Budget Memes: ಬಜೆಟ್ನಿಂದ ಮಧ್ಯಮ ವರ್ಗಕ್ಕೆ ನಿರಾಸೆ; ಟ್ವಿಟ್ಟರ್ನಲ್ಲಿ ತುಂಬಿ ತುಳುಕುತ್ತಿವೆ ಮೀಮ್ಸ್, ಜೋಕ್‌ಗಳು
Union Budget 2022: ಬಜೆಟ್ ಮಂಡನೆಯಾದ ನಂತರ ಅನೇಕರು ತಮ್ಮ ನಿರೀಕ್ಷೆಗಳು ಹುಸಿಯಾಗಿದ್ದಕ್ಕೆ ಟ್ವಿಟ್ಟರ್ನಲ್ಲಿ ಮೀಮ್ಗಳು, ಟ್ರೋಲ್ಗಳ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಇಂದು ಬೆಳಿಗ್ಗೆ ಕೇಂದ್ರ ಬಜೆಟ್ 2022-23 (Union Budget) ಮಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ (NDA) ಸರ್ಕಾರದ ಅಡಿಯಲ್ಲಿ ಇದು ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಆಗಿದೆ. ಬಜೆಟ್ ಅಧಿವೇಶನ ಪ್ರಾರಂಭವಾಗಲು ಜನರು ಕುತೂಹಲದಿಂದ ಕಾಯುತ್ತಿದ್ದರು. ಆದರೆ ಬಜೆಟ್ ಮಂಡನೆಯಾದ ನಂತರ ಅನೇಕರು ತಮ್ಮ ನಿರೀಕ್ಷೆಗಳು ಹುಸಿಯಾಗಿದ್ದಕ್ಕೆ ಟ್ವಿಟ್ಟರ್ನಲ್ಲಿ ಮೀಮ್ಗಳು, ಟ್ರೋಲ್ಗಳ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ನಿಂದ ಮಧ್ಯಮದ ವರ್ಗದವರು ಅಸಮಾಧಾನಗೊಂಡಿದ್ದು, ತೆರಿಗೆದಾರರಿಗೆ ಕೂಡ ನಿರಾಸೆಯಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಸಂಬಳ ಪಡೆಯುವ ವರ್ಗದವರಿಗೆ ತೆರಿಗೆಯಲ್ಲಿ ಯಾವುದೇ ವಿನಾಯಿತಿ ನೀಡಿಲ್ಲ. ಇದು ಮಧ್ಯಮದವರ್ಗದವರಿಗೆ ಅಸಮಾಧಾನ ಉಂಟುಮಾಡಿದೆ.
Meanwhile salaried taxpayers waiting for new tax regime!#NirmalaSitharaman #Budget2022 #EconomicSurvey #BudgetSession2022 pic.twitter.com/JFOcEIrVjv
— Hrishikesh Janjal (@janjal_rishi) January 31, 2022
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದಾರೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಟ್ಯಾಗ್ ಅನ್ನು ಕಾಪಾಡಿಕೊಳ್ಳಲು, ನಿರ್ಮಲಾ ಸೀತಾರಾಮನ್ ನವೀಕರಿಸಿದ ರಿಟರ್ನ್ಸ್ ಫೈಲಿಂಗ್ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ.
#Budget2022 expectation of middle class. #NirmalaSitharaman pic.twitter.com/QfjHIRryTQ
— Narayanan Embar (@narayananembar) January 31, 2022
ಕ್ರಿಪ್ಟೋಅಸೆಟ್‌ಗಳು ಮತ್ತು ಡಿಜಿಟಲ್ ರೂಪಾಯಿಯ ಕುರಿತು ಕೆಲವು ಪ್ರಮುಖ ಪ್ರಕಟಣೆಗಳ ಜೊತೆಗೆ ಇಂದಿನ ಬಜೆಟ್ ಮಂಡನೆ ಭಾರತದ ಆರ್ಥಿಕ ಭವಿಷ್ಯಕ್ಕೆ ಸಂಬಂಧಿಸಿದ ಕೆಲವು ನಿರ್ಣಾಯಕ ಚರ್ಚೆಗಳನ್ನು ಹುಟ್ಟುಹಾಕಿದೆ.
