
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡುವ 12 ಅಂಕಿಯ ಈ ಆಧಾರ್ ಕಾರ್ಡ್ (Aadhaar Card) ಪ್ರಮುಖ ಗುರುತಿನ ದಾಖಲೆಯಾಗಿದೆ. ಬ್ಯಾಂಕ್ ಖಾತೆ ತೆರೆಯಲು, ಸರ್ಕಾರದ ಸಬ್ಸಿಡಿಗಳು, ಪಿಂಚಣಿಗಳು ಮತ್ತು ನಗದು ವರ್ಗಾವಣೆಗೆ ಈ ದಾಖಲೆ ಅತ್ಯಗತ್ಯ. ಆದರೆ ಮೃತ ವ್ಯಕ್ತಿಯ ಆಧಾರ್ ಕಾರ್ಡ್ ಏನು ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆದರೆ, ಮೃತಪಟ್ಟ ವ್ಯಕ್ತಿಯ ಆಧಾರ್ ಕಾರ್ಡ್ ದುರ್ಬಳಕೆ ಮಾಡದಂತೆ ತಡೆಯಲು ಈ ದಾಖಲೆಯನ್ನು ನಿಷ್ಕ್ರಿಯಗೊಳಿಸಬಹುದು. ಈ ಪ್ರಕ್ರಿಯೆಗೆ ಮೃತರ ಆಧಾರ್ ಕಾರ್ಡ್ ಜತೆಗೆ ಕೆಲವು ಪ್ರಮುಖ ದಾಖಲೆಗಳು ಅಗತ್ಯವಾಗಿಬೇಕು.
ಹಂತ 1: ಮೊದಲಿಗೆ ಯುಐಡಿಎಐನ ಅಧಿಕೃತ ಮೈ ಆಧಾರ್ ಪೋರ್ಟಲ್ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಮೃತ ವ್ಯಕ್ತಿಯ ಕುಟುಂಬದ ಸದಸ್ಯ ಅಥವಾ ಅರ್ಜಿದಾರ ತಮ್ಮ ಆಧಾರ್ ಸಂಖ್ಯೆಯೊಂದಿಗೆ ಒಟಿಪಿ ದೃಢೀಕರಣ ಬಳಸಿ ಲಾಗ್ ಇನ್ ಆಗಿ.
ಹಂತ 3: ಲಾಗ್ ಇನ್ ಬಳಿಕ ಈ ಪೋರ್ಟಲ್‌ನಲ್ಲಿ ಕಾಣಿಸುವ ಕುಟುಂಬ ಸದಸ್ಯರ ಮರಣವನ್ನು ವರದಿ ಮಾಡಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 4: ಮೃತ ವ್ಯಕ್ತಿಯ ವಿವರಗಳನ್ನು ತಪ್ಪಿಲ್ಲದೇನೇ ಭರ್ತಿ ಮಾಡಿ.
ಹಂತ 5: ಮೃತ ವ್ಯಕ್ತಿ ಮರಣ ಪ್ರಮಾಣಪತ್ರದ ಸ್ಕ್ಯಾನ್ ಮಾಡಿದ ಪ್ರತಿಯನ್ನು ಆಪ್‌ಲೋಡ್ ಮಾಡಿ.
ಹಂತ 6: ಎಲ್ಲಾ ವಿವರಗಳನ್ನು ಪರಿಶೀಲಿಸಿ ಸಬ್ ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಇದನ್ನೂ ಓದಿ: ಆಧಾರ್ ಕಾರ್ಡ್ ಕಳೆದು ಹೋದ್ರೆ ವಾಟ್ಸಾಪ್‌ನಲ್ಲಿ ಹೀಗೆ ಡೌನ್ಲೋಡ್ ಮಾಡಿ
ಪ್ರಶ್ನೆ: ಆಧಾರ್ ಕಾರ್ಡ್ ಮುಖ್ಯ ಯಾಕೆ?
ಉತ್ತರ: ಭಾರತ ಸರ್ಕಾರದಿಂದ ನೀಡಲ್ಪಡುವ 12 ಅಂಕಿಗಳ ವಿಶಿಷ್ಟ ಗುರುತಿನ ಪುರಾವೆ ಇದಾಗಿದ್ದು, ಹೀಗಾಗಿ ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯವಾಗಿದೆ.
ಪ್ರಶ್ನೆ: ಮೃತ ವ್ಯಕ್ತಿಯ ಆಧಾರ್ ಕಾರ್ಡ್ ರದ್ದುಗೊಳಿಸಲು ಯಾವೆಲ್ಲಾ ದಾಖಲೆಗಳು ಬೇಕು?
ಉತ್ತರ: ಮೃತ ವ್ಯಕ್ತಿಯ ಆಧಾರ್ ಕಾರ್ಡ್ ರದ್ದುಗೊಳಿಸಲು ಮೃತ ವ್ಯಕ್ತಿಯ ಆಧಾರ್ ಸಂಖ್ಯೆ, ಮರಣ ಪ್ರಮಾಣಪತ್ರ, ಅರ್ಜಿದಾರರ ಆಧಾರ್ ಕಾರ್ಡ್ ಹಾಗೂ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಈ ದಾಖಲೆಗಳು ಬೇಕು.
ಪ್ರಶ್ನೆ: ಮೃತ ವ್ಯಕ್ತಿಯ ಆಧಾರ್ ಕಾರ್ಡ್ ರದ್ದುಗೊಳಿಸುವುದು ಮುಖ್ಯ ಯಾಕೆ?
ಉತ್ತರ: ಮೃತ ವ್ಯಕ್ತಿಯ ಆಧಾರ್ ಕಾರ್ಡ್ ರದ್ದುಗೊಳಿಸುವ ಪ್ರಕ್ರಿಯೆಯಿಂದ ದುರುಪಯೋಗವಾಗುವುದು ತಡೆಯಬಹುದು ಹಾಗೂ ಕಾನೂನು ಪ್ರಕ್ರಿಯೆಗಳನ್ನು ಸುಲಭಗೊಳಿಸಲು ಇದು ಸಹಾಯ ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