Karnataka Rajyotsava: ಕನ್ನಡ ಭಾಷೆ ಬಳಕೆ ಮಾಡುವಂತೆ ಕನ್ನಡಿಗರೇ ಕನ್ನಡಿಗರನ್ನು ಒತ್ತಾಯಿಸುವ ಪರಿಸ್ಥಿತಿ ಯಾಕೆ?

ರಾಜ್ಯೋತ್ಸವ ತಿಂಗಳ ಕಾಲ ಎಲ್ಲೆಡೆ ಕನ್ನಡ ಡಿಂಡಿಮ ಮೊಳಗಲಿದೆ. ಆದರೆ ಇಂದು ಕನ್ನಡ ಮಾತನಾಡುವಂತೆ, ಕನ್ನಡ ಭಾಷೆ ಬಳಕೆ ಮಾಡುವಂತೆ ಕನ್ನಡಿಗರೇ ಕನ್ನಡಿಗರನ್ನು ಒತ್ತಾಯಿಸುವ ಪರಿಸ್ಥಿತಿ ಇದೆ.

Karnataka Rajyotsava: ಕನ್ನಡ ಭಾಷೆ ಬಳಕೆ ಮಾಡುವಂತೆ ಕನ್ನಡಿಗರೇ ಕನ್ನಡಿಗರನ್ನು ಒತ್ತಾಯಿಸುವ ಪರಿಸ್ಥಿತಿ ಯಾಕೆ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2022 | 10:26 AM

ಕನ್ನಡ ರಾಜ್ಯೋತ್ಸವ ಆಚರಣೆ ಕನ್ನಡಿಗರಿಗೆ ಭಾವಣಾತ್ಮಕ ಕ್ಷಣ. ಅದು ನವೆಂಬರ್ ತಿಂಗಳ ಸಡಗರ, ಸಂಭ್ರಮ. ಕೆಲವರ ಪಾಲಿಗಂತೂ ಅದು ಅಕ್ಷರಶಃ ಸುಗ್ಗಿಕಾಲ. ವರ್ಷವಿಡೀ ಕನ್ನಡದ ಜಾಗಟೆ ಭಾರಿಸುವವರ ಪಾಲಿಗೆ ರಾಜ್ಯೋತ್ಸವ ಹಬ್ಬ. ನವೆಂಬರ್ ಬಂತೆಂದರೆ ರಾಜ್ಯದ ಉದ್ದಗಲದಲ್ಲಿ ಕನ್ನಡದ ಸದ್ದುಗದ್ದಲ. ಕರ್ನಾಟಕದಲ್ಲಿ ಮಾತ್ರವಲ್ಲ, ಹೊರ ರಾಜ್ಯಗಳಲ್ಲಿ, ಕೆಲ ಹೊರದೇಶಗಳಲ್ಲೂ ಕನ್ನಡೋತ್ಸವದ ಕಲರವ ಕೇಳಿಬರುತ್ತದೆ.

ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸುವುದು ಕನ್ನಡಾಭಿಮಾನದ ಸಂಕೇತ ಎಂದು ಭಾವಿಸುವ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಉತ್ಸವ ಆಚರಣೆಗಾಗಿಯೇ ಪ್ರತಿ ವರ್ಷ ಹೊಸ ಸಂಘಟನೆಗಳು ಹುಟ್ಟಿಕೊಳ್ಳುತ್ತವೆ. ಇಂತಹ ವಾತಾವರಣದ ನಡುವೆಯೂ ಕೆಲವು ಸಂಘಟನೆಗಳು ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿವೆ. ನಾಡುನುಡಿಗೆ ದುಡಿದವರನ್ನು ಗುರುತಿಸಿ ರಾಜ್ಯೋತ್ಸವ ವೇದಿಕೆಗಳಿಗೆ ಕರೆತಂದು ಸನ್ಮಾನಿಸುತ್ತಿವೆ. ಕನ್ನಡ ಸಂಘಟನೆಗಳು ಮಾತ್ರವೇ ಅಲ್ಲ, ಸರ್ಕಾರವು ದೊಡ್ಡ ಮಟ್ಟದಲ್ಲಿ ರಾಜ್ಯೋತ್ಸವ ಆಚರಿಸುತ್ತಿದೆ. ವರ್ಷದಿಂದ ವರ್ಷಕ್ಕೆ ರಾಜ್ಯೋತ್ಸವದ ಸಂಭ್ರಮ ಇಮ್ಮಡಿಗೊಳ್ಳುತ್ತಿದೆ.

