ಸಾಮಾನ್ಯ ಜನರ ಸ್ವಂತ ಮನೆಯ ಕನಸು ಸಾಕಾರಗೊಳಿಸುವ ಪ್ರಯತ್ನದಲ್ಲಿ SMFG ಗೃಹಶಕ್ತಿ

ಎಸ್​ಎಂಎಫ್​ಜಿ ಗೃಹಶಕ್ತಿ ಸಂಸ್ಥೆ ಕೈಗೆಟಕುವ ದರದಲ್ಲಿ ವಸತಿ ಪ್ರಾಜೆಕ್ಟ್​ಗಳನ್ನು ಮಾಡುತ್ತಿದೆ. ಮಧ್ಯಮ ಮತ್ತು ಕೆಳ ಸ್ತರದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಅದು ಹೌಸಿಂಗ್ ಯೋಜನೆಗಳನ್ನು ಹಮ್ಮಿಕೊಂಡಿದೆ.

ಸಾಮಾನ್ಯ ಜನರ ಸ್ವಂತ ಮನೆಯ ಕನಸು ಸಾಕಾರಗೊಳಿಸುವ ಪ್ರಯತ್ನದಲ್ಲಿ SMFG ಗೃಹಶಕ್ತಿ
ದೀಪಕ್ ಪಾಟ್ಕರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 13, 2024 | 5:26 PM

ಎಸ್​ಎಂಎಫ್​ಜಿ ಗೃಹಶಕ್ತಿ ಸಂಸ್ಥೆ ಅಗ್ಗದ ವಸತಿಗಳ (Affordable housing) ನಿರ್ಮಾಣದತ್ತ ಗಮನ ಹರಿಸುತ್ತಿದೆ. ಭಾರತದ ಅರೆ-ನಗರ (semi-urban) ಭಾಗದಲ್ಲಿ ಮೂಲಸೌಕರ್ಯಗಳು ಅಭಿವೃದ್ದಿಗೊಂಡಿರುವ ಹಿನ್ನೆಲೆಯಲ್ಲಿ ಅಗ್ಗದ ವಸತಿಗಳಿಗೆ ಬೇಡಿಕೆ ಹೆಚ್ಚಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಎಸ್​ಎಂಎಫ್​ಜಿ ಗೃಹಶಕ್ತಿ (SMFG Grihashakti) ಸಂಸ್ಥೆ ಕೈಗೆಟಕುವ ದರದಲ್ಲಿ ವಸತಿ ಪ್ರಾಜೆಕ್ಟ್​ಗಳನ್ನು ಮಾಡುತ್ತಿದೆ. ಮಧ್ಯಮ ಮತ್ತು ಕೆಳ ಸ್ತರದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಅದು ಹೌಸಿಂಗ್ ಯೋಜನೆಗಳನ್ನು ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಸಿಇಒ ಮತ್ತು ಎಂಡಿಯಾಗಿರುವ ದೀಪಕ್ ಪಾಟ್ಕರ್ ಅವರು ಸಂದರ್ಶನವೊಂದರಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಈ ಸಂದರ್ಶನದ ಕೆಲ ಭಾಗದ ವಿವರ ಇಲ್ಲಿದೆ:

Q1. ಅಗ್ಗದ ವಸತಿ ಯೋಜನೆ ನಿಮ್ಮ ಅಭಿವೃದ್ಧಿ ಕಾರ್ಯತಂತ್ರವನ್ನು ಹೇಗೆ ರೂಪಿಸಿದೆ? ಈ ವಲಯದಲ್ಲಿ ನಿಮ್ಮ ವಿಧಾನದಲ್ಲಿ ವಿಶೇಷತೆ ಎನಿಸುಸುವುದ ಏನು?

