BBMP Budget: ಬಿಬಿಎಂಪಿ 11,157.83 ಕೋಟಿ ಗಾತ್ರದ ಆತ್ಮನಿರ್ಭರ್ ಬಜೆಟ್; ಇದರ ಹೈಲೈಟ್ಸ್

2023 BBMP Budget Highlights: ಪ್ರವಾಹ ಪರಿಸ್ಥಿತಿಯಿಂದ ಯಾವುದೇ ದೊಡ್ಡ ಹಾನಿಯಾಗದಿರಲು ವಿಶ್ವ ಬ್ಯಾಂಕ್ ನೆರವಿನೊಂದಿಗೆ 3,000 ಕೋಟಿ ರೂ ಮೊತ್ತದ ಸಮಗ್ರ ಯೋಜನೆ ಸಿದ್ಧಪಡಿಸಿ 2025-26 ರಲ್ಲಿ ಯೋಜನೆ ಜಾರಿಗೊಳಿಸಲು ಗುರಿ ಇಡಲಾಗಿದೆ.

BBMP Budget: ಬಿಬಿಎಂಪಿ 11,157.83 ಕೋಟಿ ಗಾತ್ರದ ಆತ್ಮನಿರ್ಭರ್ ಬಜೆಟ್; ಇದರ ಹೈಲೈಟ್ಸ್
ಬಿಬಿಎಂಪಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Ganapathi Sharma

Updated on:Mar 02, 2023 | 6:51 PM

ಬೆಂಗಳೂರು: ಚುನಾವಣೆ ಅತೀ ಸಮೀಪ ಇರುವ ಹೊತ್ತಿನಲ್ಲೇ ಬಿಬಿಎಂಪಿ 2023-24ರ ಬಜೆಟ್ (BBMP Budget 2023-24) ಮಂಡನೆಯಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ. ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ್ ಇಂದು ಗುರುವಾರ 11,157.83 ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದರು. ಮೂಲಸೌಕರ್ಯ ನಿರ್ಮಾಣಕ್ಕೆ ಈ ಬಜೆಟ್​ನಲ್ಲಿ ಹೆಚ್ಚು ಒತ್ತುಕೊಡಲಾಗಿದೆ. ಹಾಗೆಯೇ, ಆಸ್ತಿ ತೆರಿಗೆ ಪರಿಷ್ಕರಣೆ, ಬಿ ಖಾತೆ ವರ್ಗಾವಣೆ ಇತ್ಯಾದಿ ಕ್ರಮಗಳ ಮೂಲಕ ಆಡಳಿತದ ಖಜಾನೆ ತುಂಬುವುದಕ್ಕೆ ಗಮನ ಕೊಡಲಾಗಿದೆ.

ಪಾಲಿಕೆ‌ ಅಧಿಕಾರಿ ಸಿಬ್ಬಂದಿಯಲ್ಲಿ ಗುಣಾತ್ಮಕ ಪರಿವರ್ತನೆಯ ಮನೋಭಾವ ಬೆಳೆಸುವ ಸದುದ್ದೇಶದಿಂದ ಪ್ರತಿ ವರ್ಷ ನಾಡಪ್ರಭು ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಅದಕ್ಕೆ 2 ಲಕ್ಷ ರೂ. ಮೊತ್ತದ ಪುರಸ್ಕಾರ ನಿಗದಿ ಮಾಡಲಾಗಿದೆ. ಹಾಗೆಯೇ, ಬಿ ಖಾತೆ ಇರುವ ನಿವೇಶನಗಳನ್ನು ಎ ಖಾತೆಯಾಗಿ ಪರಿವರ್ತಿಸುವ ಕಾರ್ಯ ಈ ವರ್ಷ ಮಾಡುವುದಾಗಿ ಆಯವ್ಯಯದಲ್ಲಿ ಘೋಷಿಸಲಾಗಿದೆ. ಪ್ರವಾಹ ಪರಿಸ್ಥಿತಿಯಿಂದ ಯಾವುದೇ ದೊಡ್ಡ ಹಾನಿಯಾಗದಿರಲು ವಿಶ್ವ ಬ್ಯಾಂಕ್ ನೆರವಿನೊಂದಿಗೆ 3,000 ಕೋಟಿ ರೂ ಮೊತ್ತದ ಸಮಗ್ರ ಯೋಜನೆ ಸಿದ್ಧಪಡಿಸಿ 2025-25 ರಲ್ಲಿ ಯೋಜನೆ ಜಾರಿಗೊಳಿಸಲು ಗುರಿ ಇಡಲಾಗಿದೆ.

