Happy Teachers Day: ಶಿಕ್ಷಣ ಕ್ಷೇತ್ರದ ಮಹತ್ವ, ಅವಕಾಶಗಳು ಮತ್ತು ಭದ್ರತೆ

Teachers Day: ಕಾಲಕಾಲಕ್ಕೆ ಶಿಕ್ಷಣದ ರೀತಿಯಲ್ಲಿ, ಪಠ್ಯಕ್ರಮದಲ್ಲಿ ಬದಲಾವಣೆಯಾಗಬೇಕಾದದ್ದು ಅನಿವಾರ್ಯ, ಆದರೆ ಶಿಕ್ಷಕನ ನೀತಿ, ಮೌಲ್ಯ ಯಾವತ್ತಿಗೂ ಮೂಲ ಚಿಂತನೆಯಿಂದ ಭಿನ್ನವಾಗುವಂತಿಲ್ಲ.

Happy Teachers Day: ಶಿಕ್ಷಣ ಕ್ಷೇತ್ರದ ಮಹತ್ವ, ಅವಕಾಶಗಳು ಮತ್ತು ಭದ್ರತೆ
Dr. Vijaya Saraswati
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 05, 2022 | 3:04 PM

ಶಿಕ್ಷಣವೆಂದರೆ ದುಡಿದು ಬಾಳುವ ರೀತಿಯನ್ನು ಕಲಿಸುವ ಮುಖ್ಯ ಮಾರ್ಗವೆಂದುಕೊಂಡರೆ, ಬದುಕು ಎಲ್ಲಕ್ಕಿಂತ ಮುಖ್ಯವಾದುದು. ಬದುಕು ಸಾರ್ಥಕವಾಗುವ ರೀತಿಯಲ್ಲಿ ಬದುಕುವುದು ಹೇಗೆ? ಬದುಕುವುದನ್ನ ಸಾಧ್ಯ ಮಾಡುವ ಸಮಾಜ, ಸಮಾಜ ತನ್ನನ್ನೇ ವ್ಯವಸ್ಥೆಗೊಳಿಸಲು ರಚಿಸಿಕೊಳ್ಳುವ ಸರ್ಕಾರ, ಕಾನೂನು ವ್ಯವಸ್ಥೆ – ಈ ಎಲ್ಲ ವ್ಯವಸ್ಥೆಗಳ ನಡುವೆ ಹೊಂದಾಣಿಕೆಯನ್ನ ಮಾಡುವುದನ್ನು, ಜೀವನ ಮೌಲ್ಯಗಳನ್ನ ಕಲಿಸುವ ಶ್ರೇಷ್ಠವಾದ ಕ್ಷೇತ್ರ ಶಿಕ್ಷಣ ಕ್ಷೇತ್ರ.

ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಶಿಕ್ಷಣ ವ್ಯವಸ್ಥೆಯು ಗುರುಕುಲ ಪದ್ಧತಿಯಿಂದ ಮೊದಲ್ಗೊಂಡು ಸಾಂಪ್ರದಾಯಿಕ ಶೈಕ್ಷಣಿಕ ವ್ಯವಸ್ಥೆಯಾದ ತರಗತಿಗಳಲ್ಲಿ ಬೆಳೆದುಬಂದು ಇಂದು ಆಧುನಿಕ ತಂತ್ರಜ್ಞಾನದ ಮೂಲಕ ಗಣಕೀಕೃತ ಶಿಕ್ಷಣ ವ್ಯವಸ್ಥೆಯತ್ತ ಮುಖ ಮಾಡಿ ನಿಂತಿದೆ. ಈ ಎಲ್ಲ ಬೆಳವಣಿಗೆಯ ಹಂತಗಳಲ್ಲಿ ಮೂಲ ಶಿಕ್ಷಣ ಚಿಂತನೆಯು ಬದಲಾಗಿಲ್ಲ. ಭದ್ರವಾದ ಅಡಿಪಾಯವಾದ ‘ಗುರು ಕಲ್ಪನೆ’ ಸರ್ವಕಾಲಕ್ಕೂ ಸಲ್ಲುತ್ತಾ ಬಂದಿದೆ. ಶಿಕ್ಷಣ ಎಂದರೆ ಯಾವುದೇ ಒಂದು ಹೊಸ ತತ್ವಕ್ಕೆ ಜನ್ಮ ಕೊಡುವುದಲ್ಲ ಬದಲಾಗಿ ಸುಪ್ತ ತತ್ವವನ್ನು ಜಾಗೃತಗೊಳಿಸುವುದು ಎಂಬ ವಿನೋಬಾ ಭಾವೆಯವರ ಮಾತಿನಂತೆ ಶಿಕ್ಷಣದ ಮೂಲಕ ವ್ಯಕ್ತಿಯೊಳಗಿರುವ ಶ್ರೇಷ್ಠ ವ್ಯಕ್ತಿತ್ವವನ್ನು ಹೊರಗೆಳೆಯುವ ಮಾರ್ಗದರ್ಶವನ್ನು ನೀಡುವ ಪ್ರಯತ್ನ ಮಾಡುವುದೇ ನಿಜವಾದ ಶಿಕ್ಷಣದ ಉದ್ದೇಶ. ಮನುಷ್ಯನಲ್ಲಿ ಅಡಗಿರುವ ಪೂರ್ಣತೆಯನ್ನ ಹೊರಗೆಡಹುವುದೇ ಶಿಕ್ಷಣದ ಆಶಯ. ಹಾಗಾಗಿಯೇ ಬದಲಾಗುವ ವ್ಯವಸ್ಥೆಯಲ್ಲಿ ಬದಲಾಗುತ್ತ ಆದರೆ ಮೂಲ ಚಿಂತನೆಯನ್ನ ಉಳಿಸಿಕೊಂಡು ಬಂದಿರುವ ವ್ಯವಸ್ಥೆ ಶಿಕ್ಷಣ ವ್ಯವಸ್ಥೆ.

