AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯ ಬಜೆಟ್​: 3.1 ಲಕ್ಷ ಕೋಟಿ ಗಾತ್ರದ ಬಜೆಟ್​ನಲ್ಲಿ ವಿವಿಧ ವಲಯಗಳಿಗೆ ಕೊಡಲಾಗಿರುವುದು ಎಷ್ಟು?

Sectors Receiving Most Funds From Budget: 3.1ಲಕ್ಷ ಕೋಟಿ ರೂ ಗಾತ್ರದ ಬಜೆಟ್​ನಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿಗೆ 80 ಸಾವಿರ ಕೋಟಿ ರೂಗಿಂತ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರದ ಅಭಿವೃದ್ಧಿಗೆ 10 ಸಾವಿರ ಕೋಟಿ ರೂ ಸಮೀಪದಷ್ಟು ಅನುದಾನ ಕೊಡಲಾಗಿದೆ.

ರಾಜ್ಯ ಬಜೆಟ್​: 3.1 ಲಕ್ಷ ಕೋಟಿ ಗಾತ್ರದ ಬಜೆಟ್​ನಲ್ಲಿ ವಿವಿಧ ವಲಯಗಳಿಗೆ ಕೊಡಲಾಗಿರುವುದು ಎಷ್ಟು?
ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Digi Tech Desk

Updated on:Feb 17, 2023 | 2:52 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶುಕ್ರವಾರ 3,09,182 ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಇದರಲ್ಲಿ ರಾಜಸ್ವ ಸ್ವೀಕೃತಿ (Revenue Receipts) 2,25,910 ಕೋಟಿ ರೂ ಸೇರಿ ಒಟ್ಟು ಸ್ವೀಕೃತಿಯು 3,03,910 ಕೋಟಿ ರೂ ಇದೆ. ಬೊಮ್ಮಾಯಿ ಅವರು ಮಂಡನೆ ಮಾಡಿರುವ ಎರಡನೇ ಬಜೆಟ್ ಇದಾಗಿದೆ. ಇದು ಈ ಸರ್ಕಾರದ ಕೊನೆಯ ಬಜೆಟ್ ಕೂಡ ಆಗಿದೆ. ಆರು ವಲಯಗಳಾಗಿ ವಿಭಾಗಿಸಿ ಅನುದಾನ ಬಿಡುಗಡೆ ಮಾಡಲಾಗಿದೆ. ಸಿಎಂ ಹೇಳಿಕೊಂಡ ಪ್ರಕಾರ ಈ ಬಾರಿಯದ್ದು ರೆವೆನ್ಯೂ ಸರ್ಪ್ಲಸ್ ಬಜೆಟ್ ಆಗಿದೆ. ಅಂದರೆ ವೆಚ್ಚಕ್ಕಿಂತ ಹೆಚ್ಚು ಆದಾಯ ಇರುವ ಬಜೆಟ್ ಆಗಿದೆ.

ಕುತೂಹಲವೆಂದರೆ ಮೊನ್ನೆ ಮಂಡನೆಯಾದ ತೆಲಂಗಾಣದ ಬಜೆಟ್ 2.9 ಲಕ್ಷ ಕೋಟಿ ರೂ ಗಾತ್ರದ್ದಾಗಿತ್ತು. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮಂಡಿಸಿದ ಈ ಬಾರಿಯ ಬಜೆಟ್ 7 ಲಕ್ಷ ಕೋಟಿ ರೂಗು ಹೆಚ್ಚು ಗಾತ್ರದಾಗಿತ್ತು. ಭಾರತದಲ್ಲಿ ಅತಿದೊಡ್ಡ ಬಜೆಟ್ ಉತ್ತರಪ್ರದೇಶದ್ದಾಗಿದೆ. ಉತ್ತರ ಪ್ರದೇಶ, ಕರ್ನಾಟಕ ಬಿಟ್ಟರೆ 3 ಲಕ್ಷ ಕೋಟಿ ರೂ ಬಜೆಟ್ ಗಾತ್ರ ದಾಟಿದ ರಾಜ್ಯಗಳೆಂದರೆ ರಾಜಸ್ಥಾನ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಮಾತ್ರ.

ಇದನ್ನೂ ಓದಿ: Karnataka Budget: ರೆವೆನ್ಯೂ ಸರ್ಪ್ಲಸ್ ಬಜೆಟ್ ಎಂದ ಬೊಮ್ಮಾಯಿ; ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಗಿದೆ?

ವಿವಿಧ ವಲಯಗಳಿಗೆ ನೀಡಲಾಗಿರುವುದು:

  • ಕೃಷಿ ಮತ್ತು ಪೂರಕ ಚಟುವಟಿಕೆಗಳು: 39,031 ಕೋಟಿ ರೂ
  • ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ: 80,318 ಕೋಟಿ ರೂ
  • ಆರ್ಥಿಕ ಅಭಿವೃದ್ಧಿಗೆ ಉತ್ತೇಜನ: 61,488 ಕೋಟಿ ರೂ
  • ಬೆಂಗಳೂರು ಸಮಗ್ರ ಅಭಿವೃದ್ಧಿ: 9,698 ಕೋಟಿ ರೂ
  • ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ: 3,458 ಕೋಟಿ ರೂ
  • ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ: 68,585 ಕೋಟಿ ರೂ
  • ಮಹಿಳೆಯರ ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿಗೆ: 46,278 ಕೋಟಿ ರೂ
  • ಮಕ್ಕಳ ಅಭ್ಯುದಯಕ್ಕೆ: 47,256 ಕೋಟಿ ರೂ
  • ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಅಡಿ 30,215 ಕೋಟಿ ರೂ

ಕರ್ನಾಟಕ ಬಜೆಟ್ ಲೈವ್ ಅಪ್ಡೇಟ್ಸ್

ಕರ್ನಾಟಕ ಬಜೆಟ್​ನ ಮತ್ತಷ್ಟು ಸುದ್ದಿಗಳು

Published On - 12:59 pm, Fri, 17 February 23