AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rajyotsava: ಅನ್ಯಭಾಷೆ ಕಲಿಯುವುದು ಅನಿವಾರ್ಯ, ಹಾಗೆಂದು ಕನ್ನಡ ಮರೆಯುವುದು ಅನ್ಯಾಯ

ಬೇರೆ ಭಾಷೆಯನ್ನು ಕಲಿಯುವುದು ಅನಿವಾರ್ಯ ಆದರೆ ನಮ್ಮ ಕನ್ನಡವನ್ನು ಮರೆಯುವುದು ಉತ್ತಮವಲ್ಲ. ವಿದೇಶಕ್ಕೆ ಹೋದರೆ ಕನ್ನಡವನ್ನು ಸಂಪೂರ್ಣವಾಗಿ ಮರೆತುಬಿಡುವ ಜನ. ನಗರದವರಿಗಂತೂ ಕನ್ನಡವೇ ಬರೆಯಲು ಓದಲು ಬರುವುದಿಲ್ಲ. ನಮ್ಮ ಸಹಜೀವನದಲ್ಲಿ ಕನ್ನಡ ಯಶಸ್ಸನ್ನು ನೀಡುತ್ತದೆ ಎಂಬುದನ್ನು ಎಲ್ಲೆಡೆ ಹರಡಬೇಕು.

Karnataka Rajyotsava: ಅನ್ಯಭಾಷೆ ಕಲಿಯುವುದು ಅನಿವಾರ್ಯ, ಹಾಗೆಂದು ಕನ್ನಡ ಮರೆಯುವುದು ಅನ್ಯಾಯ
Karnataka Rajyotsava
TV9 Web
| Edited By: |

Updated on:Nov 01, 2022 | 11:12 AM

Share

ಪ್ರಸ್ತುತ ಕಾಲದಲ್ಲಿ ಕನ್ನಡವನ್ನು ಬಿಟ್ಟು ಬೇರೆ ಭಾಷೆಯನ್ನು ಹೆಚ್ಚಾಗಿ ಉಪಯೋಗಿಸುವುದನ್ನು ಕಾಣಬಹುದು. ಇದು ತಪ್ಪು, ನಮ್ಮ ಭಾಷೆಯನ್ನು ಬೆಳೆಸುವವರು ನಾವೇ ಅದನ್ನು ಬಿಟ್ಟು ಅನ್ಯ ಭಾಷೆಗೆ ಪ್ರೋತ್ಸಾಹ ನೀಡುವುದು ಶೋಚನೀಯ ಸಂಗತಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ ಹೃದಯದಲ್ಲೂ ಕನ್ನಡ ಪ್ರೇಮ ಇರಬೇಕು. ಆಗ ಮಾತ್ರ ಕನ್ನಡಾಂಬೆ ಸಂತೋಷವಾಗುವುದು.

ಕನ್ನಡಾಂಬೆಗೆ ಶಿರಬಾಗಿ ನಮಿಸಿದರೆ ಯಾವತ್ತೂ ಕೈಬಿಡುವುದಿಲ್ಲ. ಮಗುವಿಗೆ ಬಾಲ್ಯದಿಂದಲೇ ಡ್ಯಾಡಿ ಮಮ್ಮಿ ಎಂದು ಅನ್ಯ ಭಾಷೆಯನ್ನು ಹೇಳಿಕೊಟ್ಟು ಕನ್ನಡದ ಅಪ್ಪ ಅಮ್ಮ ಪದಕ್ಕೆ ಬೆಲೆ ಇಲ್ಲದಂತಾಗಿದೆ. ಕನ್ನಡ ಭಾಷೆಯನ್ನು ಮಾತಾಡಿದರೆ ಬೇರೆಯವರ ಎದುರು ಸಣ್ಣದಾಗಿ ಕಾಣುತ್ತೇವೆ ಎನ್ನುವ ಮನೋಭಾವನೆಯನ್ನು ಮೊದಲು ತೊಡೆದು ಹಾಕಬೇಕು. ವಿದ್ಯಾರ್ಥಿ ಜೀವನದಲ್ಲಿ ಕನ್ನಡವನ್ನು ಕಲಿಯಬೇಕೆಂಬುದನ್ನು ಕಡ್ಡಾಯ ಮಾಡಬೇಕು.

