AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Teachers Day: ತಂದೆ, ತಾಯಿಯಷ್ಟೇ ಪವಿತ್ರ ಸ್ಥಾನ ಗುರುವಿಗೂ ಇದೆ

ಸುಮಾರು ಎರಡು ವರ್ಷದ ಈ ಪಯಣದಲ್ಲೂ ಒಂದಷ್ಟು ವಿದ್ಯಾರ್ಥಿಗಳಿಂದ ಕಲಿತುಕೊಂಡದ್ದೆ ಹೆಚ್ಚು. ಪ್ರತಿ ತರಗತಿಗೂ ಹೋದಾಗ, ಅಲ್ಲಿ ಸಿಗುವ ಜ್ಞಾನ ಹಾಗೂ ಅನುಭವ ವಿಭಿನ್ನ. ಶಿಕ್ಷಕಿಯಾಗಿ ಮೊದಲ ದಿನ ಕಾಲೇಜಿಗೆ ಹೋದಾಗ, ಭಯವಾದದ್ದು ಉಂಟು. ಮಕ್ಕಳಿಗೆ ನಾನು ಹೇಳುವ ವಿಷಯಗಳು ಅರ್ಥವಾಗಬಹುದೇ, ತರಲೆ ತುಂಟಾಟ ಮಾಡುವ ಮಕ್ಕಳು ಸಿಗದೇ ಇರಲಿ ಎಂದುಕೊಂಡೇ ಹೋಗಿದ್ದೆನು.

Happy Teachers Day: ತಂದೆ, ತಾಯಿಯಷ್ಟೇ ಪವಿತ್ರ ಸ್ಥಾನ ಗುರುವಿಗೂ ಇದೆ
Happy Teachers Day
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on:Sep 05, 2022 | 5:53 PM

Share

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಅದ್ಭುತವಾದ ಸಂದೇಶ ಎಲ್ಲರ ಬದುಕಿಗೂ ಅರ್ಥ ನೀಡುತ್ತದೆ. ತಂದೆ, ತಾಯಿಯಷ್ಟೇ ಪವಿತ್ರ ಸ್ಥಾನ ಗುರುವಿಗೂ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಆಗಿದ್ದಾಗ ಮಾತ್ರ ಬದುಕಿನಲ್ಲಿ ಕಂಡಂತಹ ಕನಸುಗಳು ಈಡೇರಲು ಸಾಧ್ಯ. ಈ ಬದುಕು ಎಂಬುದೇ ಕಲಿಕೆ. ಜೀವನದ ಪ್ರತಿಯೊಂದು ಹಂತದಲ್ಲೂ ನಮಗೆ ಕಲಿಯುವುದಕ್ಕೆ ಸಿಗುತ್ತದೆ. ಹೀಗೆ ಒಳ್ಳೆಯ ವಿಚಾರಗಳನ್ನು ಕಲಿಯುತ್ತಾ ಮುನ್ನಡೆದಾಗ ಬದುಕು ಬಲು ಸೊಗಸಾಗಿರುತ್ತದೆ. ಅದರಲ್ಲಿಯೂ ಈ ಬದುಕಿನಲ್ಲಿ ಪ್ರತಿಯೊಬ್ಬರು ಗುರುಗಳೇ, ಶಾಲಾ ಕಾಲೇಜಿನಲ್ಲಿ ಸಿಗುವ ಗುರುಗಳು ಒಂದೆಡೆಯಾದರೆ, ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳುವವರು ಒಂದರ್ಥದಲ್ಲಿ ಗುರುಗಳೇ. ಪ್ರತಿಯೊಬ್ಬರ ಬಾಳಿನಲ್ಲೂ ಗುರುಗಳ ಪಾತ್ರ ಬಹಳ ಅಗಾಧವಾದುದು. ಶಾಲೆಯಲ್ಲಿ ಶಿಕ್ಷಕ ಶಿಕ್ಷಕಿಯರು ಕಲಿಸುವ ಪಾಠ, ನೀಡುವ ಮಾರ್ಗದರ್ಶನವು ಬದುಕು ರೂಪಿಸಲು ಸಹಾಯಕವಾಗಿದೆ.

