Karnataka Rajyotsava 2022: ಮಾತೃ ಭಾಷೆ -ಹೆತ್ತ ತಾಯಿಯ ಮರೆಯದಿರೋಣ
ಕನ್ನಡ ಭಾಷೆ ಉಳಿಸಲು ಹೊರಟ ಸರಕಾರ ವರ್ಷದಲ್ಲಿ ಸಾವಿರಕ್ಕಿಂತ ಮಿಗಿಲು ಕನ್ನಡ ಮಾಧ್ಯಮ ಶಾಲೆಗಳನ್ನು ಬಂದ್ ಮಾಡ್ತಾ ಇರೋದು ಬೇಸರದ ಸಂಗತಿ.
ಕನ್ನಡ ಭಾಷೆ ಉಳಿಸಲು ಹೊರಟ ಸರಕಾರ ವರ್ಷದಲ್ಲಿ ಸಾವಿರಕ್ಕಿಂತ ಮಿಗಿಲು ಕನ್ನಡ ಮಾಧ್ಯಮ ಶಾಲೆಗಳನ್ನು ಬಂದ್ ಮಾಡ್ತಾ ಇರೋದು ಬೇಸರದ ಸಂಗತಿ. ಇಂದು ಕನ್ನಡ ಭಾಷೆ ಉಳಿದಿದೆ ಅಂದ್ರೆ ಯಕ್ಷಗಾನ ಮತ್ತು ರಂಗ ಭೂಮಿಯಿಂದ ಮಾತ್ರ.
ಪ್ರತಿ ಸರ್ಕಾರಿ ಕಚೇರಿ ಮತ್ತು ಖಾಸಗಿ ಇನ್ನಿತರ ಸಂಸ್ಥೆಗಳು ನಾಮಫಲಕ ಕಡ್ಡಾಯವಾಗಿ ಹಾಕುವುದರ ಮೂಲಕ, ಕಚೇರಿ ಬ್ಯಾಂಕ್ಗಳಲ್ಲಿ ಕನ್ನಡದವರಿಗೆ ಉದ್ಯೋಗ ನೀಡುವ ಮೂಲಕ ಕನ್ನಡ ಭಾಷೆ ಉಳಿಸುವ ಪ್ರಯತ್ನ ಮಾಡಬಹುದು. ಪ್ರತಿ ಹಳ್ಳಿ ಹಳ್ಳಿಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಸಾಹಿತ್ಯದ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ನಮ್ಮ ನಾಡಿನ ಭಾಷೆಯ ಬಗ್ಗೆ ಅರಿವು ಮೂಡಿಸೋಣ.
ಅಚ್ಚ ಕನ್ನಡದ ಸ್ವಚ್ಛ ಭಾಷೆಯ ಉಳಿಸಿ ಬೆಳೆಸುವಲ್ಲಿ ಯುವ ಜನರು ಆಸಕ್ತಿ ಹೊಂದಬೇಕು. ನಮ್ಮ ಮಾತೃ ಭಾಷೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಮೂಡಲಿ. ರಾಜ್ಯೋತ್ಸವದ ಒಂದು ದಿನ ಮಾತ್ರ ಉದ್ದುದ್ದ ಭಾಷಣ ಮಾಡೋ ಬದಲು ಸಮಗ್ರ ಕರ್ನಾಟಕ ನಿರ್ಮಾಣದ ಕೈಂಕರ್ಯ ಮಾಡೋಣ.
ಸರ್ಕಾರದ ಜೊತೆಗೆ ನಮ್ಮ ಕರ್ತವ್ಯವು ಇದೆ, ಕನ್ನಡ ಉಳಿಸಲು ಬೆಳೆಸಲು ಅನೇಕ ರೀತಿ ಕಾರ್ಯಕ್ರಮಗಳನ್ನು ಸಂಘಟನೆಗಳು ಮಾಡಬೇಕಿದೆ. ಮೊದಲು ನಾವು ಕನ್ನಡದಲ್ಲಿ ಮಾತನಾಡುವ, ಮತ್ತೊಬ್ಬರಿಗೆ ಕನ್ನಡವನ್ನು ಕಲಿಸುವ. ಮಾತೃ ಭಾಷೆ ಹೆತ್ತ ತಾಯಿಯ ಗೌರವಿಸೋಣ.
ನಾರಾಯಣ ಕುಂಬ್ರ
Published On - 9:42 am, Tue, 1 November 22