Skoda Kodiaq ಬಿಡುಗಡೆ; 9 ಏರ್ಬ್ಯಾಗ್ಸ್ನ ಸ್ಕೋಡಾ ಕಾರು; ಟೊಯೊಟಾ ಫಾರ್ಚೂನರ್, ಗ್ಲಾಸ್ಟರ್ಗೆ ಟೆನ್ಷನ್
Skoda Kodiaq 2025: ಯೂರೋಪ್ ಮೂಲದ ಆಟೊಮೊಬೈಲ ಸಂಸ್ಥೆಯಾದ ಸ್ಕೋಡಾ ತನ್ನ ಹೊಸ SUVಯಾದ ಕೊಡಿಯಾಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. 9 ಏರ್‌ಬ್ಯಾಗ್‌ಗಳನ್ನು ಈ ಕಾರು ಹೊಂದಿದ್ದು ಸಂಪೂರ್ಣ ಸುರಕ್ಷತಾ ಫೀಚರ್ಸ್ ಹೊಂದಿದೆ. ಇದು ಮಾತ್ರವಲ್ಲ, ಪ್ರೀಮಿಯಮ್ ಸೆಗ್ಮೆಂಟ್ನ ಇತ್ತೀಚಿನ ಹೆಚ್ಚಿನ ಫೀಚರ್ಗಳು ಈ ಕಾರಿನಲ್ಲಿವೆ.

Skoda Kodiaq: ಸ್ಕೋಡಾ ಆಟೋ ಇಂಡಿಯಾ ಸಂಸ್ಥೆ ತನ್ನ ಎರಡನೇ ಜೆನರೇಶನ್ Kodiaq ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಏಳು ಬಣ್ಣಗಳ ಆಯ್ಕೆಗಳಲ್ಲಿ ಈ ಎಸ್‌ಯುವಿ ಬಿಡುಗಡೆಯಾಗಿದೆ. ಸ್ಪೋರ್ಟ್‌ಲೈನ್ ಮತ್ತು L&K ಎಂಬ ಎರಡು ವೇರಿಯೆಂಟ್ಗಳ ಆಯ್ಕೆ ಇದೆ. ಚೆಕ್ ರಿಪಬ್ಲಿಕ್ ದೇಶದ ಮೂಲದ ಸ್ಕೋಡಾ ಸಂಸ್ಥೆ ಈ ವರ್ಷ ಕೊಡಿಯಾಕ್ (Skoda Kodiaq) ಸೇರಿದಂತೆ ಐದು ಮಾಡಲ್ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತಿದೆ. ಇದರಲ್ಲಿ ಕೊಡಿಯಾಕ್ನ ಡೀಸಲ್ ಮತ್ತು ಪೆಟ್ರೋಲ್ ಕಾರೂ ಸೇರಿದೆ. ಕೊಡಿಯಾಕ್, ಆಕ್ಟೇವಿಯಾ ಮತ್ತು ಸ್ಕೋಡಾ ಸೂಪರ್ಬ್ ಕಾರುಗಳು ಬರುತ್ತಿವೆ. ಸ್ಕೋಡಾ ಕೊಡಿಯಾಕ್ SUV ಬೆಲೆ ಎಷ್ಟು, ಈ ಕಾರಿನಲ್ಲಿ ಯಾವ ಎಂಜಿನ್ ನೀಡಲಾಗಿದೆ ಮತ್ತು ಈ ಕಾರಿನಲ್ಲಿ ಯಾವ ಹೊಸ ಫೀಚರ್ಸ್ ಇದೆ? ಈ ಎಲ್ಲಾ ಪ್ರಶ್ನೆಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ.
Skoda Kodiaq ಹೊರಭಾಗದ ವಿನ್ಯಾಸ
ಸ್ಕೋಡಾದ ಈ ಎಸ್ಯುನ ವಿನ್ಯಾಸದ ಬಗ್ಗೆ ಹೇಳುವುದಾದರೆ, ಹೊಸ ಬಂಪರ್‌ಗಳು, LED ಹೆಡ್‌ಲ್ಯಾಂಪ್‌ಗಳು, 18-ಇಂಚಿನ ಅಲಾಯ್ ವೀಲ್‌ಗಳು, C ಆಕಾರದ LED ಟೈಲ್ ಲೈಟ್‌ಗಳು ಮತ್ತು ರೂಫ್ ರೈಲ್‌ಗಳಂತಹ ಬದಲಾವಣೆಗಳನ್ನು ಈ SUV ಯಲ್ಲಿ ಕಾಣಬಹುದು. ಹೊಸ ಗ್ರಿಲ್ ಮತ್ತು ನಯವಾದ LED ಹೆಡ್‌ಲ್ಯಾಂಪ್‌ಗಳಿಂದಾಗಿ, ಈ ಕಾರಿನ ನೋಟವು ಮೊದಲಿಗಿಂತ ಹೆಚ್ಚು ಪ್ರೀಮಿಯಂ ಆಗಿದೆ.