ನಮ್ಮ ಭವಿಷ್ಯದ ಜೀವನಕ್ಕೊಂದು ಸುಂದರ ಅಡಿಪಾಯ ಹಾಕಿಕೊಡುವ ಶಿಕ್ಷಕರಿಗೆ ಸದಾ ಋಣಿಯಾಗಿರುವುದು ಕೂಡಾ ನಮ್ಮ ಕರ್ತವ್ಯ. ಬಾಲ್ಯದಲ್ಲಿ ನೀನು ದೊಡ್ಡವನಾದ ಮೇಲೆ ಏನಾಗಬೇಕು ಎಂದು ಕೇಳಿದರೆ ಶಿಕ್ಷಕಿಯಾಗಬೇಕು ಎಂದು ಬಹುತೇಕರು ಹೇಳಿರುತ್ತೇವೆ. ಆದರೆ, ಆವಾಗ ಆ ಪುಟ್ಟ ಮಕ್ಕಳಲ್ಲಿ ಪ್ರಬುದ್ಧತೆ ಇರುವುದಿಲ್ಲ. ಬೆಳೆಯುತ್ತಾ ಹೋದಂತೆ ಕನಸು ಹಾಗೂ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರ ಬದಲಾಗಬಹುದು. ಆದರೆ ನಾನು ಚಿಕ್ಕವಳು ಆಗಿದ್ದಾಗಿನಿಂದಲೂ ಶಿಕ್ಷಕಿಯಾಗಬೇಕು ಎನ್ನುವ ಕನಸು ನನ್ನಲಿತ್ತು, ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ ಆ ಕನಸನ್ನು ಜೋಪಾನವಾಗಿ ಸಲುಹಿದೆ, ಅದರ ಜೊತೆಗೆ ನನಗೆ ಸಿಕ್ಕಂತಹ ಗುರುಗಳು ಸ್ಫೂರ್ತಿಯಾಗಿದ್ದರು. ಅವರೆಲ್ಲಾ ಮಾರ್ಗದರ್ಶನದಲ್ಲಿ ಇಂದು ಶಿಕ್ಷಕಿಯಾಗಿದ್ದೇನೆ.

ಸುಮಾರು ಎರಡು ವರ್ಷದ ಈ ಪಯಣದಲ್ಲೂ ಒಂದಷ್ಟು ವಿದ್ಯಾರ್ಥಿಗಳಿಂದ ಕಲಿತುಕೊಂಡದ್ದೆ ಹೆಚ್ಚು. ಪ್ರತಿ ತರಗತಿಗೂ ಹೋದಾಗ, ಅಲ್ಲಿ ಸಿಗುವ ಜ್ಞಾನ ಹಾಗೂ ಅನುಭವ ವಿಭಿನ್ನ. ಶಿಕ್ಷಕಿಯಾಗಿ ಮೊದಲ ದಿನ ಕಾಲೇಜಿಗೆ ಹೋದಾಗ, ಭಯವಾದದ್ದು ಉಂಟು. ಮಕ್ಕಳಿಗೆ ನಾನು ಹೇಳುವ ವಿಷಯಗಳು ಅರ್ಥವಾಗಬಹುದೇ, ತರಲೆ ತುಂಟಾಟ ಮಾಡುವ ಮಕ್ಕಳು ಸಿಗದೇ ಇರಲಿ ಎಂದುಕೊಂಡೇ ಹೋಗಿದ್ದೆನು. ತಲೆಯಲ್ಲಿ ಆ ದಿನ ಸಾಕಷ್ಟು ಪ್ರಶ್ನೆಗಳು ಇದ್ದವು, ಆದರೆ ನಾನು ಅಂದುಕೊಂಡದ್ದಕ್ಕಿಂತ ಒಳ್ಳೆಯ ಮಕ್ಕಳೇ ನನಗೆ ಸಿಕ್ಕಿದ್ದಾರೆ.

ಪಾಠ, ಕ್ಲಾಸ್ ರೂಮ್ ಹೊರತು ಪಡಿಸಿ ಗುರುಗಳು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ವಿವರಿಸಲು ಅಸಾಧ್ಯ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಆ ಘಳಿಗೆ ಬೈದಿರಬಹುದು, ಆ ಬೈಗುಳ ಹಿಂದೆಯೂ ನಮ್ಮ ಮಕ್ಕಳು ಎನ್ನುವ ಪ್ರೀತಿಯಿದೆ, ಆ ಬಾಂಧವ್ಯವನ್ನು ವಿವರಿಸಲು ಅಸಾಧ್ಯ. ಪ್ರತಿಯೊಬ್ಬರು ಒಂದಲ್ಲ ಒಂದು ವಿಚಾರದಲ್ಲಿ ಕಲಿಯುತ್ತಾ ಹೋಗುತ್ತಾರೆ. ನನ್ನ ಶಿಕ್ಷಕಿ ವೃತ್ತಿ ಆರಂಭಿಸಿದಾಗಿನಿಂದ ಕಲಿಕೆ ಎನ್ನುವುದು ನಿರಂತರವಾಗಿದೆ. ನಾನು ಶಿಕ್ಷಕಿಯಾದ ನಂತರದಲ್ಲಿ ಕಲಿತದ್ದೇ ಹೆಚ್ಚು ಎನ್ನಬಹುದು. ಇಂದು ನಾನು ಕಂಡ ಕನಸು ನನಸು ಮಾಡುವಲ್ಲಿ ನನ್ನ ಶಿಕ್ಷಕರು ಕೂಡ ಕಾರಣ. ಹೀಗಾಗಿ ನನ್ನೆಲ್ಲಾ ಶಿಕ್ಷಕರನ್ನು ಈ ದಿನ ನೆನಪಿಸಿಕೊಳ್ಳಲೇ ಬೇಕು. ನನ್ನೆಲ್ಲಾ ತಪ್ಪು ಒಪ್ಪುಗಳನ್ನು ಕ್ಷಮಿಸಿ, ನನಗೆ ಮಾರ್ಗದರ್ಶನ ನೀಡಿದ ನನ್ನ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಸಾಯಿನಂದಾ ಚಿಟ್ಪಾಡಿ, ಉಪನ್ಯಾಸಕರು

Published On - 5:53 pm, Mon, 5 September 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