ಮೂರನೇ ವ್ಯಕ್ತಿ ಗ್ಯಾರಂಟಿ ಇಲ್ಲದೆಯೇ MSME ಗಳಿಗೆ ಟರ್ಮ್ ಲೋನ್‌ ಲಭ್ಯ- ವಿತ್ತ ಸಚಿವೆ ಸೀತಾರಾಮನ್ ಘೋಷಣೆ

Without Third Party Guarantee loans for MSMEs: ಮೇಲಾಧಾರ ಅಥವಾ ಥರ್ಡ್ ಪಾರ್ಟಿ ಗ್ಯಾರಂಟಿ ಇಲ್ಲದೆ ಟರ್ಮ್ ಲೋನ್‌ಗಳನ್ನು ಸುಲಭಗೊಳಿಸಲು MSME ಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಸರ್ಕಾರವು ಹೊರತರಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ತಮ್ಮ ಏಳನೇ ಕೇಂದ್ರ ಬಜೆಟ್ ಅನ್ನು ಪ್ರಸ್ತುತಪಡಿಸಿದ ಅವರು, ಸಾರ್ವಜನಿಕ ವಲಯದ ಬ್ಯಾಂಕುಗಳು MSME ಗಳ ಕ್ರೆಡಿಟ್ ಮೌಲ್ಯಮಾಪನಕ್ಕಾಗಿ ಆಂತರಿಕ ಸಾಮರ್ಥ್ಯವನ್ನು ನಿರ್ಮಿಸುವಂತೆ ಸೂಚಿಸಿದರು.

ಮೂರನೇ ವ್ಯಕ್ತಿ ಗ್ಯಾರಂಟಿ ಇಲ್ಲದೆಯೇ MSME ಗಳಿಗೆ ಟರ್ಮ್ ಲೋನ್‌ ಲಭ್ಯ- ವಿತ್ತ ಸಚಿವೆ ಸೀತಾರಾಮನ್ ಘೋಷಣೆ
ಮೂರನೇ ವ್ಯಕ್ತಿ ಗ್ಯಾರಂಟಿ ಇಲ್ಲದೆಯೇ MSME ಗಳಿಗೆ ಟರ್ಮ್ ಲೋನ್‌ ಗ್ಯಾರಂಟಿ
Follow us
|

Updated on:Jul 23, 2024 | 12:54 PM

Nirmala Sitharaman budget speech on MSME: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಲೋಕಸಭೆಯಲ್ಲಿಂದು 2024-25ನೇ ಸಾಲಿನ ಬಜೆಟ್​ ಮಂಡನೆ ಬಜೆಟ್ ಮಂಡನೆ ಮಾಡಿದರು. ಮೋದಿ ಸರ್ಕಾರದ ಐತಿಹಾಸಿಕ 3ನೇ ಅವಧಿಯ ಮೊದಲ ಬಜೆಟ್ ಇದಾಗಿದೆ. ಇದೇ ವೇಳೆ ಮೋದಿ ಸರ್ಕಾರದಲ್ಲಿ 7ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಸಚಿವೆ ನಿರ್ಮಲಾ ಸಹ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿ ಬಜೆಟ್​ನಲ್ಲಿ ಮಹಿಳೆಯರು, ಯುವಕರು, ರೈತರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.

