Auto Tricks: ಕಾರು ಖರೀದಿಸುವಾಗ ಆನ್-ರೋಡ್ ಪ್ರೈಸ್ ಕಡಿಮೆ ಮಾಡುವುದು ಹೇಗೆ?: ಈ ಟ್ರಿಕ್ ಹೆಚ್ಚಿನವರಿಗೆ ತಿಳಿದಿಲ್ಲ

ಈ ಹಬ್ಬದ ಋತುವಿನಲ್ಲಿ ನೀವು ಹೊಸ ಕಾರನ್ನು ಖರೀದಿಸುವ ಮೊದಲು, ಅದರ ಆನ್-ರೋಡ್ ಬೆಲೆಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ತಿಳಿಯಿರಿ. ಈ ಉಪಯುಕ್ತ ಸಲಹೆಗಳನ್ನು ನೀವು ಅನುಸರಿಸಿದರೆ, ವಾಹನದ ಬೆಲೆಯಲ್ಲಿ ದೊಡ್ಡ ವ್ಯತ್ಯಾಸ ಆಗುತ್ತದೆ.

Auto Tricks: ಕಾರು ಖರೀದಿಸುವಾಗ ಆನ್-ರೋಡ್ ಪ್ರೈಸ್ ಕಡಿಮೆ ಮಾಡುವುದು ಹೇಗೆ?: ಈ ಟ್ರಿಕ್ ಹೆಚ್ಚಿನವರಿಗೆ ತಿಳಿದಿಲ್ಲ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 28, 2024 | 4:38 PM

ಇದೀಗ ಹಬ್ಬದ ರಂಗು ಪ್ರಾರಂಭವಾಗಿದೆ. ಈ ಸಮಯದಲ್ಲಿ ಅಟೋ ಮಾರುಕಟ್ಟೆಗೆ ಅನೇಕ ಹೊಸ ಹೊಸ ಕಾರುಗಳು ಪ್ರವೇಶಿಸುತ್ತಿವೆ. ಇತ್ತೀಚೆಗಷ್ಟೆ ಮಹೀಂದ್ರ ಥಾರ್, ನೆಕ್ಸಾನ್ CNG ಸೇರಿದಂತೆ ಕೆಲ ಕಾರುಗಳು ಬಿಡುಗಡೆ ಆಗಿವೆ. ಇನ್ನೂ ಅನೇಕ ಕಾರುಗಳು ಮುಂದಿನ ತಿಂಗಳು ಅನಾವರಣಗೊಳ್ಳಲಿದೆ. ನೀವು ಕೂಡ ಈ ಸಮಯದಲ್ಲಿ ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದೀರಾ?. ಹಾಗಾದರೆ ಹೊಸ ಕಾರನ್ನು ಖರೀದಿಸುವ ಮೊದಲು, ಅದರ ಆನ್ ರೋಡ್ ಬೆಲೆಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದರ ಕುರಿತು ಸರಿಯಾದ ಮಾಹಿತಿಯನ್ನು ಹೊಂದಿರಬೇಕು.

ನೀವು ಕಾರು ಖರೀದಿಸಲು ಶೋರೂಮ್‌ಗೆ ಹೋದ ನಂತರ, ನಿಮ್ಮ ಆಯ್ಕೆಯ ಕಾರಿನ ಬೆಲೆಯ ಪಟ್ಟಿಯನ್ನು ನಿಮಗೆ ನೀಡಲಾಗುತ್ತದೆ. ಈ ಬೆಲೆ ಪಟ್ಟಿಯನ್ನು ಎಚ್ಚರಿಕೆಯಿಂದ ನೋಡಿದರೆ, ಎಕ್ಸ್-ಶೋರೂಮ್ ಅನ್ನು ಹೊರತುಪಡಿಸಿ ಅನೇಕ ದರಗಳನ್ನು ಸೇರಿಸಲಾಗುತ್ತಿದೆ. ಅವುಗಳು ನಿಮಗೆ ಅಗತ್ಯವಿಲ್ಲದಿದ್ದರೂ ಕಾರಿನ ಆನ್-ರೋಡ್ ಬೆಲೆಗೆ ಅದನ್ನು ಸೇರಿಸಲ್ಪಟ್ಟಿರುತ್ತದೆ. ನೀವು ಆನ್ ರೋಡ್ ಬೆಲೆಯನ್ನು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ನಾವು ನಿಮಗೆ ವಿವರಿಸುತ್ತೇವೆ?.

