ಮುಂಬೈ ಏರ್​ಪೋರ್ಟ್ ವಿಸ್ತರಣೆ ಯೋಜನೆಗೆ ಜಾಗತಿಕ ಹೂಡಿಕೆದಾರರಿಂದ 1 ಬಿಲಿಯನ್ ಡಾಲರ್ ಬಂಡವಾಳ ಪಡೆದ ಅದಾನಿ ಏರ್ಪೋರ್ಟ್ಸ್

Adani Airports Holdings Ltd raises 1 billion dollar: ಮುಂಬೈ ಇಂಟರ್​ನ್ಯಾಷನಲ್ ಏರ್​ಪೋರ್ಟ್ ಅನ್ನು ನಿರ್ವಹಿಸುವ ಎಂಐಎಎಲ್​ಗೆ ಒಂದು ಬಿಲಿಯನ್ ಡಾಲರ್ ಬಂಡವಾಳ ಪಡೆಯುವಲ್ಲಿ ಅದಾನಿ ಗ್ರೂಪ್ ಯಶಸ್ವಿಯಾಗಿದೆ. ಅದಾನಿ ಎಂಟರ್​​ಪ್ರೈಸಸ್​​ನ ಅಂಗಸಂಸ್ಥೆಯಾದ ಅದಾನಿ ಏರ್​ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಅಡಿಯಲ್ಲಿ ಎಂಐಎಎಲ್ ಬರುತ್ತದೆ. ಇನ್ವೆಸ್ಟ್​​ಮೆಂಟ್ ಗ್ರೇಡ್ ಬಾಂಡ್​​ಗಳನ್ನು ವಿತರಿಸಿ ಜಾಗತಿಕ ಹೂಡಿಕೆದಾರರಿಂದ ಬಂಡವಾಳ ಪಡೆದಿದೆ.

ಮುಂಬೈ ಏರ್​ಪೋರ್ಟ್ ವಿಸ್ತರಣೆ ಯೋಜನೆಗೆ ಜಾಗತಿಕ ಹೂಡಿಕೆದಾರರಿಂದ 1 ಬಿಲಿಯನ್ ಡಾಲರ್ ಬಂಡವಾಳ ಪಡೆದ ಅದಾನಿ ಏರ್ಪೋರ್ಟ್ಸ್
ಗೌತಮ್ ಅದಾನಿ

Updated on: Jun 24, 2025 | 3:26 PM

ನವದೆಹಲಿ, ಜೂನ್ 24: ಅದಾನಿ ಏರ್​ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ಸಂಸ್ಥೆ (AAHL – Adani Airports Holdings Ltd) ಮುಂಬೈ ಏರ್ಪೋರ್ಟ್ ಅಭಿವೃದ್ಧಿ ಕಾರ್ಯಗಳಿಗಾಗಿ ಜಾಗತಿಕ ಹೂಡಿಕೆದಾರರಿಂದ (global  investors) 1 ಬಿಲಿಯನ್ ಡಾಲರ್ ಬಂಡವಾಳ ಸಂಗ್ರಹಿಸಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಇಂಟರ್​​ನ್ಯಾಷನಲ್ ಏರ್ಪೋರ್ಟ್ ಅನ್ನು ಅದಾನಿ ಗ್ರೂಪ್​​ಗೆ ಸೇರಿದ ಮುಂಬೈ ಇಂಟರ್ನ್ಯಾಷನಲ್ ಏರ್​ಪೋರ್ಟ್ ಲಿಮಿಟೆಡ್ ನಿರ್ವಹಿಸುತ್ತದೆ. ಎಂಐಎಎಲ್​ಗೆ ಬಂಡವಾಳ ಸಂಗ್ರಹಿಸಲು ಅದಾನಿ ಏರ್​ಪೋರ್ಟ್ಸ್ ಲಿಮಿಟೆಡ್ ಕಂಪನಿಯು ಬಾಂಡ್ ಬಿಡುಗಡೆ ಮಾಡಿತ್ತು. ಅಪೋಲೋ ನಿರ್ವಹಿತ ಫಂಡ್​​ಗಳು (Apollo Managed Funds) ಸೇರಿದಂತೆ ಹಲವು ಜಾಗತಿಕ ಇನ್ಷೂರೆನ್ಸ್ ಕಂಪನಿಗಳು ಮತ್ತು ಸಾಂಸ್ಥಿಕ ಹೂಡಿಕೆದಾರರು (Institutional investors) ಈ ಬಾಂಡ್​​ಗಳನ್ನು ಖರೀದಿಸಿವೆ.