ಬಿಬಿಎಂಪಿ ಬಜೆಟ್ 2023-24 ಮುಖ್ಯಾಂಶಗಳು:

  • ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣಕ್ಕಾಗಿ ಒಟ್ಟು 210 ಕೋಟಿ
  • ಯಲಹಂಕ ಮೇಲ್ಸೇತುವೆ ಗ್ರೇಡ್ ಸೆಪರೇಟರ್​​ಗೆ 60 ಕೋಟಿ ರೂ.
  • ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ವಿತರಣೆ ವೇಳೆ $2 ಲಕ್ಷ ಪುರಸ್ಕಾರ
  • ಹೂಡಿ ಜಂಕ್ಷನ್, ಐಟಿಪಿಎಲ್, ಬಿಗ್ ಬಜಾರ್ ಜಂಕ್ಷನ್, ಹೋಪ್ ಫಾರಂ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 124 ಕೋಟಿ ರೂ
  • ಮಿನರ್ವ ಜಂಕ್ಷನ್ ಗ್ರೇಡ್ ಸೆಪರೇಟರ್​​ಗೆ 137 ಕೋಟಿ ರೂಪಾಯಿ
  • ಹಳೆ ಮದರಾಸು ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಮೇಲ್ಸೇತುವೆ ನಿರ್ಮಾಣಕ್ಕೆ 104 ಕೋಟಿ
  • ಕೊಳಗೇರಿ ಪ್ರದೇಶಗಳ ಅಭಿವೃದ್ಧಿಗೆ 80 ಕೋಟಿ ರೂ. ಮೀಸಲು
  • ಜನವಸತಿ ಪ್ರದೇಶಗಳಲ್ಲಿ 10 ಹೊಸ ಸಿಟಿ ಪ್ಲಾಜಾಗಳ ನಿರ್ಮಾಣ
  • ಪ್ಲಾಜಾಗಳಲ್ಲಿ ಕಾರಂಜಿ, ಆಟದ ಸ್ಥಳಗಳು, ಆಹಾರ ಮಳಿಗೆ ನಿರ್ಮಾಣ
  • ಒತ್ತುವರಿ ತೆರವುಗೊಳಿಸಲು ಪ್ರತಿ ವಲಯಕ್ಕೆ 1 ಕೋಟಿ ರೂಪಾಯಿ
  • ಅನಧಿಕೃತ ಕಟ್ಟಡ ತೆರವುಗೊಳಿಸಲು 10 ಕೋಟಿ ರೂ. ಮೀಸಲು
  • ಕಸಾಯಿಖಾನೆ ನಿರ್ವಹಣೆಗಾಗಿ 1 ಕೋಟಿ ರಪಾಯಿ ಮೀಸಲು
  • ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ ರೂಪಾಯಿ
  • ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣಕ್ಕಾಗಿ 210 ಕೋಟಿ ರೂ.
  • ಬೀದಿ ವ್ಯಾಪಾರಿಗಳ ವಲಯಗಳಿಗಾಗಿ 25 ಕೋಟಿ
  • ಬೀದಿ ಮರಗಳ ನೆಡುವಿಕೆಗೆ ಮತ್ತು ನಿರ್ವಹಣೆಗಾಗಿ 40 ಕೋಟಿ ರೂಪಾಯಿ ಮೀಸಲು
  • ಬಿ ಖಾತೆ ನಿರ್ವೇಶನಗಳನ್ನ ಕ್ರಮಬದ್ಧಗೊಳಿಸಿ ಎ ಖಾತೆ ನೀಡುವ ಯೋಜನೆ ಈ ವರ್ಷವೇ ಆರಂಭ
  • ರಸ್ತಡ ಚರಂಡಿ, ಪಾದಚಾರಿ ಮಾರ್ಗ ರಿಪೇರಿ ಹಾಗೂ ನಿರ್ವಹಣೆಗೆ 243 ವಾರ್ಡ್ ಗಳಿಗೂ ತಲಾ 30 ಲಕ್ಷ
  • ಈಗಾಗಲೇ ನಗರದಲ್ಲಿ ಇರುವ 42 ಮೇಲ್ಸೇತುವೆ, 28 ಕೆಳಸೇತುವೆಗಳ ನಿರ್ವಹಣೆಗೆ 20 ಕೋಟಿ
