Investment: ಕರ್ನಾಟಕದಲ್ಲಿ 78 ಕೈಗಾರಿಕಾ ಯೋಜನೆಗಳಿಗೆ ಇಲಾಖೆ ಸಮ್ಮತಿ; 14 ಸಾವಿರದಷ್ಟು ಉದ್ಯೋಗಸೃಷ್ಟಿ ನಿರೀಕ್ಷೆ

Big Industrial Projects Cleared By Karnataka: ಜನವರಿ ತಿಂಗಳಲ್ಲಿ ಮೂರೂವರೆ ಸಾವಿರ ರೂ ಮೊತ್ತದ 59 ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದ್ದ ರಾಜ್ಯ ಸರ್ಕಾರ ಇದೀಗ 5 ಸಾವಿರಕ್ಕೂ ಹೆಚ್ಚು ಮೊತ್ತದ 78 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಕೊಟ್ಟಿದೆ. ಇವೆರಡರಿಂದಲೂ 32 ಸಾವಿರದಷ್ಟು ಉದ್ಯೋಗಸೃಷ್ಟಿಯ ನಿರೀಕ್ಷೆ ಇದೆ.

Investment: ಕರ್ನಾಟಕದಲ್ಲಿ 78 ಕೈಗಾರಿಕಾ ಯೋಜನೆಗಳಿಗೆ ಇಲಾಖೆ ಸಮ್ಮತಿ; 14 ಸಾವಿರದಷ್ಟು ಉದ್ಯೋಗಸೃಷ್ಟಿ ನಿರೀಕ್ಷೆ
ಮುರುಗೇಶ್ ನಿರಾಣಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 20, 2023 | 10:52 AM

ಬೆಂಗಳೂರು: ರಾಜ್ಯದಲ್ಲಿ 5,298.69 ಕೋಟಿ ರೂ ಮೊತ್ತದ ಒಟ್ಟು 78 ಹೂಡಿಕೆ ಯೋಜನೆಗಳಿಗೆ ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ (Karnataka Industries and Commerce Ministry) ಅನುಮೋದನೆ ನೀಡಿದೆ. ಮಾರ್ಚ್ 19, ಭಾನುವಾರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನೆ ಸಮಿತಿಯಲ್ಲಿ (State Level Single Window Clearance Committee) 78 ಹೂಡಿಕೆ ಪ್ರಸ್ತಾವಗಳಿಗೆ ಸಮ್ಮತಿ ನೀಡಲಾಯಿತು ಎಂದು ಸಚಿವಾಲಯದಿಂದ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದೆ. ಈ ಯೋಜನೆಗಳಿದ 13,917 ಉದ್ಯೋಗಗಳು ಸೃಷ್ಟಿಯಾಗಲು ಸಾಧ್ಯ ಇದೆ.

78 ಯೋಜನೆಗಳ ಪೈಕಿ 17 ದೊಡ್ಡ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳು ಪ್ರಮುಖವಾದುವಾಗಿವೆ. ಈ ಒಂದೊಂದು ಯೋಜನೆಯೂ ಕನಿಷ್ಠ 50 ಕೋಟಿ ರೂ ಮೊತ್ತದ್ದಾಗಿದೆ. 17 ಯೋಜನೆಗಳಿಂದಲೇ 3,552.66 ಕೋಟಿ ರೂ ಮೊತ್ತದ ಹೂಡಿಕೆಗಳಾಗಬಹುದು. ರಾಜ್ಯದ ವಿವಿಧೆಡೆ 6,933 ಕೋಟಿ ಜನರಿಗೆ ಉದ್ಯೋಗ ಅವಕಾಶ ಒದಗಿಸುವ ನಿರೀಕ್ಷೆ ಇದೆ.

ಹಾಗೆಯೇ, 50 ಕೋಟಿ ರೂಗಿಂತ ಕಡಿಮೆ ಇರುವ, ಆದರೆ 15ಕೋಟಿ ರುಪಾಯಿಗೂ ಹೆಚ್ಚು ಹೂಡಿಕೆ ಇರುವ 59 ಯೋಜನೆಗಳಿಗೂ ಇಲಾಖೆ ಅಂಕಿತ ಹಾಕಿದೆ. 59 ಯೋಜನೆಗಳಿಂದ 1,542.88 ಕೋಟಿ ರೂ ಹೂಡಿಕೆ ಬರಲಿದ್ದು 6,984 ಜನರಿಗೆ ಉದ್ಯೋಗಾವಕಾಶ ಸಿಗಲಿದೆ ಎಂದು ಇಲಾಖೆ ನೀಡಿದ ಹೇಳಿಕೆಯಿಂದ ತಿಳಿದುಬಂದಿದೆ.