ಕಾರಿನ ಆನ್ ರೋಡ್ ಬೆಲೆಯನ್ನು ಹೇಗೆ ಕಡಿಮೆ ಮಾಡುವುದು?

ನೀವು ಶೋ ರೂಂನಿಂದಲೇ ಕಾರು ವಿಮೆಯನ್ನು ಖರೀದಿಸಲು ಬೇಕೆಂದಿಲ್ಲ, ಅದು ನಿಮ್ಮ ಆಯ್ಕೆಯಾಗಿರುತ್ತದ ಮತ್ತು ಶೋರೂಮ್ ನವರದ್ದಲ್ಲ. ಅನೇಕ ಬಾರಿ, ಕೆಲವು ಜನರು ಕಾರು ವಿಮೆಯನ್ನು ಶೋ ರೂಂನಿಂದ ಖರೀದಿಸುವ ಬದಲು ಹೊರಗಿನಿಂದ ಖರೀದಿಸುತ್ತಾರೆ. ಇದಕ್ಕೆ ಕಾರಣ ಕೂಡ ಇದೆ.

ಶೋರೂಮ್ ಬದಲಿಗೆ ಹೊರಗಿನಿಂದ ವಿಮೆ ಮಾಡಿಸಿಕೊಳ್ಳುವುದು ಅಗ್ಗವಾಗಿದೆ. ಹೊಸ ಕಾರನ್ನು ಖರೀದಿಸುವಾಗ ವಿಮಾ ಶೋರೂಮ್‌ನಿಂದ ಖರೀದಿಸಬೇಕೆ ಅಥವಾ ಹೊರಗಿನಿಂದ ಮಾಡಬೇಕೆ ಎಂಬುದು ನಿಮ್ಮ ನಿರ್ಧಾರ. ಶೋರೂಮ್ ಮತ್ತು ಹೊರಗಿನಿಂದ ಪಡೆದ ಬೆಲೆಯಲ್ಲಿ ವ್ಯತ್ಯಾಸವನ್ನು ನೀವು ಸ್ಪಷ್ಟವಾಗಿ ಗಮನಿಸುತ್ತೀರಿ. ಆದರೆ, ಡೆಲಿವರಿ ತೆಗೆದುಕೊಳ್ಳುವ ಸಂದರ್ಭ ನಿಮ್ಮೊಂದಿಗೆ ವಿಮೆಯ ಪ್ರತಿ ಇರಬೇಕು. ಹಾಗಿದ್ದರೆ ಮಾತ್ರ ಹೊಸ ಕಾರು ಶೋರೂಮ್‌ನಿಂದ ಹೊರಬರುತ್ತದೆ.

ವಿಮೆಯ ಹೊರತಾಗಿ, ನೀವು ಕಾರಿನೊಂದಿಗೆ ವಿಸ್ತೃತ ವಾರಂಟಿಯನ್ನು ತೆಗೆದುಕೊಳ್ಳಲು ಬಯಸದಿದ್ದರೆ, ನೀವು ಅದನ್ನು ಕ್ಯಾನ್ಸಲ್ ಮಾಡಬಹುದು. ಏಕೆಂದರೆ ವಿಸ್ತೃತ ವಾರಂಟಿ ತೆಗೆದುಕೊಳ್ಳುವುದು ಅಥವಾ ಬಿಡುವುದು ನಿಮ್ಮ ಆಯ್ಕೆಯಾಗಿದೆ. ಈ ಎರಡೂ ಕೆಲಸಗಳನ್ನು ಮಾಡಿದ ನಂತರ, ನಿಮ್ಮ ಕಾರಿನ ಆನ್-ರೋಡ್ ಬೆಲೆ ಮೊದಲಿಗಿಂತ ಕಡಿಮೆ ಇರುತ್ತದೆ.