Government to tax paying middle class during every budget #Budget2022 pic.twitter.com/bcui8qTRTA
— Finance Memes (@Qid_Memez) January 30, 2022
ಈ ವರ್ಷದ ಪೇಪರ್‌ಲೆಸ್ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಅವರು 5G ತರಂಗಾಂತರದ ಹರಾಜು, ನಲ್ ಸೇ ಜಲ್ ಯೋಜನೆಗೆ ಹಣ ಹಂಚಿಕೆ ಮತ್ತು ಡಿಜಿಟಲ್ ಪೇಮೆಂಟ, ಡಿಜಿಟಲ್ ರೂಪಾಯಿ ಇನ್ನೂ ಅನೇಕ ಪ್ರಮುಖ ಅಂಶಗಳನ್ನು ಘೋಷಿಸಿದ್ದಾರೆ. ಆದರೂ ನೆಟ್ಟಿಗರು ತೆರಿಗೆ ವಿನಾಯಿತಿ ಮತ್ತು ಹೆಚ್ಚುವರಿ ಶುಲ್ಕವನ್ನು ಕಡಿಮೆ ಮಾಡುವ ಬಗ್ಗೆ ಹೆಚ್ಚು ನಿರೀಕ್ಷೆ ಹೊಂದಿದ್ದರು.
Budget day soon!#Budget2022 pic.twitter.com/IsIiXYUHyg
— Stocktwits India (@StocktwitsIndia) January 30, 2022
ಲೋಕಸಭೆಯಲ್ಲಿ ಬಜೆಟ್ ಮಂಡನೆಯಾಗುತ್ತಿದ್ದಂತೆ ಮೈಕ್ರೊ ಬ್ಲಾಗಿಂಗ್ ತಾಣದಲ್ಲಿ ಮೀಮ್ ಗಳು, ಪೋಸ್ಟ್ ಗಳ ಮಹಾಪೂರವೇ ಹರಿದು ಬಂದಿದೆ. #Budget2022 ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
Salaried Class to Nirmalaji, waiting for income tax slabs. #Budget2022 pic.twitter.com/9498x6GKN4
— Sagar (@sagarcasm) February 1, 2022
ಆ ಮೀಮ್, ಟ್ರೋಲ್ಗಳಲ್ಲಿ ಮುಖ್ಯವಾದವು ಹೀಗಿವೆ.
After hearing the #Budget2022 middle class people be Like:- pic.twitter.com/2jUtQB65s8
— Diaa (@JoshiDiya_) February 1, 2022
for middle class taxpayers pic.twitter.com/9pXokRM55L
— Dr Prashant Mishra (@drprashantmish6) February 1, 2022
2022ರ ಕೇಂದ್ರ ಬಜೆಟ್ ಸಂಬಳದ ವರ್ಗಕ್ಕೆ ಯಾವುದೇ ತೆರಿಗೆ ರಿಯಾಯಿತಿಗಳನ್ನು ನೀಡದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ನಿರಾಸೆ ಸ್ಪಷ್ಟವಾಗಿದೆ.
