ಆರ್ಟ್ ಡೈರೆಕ್ಟರ್ ಆಗುವ ಆಸೆ ಹೊತ್ತ ತೆರೆಮರೆಯ ಚಿತ್ರಕಲಾವಿದ ಜೀವನ್

ಚಿತ್ರಕಲೆಯು ಜೀವನ್ ಅವರ ಕಲಾ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿಕೊಟ್ಟಿದೆ. ಕಲರ್ ಪೇಂಟಿಂಗ್, ಕ್ಯಾನ್ವಸ್ ಪೇಂಟಿಂಗ್, ಪೆನ್ಸಿಲ್ ಪೆನ್ಸಿಲ್ ಪೋಟ್ರೈಟ್ ಇತ್ಯಾದಿ ವಿಧಗಳಲ್ಲಿ ಚಿತ್ರವನ್ನು ಬಿಡಿಸುತ್ತಾರೆ.

ಆರ್ಟ್ ಡೈರೆಕ್ಟರ್ ಆಗುವ ಆಸೆ ಹೊತ್ತ ತೆರೆಮರೆಯ ಚಿತ್ರಕಲಾವಿದ ಜೀವನ್
ಜೀವನ್ ಅವರು ಚಿತ್ರಿಸಿದ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 27, 2022 | 9:00 AM

ಕಲೆಯನ್ನು ಒಲಿಸಲು ಕೆಲವೊಬ್ಬರು ಮರಳಿ ಮರಳಿ ಪ್ರಯತ್ನವನ್ನು ಮಾಡುತ್ತಾರೆ , ಇನ್ನೂ ಕೆಲವರಿಗೆ ಕಲೆ ಎಂಬುವುದು ದೈವದತ್ತವಾಗಿ ಒಳಿದಿರುತ್ತದೆ. ಅಂತಹ ಒಂದು ಅದ್ಭುತ ಕಲಾ ಪ್ರತಿಭೆ ಜೀವನ್ ಕುಲಾಲ್. ಜೀವನ್ ಅಗಾಧ ಕಲಾ ಪ್ರತಿಭೆ. ಚಿಕ್ಕ ವಯಸ್ಸಿನಿಂದಲೇ ಚಿತ್ರಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರಕಲೆಯನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ.  ಆರನೇ ತರಗತಿಯಿಂದಲೇ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡ ಇವರು ಚಿತ್ರಕಲಾ ಕ್ಷೇತ್ರವನ್ನು ಆಸಕ್ತಿ ಕ್ಷೇತ್ರವನ್ನಾಗಿ ಮೈಗೂಡಿಸಿಕೊಂಡಿದ್ದಾರೆ.