ಸೈಡ್ ಪ್ರೊಫೈಲ್‌ನಲ್ಲಿ ಕ್ಯಾರೆಕ್ಟರ್ ಲೈನ್ಸ್ ಕಡಿಮೆ ಇದ್ದು, ಇದರಿಂದಾಗಿ ಈ SUV ಉದ್ದವಾಗಿ ಕಾಣುತ್ತದೆ. ಈ ಕಾರಿನ ಉದ್ದ ಸುಮಾರು 15 ಅಡಿ 7 ಇಂಚುಗಳಿವೆ. ಒಟ್ಟಾರೆಯಾಗಿ, ಈ ಕಾರಿನ ಎಕ್ಸ್ಟೀರಿಯರ್ ತುಂಬಾ ಪ್ರೀಮಿಯಂ ನೋಟ ನೀಡುತ್ತದೆ.
Skoda Kodiaq ಇಂಟೀರಿಯರ್ ವಿನ್ಯಾಸ
ಈ SUV ಯ ಒಳಭಾಗವನ್ನು ಬಹಳ ಸಾಫ್ಟ್ ಟಚ್ ಮೆಟೀರಿಯಲ್ಗಳಿಂದ ನಿರ್ಮಿಸಲಾಗಿದೆ. ಮಸಾಜ್ನಿಂದ ಹಿಡಿದು ಆಂಬಿಯೆಂಟ್ ಲೈಟಿಂಗ್ ಮತ್ತು ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಕಾರ್ ಪ್ಲೇ ವರೆಗೆ ಈ ಕಾರಿನಲ್ಲಿ ಹಲವು ಅದ್ಭುತ ಫೀಚರ್ಸ್ ಲಭ್ಯವಿದೆ. ಚಾಲಕನ ಸೀಟಾಗಿರಲಿ ಅಥವಾ ಕಾರಿನ ಮೂರನೇ ಸಾಲಿನಲ್ಲಾಗಿರಲಿ, ಚಾರ್ಜಿಂಗ್‌ಗಾಗಿ ಎಲ್ಲೆಡೆ ಸಿ-ಟೈಪ್ ಚಾರ್ಜಿಂಗ್ ಪೋರ್ಟ್ ಅನ್ನು ಒದಗಿಸಲಾಗಿದೆ.
ಇದನ್ನೂ ಓದಿ: TATA Punch vs Exter: ಟಾಟಾ ಪಂಚ್ ಅಥವಾ ಹುಂಡೈ ಎಕ್ಸ್ಟೆರ್: CNG ನಲ್ಲಿ ಯಾವ ಕಾರು ಖರೀದಿಸುವುದು ಉತ್ತಮ?
ಸ್ಕೋಡಾ ಕೊಡಿಯಾಕ್ ಫೀಚರ್ಸ್
ಈ ಕಾರು 12.9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 10-ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ಮೂರು ವಲಯ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಪನೋರಮಿಕ್ ಸನ್‌ರೂಫ್, ಮುಂಭಾಗದ ಸೀಟುಗಳಲ್ಲಿ ಹೀಟಿಂಗ್ ಮತ್ತು ವೆಂಟಿಲೇಶನ್ ಸಿಸ್ಟಂ, ಮಸಾಜ್ ಕಾರ್ಯ, ಎರಡನೇ ಸಾಲಿನಲ್ಲಿ ಸ್ಲೈಡಿಂಗ್ ಮತ್ತು ರಿಕ್ಲೈನಿಂಗ್ ಸೀಟು, ಸಬ್ ವೂಫರ್‌ನೊಂದಿಗೆ ಪ್ರೀಮಿಯಂ 13 ಸ್ಪೀಕರ್ ಆಡಿಯೊ ಸಿಸ್ಟಮ್‌ನಂತಹ ಹೊಸ ಫೀಚರ್ಸ್ ಅನ್ನು ಸ್ಕೋಡಾ Kodiaq ಹೊಂದಿದೆ.
