ಬೆಂಗಳೂರು, ಜುಲೈ 14: ಐಫೋನ್ ಅಸೆಂಬಲ್ ಮಾಡುವ ಫಾಕ್ಸ್ಕಾನ್ (Foxconn) ಸಂಸ್ಥೆಗೆ ದೊಡ್ಡಬಳ್ಳಾಪುರದಲ್ಲಿ 300 ಎಕರೆ ಭೂಮಿ ಮಂಜೂರು ಮಾಡುವ ಸಂಬಂಧ ಇದ್ದ ಕಾನೂನು ತೊಡಕನ್ನು ನಿವಾರಿಸಲಾಗಿದೆ. ಜಮೀನನ್ನು ಶೀಘ್ರದಲ್ಲೇ ಫಾಕ್ಸ್ಕಾನ್ಗೆ ಹಸ್ತಾಂತರಿಸಲಾಗುವುದು ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ (MB Patil) ಶುಕ್ರವಾರ (ಜುಲೈ 14) ಹೇಳಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ಡಿ ಮುನಿರಾಜು ಎತ್ತಿದ ಪ್ರಶ್ನೆಗೆ ಎಂಬಿ ಪಾಟೀಲ್ ಉತ್ತರಿಸುತ್ತಾ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.
‘ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿರುವ ಐಟಿಐಆರ್ನಲ್ಲಿ ಒಟ್ಟು 300 ಎಕರೆ ಜಾಗವನ್ನು ಫಾಕ್ಸ್ಕಾನ್ಗೆ ಕೊಡಲಾಗುತ್ತದೆ. ಅಲ್ಲಿ ಆ ಸಂಸ್ಥೆ 8,500 ಕೋಟಿ ರೂ ಹೂಡಿಕೆಯಲ್ಲಿ ತಯಾರಿಕಾ ಘಟಕ ಸ್ಥಾಪಿಸಲಿದೆ. ಜಮೀನು ಹಸ್ತಾಂತರಿಸಿದ ಕೂಡಲೇ ಕಟ್ಟಡ ನಿರ್ಮಾಣ ಕಾರ್ಯವನ್ನು ಆರಂಭಿಸಬಹುದು’ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.
ಫಾಕ್ಸ್ಕಾನ್ ಈ ಹಿಂದೆ ನೀಡಿರುವ ಸುಳಿವಿನ ಪ್ರಕಾರ ಮುಂದಿನ ಏಪ್ರಿಲ್ ತಿಂಗಳಲ್ಲಿ ದೊಡ್ಡಬಳ್ಳಾಪುರದ ಘಟಕದಲ್ಲಿ ಉತ್ಪಾದನೆಯ ಗುರಿ ಇಟ್ಟುಕೊಂಡಿದೆ.
ಇದನ್ನೂ ಓದಿ: Chinese Apps: ಬೆಂಗಳೂರಿನಲ್ಲಿ ದಾಖಲಾದ 25 ಎಫ್ಐಆರ್ಗಳ ಜಾಡು ಹಿಡಿದ ಇಡಿ; ಚೀನೀ ಜಾಲದ ಕರ್ಮಕಾಂಡ ಬಯಲು
ದೊಡ್ಡಬಳ್ಳಾಪುರದ ಐಟಿ ಪಾರ್ಕ್ನಲ್ಲಿ ಸ್ಥಾಪನೆಯಾಗಲಿರುವ ಘಟಕಗಳಲ್ಲಿ ಫಾಕ್ಸ್ಕಾನ್ ಐಫೋನ್ಗಳನ್ನು ಅಸೆಂಬಲ್ ಮಾಡಲಿದೆ. 8,500 ಕೋಟಿ ರೂ ಹೂಡಿಕೆಯ ಈ ಘಟಕದಿಂದ 50,000 ಉದ್ಯೋಗಾವಕಾಶ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಕಳೆದ ಮೂರು ವರ್ಷಗಳಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 3 ದೊಡ್ಡ ಹಾಗೂ ಮಧ್ಯಮ ಗಾತ್ರ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಇವುಗಳಿಂದ 110 ಕೋಟಿ ರೂನಷ್ಟು ಹೂಡಿಕೆಯಾಗಿದ್ದು 1,450 ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ವಿಧಾನಸಭೆಯಲ್ಲಿ ಸಚಿವ ಎಂಬಿ ಪಾಟೀಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: RuPay Card: ಮಾಸ್ಟರ್ ಕಾರ್ಡ್, ವೀಸಾಗಿಂತ ರುಪೇ ಕ್ರೆಡಿಟ್ ಕಾರ್ಡ್ ಯಾಕೆ ಉತ್ತಮ? ಇಲ್ಲಿವೆ ರುಪೇ ಕಾರ್ಡ್ನ ಅನುಕೂಲತೆಗಳು
ಆದರೆ, ಫಾಕ್ಸ್ಕಾನ್ ಸಂಸ್ಥೆ ಐಫೋನ್ ಫ್ಯಾಕ್ಟರಿ ಸ್ಥಾಪಿಸಲಿರುವುದು ಬಹಳ ಮಹತ್ವದ ಸಂಗತಿಯಾಗಿದೆ. ಕೋಲಾರದಲ್ಲಿ ಹಲವು ವರ್ಷಗಳಿಂದ ವಿಸ್ಟ್ರಾನ್ ಸಂಸ್ಥೆ ಐಫೋನ್ ಫ್ಯಾಕ್ಟರಿ ನಡೆಸುತ್ತಿದೆ. ವಿಸ್ಟ್ರಾನ್ನ ಆ ಘಟಕವನ್ನು ಟಾಟಾ ಗ್ರೂಪ್ ಖರೀದಿ ಮಾಡುತ್ತಿದೆ. ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಿನ ಸಮೀಪದಲ್ಲೇ ಎರಡು ಐಫೋನ್ ಫ್ಯಾಕ್ಟರಿಗಳು ನಡೆಯುವಂತಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