Keerthana Balyaya: ತಮ್ಮ ಕೈ ಚಳಕದ ಮೂಲಕ ಕಲೆಗೆ ಜೀವ ತುಂಬುವ ಕಲೆಗಾರ್ತಿ ಕೀರ್ತನಾ ಬಲ್ಯಾಯ

ಚಿತ್ರಕಲೆಯಲ್ಲಿ ಯಾವುದೇ ತರಬೇತಿಯನ್ನು ಪಡೆಯದೆ ತಮ್ಮ ಹವ್ಯಾಸಿ ಚಿತ್ರಕಲೆಯನ್ನು ಇಲ್ಲಿಯವರೆಗೂ ಬೆಳೆಸಿಕೊಂಡು ಬಂದಿರುವುದು ಇವರ ವಿಶೇಷತೆ.

Keerthana Balyaya: ತಮ್ಮ ಕೈ ಚಳಕದ ಮೂಲಕ ಕಲೆಗೆ ಜೀವ ತುಂಬುವ ಕಲೆಗಾರ್ತಿ ಕೀರ್ತನಾ ಬಲ್ಯಾಯ
Artist Keerthana
Edited By:

Updated on: Nov 01, 2022 | 11:50 AM

ಕಲೆಗಾರರ ಕೈಯಲ್ಲಿ ಒಂದು ಪೆನ್ನು , ಹಾಳೆ ಇದ್ದರೆ ಸಾಕು ಏನೋ ಗೀಚಿ ಅದಕ್ಕೆ ಜೀವ ತುಂಬುವ ಶಕ್ತಿ ಅವರ ಕಲೆಗೆ ಇದೆ. ಅಂಥದೊಂದು ನಿದರ್ಶನ ಇಲ್ಲಿದೆ. ತಮ್ಮ ಕೈಚಳಕದ ಮೂಲಕ ಸಾಕಷ್ಟು ಚಿತ್ರಗಳಿಗೆ ಜೀವ ನೀಡಿದ್ದಾರೆ ಕೀರ್ತನಾ ಬಲ್ಯಾಯ.

ಮೂಲತಃ ಮಂಗಳೂರಿನವರಾದ ಇವರು ಎಂ ಎಸ್ ಸಿ ಮುಗಿಸಿದ್ದು, ಇದೀಗ ಸೈನಿಕನ ಪತ್ನಿಯಾಗಿ ಅಹಮದಾಬಾದ್ ನಲ್ಲಿ ನೆಲೆಸಿದ್ದಾರೆ. ಚಿತ್ರಕಲೆಯಲ್ಲಿ ಯಾವುದೇ ತರಬೇತಿಯನ್ನು ಪಡೆಯದೆ ತಮ್ಮ ಹವ್ಯಾಸಿ ಚಿತ್ರಕಲೆಯನ್ನು ಇಲ್ಲಿಯವರೆಗೂ ಬೆಳೆಸಿಕೊಂಡು ಬಂದಿರುವುದು ಇವರ ವಿಶೇಷತೆ.

ಚಿತ್ರಕಲೆ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಇವರು ತಮ್ಮ ಶಾಲಾ ದಿನಗಳಲ್ಲೇ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದರು. ನಂತರದ ದಿನಗಳಲ್ಲಿ ತಮ್ಮ ಚಿತ್ರಕಲೆಗೆ ಪೂರಕವಾಗುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕೆಲವೊಂದು ಆರ್ಟ್​ ಟಿಪ್ಸ್ ವಿಡಿಯೊಗಳು, ಪೋಸ್ಟ್ ಗಳನ್ನು ನೋಡಿ ತಮ್ಮ ಹವ್ಯಾಸಿ ಚಿತ್ರಕಲೆಯನ್ನು ಇನಷ್ಟು ಬೆಳೆಸಿದ್ದಾರೆ.

ನನ್ನ ಈ ಚಿತ್ರಕಲೆಗೆ ನನ್ನ ತಾಯಿಯೇ ಸ್ಫೂರ್ತಿ. ಅವರಿಂದಲೇ ನನಗೆ ಈ ಕಲೆ ಬಂದಿದೆ. ಹಾಗೆ ಪ್ರತಿಯೊಂದು ಸಂದರ್ಭದಲ್ಲಿಯೂ ನನ್ನ ಅಮ್ಮ ನನಗೆ ಜೊತೆಯಾಗಿ ನಿಲ್ಲುತ್ತಾರೆ ಎಂದು ಹೇಳುತ್ತಾರೆ ಕೀರ್ತನಾ.

ಇದನ್ನು ಓದಿ: ಅನ್ಯಭಾಷೆ ಕಲಿಯುವುದು ಅನಿವಾರ್ಯ, ಹಾಗೆಂದು ಕನ್ನಡ ಮರೆಯುವುದು ಅನ್ಯಾಯ

ಮುಂಚೆ ನನ್ನ ಚಿತ್ರಕಲೆಯು ಕೇವಲ ಕೆಲವೊಂದು ಇಷ್ಟು ಜನರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ನಾನಿವಾಗ ಸಾಮಾಜಿಕ ಜಾಲತಾಣಗಳಲ್ಲೂ ನನ್ನ ಚಿತ್ರಕಲೆಯನ್ನು ಪೋಸ್ಟ್ ಮಾಡುವುದರಿಂದ ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿರುವ ಖುಷಿ ತಂದಿದೆ ಎಂದು ಇವರು ಹೇಳುತ್ತಾರೆ.

ಇವರ ಈ ಕಲೆ ಮುಂದೆ ಇನ್ನಷ್ಟು ಬೆಳೆದು ಸಾಕಷ್ಟು ಜನರಿಗೆ ಸ್ಪೂರ್ತಿಯಾಗಲಿ. ಇವರ ಈ ಕಲೆಯನ್ನು ಗುರುತಿಸಿ ಸಾಕಷ್ಟು ಅವಕಾಶಗಳು ಒದಗಿ ಬರಲು ಎಂದು ಆಶೀಸೋಣ.