ಅಗ್ಗದ ವಸತಿಗಳ ಮೇಲೆ ಹರಿಸುತ್ತಿರುವ ಗಮನವು ನಮ್ಮ ಬೆಳವಣಿಗೆಯ ಕಾರ್ಯತಂತ್ರದ ಮೇಲೆ ಪ್ರಭಾವ ಬೀರಿದೆ. ಎರಡನೇ ಮತ್ತು ಮೂರನೇ ಸ್ತರದ ನಗರಗಳಲ್ಲಿ ರಸ್ತೆಗಳು, ವಿದ್ಯುತ್ ಮತ್ತು ಕೈಗಾರಿಕೀಕರಣದಂತಹ ಸುಧಾರಿತ ಮೂಲಸೌಕರ್ಯಗಳು ಅಗ್ಗದ ವಸತಿಗಳಿಗೆ ಬೇಡಿಕೆಯನ್ನು ಹೆಚ್ಚಿಸಿವೆ. ಕೆಳ ಮತ್ತು ಮಧ್ಯಮ-ಆದಾಯದ ಗುಂಪುಗಳಿಗೆ ಹೊಂದಿಕೆಯಾಗುವಂತಹ ಸಾಲದ ಸೌಲಭ್ಯ ನೀಡುತ್ತೇವೆ. ಇದು ನಮ್ಮ ವಿಧಾನದ ವಿಶೇಷತೆ. ನಮ್ಮ ತಂಡವು ಗ್ರಾಹಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ಪಾವತಿ ರಸೀದಿ, ತೆರಿಗೆ ರಿಟರ್ನ್ಸ್, ಕುಟುಂಬದಲ್ಲಿನ ನಗದು ಆದಾಯ ಮತ್ತು ಶಾಪ್ ಇನ್ವೆಂಟರಿ ಸ್ಟೇಟ್ಮೆಂಟ್ಸ್ ಇತ್ಯಾದಿ ಆದಾಯದ ಮೂಲಗಳನ್ನು ಮೌಲ್ಯಮಾಪನ ಮಾಡುತ್ತದೆ. ಇದರಿಂದ ಸಮರ್ಪಕ ಮೊತ್ತದ ಸಾಲದ ಖಾತ್ರಿ ಸಿಗುತ್ತದೆ. ಮನೆಮಾಲೀಕತ್ವದ ಅವಕಾಶ ಹೆಚ್ಚೆಚ್ಚು ಗ್ರಾಹಕರಿಗೆ ಸಿಗುತ್ತದೆ. ಹಾಗೆಯೇ, ನಮ್ಮ ನೇರ ವಿತರಣೆಯ ಸಾಮರ್ಥ್ಯವನ್ನು ಸಾಕಷ್ಟು ಹೆಚ್ಚಿಸಿದ್ದೇವೆ. ಈ ರೀತಿಯ ಗ್ರಾಹಕೀಕೃತ ಪರಿಹಾರಗಳು ಮತ್ತು ಪ್ರಬಲ ವಿತರಣೆ ವ್ಯವಸ್ಥೆಯ ಸಂಯೋಜನೆಯು ನಮ್ಮ ಯೋಜನೆಗಳಿಗೆ ಬಲ ನೀಡಿವೆ.

Q2. ಮುಂದಿನ ಐದು ವರ್ಷದಲ್ಲಿ ಭಾರತದಲ್ಲಿ ಹೌಸಿಂಗ್ ಫೈನಾನ್ಸ್ ಉದ್ಯಮ ಹೇಗೆ ಬೆಳೆಯಬಹುದು ಅನಿಸುತ್ತದೆ?