ಕಾಲಕಾಲಕ್ಕೆ ಶಿಕ್ಷಣದ ರೀತಿಯಲ್ಲಿ, ಪಠ್ಯಕ್ರಮದಲ್ಲಿ ಬದಲಾವಣೆಯಾಗಬೇಕಾದದ್ದು ಅನಿವಾರ್ಯ, ಆದರೆ ಶಿಕ್ಷಕನ ನೀತಿ, ಮೌಲ್ಯ ಯಾವತ್ತಿಗೂ ಮೂಲ ಚಿಂತನೆಯಿಂದ ಭಿನ್ನವಾಗುವಂತಿಲ್ಲ. ಭಾರತೀಯ ಸಂಸ್ಕೃತಿಯ ಭದ್ರ ಬುನಾದಿಯ ಮೇಲೆ ರೂಪಿಸಿದಾಗ ಸಭ್ಯ, ಸುಸಂಸ್ಕೃತ, ಸರ್ವಶ್ರೇಷ್ಠ ನಾಗರಿಕನನ್ನು , ಪ್ರಜೆಯನ್ನು ನಿರ್ಮಾಣ ಮಾಡಲು ಸಾಧ್ಯ. ಹಾಗಾಗಿಯೆ ಶಿಸ್ತುಬದ್ಧ ರೀತಿಯಿಂದ ವ್ಯಕ್ತಿಯೋರ್ವನಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಗೆಳದು, ಮಾರ್ಗದರ್ಶನ ನೀಡಿ, ಸಮಾಜದ ಓರ್ವ ಜವಾಬ್ದಾರಿಯುತ ಚಾರಿತ್ರ್ಯವಂತ ನಾಗರಿಕನ ನಿರ್ಮಾಣ ಶಿಕ್ಷಣ ಪದ್ದತಿಯ ಉದ್ದೇಶವಾಗಿರಬೇಕಾದುದು ಸತ್ಯ. ಆದುದರಿಂದಲೇ ಶಿಕ್ಷಣ ಕ್ಷೇತ್ರ ಸದಾ ಹೊಸತನದಿಂದ, ಸವಾಲುಗಳಿಂದ ಕೂಡಿದ್ದು, ಎಲ್ಲಾ ಕಾಲಕ್ಕೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ತಂತ್ರಜ್ಞಾನದ ಯುಗದಲ್ಲಿ ಪಠ್ಯ ಚಟುವಟಿಕೆಗಳು ನಡೆಯಬಹುದಾದರೂ, ಜೀವನ ಮೌಲ್ಯವನ್ನು ನೀಡುವಲ್ಲಿ ಶಿಕ್ಷಕನ ಪಾತ್ರ ಬಹಳ ಹಿರಿಮೆಯದ್ದಾಗಿದೆ. “One teacher can touch hundreds of minds” ಹೆಮ್ಮೆಯ ವಿಷಯವೆಂದರೆ ಎಲ್ಲಾ ಕ್ಷೇತ್ರಗಳನ್ನು ತಯಾರು ಮಾಡುವ ಕ್ಷೇತ್ರ ಶಿಕ್ಷಣ ಕ್ಷೇತ್ರ! ಈ ವೃತ್ತಿ ಗಳಿಸಿಕೊಡುವಷ್ಟು ಜನರನ್ನು ಬೇರಾವ ವೃತ್ತಿಯೂ ಕೊಡಲಾರದು. ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗದ ರೀತಿಯಲ್ಲಿ ಪ್ರತಿಕ್ಷಣವೂ ಹೊಸ ಮನಸ್ಸುಗಳೊಂದಿಗೆ ಮತ್ತೆ ಅವರ ಮಟ್ಟಕ್ಕೆ ಇಳಿಯುತ್ತ, ಅವರನ್ನು ಮೇಲಕ್ಕೆ ಎತ್ತುತ್ತ ಮತ್ತೆ ಯೌವನದಿಂದ ಇರವ ಏಕೈಕ ವೃತ್ತಿ ಇದು. ವಿದ್ಯಾರ್ಥಿಯ ಭವಿಷ್ಯ ನಿರ್ಮಾಣದಲ್ಲಿ, ವ್ಯಕ್ತಿತ್ವ ನಿರ್ಮಾಣದಲ್ಲಿ ಖಂಡಿತವಾಗಿಯೂ ಗುರುವಿನ ಛಾಯೆಯಿದೆ.