ಚಿತ್ರಕಲೆಯು ಜೀವನ್ ಅವರ ಕಲಾ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿಕೊಟ್ಟಿದೆ. ಕಲರ್ ಪೇಂಟಿಂಗ್, ಕ್ಯಾನ್ವಸ್ ಪೇಂಟಿಂಗ್, ಪೆನ್ಸಿಲ್ ಪೆನ್ಸಿಲ್ ಪೋಟ್ರೈಟ್ ಇತ್ಯಾದಿ ವಿಧಗಳಲ್ಲಿ ಚಿತ್ರವನ್ನು ಬಿಡಿಸುತ್ತಾರೆ. ಆದರೆ ಹೆಚ್ಚಾಗಿ ಇವರು ಪೆನ್ಸಿಲ್ ಪೆನ್ಸಿಲ್ ಪೋಟ್ರೈಟ್ ಡ್ರಾಯಿಂಗ್‌ನಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಫೋಟೊದಲ್ಲಿರುವ ಭಾವಚಿತ್ರಗಳಂತೆ ಯಾವುದೇ ತಪ್ಪುಗಳಿಲ್ಲದೆ ನೈಜ್ಯವಾಗಿ ಚಿತ್ರ ಬಿಡಿಸಬೇಕೆಂಬ ಛಲದಿಂದ ಆರಂಭಿಸಿದ ಈ ಕಲೆಗೆ, ಇವರಿಗೆ ತಮ್ಮ ಮನೋಬಲವೇ ಸ್ಪೂರ್ತಿ ಎಂದು ಹೇಳುತ್ತಾರೆ ಜಿವನ್. ಶಾಲಾ ದಿನಗಳಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚಂದನವನದ ಸೆಲೆಬ್ರೆಟಿಗಳಾದ ರಕ್ಷಿತ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಶೈನ್ ಶೆಟ್ಟಿ ಮುಂತಾದವರ ಚಿತ್ರವನ್ನು ಬಿಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಇವರು ಭಾಜನರಗಿದ್ದಾರೆ. ಒಂದು ಸಮಯದಲ್ಲಿ ಚಿತ್ರಕಲೆಯನ್ನು ಮಾಡಲು ಬೇಕಾದ ಸಾಮಾಗ್ರಿಗಳನ್ನು ಕೊಳ್ಳಲು ಕಷ್ಟಕರವಾಗಿದ್ದಂತಹ ಪರಿಸ್ಥಿತಿಯಲ್ಲಿ ಚಿತ್ರಕಲೆಯಲ್ಲಿ ಕಮಿಷನ್ ವರ್ಕ್ನ್ನು ಮಾಡಲು ಆರಂಭಿಸಿದರು. ಅದರಿಂದ ಬಂದ ಹಣದಲ್ಲಿ ತನಗೆ ಚಿತ್ರಕಲೆಗೆ ಬೇಕಾದ ಸಾಮಾಗ್ರಿಗಳ್ಳನ್ನು ಕೊಂಡುಕೊಳ್ಳುತ್ತಿದ್ದರು. ಕೆಲವೊಂದು ಬಾರಿ ಕಾಲೇಜಿಗೆ ಬಂಕ್ ಮಾಡಿ ಚಿತ್ರಕಲೆ ಮಾಡಲು ತನ್ನ ಸಮಯವನ್ನು ಮೀಸಲಿಡುತ್ತಿದ್ದರು.

ತನ್ನ ಸಿವಿಲ್ ಇಂಜಿನಿಯರಿಂಗ್ ಕೆಲಸದ ಜೊತೆ ಜೊತೆಗೆ ಬಿಡುವಿನ ಸಮಯದಲ್ಲಿ ಚಿತ್ರಕಲೆ ಮಾಡುವುದರಲ್ಲಿ ಸಮಯವನ್ನು ತೊಡಗಿಸಿಕೊಂಡಿರುವ ಇವರಿಗೆ ಹಿರಿತೆರೆ ಹಾಗೂ ಕಿರು ತೆರೆಯಲ್ಲಿ ಆರ್ಟ್ ಡೈರೆಕ್ಟರ್ ಆಗಿ ಕೆಲಸ ಮಾಡುವಾಸೆ. ಪ್ರತಿಭೆ ಇದ್ದರೂ ಇನ್ನು ಕೂಡಾ ಸರಿಯಾದ ವೇದಿಕೆ ಇವರಿಗೆ ಸಿಕ್ಕಿಲ್ಲ. ಒಳ್ಳೆಯ ಅವಕಾಶ ಸಿಕ್ಕರೆ ಕಲಾ ಕ್ಷೇತ್ರದಲ್ಲೇ ತನ್ನ ವೃತ್ತಿಯನ್ನು ಮುಂದುವರೆಸಬೇಕೆನ್ನುವ ಆಸೆ ಇವರದು. ಇವರೆಗೆ ಸುಮಾರು 800 ಕ್ಕೂ ಅಧಿಕ ಚಿತ್ರಕಲೆಯನ್ನು ಬಿಡಿಸಿರುವ ಜೀವನ್ ಅವರ ಈ ಕಲೆಗೆ ತಾಯಿ ಸುಮತಿ, ತಂದೆ ರವಿ, ಸ್ನೇಹಿತ ನಿತೀನ್ ಗಾಣಿಗ, ಅಣ್ಣ ಪ್ರವೀಣ್ ಹಾಗೂ ಇನ್ನೂ ಅನೇಕ ಸ್ನೇಹಿತರು ಪ್ರೋತ್ಸಾಹ ನೀಡುತ್ತಿದ್ದಾರೆ.

ಮಧುಶ್ರೀ ಅಂಚನ್ ಸಜೀಪನಡು

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?