ಕೇಂದ್ರ ಬಜೆಟ್ ಮಂಡನೆ ಎಷ್ಟು ಗಂಟೆಗೆ ಆರಂಭ, ನಿರೀಕ್ಷೆಗಳೇನು? ಇಲ್ಲಿದೆ ವಿವರ

Nirmala Sitharaman budget speech: ಮೋದಿ 3.0 ಸರ್ಕಾರದ ಮೊದಲ ಬಜೆಟ್ ಜುಲೈ 23, ಮಂಗಳವಾರ ಮಂಡನೆ ಆಗುತ್ತಿದೆ. ಬೆಳಗ್ಗೆ 11ಗಂಟೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಆರಂಭವಾಗುತ್ತದೆ. ಸಂಸದ್ ಟಿವಿ ಮತ್ತು ದೂರದರ್ಶನ ವಾಹಿನಿಯಿಂದ ಲೈವ್ ಫೀಡ್ ಇರುತ್ತದೆ. ಎಲ್ಲಾ ಸುದ್ದಿವಾಹಿನಿಗಳೂ ಈ ಫೀಡ್ ಮೂಲಕ ಬಜೆಟ್ ಭಾಷಣ ಲೈವ್ ಪ್ರಸಾರ ಮಾಡುತ್ತವೆ. ಮಧ್ಯಾಹ್ನ 1:30ರಿಂದ 2 ಗಂಟೆಯವರೆಗೆ ಬಜೆಟ್ ಭಾಷಣ ಇರುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್ ಮಂಡನೆ ಎಷ್ಟು ಗಂಟೆಗೆ ಆರಂಭ, ನಿರೀಕ್ಷೆಗಳೇನು? ಇಲ್ಲಿದೆ ವಿವರ
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
| Updated By: Ganapathi Sharma

Updated on:Jul 23, 2024 | 7:59 AM

ನವದೆಹಲಿ, ಜುಲೈ 22: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಜುಲೈ 23) ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್ ಅನ್ನೂ ಸೇರಿ ನಿರ್ಮಲಾ ಸೀತಾರಾಮನ್ ಅವರಿಗೆ ಇದು ಸತತ ಏಳನೇ ಬಜೆಟ್ ಮಂಡನೆಯಾಗಿದೆ. ಈ ವಿಚಾರದಲ್ಲಿ ಅವರು ದಾಖಲೆ ಬರೆದಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿರುವುದರಿಂದ ಸಾಕಷ್ಟು ಕುತೂಹಲ ಇದೆ. 2024-25ರ ಹಣಕಾಸು ವರ್ಷದ ಈ ಪೂರ್ಣ ಬಜೆಟ್ ಮಂಡನೆಯನ್ನು ನಿರ್ಮಲಾ ಸೀತಾರಾಮನ್ ಮಂಗಳವಾರ ಬೆಳಗ್ಗೆ 11 ಗಂಟೆಗೆ ಆರಂಭಿಸಲಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಎರಡರಿಂದ ಮೂರು ಗಂಟೆ ಅವಧಿ ಇರುವ ನಿರೀಕ್ಷೆ ಇದೆ. ಮಧ್ಯಂತರ ಬಜೆಟ್​ನಲ್ಲಿ ಅವರ ಭಾಷಣ 87 ನಿಮಿಷಗಳಷ್ಟು ಮಾತ್ರ ಇತ್ತು. 2020ರ ಬಜೆಟ್​ನ ಭಾಷಣ 160 ನಿಮಿಷ, ಅಂದರೆ 2 ಗಂಟೆ 40 ನಿಮಿಷದಷ್ಟು ಸುದೀರ್ಘ ಇತ್ತು. ಮಧ್ಯಾಹ್ನ ಎರಡು ಗಂಟೆಯವರೆಗೂ ಈ ಬಾರಿಯ ಬಜೆಟ್ ಭಾಷಣ ಇರಬಹುದು.

ಬಜೆಟ್ ಭಾಷಣ ಎಲ್ಲಿ ವೀಕ್ಷಿಸಬಹುದು?