ಅವಕಾಶಗಳು ಮತ್ತು ಭದ್ರತೆ

ಜ್ಞಾನ ಸಂಪಾದನೆ ಹಾಗು ಜ್ಞಾನವರ್ಧನೆ ಪ್ರತಿಯೋರ್ವ ವ್ಯಕ್ತಿಗೂ ಅನಿವಾರ್ಯ, ವ್ಯವಸ್ಥಿತ ಶಿಕ್ಷಣ ವ್ಯವಸ್ಥೆಯ ಮೂಲಕ ಇದನ್ನು ಸಾಧಿಸಬಹುದು. ಆದರೆ ಸಾಂಪ್ರದಾಯಿಕ ಶಿಕ್ಷಣ ಇಂದಿನ ಆಧುನಿಕ ಯುಗದಲ್ಲಿ ನಿಗದಿತ ಪಠ್ಯಗಳಿಗೆ ಮೀಸಲಾಗಿದ್ದು ನಿರ್ದಿಷ್ಟ ಗುರಿಗಳನ್ನು ತಲುಪುವಲ್ಲಿಗೆ ಸೀಮಿತವಾಗಿರುವುದು ನಮಗೆಲ್ಲರಿಗೂ ತಿಳಿದಿರುವ ಸತ್ಯ. ಆದರೆ ಬದುಕಿನ ಪರಿಪೂರ್ಣತೆಯನ್ನು ನೀಡುವ, ವಿಶೇಷ ಸಾಮರ್ಥ್ಯ, ಅವಕಾಶ ಶಿಕ್ಷಕಕನಿಗಿದೆ.

ಕೆಲವನ್ನು ಬಲ್ಲವರಿಂದ ಕಲಿತು, ಕೆಲವನ್ನು ಶಾಸ್ತ್ರಗಳಿಂದ ಕಲಿತು, ಇನ್ನು ಕೆಲವನ್ನು ಮಾಡುವವರನ್ನು ಕಂಡು ಕಲಿತು, ಮತ್ತೆ ಕೆಲವನ್ನು ಸುಜ್ಞಾನದಿಂದ ನೋಡಿ ಕಲಿತು , ಎಲ್ಲಕ್ಕಿಂತ ಮಿಗಿಲಾಗಿ ಸಜ್ಜನರ ಸಂಗದಿಂದ ಕಲಿಯಬಹುದು ಎಂಬ ಸೋಮೇಶ್ವರ ಶತಕದ ಮಾತುಗಳಂತೆ , ಶಿಕ್ಷಕನ ಬದುಕೇ ವಿದ್ಯಾರ್ಥಿಗಳಿಗೆ ಮಾದರಿಯಾಗಬಲ್ಲುದು. ಅಂತಹ ಶ್ರೇಷ್ಠ ವ್ಯಕ್ತಿಯಾಗುವ ಎಲ್ಲ ಅವಕಾಶಗಳು ಒಬ್ಬ ಒಳ್ಳೆಯ ಗುರುವಿಗಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸುವ ಗುರು ಜ್ಞಾನಿಯಾಗುತ್ತಾನೆ. ಶ್ರೇಷ್ಠ ಶಿಕ್ಷಕ ಶ್ರೇಷ್ಠ ಮಾರ್ಗದರ್ಶಕನಾದ ನಿದರ್ಶನಗಳು ನಮ್ಮ ಮುಂದೆ ಬಹಳಷ್ಟಿವೆ.

