸಲ್ಲಿಸಿದ್ದಾರೆ. ಅಕ್ರಮ ಕಸಾಯಿಖಾನೆಗಳು ಮತ್ತು ಗೋಸಾಗಾಟ ತಡೆಯಲು ಪೊಲೀಸ್ ಇಲಾಖೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
- Ravi H Mooki
- Updated on: May 27, 2026
- 9:09 pm
ನಾಯಿ ಕಡಿತವನ್ನು ಲೈಟಾಗಿ ತಗೋಬೇಡಿ, ನಿಮಗೂ ಈ ಪರಿಸ್ಥಿತಿ ಬರಬಹುದು ಎಚ್ಚರ!: ರೇಬಿಸ್ ಲಸಿಕೆ ನಿರ್ಲಕ್ಷಿಸಿದಕ್ಕೆ ಹೋಯಿತು ಯುವಕನ ಪ್ರಾಣ
ಬಾಗಲಕೋಟೆಯಲ್ಲಿ ಯುವಕನೊಬ್ಬ ಹುಚ್ಚು ನಾಯಿ ಕಡಿತಕ್ಕೆ ಸಕಾಲದಲ್ಲಿ ರೇಬಿಸ್ ಲಸಿಕೆ ಹಾಕಿಸಿಕೊಳ್ಳದೆ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾನೆ. ಈ ಘಟನೆ ನಾಯಿ ಕಡಿತದ ನಂತರ ರೇಬಿಸ್ ಲಸಿಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ರೇಬಿಸ್ ಮಾರಕವಾಗಬಹುದು. ಸಾರ್ವಜನಿಕರು ಇಂತಹ ದುರಂತಗಳಿಂದ ಪಾಠ ಕಲಿಯಬೇಕು ಮತ್ತು ಆರೋಗ್ಯ ಇಲಾಖೆಯ ಜಾಗೃತಿ ಕರೆಗೆ ಸ್ಪಂದಿಸಬೇಕು.
- Ravi H Mooki
- Updated on: May 26, 2026
- 9:58 am
ಎಷ್ಟು ಕಾದ್ರೂ ಡಾಕ್ಟ್ರೇ ಬರ್ತಿಲ್ಲ! ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ
ಲ್ಲೆಯ ಬೀಳಗಿ ತಾಲ್ಲೂಕಾಸ್ಪತ್ರೆಯಲ್ಲಿ ರೋಗಿಗಳು ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದ್ದು, ರೋಗಿಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬೀಳಗಿಯಿಂದ ಬಂದ ರೋಗಿಗಳು, ಬೆಳಗ್ಗೆ ಆರು ಗಂಟೆಯಿಂದ ಎಂಟು ಗಂಟೆಯವರೆಗಿನ ಡೋಸ್ ನೀಡಬೇಕಾಗಿತ್ತು, ಆದರೆ ಎಂಟೂವರೆ ಆದರೂ ಯಾರೂ ಬಂದು ನೋಡಿಕೊಳ್ಳಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
- Ravi H Mooki
- Updated on: May 24, 2026
- 1:15 pm
100 ಸಿಬ್ಬಂದಿಯಿಂದ 36 ಅಡ್ಡೆಗಳ ಮೇಲೆ ದಾಳಿ: ಇಡೀ ಬಾಗಲಕೋಟೆಯ ಅಕ್ರಮ ಮರಳು ಜಾಲಾಡಿದ ಲೋಕಾಯುಕ್ತ
ಬಾಗಲಕೋಟೆ ಜಿಲ್ಲೆಯ 36 ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿದ್ದಾರೆ. 24 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ 65 ಟಿಪ್ಪರ್, 18 ಹಿಟಾಚಿ ಸೇರಿ ಭಾರೀ ಪ್ರಮಾಣದ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ. ಅಕ್ರಮ ತಡೆಯದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ದೂರು ಕೂಡ ದಾಖಲಾಗಿದೆ.