2024ರ ಕೇಂದ್ರ ಬಜೆಟ್ ಭಾಷಣ ಮಂಡನೆ ಹಲವೆಡೆ ಲೈವ್ ಆಗಿ ಪ್ರಸಾರ ಆಗಲಿದೆ. ಕೇಂದ್ರ ಸರ್ಕಾರದಿಂದ ನಿರ್ವಹಿಸಲಾಗುವ ಸಂಸದ್ ಟಿವಿ ಮತ್ತು ದೂರದರ್ಶನ್ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರ ಇರುತ್ತದೆ. ಈ ವಾಹಿನಿಗಳ ಯೂಟ್ಯೂಬ್ ಚಾನಲ್​ಗಳಲ್ಲೂ ನೇರ ಪ್ರಸಾರ ಇರುತ್ತದೆ. ಇಂಡಿಯಾ ಬಜೆಟ್ ವೆಬ್​ಸೈಟ್​ನಲ್ಲೂ ಲೈವ್ ಸ್ಟ್ರೀಮ್ ಇರುತ್ತದೆ.

ಇವಲ್ಲದೇ ಟಿವಿ9 ವಾಹಿನಿಯಲ್ಲಿ ಲೈವ್ ಪ್ರಸಾರದ ಜೊತೆಗೆ ಬಜೆಟ್ ಹೈಲೈಟ್ಸ್ ಎಲ್ಲವೂ ಲಭ್ಯ ಇರುತ್ತದೆ. ಟಿವಿ9 ವಾಹಿನಿಯ ಯೂಟ್ಯೂಬ್ ಹಾಗೂ ವೆಬ್​ಸೈಟ್​ನಲ್ಲೂ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು. ವೆಬ್​ಸೈಟ್​ನಲ್ಲಿ ಲೈವ್ ಸ್ಟ್ರೀಮಿಂಗ್ ಜೊತೆಗೆ ಲೈವ್ ಬ್ಲಾಗ್, ಹೈಲೈಟ್ಸ್, ಪ್ರಮುಖ ಘೋಷಣೆಗಳು, ಆದಾಯ ತೆರಿಗೆ ಬದಲಾವಣೆ ಇತ್ಯಾದಿ ಹಲವು ಅಂಶಗಳ ಬ್ರೇಕಿಂಗ್ ನ್ಯೂಸ್ ಪಡೆಯಬಹುದು.

ಇದನ್ನೂ ಓದಿ: ಅಭಿವೃದ್ಧಿ ಹಾದಿಯಲ್ಲಿ ಭಾರತಕ್ಕಿರುವ ಸವಾಲು ಯಾರಿಗೂ ಎದುರಾಗಿರಲಿಲ್ಲ: ಸಿಇಎ ಅನಂತನಾಗೇಶ್ವರನ್

ಬಜೆಟ್ ಮಂಡನೆ: ಕುತೂಹಲಕಾರಿ ಸಂಗತಿಗಳು

  • ಮೊದಲ ಬಜೆಟ್: 1860ರ ಏಪ್ರಿಲ್ 7ರಂದು ಭಾರತದ ಮೊದಲ ಬಜೆಟ ಮಂಡಿಸಿದವರು ಜೆಮ್ಸ್ ವಿಲ್ಸನ್
  • 1947ರ ನವೆಂಬರ್ 26ರಂದು ಸ್ವತಂತ್ರ ಭಾರತದಲ್ಲಿ ಬಜೆಟ್ ಮಂಡಿಸಿದ ಮೊದಲ ವ್ಯಕ್ತಿ ಷಣ್ಮುಖಂ ಚೆಟ್ಟಿ
  • ಹಣಕಾಸು ಸಚಿವ ಸಿಡಿ ದೇಶಮುಖ್ 1950ರಿಂದ 56ರವರೆಗೆ ಏಳು ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ 1952ರ ಮಧ್ಯಂತರ ಬಜೆಟ್ ಕೂಡ ಒಳಗೊಂಡಿದೆ.
  • ದೇಶಮುಖ್ ಬಳಿಕ ಏಳು ಬಜೆಟ್ ಮಂಡಿಸಿದ ದಾಖಲೆ ನಿರ್ಮಲಾ ಸೀತಾರಾಮನ್ ಅವರ ಹೆಸರಿಗೆ ಹೋಗುತ್ತದೆ.
  • ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವೆ ಎನಿಸಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿಯಾಗಿ ಬಜೆಟ್ ಮಂಡನೆ ಮಾಡಿದ್ದರು.
  • ಭಾರತದಲ್ಲಿ ಅತಿಹೆಚ್ಚು ಬಾರಿ ಬಜೆಟ್ ಮಂಡನೆ ಮಾಡಿದ ದಾಖಲೆ ಮೊರಾರ್ಜಿ ದೇಸಾಯಿ ಅವರಿಗಿದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:23 pm, Mon, 22 July 24

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