AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ಸ್ಟಾರ್ ಸೇಫ್ಟಿ: ಕ್ರ್ಯಾಶ್ ಟೆಸ್ಟ್​ನಲ್ಲಿ ದಾಖಲೆ ನಿರ್ಮಿಸಿದ ಟೆಸ್ಲಾ ಗಾಡಿ: ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ

Tesla Cybertruck: ಟೆಸ್ಲಾ ಸೈಬರ್ಟ್ರಕ್ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಈ ಕ್ರ್ಯಾಶ್ ಪರೀಕ್ಷೆಯನ್ನು ಡಿಸೆಂಬರ್ 2024 ರಲ್ಲಿ ಕ್ಯಾಲಿಫೋರ್ನಿಯಾದ ಅಪ್ಲಸ್ ಇಡಿಯಾಡಾ ಕಾರ್ಕೊ ಎಂಜಿನಿಯರಿಂಗ್ ನಡೆಸಿದೆ ಎಂದು ಹೇಳಲಾಗಿದೆ. ಇದರಲ್ಲಿ, ಟೆಸ್ಲಾ ಸೈಬರ್ಟ್ರಕ್‌ನ ಸೈಬರ್‌ಬೀಸ್ಟ್ ಮಾದರಿಯನ್ನು ಪರೀಕ್ಷಿಸಲಾಯಿತು. ಟೆಸ್ಲಾ ಸೈಬರ್ಟ್ರಕ್ ಅನ್ನು ರೋಲ್ಓವರ್ ಪರೀಕ್ಷೆಗೆ ಕೂಡ ಒಳಪಡಿಸಲಾಗಿದೆ.

5 ಸ್ಟಾರ್ ಸೇಫ್ಟಿ: ಕ್ರ್ಯಾಶ್ ಟೆಸ್ಟ್​ನಲ್ಲಿ ದಾಖಲೆ ನಿರ್ಮಿಸಿದ ಟೆಸ್ಲಾ ಗಾಡಿ: ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಿ
Tesla Cybertruck Crash Test
Follow us
ಪ್ರೀತಿ ಭಟ್​, ಗುಣವಂತೆ
| Updated By: Vinay Bhat

Updated on:Feb 22, 2025 | 12:02 PM

Tesla Cybertruck Crash Test Video: ತನ್ನ ಸುರಕ್ಷತೆಯ ಜೊತೆಗೆ ಅದ್ಭುತ ನೋಟ ಮತ್ತು ವೈಶಿಷ್ಟ್ಯಗಳೊಂದಿಗೆ ಪ್ರಪಂಚದಾದ್ಯಂತ ಮೋಡಿ ಮಾಡಿರುವ ಟೆಸ್ಲಾ ಸೈಬರ್ಟ್ರಕ್ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಎಲಾನ್ ಮಸ್ಕ್ ಅವರ ಕಂಪನಿ ಟೆಸ್ಲಾ ಪಿಕಪ್ ಟ್ರಕ್ ಟೆಸ್ಲಾ ಸೈಬರ್ಟ್ರಕ್, ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (NHTSA) ನಡೆಸಿದ ಕ್ರ್ಯಾಶ್ ಪರೀಕ್ಷೆಯಲ್ಲಿ ಅದ್ಭುತ ಪ್ರದರ್ಶನ ನೀಡಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಗಳಿಸಿದೆ. ಈ ಮೂಲಕ ಟೆಸ್ಲಾದ ಈ ಎಲೆಕ್ಟ್ರಿಕ್ ಟ್ರಕ್ ಭವಿಷ್ಯದ ವಿನ್ಯಾಸವನ್ನು ಮಾತ್ರವಲ್ಲದೆ ಸುರಕ್ಷತೆಯ ದೃಷ್ಟಿಯಿಂದಲೂ ಅತ್ಯುತ್ತಮ ಎಂಬುದನ್ನು ಸಾಬೀತುಪಡಿಸಿದೆ.