ಸ್ಕೋಡಾ ಕೊಡಿಯಾಕ್ನಲ್ಲಿ ಸುರಕ್ಷತಾ ಸಿಸ್ಟಮ್ಸ್
ಈ ಕಾರನ್ನು ವಿನ್ಯಾಸಗೊಳಿಸುವಾಗ ಸ್ಕೋಡಾ ಗ್ರಾಹಕರ ಸುರಕ್ಷತೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿದೆ, ಈ ಪೂರ್ಣ ಗಾತ್ರದ SUV ಯಲ್ಲಿ 9 ಏರ್‌ಬ್ಯಾಗ್‌ಗಳನ್ನು ಒದಗಿಸಲಾಗಿದೆ. 9 ಏರ್‌ಬ್ಯಾಗ್‌ಗಳ ಹೊರತಾಗಿ, 360 ಡಿಗ್ರಿ ವ್ಯೂ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಆಂಟಿ-ಬ್ರೇಕಿಂಗ್ ಸಿಸ್ಟಮ್, ಇಬಿಡಿ, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಹಿಲ್ ಡಿಸೆಂಟ್ ಕಂಟ್ರೋಲ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಈ ಎಸ್ಯುವಿಯಲ್ಲಿ ಸೇರಿಸಲಾಗಿದೆ.
ಸ್ಕೋಡಾ ಕೊಡಿಯಾಕ್ ಕಾರಿನ ಎಂಜಿನ್ ವಿವರಗಳು
ಸ್ಕೋಡಾ ಕೊಡಿಯಾಕ್ 2025 ಕಾರಿನಲ್ಲಿ 2.0 ಲೀಟರ್ ನಾಲ್ಕು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಇದೆ. ಇದು 7 ಸ್ಪೀಡ್ ಡಿಸಿಟಿ ಆಟೊಮ್ಯಾಟಿಕ್ ಟ್ರಾನ್ಸ್ಮಿಶನ್ ಇರುತದೆ. ಈ ಶಕ್ತಿಶಾಲಿ ಎಂಜಿನ್ 201bhp ಪವರ್ ಮತ್ತು 320Nm ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ. ಈ SUVಯ ಸಸ್ಪೆನ್ಷನ್ ಮತ್ತು ಡ್ರೈವ್ ಸಾಕಷ್ಟು ಆರಾಮದಾಯಕವಾಗಿದೆ. ಈ ಕಾರು ಸುಗಮ ಚಾಲನೆ, ಶಕ್ತಿಶಾಲಿ ಎಂಜಿನ್‌ನಿಂದ ಹಿಡಿದು ಆರಾಮದಾಯಕತೆಯವರೆಗೆ ಎಲ್ಲವನ್ನೂ ನೀಡುತ್ತದೆ.
ಇದನ್ನೂ ಓದಿ: ಟಾಟಾ ಮೋಟಾರ್ಸ್ ದಾಖಲೆ; ಒಂದೇ ವರ್ಷದಲ್ಲಿ 250 ಪೇಟೆಂಟ್, 148 ಡಿಸೈನ್ ಅಪ್ಲಿಕೇಶನ್ಸ್ ದಾಖಲು
ಭಾರತದಲ್ಲಿ ಸ್ಕೋಡಾ ಕೊಡಿಯಾಕ್ ಬೆಲೆ
Skoda Kodiaq ಕಾರಿನ ಸ್ಪೋರ್ಟ್‌ಲೈನ್ ವೇರಿಯೆಂಟ್ ಬೆಲೆಯನ್ನು 46.89 ಲಕ್ಷ ರೂ (ಎಕ್ಸ್ ಶೋ ರೂಂ ಬೆಲೆ) ಎಂದು ನಿಗದಿಪಡಿಸಲಾಗಿದೆ. ಆದರೆ ನೀವು ಈ ಕಾರಿನ L&K ವೇರಿಯೆಂಟ್ ಖರೀದಿಸಿದರೆ ನೀವು 48.69 ಲಕ್ಷ ರೂ. (ಎಕ್ಸ್ ಶೋ ರೂಂ) ಆಗುತ್ತದೆ. ಸ್ಕೋಡಾದ ಈ ಹೊಸ ಪೂರ್ಣ ಗಾತ್ರದ ಎಸ್‌ಯುವಿ ಮಾರುಕಟ್ಟೆಗೆ ಪ್ರವೇಶಿಸುವುದರಿಂದ ಟೊಯೋಟಾ ಫಾರ್ಚೂನರ್ ಮತ್ತು ಎಂಜಿ ಗ್ಲೋಸ್ಟರ್‌ನಂತಹ (MG Gloster) ವಾಹನಗಳಿಗೆ ಕಠಿಣ ಸ್ಪರ್ಧೆ ದೊರೆಯಲಿದೆ.
ಇನ್ನಷ್ಟು ಆಟೊಮೊಬೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