ಹಾಗೆಂದು ಶಿಕ್ಷಣ ಕ್ಷೇತ್ರ ಸದಾ ಭದ್ರವಾಗಿ ಇದೆಯೆಂದು ಅರ್ಥವಲ್ಲ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರ ಮುಂದೆ ಹಲವಾರು ಸವಾಲುಗಳಿವೆ. ಸರ್ಕಾರದ ನೀತಿಗಳು ಖಾಸಗಿ, ಅನುದಾನಿತ, ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಬೇರೆ ಬೇರೆ ರೀತಿಯಲ್ಲಿ ಅನ್ವಯವಾಗುತ್ತಿದೆ. ಶಿಕ್ಷಣದ ವಾಣಿಜ್ಯೀಕರಣದ ಕೂಗುಗಳ ಮಧ್ಯೆ ಮೌಲ್ಯಯುತ ಶಿಕ್ಷಣ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಹೆತ್ತವರು ಮಕ್ಕಳಿಗೆ ಜನ್ಮ ನೀಡಿದರೆ, ಶಿಕ್ಷಕರು ಅವರಿಗೆ ಬದುಕನ್ನು ನೀಡುತ್ತಾರೆ ಎಂದರೆ ತಪ್ಪಗಲಾರದು. ಹೊಸತನ್ನು ಕಂಡುಹಿಡಿಯುವ ಮತ್ತು ಸೃಜನಶೀಲ ಪ್ರವೃತ್ತಿಯ ಶಿಕ್ಷಕರು ಸಮಾಜಕ್ಕೂ ಮಾರ್ಗದರ್ಶಕರಾಗಿದ್ದು, ಸದಾ ಬದ್ಧತೆಯಿಂದ ಕೆಲಸ ನಿರ್ವಹಿಸಿದಾಗ ಹಲವಾರು ಸಮಸ್ಯೆಗಳಿಗೆ ಉತ್ತರ ನೀಡಬಲ್ಲರು. ಯಾವುದೇ ಸವಾಲುಗಳ ಮದ್ಯೆಯೂ ಭದ್ರವಾಗಿ ನಿಲ್ಲುವ, ಸದಾ ಬೇಡಿಕೆಯಲ್ಲಿ ಇರುವುದೇ ಈ ಕ್ಷೇತ್ರದ ವ್ಯೆಶಿಷ್ಟ್ಯ. ಪ್ರಸ್ತುತ ವ್ಯವಸ್ಥೆಯಲ್ಲಿ ಸರ್ಕಾರಿ ಅನುದಾನಿತ ಶಿಕ್ಷಕರ ವೇತನವೂ ಜೀವನಕ್ಕೆ ಭದ್ರತೆಯನ್ನು ಒದಗಿಸುವಂತಿದೆ. ವಿದ್ಯಾಧಿದೇವತೆ ಹರಸಿ ಅನುಗ್ರಹಿಸಿದ ಜ್ಞಾನ ಸಂಪತ್ತನ್ನು ತನ್ನ ಕೈಲಾದ ರೀತಿಯಲ್ಲಿ ಹೆಚ್ಚಿಸಿಕೊಳ್ಳುತ್ತಾ ಶಿಷ್ಯರಲ್ಲಿ ಯವುದೇ ರೀತಿಯ ಪಕ್ಷಪಾತವಿಲ್ಲದೆ ಪರಿಶುದ್ಧ ಹೃದಯದಿಂದ ಭೋದಿಸುವ ಪುಣ್ಯ ಕಾರ್ಯ ಶಿಕ್ಷಕ ವೃತ್ತಿ. ಜ್ಞಾನ, ವಿದ್ಯೆ, ಬುದ್ಧಿ, ಲೋಕ ಜ್ಞಾನ, ವ್ಯವಹಾರ ಜ್ಞಾನ, ಸಚ್ಚಾರಿತ್ಯ ನಡೆಯನ್ನು ಸಂಪಾದಿಸಿದ ಗುರುವಿಗೆ ಸದಾ ವಂದನೆಗಳು.

20 ವರ್ಷಗಳ ಶಿಕ್ಷಣ ಸೇವೆ ಕೊಟ್ಟಿರುವ ಅನುಭವ, ವಿದ್ಯಾರ್ಥಿಗಳ ಒಡನಾಟ, ಗಳಿಸಿರುವ ಪ್ರೀತಿ, ಪಡೆದಿರುವ ಗೌರವ ಅಪಾರ. ಶಿಕ್ಷಣವನ್ನು ನೀಡುತ್ತಾ, ವಿದ್ಯಾರ್ಥಿಗಳ ಒಳಗಿರುವ ವಿಶೇಷ ಪ್ರತಿಭೆಗಳನ್ನು ಗುರುತಿಸುವ , ಬೆಳೆಸುವ ಈ ಹುದ್ದೆ ಅತ್ಯಂತ ಆಪ್ತವಾದದ್ದು.

ಡಾ. ವಿಜಯ ಸರಸ್ವತಿ, ವಿಭಾಗ ಮುಖ್ಯಸ್ಥರು

ಸ್ನಾತಕೋತ್ತರ ವಾಣಿಜ್ಯ ವಿಭಾಗ ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್