ಅದಾನಿ ಕಂಪನಿ ವಿತರಿಸಿದ ಬಾಂಡ್​​ಗಳು ಏರ್​ಪೋರ್ಟ್ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತದ ಮೊದಲ ಇನ್ವೆಸ್ಟ್​ಮೆಂಟ್ ಗ್ರೇಡ್ ಪ್ರೈವೇಟ್ ಬಾಂಡ್ (Investment Grade Private bond) ಎನಿಸಿರುವುದು ವಿಶೇಷ. ಅಪೋಲ್ಲೋ ನಿರ್ವಹಿತ ಫಂಡ್​​ಗಳಷ್ಟೆ ಅಲ್ಲದೆ, ಬ್ಲ್ಯಾಕ್​ರಾಕ್ ನಿರ್ವಹಿತ ಫಂಡ್​ಗಳು, ಸ್ಟ್ಯಾಂಡರ್ಡ್ ಚಾರ್ಟರ್ಡ್ ಇತ್ಯಾದಿ ಸಾಂಸ್ಥಿಕ ಹೂಡಿಕೆದಾರರು ಬಾಂಡ್ ಖರೀದಿಸಿದ್ದಾರೆ.

ಬಾಂಡ್ ವಿತರಣೆ ಯೋಜನೆಯಲ್ಲಿ 750 ಮಿಲಿಯನ್ ಡಾಲರ್ ಮೌಲ್ಯದ ಬಾಂಡ್​​ಗಳನ್ನು ಒದಗಿಸಲಾಗಿದೆ. ಈ ನೋಟ್ ಅಥವಾ ಬಾಂಡ್​​ಗಳು 2029ರ ಜುಲೈನಲ್ಲಿ ಮೆಚ್ಯೂರ್ ಆಗುತ್ತವೆ. ಹೆಚ್ಚುವರಿ 250 ಮಿಲಿಯನ್ ಡಾಲರ್ ಬಾಂಡ್​​ಗಳನ್ನು ನೀಡಲು ಈ ಯೋಜನೆಯಲ್ಲಿ ಅವಕಾಶ ಕೊಡಲಾಗಿದೆ. ಇದರೊಂದಿಗೆ ಒಟ್ಟಾರೆ ಒಂದು ಬಿಲಿಯನ್ ಡಾಲರ್ ಮೊತ್ತದ ಬಂಡವಾಳವು ಅದಾನಿ ಏರ್​ಪೋರ್ಟ್ಸ್ ಲಿಮಿಟೆಡ್​​ಗೆ ಸಿಗಲಿದೆ.

ಇದನ್ನೂ ಓದಿ: ತುರ್ತು ಖರೀದಿ ವ್ಯವಸ್ಥೆ ಅಡಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಲು 13 ಗುತ್ತಿಗೆಗಳಿಗೆ ಸೇನೆ ಹಸಿರು ನಿಶಾನೆ

‘ಬಾಂಡ್ ವಿತರಣೆ ಯಶಸ್ವಿಯಾಗಿ ಆಗಿರುವುದು ಅದಾನಿ ಏರ್​ಪೋರ್ಟ್ಸ್​​ನ ಸಾಮರ್ಥ್ಯವನ್ನು ಸಾಬೀತುಪಡಿಸುತ್ತದೆ. ಮುಂಬೈ ಇಂಟರ್​​ನ್ಯಾಷನಲ್ ಏರ್​ಪೋರ್ಟ್​ನ ಮೂಲಭೂತ ಅಂಶಗಳು ಹಾಗೂ ಸುಸ್ಥಿತ ಮೂಸೌಕರ್ಯ ಅಭಿವೃದ್ಧಿಗೆ ನಮಗಿರುವ ಬದ್ಧತೆಗೆ ಸಿಕ್ಕ ಮಾನ್ಯತೆ ಇದು. ಜಾಗತಿಕ ಸಾಂಸ್ಥಿಕ ಹೂಡಿಕೆದಾರರು ಭಾಗಿಯಾಗಿರುವುದು ನಮ್ಮ ಕಂಪನಿಯ ಬಂಡವಾಳ ಸಂಗ್ರಹಣೆ ವಿಸ್ತಾರ ಹೆಚ್ಚಿದೆ’ ಎಂದು ಅದಾನಿ ಏರ್​ಪೋರ್ಟ್ಸ್ ಹೋಲ್ಡಿಂಗ್ಸ್ ಲಿಮಿಟೆಡ್​​ನ ಸಿಇಒ ಅರುಣ್ ಬನ್ಸಾಲ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us