ಆಧಾರ್ ಕಾರ್ಡ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವ ಸಿಂಪಲ್ ವಿಧಾನ
ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಎಲ್ಲರಿಗೂ ಪ್ರಮುಖ ಗುರುತಿನ ದಾಖಲೆಯಾಗಿದ್ದು, ಈ ಕಾರ್ಡ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು ಎಂಬೂದು ನಿಮಗೆ ತಿಳಿದಿದೆಯೇ?
ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಎಲ್ಲರಿಗೂ ಪ್ರಮುಖ ಗುರುತಿನ ದಾಖಲೆಯಾಗಿದ್ದು, ಬ್ಯಾಂಕಿಂಗ್ ಸೇವೆಗಳಿಂದ ಪ್ರಾರಂಭಿಸಿ ಸರ್ಕಾರಿ ಯೋಜನೆಗಳನ್ನು ಪಡೆಯುವವರೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್‌ಗೆ ಲಿಂಕ್ ಆಗಿರುವ ಈ ಆಧಾರ್ ಕಾರ್ಡ್‌ನ 12 ಸಂಖ್ಯೆಯ ಸಹಾಯದಿಂದ ನೀವು ಯಾವುದೇ ಎಟಿಎಂ ಕೌಂಟರ್ ಅಥವಾ ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬೂದನ್ನು ಚೆಕ್ ಮಾಡಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಗೂಗಲ್ ಪೇ, ಫೋನ್ ಪೇ ಹೊರತಾಗಿ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡುವ ವಿಧಾನದಿಂದಾಗಿ ಸ್ಮಾರ್ಟ್‌ಫೋನ್ ಬಳಸದ ವ್ಯಕ್ತಿಗಳಿಗೆ ದೊಡ್ಡ ಸಹಾಯವಾಗಿದೆ. ಹಾಗಿದ್ದರೆ ಆಧಾರ್ ಕಾರ್ಡ್ ಮೂಲಕ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಿಂಪಲ್ ಹಂತಗಳು:
- ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ *99*99*1# ಅನ್ನು ಡಯಲ್ ಮಾಡಿ
- 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಿ
- ನಿಮ್ಮ ಆಧಾರ್ ಸಂಖ್ಯೆಯನ್ನು ಮತ್ತೊಮ್ಮೆ ನಮೂದಿಸುವ ಮೂಲಕ ಪರಿಶೀಲಿಸಿ
- ಪರದೆಯ ಮೇಲೆ ಬ್ಯಾಂಕ್ ಬ್ಯಾಲೆನ್ಸ್‌ನೊಂದಿಗೆ UIDAI ನಿಂದ ನೀವು ಫ್ಲಾಶ್ SMS ಅನ್ನು ಸ್ವೀಕರಿಸುತ್ತೀರಿ
ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸುವುದು ಮಾತ್ರವಲ್ಲದೆ ಆಧಾರ್ ಕಾರ್ಡ್ ಮೂಲಕ ಬಳಕೆದಾರರು ಹಣ ಕಳುಹಿಸುವುದು, ಸರ್ಕಾರದ ಸಬ್ಸಿಡಿಗಳಿಗೆ ಅರ್ಜಿ ಸಲ್ಲಿಸುವುದು ಅಥವಾ ಆಧಾರ್ ಕಾರ್ಡ್‌ನ ಸಹಾಯದಿಂದ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಮುಂತಾದ ಇತರ ಕಾರ್ಯಗಳನ್ನು ಸಹ ಮಾಡಬಹುದು.
ಸಂಬಂಧಿತ ಬೆಳವಣಿಗೆಯಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಇತ್ತೀಚೆಗೆ ನಿಮ್ಮ ಫೋನ್ ಸಂಖ್ಯೆಯನ್ನು ಆಧಾರ್‌ಗೆ ಲಿಂಕ್ ಮಾಡುವುದು, ಇತರ ಮಾಹಿತಿಯನ್ನು ನವೀಕರಿಸುವುದು ಮುಂತಾದ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಲು ಯೋಜಿಸುತ್ತಿದೆ. ಇದಕ್ಕಾಗಿ ತಯಾರಿಯೂ ನಡೆಸುತ್ತಿದೆ ಎಂದು ಹೇಳಿದೆ. ಈ ಸೇವೆಯೊಂದಿಗೆ ಜನರು ಈ ಸೇವೆಗಳನ್ನು ಪಡೆಯಲು ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಅಗತ್ಯವಿಲ್ಲ. ಪ್ರಾಧಿಕಾರವು ಇದೀಗ 48,000 ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಪೋಸ್ಟ್‌ಮ್ಯಾನ್‌ಗಳಿಗೆ ತರಬೇತಿ ನೀಡುತ್ತಿದೆ. ತರಬೇತಿಯ ನಂತರ ಅವರು ನಿಮ್ಮ ಮನೆಗೆ ಆಧಾರ್ ಸೇವೆಗಳನ್ನು ತರುತ್ತಾರೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