ಭಾರತದ ವಸತಿ ಸಾಲ ಉದ್ಯಮ ಮುಂದಿನ ಐದು ವರ್ಷದಲ್ಲಿ ಸಾಕಷ್ಟು ಬೆಳವಣಿಗೆ ಹೊಂದುವ ಅವಕಾಶ ಇದೆ. ಅದರಲ್ಲೂ ಸರ್ಕಾರದ ವತಿಯಿಂದ ಜಾರಿಯಲ್ಲಿರುವ ಪಿಎಂ ಆವಾಸ್ ಇತ್ಯಾದಿ ಯೋಜನೆಗಳು ಮುಖ್ಯ ಪಾತ್ರ ವಹಿಸುತ್ತವೆ. ಭೂ ದಾಖಲೆಗಳ ಡಿಜಿಟಲೀಕರಣ ಇತ್ಯಾದಿ ತಂತ್ರಜ್ಞಾನ ಸುಧಾರಣೆ, ಮೂಲಸೌಕರ್ಯ ಅಭಿವೃದ್ಧಿ, ಇವು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳಲ್ಲಿ ಸಾಲದ ವ್ಯವಸ್ಥೆಯನ್ನು ಸುಲಭಗೊಳಿಸಬಹುದು. ಸುಸ್ಥಿರವಾದಂತಹ ನಗರೀಕರಣ ನಿರ್ಮಾಣವನ್ನು ನಾವು ಎದುರು ನೋಡುತ್ತಿದ್ದೇವೆ. ಸೋಲಾರ್ ಪ್ಯಾನಲ್, ಮಳೆ ನೀರು ಸಂಗ್ರಹ ಇತ್ಯಾದಿ ಪರಿಹಾರಗಳು ಈ ಹೊಸ ವ್ಯವಸ್ಥೆಯಲ್ಲಿ ಪ್ರಧಾನವಾಗಿರುತ್ತವೆ.

Q3. ಸರ್ಕಾರದ ಗಮನ ಹೆಚ್ಚುತ್ತಿರುವುದು ಹೌಸಿಂಗ್ ಫೈನಾನ್ಸ್ ಸೆಕ್ಟರ್ ಮೇಲೆ ಏನು ಪರಿಣಾಮ ಬೀರಬಹುದು? ಎಸ್​ಎಂಎಫ್​ಜಿ ಗೃಹಶಕ್ತಿ ಸಂಸ್ಥೆಯ ಪಾತ್ರವೇನಿರುತ್ತೆ?

2024-24ರ ಕೇಂದ್ರ ಬಜೆಟ್​ನಲ್ಲಿ ಪಿಎಂ ಜೆಎವೈ ಯೋಜನೆಯ ವಿಸ್ತರಣೆ ಘೋಷಿಸಲಾಯಿತು. ಮೂರು ಕೋಟಿ ಹೆಚ್ಚುವರಿ ಮನೆಗಳು ಮತ್ತು ಬಡ್ಡಿ ಸಬ್ಸಿಡಿ ಸ್ಕೀಮ್ ಅನ್ನೂ ಈ ಯೋಜನೆ ವಿಸ್ತರಣೆಯಲ್ಲಿ ಒಳಗೊಳ್ಳಲಾಗಿದೆ. ಇದನ್ನು ಬಳಸಿಕೊಂಡು ನಾವು ಅಗ್ಗದ ವಸತಿಗೆ ಬೇಡಿಕೆ ಹೆಚ್ಚುತ್ತಿರುವ ಎರಡನೇ, ಮೂರನೇ ಸ್ತರದ ನಗರಗಳಲ್ಲಿ ಮತ್ತು ಗ್ರಾಮೀಣ ಭಾಗಗಳಲ್ಲಿ ನಮ್ಮ ಉಪಸ್ಥಿತಿಯನ್ನು ಹೆಚ್ಚಿಸುತ್ತಿದ್ದೇವೆ. ಸಾಲದ ಅವಕಾಶ ಕಡಿಮೆ ಇರುವ ಸಮುದಾಯಗಳಿಗೆ ನಾವು ಸುಲಭವಾಗಿ ಸಾಲ ನೀಡುತ್ತಿದ್ದೇವೆ. ಇದರಿಂದ ಗ್ರಾಹಕರ ಬಳಗ ವಿಸ್ತಾರಗೊಳ್ಳುತ್ತದೆ. ಹಣಕಾಸು ಒಳಗೊಳ್ಳುವಿಕೆಯೂ ಹೆಚ್ಚುತ್ತದೆ. ಭಾರತದಾದ್ಯಂತ ನಮ್ಮ ಸಂಸ್ಥೆಯ 170 ಶಾಖೆಗಳಿವೆ. ನಮ್ಮ ಡಿಸ್ಟ್ರಿಬ್ಯೂಶನ್ ನೆಟ್ವರ್ಕ್​ಗಳನ್ನು ಹೆಚ್ಚಿಸುತ್ತಿದ್ದೇವೆ. ಈ ಪ್ರದೇಶಗಳಲ್ಲಿ ಸಮರ್ಪಕವಾಗಿ ಸೇವೆ ನೀಡಲು ಸಾಧ್ಯವಾಗುವಂತೆ ಸ್ಥಳೀಯ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದೇವೆ.