  • ರಸ್ತೆ ಗುಂಡಿ ಮುಚ್ಚುವಿಕೆಗೆ ತಲಾ 15 ಲಕ್ಷ
  • ಪಾದಚಾರಿ ಮಾರ್ಗ ನಿರ್ವಹಣೆಗೆ ತಲಾ 25 ಲಕ್ಷ
  • ಬೆಂಗಳೂರಿನಲ್ಲಿ 180 ಕೋಟಿ ವೆಚ್ಚದಲ್ಲಿ ಕೆಂಪಾಂಬುದಿಕೆರೆ- ಬುಲ್ ಟೆಂಪಲ್ ರಸ್ತಡ ಪರಿಸರ, ಸ್ಯಾಂಕಿ ಕೆರೆ – ಕಾಡು ಮಲ್ಲೇಶ್ವರ ದೇಗುಲದ ಪರಿಸರ ಹಾಗೂ ಹಲಸೂರು ಕೆರೆ + ಸೋಮೇಶ್ವರ ದೇಗುಲದ ಪರಿಸರ ಗಳನ್ನು ಪ್ರವಾಸಿ ಕಾರಿಡಾರ್ ಗಳಾಗಿ ಅಭಿವೃದ್ಧಿ
  • 50 ಕೋಟಿ ವೆಚ್ಚದಲ್ಲಿ 10 ಹೊಸ ಸಿಟಿ ಪ್ಲಾಜಾ ಗಳನ್ನು ಜನವಸತಿ ಪ್ರದೇಶಗಳಲ್ಲಿ ನಿರ್ಮಾಣ
  • ಪ್ಲಾಜಾಗಳಲ್ಲಿ ಕಾರಂಜಿ, ಆಟದ ಸ್ಥಳಗಳು, ಆಹಾರ ಮಳಿಗೆಗಳು ನಿರ್ಮಾಣ
  • 209 ಕೋಟಿ ವೆಚ್ಚದಲ್ಲಿ ಸ್ಥಗಿತಗೊಂಡಿರುವ 4 ತ್ಯಾಜ್ಯ ಶೇಖರಣಾ ಕೇಂದ್ರಗಳಲ್ಲಿ ಜೈವಿಕ‌ ಗಣಿಗಾರಿಕೆ ಮಾಡಿ 22 ಲಕ್ಷ
  • ಮೆಟ್ರಿಕ್ ಟನ್ ತ್ಯಾಜ್ಉ ಕರಗಿಸುವುದು
  • ಮನುಷ್ಯ – ಪ್ರಾಣಿ ಸಮನ್ವಿತ ರೋಗ ನಿಯಂತ್ರಣಕ್ಕೆ 5 ಕೋಟಿ ವೆಚ್ಚದಲ್ಲಿ ಒಂದೇ ಆರೋಗ್ಯ ಯೋಜನೆ ಅಡಿ ಹೈಟೆಕದ ಲ್ಯಾಬೋರೇಟರಿ ಹಾಗೂ ಮೆಟ್ರೋಪಾಲಿಟನ್ ನಿಗಾ ಕೇಂದ್ರ
  • ಒತ್ತುವರಿ ತೆರವುಗೊಳಿಸಲು ವಲಯಕ್ಕೆ 1 ಕೋಟಿಯಂತೆ ಒಟ್ಟು 8 ಕೋಟಿ
  • ಅನಧಿಕೃತ ಕಟ್ಟಡ ತೆರವುಗೊಳಿಸಲು 10 ಕೋಟಿ
  • ಕಸಾಯಿಖಾನೆಗಳ ನಿರ್ವಹಣೆಗಾಗಿ 1 ಕೋಟಿ
  • ಆಡಳಿತಾಧಿಕಾರಿಗಳ ವಿವೇಚನೆಗೆ 100 ಕೋಟಿ
  • ಮುಖ್ಯ ಆಯುಕ್ತರ ವಿವೇಚನೆಗೆ 50 ಕೋಟಿ
  • ಬೆಂಗಳೂರು ಉಸ್ತುವಾರಿ ಮಂತ್ರಿಗಳ ವಿವೇಚನೆಗೆ250 ಕೋಟಿ ಮೀಸಲು.
  • ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆಗೆ 700 ಕೋಟಿ ಸಹಾಯನುದಾನ
  • ಬೀದಿ ನಾಯಿಗಳ ನಿರ್ವಹಣೆಗೆ 20 ಕೋಟಿ ಮೀಸಲು
  • ಇಂದಿರಾ ಕ್ಯಾಂಟೀನ್​ಗೆ 50 ಕೋಟಿ ಮೀಸಲು
  • ಮರಗಳ ಗಣತಿಗಾಗಿ 4 ಕೋಟಿ
  • ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಶೂ ನೀಡಲು 24 ಕೋಟಿ

Published On - 2:46 pm, Thu, 2 March 23

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್