Discussion between Government and Salaried Employees..#Budget2022 pic.twitter.com/jMLndjCL96
— ನಿರ್ಮಲಾ ಮೇಡಂ decide ಮಾಡ್ತಾರೆ… (@UppinaKai) January 31, 2022
ನೇರ ತೆರಿಗೆ ಆದಾಯದ ಸುಮಾರು ಶೇ. 35-40ರಷ್ಟು ಕೊಡುಗೆ ನೀಡುವ ವೈಯಕ್ತಿಕ ತೆರಿಗೆದಾರರು, ಕೋವಿಡ್ -19 ಸಾಂಕ್ರಾಮಿಕದಿಂದ ಉಂಟಾದ ಆರ್ಥಿಕ ಹಾನಿಯನ್ನು ಸರಿದೂಗಿಸಲು ಕೆಲವು ಆದಾಯ ತೆರಿಗೆ ಪರಿಹಾರವನ್ನು ನಿರೀಕ್ಷಿಸುತ್ತಿದ್ದರು. ಆದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಪ್ರಸ್ತುತಪಡಿಸುವಾಗ ಆದಾಯ ತೆರಿಗೆ ದರಗಳು ಅಥವಾ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಗಳನ್ನು ಘೋಷಿಸಲಿಲ್ಲ.
Middle Class to FM:#BudgetSession2022 #BudgetSession #Budget #incometax pic.twitter.com/5GnnyMCIgQ
— CA Akhil Pachori (@akhilpachori) February 1, 2022
ಹೀಗಾಗಿ, ಟ್ವಿಟರ್‌ನಲ್ಲಿ, “ಮಧ್ಯಮ ವರ್ಗ” ಮತ್ತು “ಆದಾಯ ತೆರಿಗೆ” ಜನರು ಬಜೆಟ್ ಅನ್ನು ವಿಶ್ಲೇಷಿಸಿದಾಗ ಮತ್ತು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಮೀಮ್ಸ್ ಮತ್ತು ಜೋಕ್‌ಗಳು ತುಂಬಿ ತುಳುಕುತ್ತಿವೆ.
Govt when asked middle class ke liye kya hai#Budget2022 pic.twitter.com/gMgnDqPprt
— Alok Krishna⚡ (@i_AlokKrishna) February 1, 2022
ಆದಾಯ ತೆರಿಗೆ ರಿಯಾಯಿತಿಯ ಘೋಷಣೆಗಾಗಿ ಬಜೆಟ್ ಭಾಷಣವನ್ನು ವೀಕ್ಷಿಸಿದ ಜನರು ನಿರಾಶೆಗೊಂಡಿದ್ದಾರೆ ಎಂದು ಅನೇಕ ಟ್ವಿಟರ್ ಬಳಕೆದಾರರು ಗಮನಿಸಿದ್ದಾರೆ.
30% Tax on Crypto Profits….
Cryptocurrency holders right now ??#crypto #cryptocurrency pic.twitter.com/91bxI0CC9X
— Kartik Anand (@kartik_203) February 1, 2022
ಗ್ರಾಂಟ್ ಥಾರ್ನ್‌ಟನ್ ಭಾರತ್‌ನ ಪೂರ್ವ-ಬಜೆಟ್ ಸಮೀಕ್ಷೆಯು ವೈಯಕ್ತಿಕ ತೆರಿಗೆದಾರರಿಗೆ ತೆರಿಗೆ ವಿನಾಯಿತಿ ಬಹುಪಾಲು ಪ್ರತಿಕ್ರಿಯಿಸಿದವರ ಇಚ್ಛೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಬಹಿರಂಗಪಡಿಸಿದೆ.
ಇದನ್ನೂ ಓದಿ: Budget 2022: ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ಗಳಿಗೆ ಶೀಘ್ರದಲ್ಲೇ ಬ್ಯಾಟರಿ ವಿನಿಮಯ ನೀತಿ ಘೋಷಣೆ
Budget 2022: ಶೀಘ್ರದಲ್ಲೇ ಆರ್ಬಿಐನಿಂದ ಡಿಜಿಟಲ್ ಕರೆನ್ಸಿ ಬಿಡುಗಡೆ; 2023ಕ್ಕೆ 5ಜಿ ಸ್ಪೆಕ್ಟ್ರಂ ಹರಾಜು
Published On - 3:01 pm, Tue, 1 February 22