ಹಲವು ಆಡಳಿತ ವ್ಯವಸ್ಥೆಯಲ್ಲಿ ಹಂಚಿ ಹೋಗಿದ್ದ ಕನ್ನಡಿಗರು ಒಂದು ರಾಜ್ಯದ ವ್ಯಾಪ್ತಿಗೆ ಸೇರಿದ ಸಂದರ್ಭವನ್ನು ರಾಜ್ಯೋತ್ಸವವನ್ನಾಗಿ ಆಚರಿಸುತ್ತಿದ್ದೇವೆ. ಕನ್ನಡಿಗರ ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು 1956ರ ನವೆಂಬರ್ 1ರಂದು ಭಾರತ ಸರ್ಕಾರ ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ಮರುವಿಂಗಡಣೆ ಮಾಡಿದ್ದರಿಂದ ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಮುಂದೆ ರಾಜ್ಯ 1973 ನವೆಂಬರ್ 1ರಂದು ಕರ್ನಾಟಕ ಎಂದು ಮರು ನಾಮಕರಣವಾಯಿತು.

ಇದನ್ನು ಓದಿ:  ಅನ್ಯ ಭಾಷೆ ಕಲಿಯುವುದು ಅನಿವಾರ್ಯ ಆದರೆ ನಮ್ಮ ಕನ್ನಡ ಭಾಷೆ ಮರೆಯುವುದು ಅನ್ಯಾಯ

ರಾಜ್ಯೋತ್ಸವ ತಿಂಗಳ ಕಾಲ ಎಲ್ಲೆಡೆ ಕನ್ನಡ ಡಿಂಡಿಮ ಮೊಳಗಲಿದೆ. ಆದರೆ ಇಂದು ಕನ್ನಡ ಮಾತನಾಡುವಂತೆ, ಕನ್ನಡ ಭಾಷೆ ಬಳಕೆ ಮಾಡುವಂತೆ ಕನ್ನಡಿಗರೇ ಕನ್ನಡಿಗರನ್ನು ಒತ್ತಾಯಿಸುವ ಪರಿಸ್ಥಿತಿ ಇದೆ. ಒಂದು ಕಾಲದಲ್ಲಿ ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ ಮತ್ತು ಇಂಗ್ಲೀಷ್ ಭಾಷಿಕರ ವಿರುದ್ಧ ಹೋರಾಟ ನಡೆಸಿದ್ದ ಕನ್ನಡ ಮಾತನಾಡುವಂತೆ ಚಳುವಳಿ ಹಮ್ಮಿಕೊಂಡಿದ್ದ ಕನ್ನಡಿಗರು ಇದೀಗ ಕನ್ನಡಿಗರನ್ನೇ ತಮ್ಮ ಭಾಷೆ ಉಳಿಸುವಂತೆ ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿಯಾಗಿದೆ‌.

ಬಸವಣ್ಣರ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ರೂಪುರೇಷೆಗೊಂಡಿತು

ಬೆಂಗಳೂರಿನಲ್ಲಿ ಕನ್ನಡವನ್ನು ಹುಡುಕುವ ದಯನೀಯ ಸ್ಥಿತಿಯಿದೆ. ಬೇರೆ ನಗರಗಳ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿವರೆಗೆ ಹರಡಿತ್ತು. ಇಂತಹ ಕನ್ನಡ ನಾಡು ಜಗತ್ತಿನ ಪ್ರಜಾತಂತ್ರ ವ್ಯವಸ್ಥೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂಬುದು ಸಹ ಗಮನಾರ್ಹ. ಪ್ರಜಾಪ್ರಭುತ್ವ ವ್ಯವಸ್ಥೆ ಮೊದಲು ಸ್ಥಾಪಿತಗೊಂಡಿದ್ದೇ ಕರ್ನಾಟಕದಲ್ಲಿ. ಪ್ರಜಾಪ್ರಭುತ್ವ ವಿಚಾರದಲ್ಲಿ ನಾವು ಇಂಗ್ಲೆಂಡ್ ಸ್ಮರಿಸುತ್ತೇವೆ. ಹೌಸ್ ಆಫ್ ಕಾಮರ್ಸ್, ಹೌಸ್ ಆಫ್ ಲಾರ್ಡ್ಸ್, ಮ್ಯಾಗ್ನಾಕಾರ್ಟ್ ಒಪ್ಪಂದ ಹುಟ್ಟಿಕೊಂಡ ಬಗೆ ಹೀಗೆ ಹಲವು ವಿಚಾರಗಳನ್ನು ಉದಾಹರಣೆ ಕೊಡುತ್ತೇವೆ.