ಸೈಬರ್ಟ್ರಕ್ 5-ಸ್ಟಾರ್ ರೇಟಿಂಗ್ ಅನ್ನು ಹೇಗೆ ಪಡೆದುಕೊಂಡಿತು?:

ಟೆಸ್ಲಾ ಸೈಬರ್ಟ್ರಕ್ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಈ ಕ್ರ್ಯಾಶ್ ಪರೀಕ್ಷೆಯನ್ನು ಡಿಸೆಂಬರ್ 2024 ರಲ್ಲಿ ಕ್ಯಾಲಿಫೋರ್ನಿಯಾದ ಅಪ್ಲಸ್ ಇಡಿಯಾಡಾ ಕಾರ್ಕೊ ಎಂಜಿನಿಯರಿಂಗ್ ನಡೆಸಿದೆ ಎಂದು ಹೇಳಲಾಗಿದೆ. ಇದರಲ್ಲಿ, ಟೆಸ್ಲಾ ಸೈಬರ್ಟ್ರಕ್‌ನ ಸೈಬರ್‌ಬೀಸ್ಟ್ ಮಾದರಿಯನ್ನು ಪರೀಕ್ಷಿಸಲಾಯಿತು. ಪರೀಕ್ಷೆಯ ಸಮಯದಲ್ಲಿ ಮುಂಭಾಗದ ತಡೆಗೋಡೆ, ಎರಡು ವಾಹನಗಳ ನಡುವಿನ ಮುಖಾಮುಖಿ ಡಿಕ್ಕಿಯ ಸಿಮ್ಯುಲೇಶನ್ ಅನ್ನು ಗಂಟೆಗೆ 56 ಕಿಲೋಮೀಟರ್ ವೇಗದಲ್ಲಿ ನಡೆಸಲಾಯಿತು.

ಟೆಸ್ಲಾ ಸೈಬರ್ಟ್ರಕ್ ನ ಕ್ರ್ಯಾಶ್ ಟೆಸ್ಟ್ ನಲ್ಲಿ, ಡಿಕ್ಕಿಯ ಹೊರತಾಗಿಯೂ ವಿಂಡ್ ಷೀಲ್ಡ್ ಸಂಪೂರ್ಣವಾಗಿ ಹಾಗೆಯೇ ಉಳಿದಿದೆ. ಅಲ್ಲದೆ, ಚಾಲಕ ಮತ್ತು ಪ್ರಯಾಣಿಕರ ಬಾಗಿಲುಗಳು ಮುಚ್ಚಲ್ಪಟ್ಟಿದ್ದು, ನಂತರ ಪರಿಶೀಲಿಸಿದಾಗ ಅವು ಕಾರ್ಯನಿರ್ವಹಿಸುತ್ತಿದ್ದವು. ಡಿಕ್ಕಿಯ ನಂತರ ಮುಂಭಾಗದ ಏರ್‌ಬ್ಯಾಗ್‌ಗಳು ಸರಿಯಾದ ಸಮಯಕ್ಕೆ ತೆರೆದುಕೊಂಡಿದೆ. ಸೈಬರ್‌ಟ್ರಕ್‌ಗೆ ಪಕ್ಕದಿಂದ ಬಲವಾದ ಡಿಕ್ಕಿ ಹೊಡೆದಾಗ, ಸೈಡ್ ಏರ್‌ಬ್ಯಾಗ್‌ಗಳು ಕೂಡ ವರ್ಕ್ ಆಗಿದೆ ಮತ್ತು ಚಾಲಕ- ಪ್ರಯಾಣಿಕ ಸುರಕ್ಷಿತವಾಗಿದ್ದರು. ಈ ಪರೀಕ್ಷೆಯಲ್ಲೂ ಸೈಬರ್ಟ್ರಕ್ ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿತು.

ಟೆಸ್ಲಾ ಸೈಬರ್ಟ್ರಕ್ ಅನ್ನು ರೋಲ್ಓವರ್ ಪರೀಕ್ಷೆಗೆ ಕೂಡ ಒಳಪಡಿಸಲಾಗಿದೆ. ಈ ಪರೀಕ್ಷೆಯಲ್ಲಿ, ವಾಹನವು ಪಲ್ಟಿಯಾಗುವ ಸಾಧ್ಯತೆಯನ್ನು ಪರಿಶೀಲಿಸಲಾಯಿತು. ಅದರ ಕಾರ್ಯಕ್ಷಮತೆಯ ಆಧಾರದ ಮೇಲೆ ಅದು 4-ಸ್ಟಾರ್ ರೇಟಿಂಗ್ ಅನ್ನು ಪಡೆದಿದೆ. ಟೆಸ್ಲಾ ಸೈಬರ್‌ಟ್ರಕ್‌ನ ಕಡಿಮೆ ಗುರುತ್ವಾಕರ್ಷಣೆಯ ಕೇಂದ್ರವು ಅದರ ಸ್ಥಿರತೆಯನ್ನು ಹೆಚ್ಚಿಸುತ್ತದೆ ಮತ್ತು ರಸ್ತೆಯಲ್ಲಿ ಬಾಳಿಕೆ ಬರುವಂತೆ ಮಾಡುತ್ತದೆ ಎಂಬುದು ಗಮನಾರ್ಹ.