Q4. ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಮುಂಬರುವ ವರ್ಷಗಳಲ್ಲಿ ವಸತಿ ಸಾಲ ಉದ್ಯಮದಲ್ಲಿ ಇರಬಹುದಾದ ಅವಕಾಶಗಳೇನು, ಸವಾಲುಗಳೇನಿರಬಹುದು? ಅವುಗಳನ್ನು ಎದುರಿಸಲು ನಿಮ್ಮ ಕಾರ್ಯತಂತ್ರಗಳೇನು?

ಗ್ರಾಮೀಣ ಮತ್ತು ನಗರ ಮಾರುಕಟ್ಟೆಗಳಲ್ಲಿ ಅಗ್ಗದ ವಸತಿಗಳಿಗೆ ಬೇಡಿಕೆ ಹೆಚ್ಚುತ್ತಿರುವುದು ಹೌಸಿಂಗ್ ಫೈನಾನ್ಸ್ ಸೆಕ್ಟರ್​ನಲ್ಲಿ ಅವಕಾಶಗಳನ್ನು ಹುಟ್ಟುಹಾಕಿದೆ. ಅದರ ನಡುವೆಯೂ ಸಮಸ್ಯೆಗಳು, ಸವಾಲುಗಳಿವೆ. ನಗರ ಭಾಗದ ವಿಚಾರಕ್ಕೆ ಬಂದರೆ, ದುಬಾರಿ ಭೂಮಿ ಬೆಲೆ, ದುಬಾರಿ ಸಾಮಗ್ರಿ ಬೆಲೆಗಳಿಂದಾಗಿ ವಸತಿ ಡೆವಲಪರ್​ಗಳು ಈ ಸೆಕ್ಟರ್​ಗೆ ಕಾಲಿಡಲು ಹಿಂದೇಟು ಹಾಕುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತಿದ್ದೇವೆ. ಸಾಲ ಮರುಪಾವತಿಗೆ ಸುಲಭ ಪ್ಲಾನ್​ಗಳನ್ನೂ ಒಳಗೊಂಡಂತೆ ಗ್ರಾಹಕರ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ನಾವು ಸೇವೆ ನೀಡಲು ಗಮನ ಹರಿಸುತ್ತಿದ್ದೇವೆ.

Q5. ಫೈನಾನ್ಷಿಯಲ್ ಸರ್ವಿಸ್ ಸೆಕ್ಟರ್​ನಲ್ಲಿ ತಂತ್ರಜ್ಞಾನ ಸಾಕಷ್ಟು ಬೇಗ ಬೆಳವಣಿಗೆ ಆಗುತ್ತಿದೆ. ಎಸ್​ಎಂಎಫ್​ಜಿ ಗೃಹಶಕ್ತಿ ಸಂಸ್ಥೆ ಹೇಗೆ ಈ ತಂತ್ರಜ್ಞಾನವನ್ನು ಬಳಸಿಕೊಂಡು ಸೇವೆ ನೀಡುತ್ತದೆ?