12ನೇ ಶತಮಾನದಲ್ಲಿ ಬಸವಣ್ಣರ ಕಾಲದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ರೂಪುರೇಷೆಗೊಂಡಿತು. ಬಸವಣ್ಣರ ಕಾಲದ ಚಿಂತಕರ ಚಾವಡಿ ಮೂಲಕ ಪ್ರಜಾತಂತ್ರ ವ್ಯವಸ್ಥೆಯ ಬೀಜ ಬಿತ್ತಲಾಯಿತು. ಯಾವುದೇ ಸಮಸ್ಯೆಗೆ ಚರ್ಚೆ, ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳುವುದಕ್ಕೆ ಆಗಲೇ ಸ್ಪಷ್ಟ ರೂಪ ದೊರೆಯಿತು.

ಚಿಂತಕರ ಚಾವಡಿಯ ಮೊದಲ ಸಭಾಧ್ಯಕ್ಷರು ಅಲ್ಲಮಪ್ರಭು

ಆಗಿನ ಚಿಂತಕರ ಚಾವಡಿಯ ಮೊದಲ ಸಭಾಧ್ಯಕ್ಷ ಅಲ್ಲಮಪ್ರಭು ಎಂದು ಹೇಳಿಕೊಳ್ಳುವವರ ನಾವು ಅಲ್ಲಮರ ನೇತ್ರತ್ವದಲ್ಲಿ ಸಭಾ ಮಂಟಪದಲ್ಲಿ ಕನ್ನಡದಲ್ಲಿ ಚರ್ಚೆಗಳಾಗುತ್ತಿದ್ದವು. ರಾಜಕೀಯ ವ್ಯವಸ್ಥೆಯಲ್ಲಿ ಸಹ ಕನ್ನಡ ಹುಡುಕುವ ಪರಿಸ್ಥಿತಿ ಇದೆ. ಯಾವುದೇ ರಾಜಕೀಯ ಪಕ್ಷ ಕನ್ನಡಕ್ಕೆ ಪ್ರಧಾನ ಆದ್ಯತೆ ನೀಡುತ್ತಿಲ್ಲ. ತನ್ನ ಪ್ರಣಾಳಿಕೆಯಲ್ಲಿ ಕನ್ನಡಪರ ಸಮಸ್ಯೆಗಳಿಗೆ ಪರಿಹಾರ ನೀಡುವ ವಾಗ್ದಾನ ಕೊಡುತ್ತಿಲ್ಲ.

ಆಡಳಿತ ಭಾಷೆ ಕನ್ನಡವಾದರೂ ಅದು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಮತ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವ ರಾಜಕೀಯ ನಾಯಕರು ಕನ್ನಡ, ಕನ್ನಡಿಗರನ್ನು ಅಸಡ್ಡೆಯಿಂದ ವರ್ತಿಸುವುದನ್ನು ನೋಡುತ್ತಿದ್ದಾರೆ. ದುರದೃಷ್ಟವೆಂದರೆ ಕನ್ನಡ ಇದೀಗ ಮತಗಳನ್ನು ತಂದುಕೊಡುವ ಭಾಷೆಯಾಗಿಯು ಉಳಿದಿಲ್ಲ.