ಬೇರೆ ಭಾಷೆಯನ್ನು ಕಲಿಯುವುದು ಅನಿವಾರ್ಯ ಆದರೆ ನಮ್ಮ ಕನ್ನಡವನ್ನು ಮರೆಯುವುದು ಉತ್ತಮವಲ್ಲ. ವಿದೇಶಕ್ಕೆ ಹೋದರೆ ಕನ್ನಡವನ್ನು ಸಂಪೂರ್ಣವಾಗಿ ಮರೆತುಬಿಡುವ ಜನ. ನಗರದವರಿಗಂತೂ ಕನ್ನಡವೇ ಬರೆಯಲು ಓದಲು ಬರುವುದಿಲ್ಲ. ನಮ್ಮ ಸಹಜೀವನದಲ್ಲಿ ಕನ್ನಡ ಯಶಸ್ಸನ್ನು ನೀಡುತ್ತದೆ ಎಂಬುದನ್ನು ಎಲ್ಲೆಡೆ ಹರಡಬೇಕು. ಎರಡನೇ ಭಾಷೆಯಾಗಿ ಕನ್ನಡ ಭಾಷೆಯನ್ನು ಅಧಿಕೃತವಾಗಿ ಸರ್ಕಾರವು ಘೋಷಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡಲು ಮುಜುಗರ ಪಡುವ ಜನರನ್ನು ಕಾಣಬಹುದು.

ಮುಜುಗರ ಪಡದೇ ಕನ್ನಡಿಗ ಎಂದು ಎದೆತಟ್ಟಿ ಹೇಳಬೇಕು. ಆಂಗ್ಲ ಭಾಷೆಯವರನ್ನು ಸಹ ಕನ್ನಡ ಮಾತನಾಡುವ ಹಾಗೆ ನಾವು ಮಾಡಬೇಕು ಎಲ್ಲವೂ ಸಾಧ್ಯ ನಮ್ಮಿಂದಲೇ. ಆಗ ಮಾತ್ರ ಪರಭಾಷೆಗಳಿಗೆ ನಮ್ಮ ಭಾಷೆಯ ಕುರಿತು ಗೌರವ ಬೆಳೆಯಲು ಸಾಧ್ಯ. ಕನ್ನಡವನ್ನು ಓದುವ ಮತ್ತು ಬರೆಯುವ ಸಂಸ್ಕೃತಿಯನ್ನು ಬಾಲ್ಯದಿಂದಲೇ ಅಳವಡಿಸಿಕೊಳ್ಳಬೇಕು. ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗಾಗಿ ಉಳಿಸುವುದೇ ನಮ್ಮ ಕರ್ತವ್ಯವಾಗಿರುತ್ತದೆ. ಕನ್ನಡ ಶಾಲೆಗಳು ದಿನೇ ದಿನೇ ಕಮ್ಮಿ ಆಗಿರುವುದು ಕಮ್ಮಿ ಆಗುತ್ತಿರುವುದು ವಿಷಾದವೇ ಸರಿ.

ಭೂ ನೆಲದ ಸಂಸ್ಕೃತಿ ಕನ್ನಡ ಭಾಷೆ ಅದನ್ನು ಅಳಿಯದ ಹಾಗೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಆಗಿರುತ್ತದೆ. ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ಕನ್ನಡದ ಕವಿಗಳಿಗೆ ಇವೆ. ಕನ್ನಡ ಭಾಷೆ ಸಾವಿರಾರು ಇತಿಹಾಸಗಳನ್ನು ಹೊಂದಿದ್ದು ಅದನ್ನು ಯುವಜನರಿಗೆ ತಿಳಿಸುವ ಹಾಗೂ ಪ್ರಚಾರ ಮಾಡುವ ಎಲ್ಲಾ ಕಾರ್ಯಗಳನ್ನು ಜಾರಿಗೊಳಿಸಬೇಕು. ಹಾಗಾಗಿ ನಮ್ಮ ಭಾಷೆಯನ್ನು ಮರೆಯದೆ ಪ್ರೀತಿಸುವುದು ನಮ್ಮ ಹಕ್ಕು.

ಕನ್ನಡವೇ ಸತ್ಯ.. ಕನ್ನಡವೇ ನಿತ್ಯ

ಜೈ ಕನ್ನಡಾಂಬೆ..

ಕೃತಿ ಬಲ್ಯಾಯ

Published On - 10:03 am, Tue, 1 November 22

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್