ಎಸ್​ಎಂಎಫ್​ಜಿ ಗೃಹಶಕ್ತಿ ಸಂಸ್ಥೆ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಮತ್ತು ಕಾರ್ಯಾಚರಣೆ ಕ್ಷಮತೆ ಸಾಧಿಸಲು ಉತ್ಕೃಷ್ಟ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಮುಂಬರುವ ತಿಂಗಳಲ್ಲಿ ನಮ್ಮ ಲೋನ್ ಒರಿಜಿನೇಶನ್ ಸಿಸ್ಟಂ (ಎಲ್​ಒಎಸ್) ಅನ್ನು ಪುನಾರಂಭಿಸಲಿದ್ದೇವೆ. ಲೋನ್ ವಿತರಣೆಯ ಸಮಯಾವಧಿಯನ್ನು ಇದು ಕಡಿಮೆ ಮಾಡತ್ತದೆ. ಒಟ್ಟಾರೆ, ಇದು ಸಾಲದ ವ್ಯವಸ್ಥೆಯನ್ನು ಬಹಳ ಸರಳಗೊಳಿಸುತ್ತದೆ. ಕಲೆಕ್ಷನ್ ವಿಭಾಗದಲ್ಲೂ ನಾವು ಎಲ್ಲಾ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದೇವೆ. ಗ್ರಾಹಕರು ವಿವಿಧ ರೀತಿಯಲ್ಲಿ ಆನ್ಲೈನ್ ಪೇಮೆಂಟ್ ಮಾಡುವ ಆಯ್ಕೆಗಳಿರುತ್ತವೆ. ಗ್ರಾಹಕರು ಡಿಜಿಟಲ್ ಆಗಿ ಬ್ಯಾಂಕ್ ಸ್ಟೇಟ್ಮೆಂಟ್​ಗಳನ್ನು ಪಡೆಯಲು ಸಾಧ್ಯವಾಗುಂತೆ ಅಕೌಂಟ್ ಅಗ್ರಿಗೇಟರ್ ನೆಟ್ವರ್ಕ್ ಅನ್ನು ನಾವು ಸಬ್​ಸ್ಕ್ರೈಬ್ ಮಾಡಿಕೊಂಡಿದ್ದೇವೆ. ರಿಸ್ಕ್ ಮ್ಯಾನೇಜ್ಮೆಂಟ್ ವಿಚಾರಕ್ಕೆ ಬರುವುದಾದರೆ, ವಂಚನೆಯನ್ನು ನಿಗ್ರಹಿಸುವಂತಹ ವ್ಯವಸ್ಥೆಯನ್ನು ನಿಯೋಜಿಸಿದ್ದೇವೆ. ಅರ್ಲಿ ವಾರ್ನಿಂಗ್ ಸಿಸ್ಟಂ (ಇಡಬ್ಲ್ಯುಎಸ್) ಫ್ರೇಮ್​ವರ್ಕ್ ಅನ್ನು ಅಭಿವೃದ್ಧಿಪಡಿಸಿದ್ದೇವೆ.

ಈ ರೀತಿಯ ಕಾರ್ಯಗಳ ಮೂಲಕ ಎಸ್​ಎಂಎಫ್​ಜಿ ಗೃಹಶಕ್ತಿ ಸಂಸ್ಥೆ ಗ್ರಾಮೀಣ ಮತ್ತು ಅರೆ-ನಗರ ಭಾಗಗಳಲ್ಲಿ ಹೌಸಿಂಗ್ ಫೈನಾನ್ಸ್ ಸೆಕ್ಟರ್​ನ ಕೊರತೆಯನ್ನು ನೀಗಿಸಲು ಹೆಜ್ಜೆ ಹಾಕುತ್ತಿದೆ. ಈ ಉದ್ಯಮದಲ್ಲಿ ತಂತ್ರಜ್ಞಾನ ಸುಧಾರಣೆಯೂ ಕಾಣುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಕೆಳ ಸ್ತರದ ಜನರಿಗೂ ವಸತಿ ಹೊಂದುವ ಅವಕಾಶ ಹೆಚ್ಚಿಸುತ್ತಿದ್ದೇವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Wed, 13 November 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