ಕನ್ನಡ ಡಿಂಡಿಮ ಮೊಳಗಬೇಕಾಗಿದೆ. ರಾಜ್ಯೋತ್ಸವ ಘೋಷಣೆ ಭಾಷಣಗಳಿಗೆ ಸೀಮಿತವಾಗದೆ ಕನ್ನಡ ಜಾಗೃತಿಗೆ ವೇದಿಕೆ ಆಗಬೇಕಾಗಿದೆ. ಕೇಂದ್ರ ಸರ್ಕಾರ ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಪ್ರಕಟಿಸಿ ದಶಕ ಕಳೆದರೂ ಸಿಗಬೇಕಾದ ಸವಲತ್ತುಗಳು ಇಂದಿಗೂ ಪಡೆಯಲು ಸಾಧ್ಯವಾಗಿಲ್ಲ. ನವೆಂಬರ್ ತಿಂಗಳಲ್ಲಿ ಕನ್ನಡಿಗರ ಆತ್ಮಾಭಿಮಾನದಲ್ಲಿ ವಿಶಿಷ್ಟ ಸ್ಥಾನವಿದೆ. ನಾಡಾಭಿಮಾನಿಗಳಿಗೆ ನವೆಂಬರ್ ಮಾಸ ಕನ್ನಡ ಮಯವಾಗಿಸುವ ತವಕ. ಎಲ್ಲಿ ನೋಡಿದರೂ ಕನ್ನಡ ಬಾವುಟ ಹಾರಾಡುತ್ತವೆ. ಕನ್ನಡಾಭಿಮಾನ ಬಹಿರಂಗವಾಗಿ ಪ್ರಕಟವಾಗುವ ತಿಂಗಳಿದು.

ಸಿದ್ಧಾರ್ಥ್.ಎಸ್

ಗೋಕಾಕ

ನಿಖಿಲ್​ನನ್ನು ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನ ಮಾಡುತ್ತಾರೆ: HDK
ನಿಖಿಲ್​ನನ್ನು ಜನರು ಅಭಿಮನ್ಯು ಮಾಡುವುದಿಲ್ಲ, ಅರ್ಜುನ ಮಾಡುತ್ತಾರೆ: HDK
ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಹಾಸನಾಂಬೆ ದರ್ಶನ ಪಡೆದ ಬಳಿಕ ಡಿ ಬಾಸ್ ಬಗ್ಗೆ ಮಾತಾಡಿದ ಗೆಳೆಯ ತರುಣ್ ಸುಧೀರ್
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಾರ್ಥನೆ ವೇಳೆ ಬಿತ್ತು ಹೂವು: ಕುಮಾರಸ್ವಾಮಿಗೆ ಶುಭ ಸೂಚನೆನಾ?
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಪ್ರಥಮ ಬಾರಿಗೆ ಚಾಮರಾಜನಗರಕ್ಕೆ ರಸಗೊಬ್ಬರ ಹೊತ್ತು ತಂದ ರೈಲು!
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಬಿಗ್​ಬಾಸ್ ಮನೆಯಲ್ಲಿ ಮಾನಸ ಹೇಗಿರಬೇಕು? ಸಲಹೆ ಕೊಟ್ಟ ಹನುಮಂತು
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ಮಾಧುರಿ ಜೊತೆ ನೃತ್ಯ ಮಾಡುವಾಗ ವೇದಿಕೆ ಮೇಲೆ ಬಿದ್ದ ನಟಿ ವಿದ್ಯಾ ಬಾಲನ್
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ವಕ್ಫ್​ ಮಂಡಳಿಯವರು ದೇವಸ್ಥಾನಕ್ಕೂ ನೋಟಿಸ್ ನೀಡುತ್ತಿದ್ದಾರೆ: ಯತ್ನಾಳ್​
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ, ಪುತ್ರನ ಗೆಲುವಿಗಾಗಿ ವಿಶೇಷ ಪೂಜೆ
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
30 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಇದ್ದ ಬ್ಯಾಗ್ ವಾಪಸ್ ನೀಡಿದ ಕಂಡಕ್ಟರ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್
ಹೊನವಾಡ ಗ್ರಾಮದ 11 ಎಕರೆ ಜಮೀನು ಮಾತ್ರ ವಕ್ಫ್​ಗೆ ಸೇರಿದ್ದು; ಎಂ ಬಿ ಪಾಟೀಲ್