- Ravi H Mooki
- Updated on: May 20, 2026
- 10:33 pm
ಬರದಲ್ಲೂ ಬತ್ತಿಲ್ಲ ಈ ದೇಗುಲದ ಕೆರೆ: ಬಾಗಲಕೋಟೆಯ ಬಾದಾಮಿಯಲ್ಲೊಂದು ಅಚ್ಚರಿ!
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟೇಶ್ವರ ದೇವಸ್ಥಾನದಲ್ಲಿರುವ ಪುಷ್ಕರಣಿ ಬರದ ನಡುವೆಯೂ ಎಂದಿಗೂ ಬತ್ತದೆ ಹರಿದುಬರುವ ಭಕ್ತರಿಗೆ ಜೀವ ಸೆಲೆಯಾಗಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಚಾಲುಕ್ಯರ ಕಾಲದ ಈ ಪುಷ್ಕರಣಿಯಲ್ಲಿ ಸ್ನಾನ ಮಾಡಿದರೆ ರೋಗ ರುಜಿನಿಗಳು ದೂರವಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಈ ಕ್ಷೇತ್ರ ಬಿಸಿಲಿನ ಬೇಗೆಯಲ್ಲೂ ಜನರನ್ನು ಸೆಳೆಯುತ್ತಿದೆ.
- Ravi H Mooki
- Updated on: May 18, 2026
- 12:58 pm
ಬೇಸಿಗೆಯಲ್ಲೂ ಬತ್ತದ ದಕ್ಷಿಣ ಕಾಶಿಯ ಪುಷ್ಕರಣಿ: ಸಾವಿರ ವರ್ಷ ಕಳೆದ್ರೂ ಕಮ್ಮಿಯಾಗದ ಹೊಂಡದ ನೀರು
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟ ಪುಣ್ಯಕ್ಷೇತ್ರ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿರುವ ಚಾಲುಕ್ಯರ ಕಾಲದ ಪುಷ್ಕರಣಿ ಬರಗಾಲದಲ್ಲೂ ಬತ್ತಿರುವ ಇತಿಹಾಸವಿಲ್ಲ. ಇಲ್ಲಿಗೆ ಭೇಟಿ ನೀಡುವ ಭಕ್ತರು ಪುಷ್ಕರಣಿಯಲ್ಲಿ ಮಿಂದೇಳುತ್ತಿದ್ದಾರೆ. ಭೀಕರ ಬರಗಾಲದಲ್ಲೂ ನೀರು ಖಾಲಿಯಾಗದಿರುವುದು ಹಲವು ಅಚ್ಚರಿಗೆ ಕಾರಣವಾಗಿದೆ.
- Ravi H Mooki
- Updated on: May 17, 2026
- 8:47 pm
ಪ್ರಧಾನಿ ಮೋದಿ ಕರೆಗೆ ಓಗೊಟ್ಟ ಕರ್ನಾಟಕ ರಾಜ್ಯಸಭಾ ಸದಸ್ಯನ ಕುಟುಂಬ: ಎಲೆಕ್ಟ್ರಿಕ್ ಸ್ಟವ್ ಬಳಕೆ, ಸೈಕಲ್ ಸವಾರಿ
ಪ್ರಧಾನಿ ಮೋದಿಯವರ ಮಿತವ್ಯಯದ ಕರೆಗೆ ಸ್ಪಂದಿಸಿದ ಬಾಗಲಕೋಟೆಯ ರಾಜ್ಯಸಭಾ ಸದಸ್ಯನ ಕುಟುಂಬ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಗ್ಯಾಸ್ ಬದಲು ಎಲೆಕ್ಟ್ರಿಕ್ ಸ್ಟೋವ್, ಚಿನ್ನಾಭರಣ ಖರೀದಿಸದಿರುವುದು, ಕಾರು ಬಿಟ್ಟು ಸೈಕಲ್ ಹಾಗೂ ರೈಲಿನಲ್ಲಿ ಪ್ರಯಾಣಿಸಿ ಇಂಧನ ಮತ್ತು ಆರ್ಥಿಕ ಉಳಿತಾಯ ಮಾಡುತ್ತಿದೆ.
- Ravi H Mooki
- Updated on: May 15, 2026
- 10:24 pm