ಇದನ್ನೂ ಓದಿ: ಅಟೋಮೆಟಿಕ್ ಅಥವಾ ಮ್ಯಾನುಯಲ್ ಕಾರು: ಮಹಿಳೆಯರು ಕಾರು ಖರೀದಿಸುವ ಮುನ್ನ ಈ ಸ್ಟೋರಿ ಓದಿ

ಕಾರು ಖರೀದಿಸುವಾಗ ಈ ವಿಷಯಗಳನ್ನು ಸಹ ಪರಿಗಣಿಸಿ:

ಹಣಕಾಸು ಆಯ್ಕೆಗಳು: ನೀವು ಲೋನ್ ಮೂಲಕ ಕಾರನ್ನು ಖರೀದಿಸುವ ಪ್ಲಾನ್ನಲ್ಲಿದ್ದರೆ ವಿವಿಧ ಬ್ಯಾಂಕ್‌ಗಳು ಮತ್ತು ಹಣಕಾಸು ಕಂಪನಿಗಳ ಬಡ್ಡಿದರಗಳನ್ನು ಹೋಲಿಕೆ ಮಾಡಿ. ಅನೇಕ ಬಾರಿ ಒಂದು ಕಂಪನಿಯು ಹೆಚ್ಚಿನ ಬಡ್ಡಿದರವನ್ನು ವಿಧಿಸುತ್ತಿದ್ದರೆ ಇನ್ನೊಂದು ಕಂಪನಿಯು ಕಡಿಮೆ ಬಡ್ಡಿದರವನ್ನು ಹೊಂದಿರುತ್ತದೆ.

ಆಫರ್ಗಳು: ಕೆಲವೊಮ್ಮೆ ಕೆಲವು ಡೀಲರ್‌ಗಳು ಹಬ್ಬದ ಋತುವಿನಲ್ಲಿ ರಿಯಾಯಿತಿಗಳು ಮತ್ತು ಉತ್ತಮ ಕೊಡುಗೆಗಳನ್ನು ನೀಡುತ್ತವೆ. ಸರಿಯಾದ ಸಮಯಕ್ಕೆ ಕಾರನ್ನು ಖರೀದಿಸುವ ಮೂಲಕ, ಕಾರನ್ನು ಖರೀದಿಸುವಾಗ ನೀವು ಹಣವನ್ನು ಉಳಿಸಬಹುದು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಕಡಿಮೆ ಬೆಲೆಗೆ ಕಾರನ್ನು ನಿಮ್ಮದಾಗಿಸಬಹುದು.

ಆಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ಹೊಸ ಸಿನಿಮಾ ತಂಡಗಳಿಗೆ ಕಿವಿ ಮಾತು ಹೇಳಿದ ಸತೀಶ್ ನೀನಾಸಂ
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ರಾಜ್ಯದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿ ಸುಲಭವಾಗಿ ಗೆಲ್ಲುತ್ತದೆ: ಜಗದೀಶ್
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ಚನ್ನಪಟ್ಟಣ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಕೇಳಿದರೆ ಡಾ ಮಂಜುನಾಥ್ ಉತ್ತರ!
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ನಿಯಮ ಮುರಿದ ಸ್ಪರ್ಧಿಗಳು, ಕಠಿಣ ಶಿಕ್ಷೆ ಕೊಟ್ಟ ಬಿಗ್​ಬಾಸ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಹರಿಯಾಣ ಸೋಲಿನ ನಡುವೆ ಸಂಬಂಧವಿಲ್ಲ: ಡಿಕೆ ಶಿವಕುಮಾರ್
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಲೈವ್​ ನೋಡಿ..
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ದರ್ಶನ್​ ಜಾಮೀನು ಅರ್ಜಿ ವಿಚಾರಣೆ ಲೈವ್; ಇಂದಾದರೂ ದಾಸನಿಗೆ ಸಿಗುತ್ತಾ ಬೇಲ್?
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಅಪ್ರಸ್ತುತವಾಗಿದ್ದರೂ ಬಸನಗೌಡ ಯತ್ನಾಳ್ ಹೆಸರು ಉಲ್ಲೇಖಿಸಿದ ಜಮೀರ್
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿರೋದು ಶಿವಕುಮಾರ್​​ಗೆ ಗೊತ್ತಿಲ್ಲ
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!
ಮೈಸೂರು ಕಾರ್ಯಕರ್ತನ ಮನೆಯಲ್ಲಿ ಸ್ಪೆಷಲ್ ದೋಸೆ ಸವಿದ ಸತೀಶ್ ಜಾರಕಿಹೊಳಿ!