ಈ ಮಧ್ಯೆ, ಕೇಂದ್ರ ಬಜೆಟ್ 2024 ನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (Micro, Small and Medium Enterprises  -MSME) ಸಚಿವಾಲಯದ ಕುರಿತು ಮಾತನಾಡುತ್ತಾ, ಹೆಚ್ಚುವರಿ ಆಧಾರ ಅಥವಾ ಮೂರನೇ ವ್ಯಕ್ತಿಯ ಖಾತರಿಗಳಿಲ್ಲದೆಯೇ ಟರ್ಮ್​​ ಸಾಲಗಳನ್ನು ಸರಳ ಮತ್ತು ಸುಲಭಗೊಳಿಸಲು ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಅವರು ಘೋಷಿಸಿದರು. MSME ಕ್ಲಸ್ಟರ್‌ಗಳಿಗೆ ಸೇವೆ ಸಲ್ಲಿಸಲು SIDBI 24 ಹೊಸ ಶಾಖೆಗಳನ್ನು ತೆರೆಯುತ್ತದೆ ಎಂದು ಸೀತಾರಾಮನ್ ಹೇಳಿದರು. ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ, ಕೌಶಲ್ಯ ಮತ್ತು ಎಂಎಸ್‌ಎಂಇಗಳು ಕೇಂದ್ರ ಬಜೆಟ್ 2023 ರ ಮುಖ್ಯ ಕೇಂದ್ರವಾಗಿ ಉಳಿಯುತ್ತವೆ ಎಂದು ಹೇಳಿದರು.

ಮೇಲಾಧಾರ ಅಥವಾ ಥರ್ಡ್ ಪಾರ್ಟಿ ಗ್ಯಾರಂಟಿ ಇಲ್ಲದೆ ಟರ್ಮ್ ಲೋನ್‌ಗಳನ್ನು ಸುಲಭಗೊಳಿಸಲು MSME ಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ಸರ್ಕಾರವು ಹೊರತರಲಿದೆ ಎಂದು ಸೀತಾರಾಮನ್ ಹೇಳಿದ್ದಾರೆ. ತಮ್ಮ ಏಳನೇ ಕೇಂದ್ರ ಬಜೆಟ್ ಅನ್ನು ಪ್ರಸ್ತುತಪಡಿಸಿದ ಅವರು, ಸಾರ್ವಜನಿಕ ವಲಯದ ಬ್ಯಾಂಕುಗಳು MSME ಗಳ ಕ್ರೆಡಿಟ್ ಮೌಲ್ಯಮಾಪನಕ್ಕಾಗಿ ಆಂತರಿಕ ಸಾಮರ್ಥ್ಯವನ್ನು ನಿರ್ಮಿಸುವಂತೆ ಸೂಚಿಸಿದರು.

ಇದನ್ನೂಓದಿ: LIVE Budget 2024 Speech: ಕೇಂದ್ರ ಬಜೆಟ್; ಆದಾಯ ತೆರಿಗೆ ಬಗ್ಗೆ ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು

ಕ್ಷೇತ್ರವನ್ನು ಬಲಪಡಿಸಲು ಸರ್ಕಾರವು ಸಕ್ರಿಯವಾಗಿ ಕಾರ್ಯತಂತ್ರಗಳನ್ನು ಹಾಕುತ್ತಿದೆ. ಉದಾಹರಣೆಗೆ, ಇದು ಕಡ್ಡಾಯ TREDs ಪ್ಲಾಟ್‌ಫಾರ್ಮ್ ನೋಂದಣಿ ಮಿತಿಯನ್ನು ಕಡಿಮೆ ಮಾಡಿದೆ, MSME ಖರೀದಿದಾರರಿಗೆ 500 ಕೋಟಿ ರೂ.ಗಳಿಂದ 250 ಕೋಟಿ ರೂ. ಗೆ ಇಳಿಕೆ ಮಾಡಿದೆ.

ಎಂಎಸ್‌ಎಂಇ ಬೆಳವಣಿಗೆಯನ್ನು ಬೆಂಬಲಿಸಲು ವಿಶೇಷವಾಗಿ ಸಾಲ ಸುಧಾರಣೆ, ಭೌತಿಕ ಮತ್ತು ಡಿಜಿಟಲ್ ಸಂಪರ್ಕ ವರ್ಧನೆ ಮತ್ತು ಉತ್ತಮ ನಿಯಂತ್ರಣ ಕಾನೂನು ತರಲಾಗುವುದು. ಮಧ್ಯಮ ಮತ್ತು ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿ ತರಬೇತಿಗೆ ಒತ್ತು ನೀಡಲಾಗಿದೆ ಎಂದು ಅವರು ಹೇಳಿದರು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Tue, 23 July 24

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್