ಬೆಲೆ ಮತ್ತು ವೈಶಿಷ್ಟ್ಯಗಳು:

ಟೆಸ್ಲಾ ಸೈಬರ್‌ಟ್ರಕ್‌ನ ಎಕ್ಸ್‌ಶೋರೂಂ ಬೆಲೆ 67 ಲಕ್ಷ ರೂ. ಗಳಿಂದ ಪ್ರಾರಂಭವಾಗಿ 83 ಲಕ್ಷ ರೂ. ಗಳವರೆಗೆ ಇರುತ್ತದೆ. ಟೆಸ್ಲಾದಿಂದ ಬಂದ ಈ ಅದ್ಭುತ ಜೀವನಶೈಲಿ ಪಿಕಪ್ ಟ್ರಕ್ ಅದರ ಭವಿಷ್ಯದ ವಿನ್ಯಾಸ, ಬಲವಾದ ಸುರಕ್ಷತಾ ಮಾನದಂಡಗಳು, ದೃಢವಾದ ಬಾಡಿ, ಇದನ್ನು ತಯಾರು ಮಾಡಲು ಬಳಸಿರುವ ವಸ್ತು, ಸುಧಾರಿತ ಸ್ಥಿರತೆ ಮತ್ತು ಸುರಕ್ಷತಾ ವೈಶಿಷ್ಟ್ಯಗಳಿಂದಾಗಿ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ. ಈಗ ಇದು ಭಾರತೀಯ ಮಾರುಕಟ್ಟೆಯಲ್ಲಿ ಯಾವಾಗ ಬಿಡುಗಡೆಯಾಗುತ್ತದೆ ಮತ್ತು ಅದರ ಬೆಲೆ ಎಷ್ಟಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Car Modification: ನಿಮ್ಮ ಕಾರನ್ನು ಮಾಡಿಫಿಕೇಷನ್ ಮಾಡುವ ಮುನ್ನ ಈ ಸ್ಟೋರಿ ಓದಿ: ಇಲ್ಲದಿದ್ರೆ ದಂಡ ಖಚಿತ

ಎಲೋನ್ ಮಸ್ಕ್ 2022 ರಿಂದ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಆಮದು ಸುಂಕ ತಡೆಗೋಡೆಯಾಗಿತ್ತು. ಆದರೆ ಸರ್ಕಾರವು ಕಾರ್ಖಾನೆಯನ್ನು ಸ್ಥಾಪಿಸಲು ಮತ್ತು ಭಾರತದಲ್ಲಿ ಹೂಡಿಕೆ ಮಾಡಲು ಒಂದು ಷರತ್ತನ್ನು ವಿಧಿಸಿದ್ದು, ಈಗ ಟೆಸ್ಲಾ ಭಾರತಕ್ಕೆ ಆಗಮನ ದೃಢಪಟ್ಟಿದೆ. ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲೋನ್ ಮಸ್ಕ್ ನಡುವಿನ ಸಭೆಯಲ್ಲಿ  ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ, ಟೆಸ್ಲಾ ಭಾರತದಲ್ಲಿ ಸಿಬ್ಬಂದಿ ನೇಮಕಾತಿಯನ್ನು ಪ್ರಾರಂಭಿಸಿದೆ. ಅದೇ ಸಮಯದಲ್ಲಿ, ಕಂಪನಿಯು ಮುಂಬೈ ಮತ್ತು ದೆಹಲಿಯಲ್ಲಿ ಶೋ ರೂಂಗಳನ್ನು ತೆರೆಯುವ ಬಗ್ಗೆ ಚರ್ಚೆಯೂ ಸುದ್ದಿಯಲ್ಲಿದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:02 pm, Sat, 22 February 25

ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