ಇದನ್ನೂ ಓದಿAdani: ಪೆಟ್ರೋಕೆಮಿಕಲ್ ಪ್ರಾಜೆಕ್ಟ್ ಕೈಬಿಟ್ಟ ಅದಾನಿ; ಭಾರತಕ್ಕೆ ಮುಂದುವರಿಯಲಿರುವ ಪಿವಿಸಿ ಆಮದು ತಲೆನೋವು

ಇನ್ನೆರಡು ಹಳೆಯ ಯೋಜನೆಗಳಿಗೆ ಹೆಚ್ಚುವರಿ ಹೂಡಿಕೆ ಪ್ರಸ್ತಾವಕ್ಕೆ ಇಲಾಖೆ ಒಪ್ಪಿ ಕೊಟ್ಟಿದೆ. ಇದರಿಂದ 203.15 ಕೋಟಿ ರೂ ಹೂಡಿಕೆ ಬರಲಿದೆ. ಹೆಚ್ಚು ಉದ್ಯೋಗಸೃಷ್ಟಿಯೂ ಆಗಬಹುದು.

ಜನವರಿ ತಿಂಗಳಲ್ಲಿ 59 ಯೋಜನೆಗಳಿಗೆ ಕೈಗಾರಿಕಾ ಇಲಾಖೆ ಅನುಮೋದನೆ

ಇದೇ ಜನವರಿ ಕೊನೆಯ ವಾರದಲ್ಲಿ 3,455.39 ಕೋಟಿ ರೂ ಮೊತ್ತದ 59 ಹೂಡಿಕೆ ಯೋಜನೆಗಳಿಗೆ ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಒಪ್ಪಿಗೆ ಕೊಟ್ಟಿದೆ. ಈ ಯೋಜನೆಗಳಿಂದ 18 ಸಾವಿರಕ್ಕೂ ಹೆಚ್ಚು ಉದ್ಯೋಗಸೃಷ್ಟಿಯಾಗಬಹುದ ಎಂಬ ನಿರೀಕ್ಷೆ ಇದೆ. 59 ಯೋಜನೆಗಳ ಪೈಕಿ 11 ಯೋಜನೆಗಳು ಕನಿಷ್ಠ 50 ಕೋಟಿ ರೂ ಹೂಡಿಕೆ ಇರುವ ದೊಡ್ಡ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳಾಗಿವೆ.

ಇದನ್ನೂ ಓದಿEconomic Crisis: ಫೋರೆಕ್ಸ್ ರಿಸರ್ವ್ ಮತ್ತೆ ಕುಸಿತ; ವಿನಾಶದತ್ತ ಆರ್ಥಿಕತೆ- ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಎಚ್ಚರಿಕೆ

2023 ಜನವರಿ ತಿಂಗಳಲ್ಲಿ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಪಡೆದ ಸಂಸ್ಥೆಗಳಿವು:

  • ಮೈಸೂರ್ ಸ್ಟೀಲ್ ಲಿ, ಮೈಸೂರು
  • ಎನ್​ಐಡಿಇಸಿ ಇಂಡಸ್ಟ್ರಿಯಲ್ ಆಟೊಮೋಷನ್ ಇಂಡಿಯಾ ಪ್ರೈ ಲಿ, ಬೆಂಗಳೂರು
  • ಸಿಲೋನ್ ಬೆವರೇಜ್ ಕ್ಯಾನ್ ಪ್ರೈ ಲಿ, ಚೆನ್ನೈ
  • ಬಾಲಾಜಿ ವೇಫರ್ಸ್ ಪ್ರೈ ಲಿ, ಅಹ್ಮದಾಬಾದ್
  • ಮಂಜುಶ್ರೀ ಟೆಕ್ನೋಪಾರ್ಕ್ ಲಿ, ಬೆಂಗಳೂರು
  • ಕಸಿರೋಡಾ ಇಂಡಿಯನ್ ಪ್ರೈ ಲಿ, ಬೆಂಗಳೂರು
  • ಮಹಾಮಾನವ್ ಇಸ್ಪಾಟ್ ಪ್ರೈ ಲಿ, ಬಳ್ಳಾರಿ
  • ಎಸಿಆರ್ ಪ್ರಾಜೆಕ್ಟ್ಸ್, ಬೆಂಗಳೂರು
  • ನಿಯೋಬೀ ಸಲ್ಯೂಶನ್ ಪ್ರೈ ಲಿ, ಬೆಂಗಳೂರು
  • ಅಭಯ್ ಆಗ್ರೋ ಫೂಡ್ಸ್ ಪ್ರೈ ಲಿ, ಕೊಪ್ಪಳ

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:50 am, Mon, 20 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